ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಹುಡುಕುತ್ತಿರುವ ರಾಜ್ಯದ ಯುವಕರಿಗೆ ಕರ್ನಾಟಕ ಸರ್ಕಾರವು ಭರ್ಜರಿ ಸಿಹಿ ಸುದ್ದಿ ನೀಡಿದೆ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಕಲ್ಯಾಣ ಕರ್ನಾಟಕ (Kalyan Karnataka) & ಮಿಕ್ಕುಳಿದ ವೃಂದದಲ್ಲಿ (Residual Parent Cadre) ಖಾಲಿ ಇರುವ ಒಟ್ಟು 1600 ಸಶಸ್ತ್ರ ಪೊಲೀಸ್ ಕಾನ್ಸಟೇಬಲ್ (ಸಿಎಆರ್/ಡಿಎಆರ್ – CAR/DAR) ಪುರುಷ ಹುದ್ದೆಗಳ ನೇರ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ.

ಹುದ್ದೆಗಳ ವಿವರ & ಮಾಹಿತಿ
- ಒಟ್ಟು ಹುದ್ದೆಗಳು: 1600 (Kalyan Karnataka-179, Residual Parent Card-1421)
- ವೇತನ ಶ್ರೇಣಿ: ರೂ. 37,500 – 76,100/-
ಶೈಕ್ಷಣಿಕ ವಿದ್ಯಾರ್ಹತೆ:-
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿಯುಸಿ (PUC) ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು. ಸಿಬಿಎಸ್ಇ (CBSE), ಐಸಿಎಸ್ಇ (ICSE), ಎನ್ಐಒಎಸ್ (NIOS) ನ 12ನೇ ತರಗತಿ ಪರೀಕ್ಷೆ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಯ ಮೂರು ವರ್ಷಗಳ ಡಿಪ್ಲೊಮಾ ವಿದ್ಯಾರ್ಹತೆಯನ್ನು ಸಹ ತತ್ಸಮಾನ ಎಂದು ಪರಿಗಣಿಸಲಾಗುತ್ತದೆ. ಹಾಗೂ 2 ವರ್ಷಗಳ ಐ.ಟಿ.ಐ ಕೋರ್ಸ.
ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ:–
ಎಸ್ಎಸ್ಎಲ್ಸಿ (SSLC) ಅಥವಾ ಪಿ.ಯು.ಸಿ ಯಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಅಭ್ಯಾಸ ಮಾಡಿರಬೇಕು ಅಥವಾ KEA/KPSC ನಡೆಸುವ ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು/ತೇರ್ಗಡೆಯಾಗಬೇಕು.
ವಯೋಮಿತಿಯ ವಿವರಗಳು (ಒಂದು ಬಾರಿಯ ವಿಶೇಷ 5 ವರ್ಷಗಳ ಸಡಿಲಿಕೆ ಸೇರಿ):-
- ಸಾಮಾನ್ಯ ವರ್ಗ (GM) & : 18 ರಿಂದ 33 ವರ್ಷಗಳು
- SC/ST/CAT-1/OBC(2A, 2B, 3A, 3B): 18 ರಿಂದ 35 ವರ್ಷಗಳು
- ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಬುಡಕಟ್ಟು ಅಭ್ಯರ್ಥಿಗಳು: 18 ರಿಂದ 38 ವರ್ಷಗಳು
ಅರ್ಜಿ ಶುಲ್ಕ
- ಸಾಮಾನ್ಯ ವರ್ಗ (GM)/OBC (2A, 2B, 3A, 3B): Rs 750/-
- SC/ST/CAT-1/Ex-Army: Rs 500/-
ದೇಹದಾರ್ಢ್ಯತೆ ಪರೀಕ್ಷೆಯ ವಿವರ (Physical Standards)
- ಕನಿಷ್ಠ ಎತ್ತರ: 168 ಸೆಂ.ಮೀ (ಸಾಮಾನ್ಯ ಅಭ್ಯರ್ಥಿಗಳಿಗೆ)
- ಎದೆಯಳತೆ: 86 ಸೆಂ.ಮೀ (ಕನಿಷ್ಠ 5 ಸೆಂ.ಮೀ ವಿಸ್ತರಣೆಯೊಂದಿಗೆ)
- ಕನಿಷ್ಠ ಎತ್ತರ: 155 ಸೆಂ.ಮೀ (ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಬುಡಕಟ್ಟು ಪುರುಷ ಅಭ್ಯರ್ಥಿಗಳಿಗೆ)
- ಎದೆಯಳತೆ: 75 ಸೆಂ.ಮೀ (ಕನಿಷ್ಠ 5 ಸೆಂ.ಮೀ ವಿಸ್ತರಣೆಯೊಂದಿಗೆ)
ಆಯ್ಕೆ ಪ್ರಕ್ರಿಯೆ (Selection Process) :-ಆಯ್ಕೆಯು ಪ್ರಮುಖವಾಗಿ ಮೂರು ಹಂತಗಳಲ್ಲಿ ನಡೆಯುತ್ತದೆ
- ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ: 100 ಅಂಕಗಳ ವಸ್ತುನಿಷ್ಠ (Objective) ಪರೀಕ್ಷೆ ಇರುತ್ತದೆ. (90 ನಿಮಿಷಗಳ ಸಮಯ. ಪ್ರತಿ ತಪ್ಪು ಉತ್ತರಕ್ಕೆ 0.25 ನೆಗೆಟಿವ್ ಮಾರ್ಕಿಂಗ್ ಇರುತ್ತದೆ).
- ದೈಹಿಕ ಸಾಮರ್ಥ್ಯ ಮತ್ತು ಸಹಿಷ್ಣುತೆ ಪರೀಕ್ಷೆ (PST / PET)
- ವೈದ್ಯಕೀಯ ತಪಾಸಣೆ ಮತ್ತು ಮೂಲ ದಾಖಲೆಗಳ ಪರಿಶೀಲನೆ
- ದೇಹದಾರ್ಢ್ಯತೆ ಮತ್ತು ಸಹಿಷ್ಣುತೆ ಪರೀಕ್ಷೆ: ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು 1:5 ಅನುಪಾತದಲ್ಲಿ ದೈಹಿಕ ಪರೀಕ್ಷೆಗೆ ಕರೆಯಲಾಗುತ್ತದೆ. ಸಾಮಾನ್ಯ ಅಭ್ಯರ್ಥಿಗಳಿಗೆ ಕನಿಷ್ಠ 168 ಸೆಂ.ಮೀ ಎತ್ತರ ಹಾಗೂ ಮಾಜಿ ಸೈನಿಕರಿಗೆ ಮತ್ತು ಬುಡಕಟ್ಟು ಅಭ್ಯರ್ಥಿಗಳಿಗೆ ನಿಯಮಾನುಸಾರ ವಿನಾಯಿತಿ ಇರುತ್ತದೆ. ದೈಹಿಕ ಸಹಿಷ್ಣುತೆ ಪರೀಕ್ಷೆಯಲ್ಲಿ 1600 ಮೀಟರ್ ಓಟ (6 ನಿಮಿಷ 30 ಸೆಕೆಂಡ್ಗಳಲ್ಲಿ), ಉದ್ದ ಜಿಗಿತ ಅಥವಾ ಎತ್ತರ ಜಿಗಿತ ಮತ್ತು ಗುಂಡು ಎಸೆತ ಸ್ಪರ್ಧೆಗಳು ಇರುತ್ತವೆ.
ಲಿಖಿತ ಪರೀಕ್ಷೆಯ ವಿವರ:
ದಿನಾಂಕ:06-09-2026 ರಂದು (ಬೆಳಿಗ್ಗೆ 10.30 ರಿಂದ 12.00 ರವರೆಗೆ) ನಡೆಸಲಾಗುತ್ತದೆ
ಆನಲೈನ್ ಮುಖಾಂತರ ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ವೇಳಾಪಟ್ಟಿ:-
| ಆನಲೈನ್ ಮುಖಾಂತರ ಅರ್ಜಿ ಸಲ್ಲಿಕೆ ಆರಂಭ | 22-06-2026 |
| ಆನಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 22-07-2026 |
| ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ | 24-07-2026 |
For Notification (RPC) Click Here :https://cetonline.karnataka.gov.in/keawebentry456/apcrpc/APC_RPC19062026kannada.pdf
For Notification (Kalyan Karnataka) Click Here :https://cetonline.karnataka.gov.in/keawebentry456/apckk/APC_KK19062026kannada.pdf
For Vacancy (RPC) Details Click Here :https://cetonline.karnataka.gov.in/keawebentry456/apcrpc/APC_CAR_DAR_RPC_1421kannada.pdf
For Vacancy (Kalyan Karnataka) Details Click Here : https://cetonline.karnataka.gov.in/keawebentry456/apckk/APC_CAR_DAR_KK_179kannada.pdf
For Online Application (RPC) Click Here :https://cetonline.karnataka.gov.in/KEACAR_DAR_2026/Account/Login
For Online Application (Kalyan Karnataka) Click Here :https://cetonline.karnataka.gov.in/KEACAR_DAR_2026/Account/Login
