ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಸಿಹಿ ಸುದ್ದಿ, ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಆನೆ ಕಾವಾಡಿಗ (ಡಿ-ಗ್ರೂಪ್) ಹುದ್ದೆಗಳ ನೇರ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿ, ಆಫಲೈನ ಮುಖಾಂತರ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ:-
- ಒಟ್ಟು ಹುದ್ದೆಗಳು:- 57
- ಹುದ್ದೆಯ ಹೆಸರು:- ಆನೆ ಕಾವಾಡಿಗ (ಡಿ-ಗ್ರೂಪ್)
ವೃತ್ತವಾರು ಹುದ್ದೆಗಳ ವಿವರ:-
- ಶಿವಮೊಗ್ಗ-09
- ಚಾಮರಾಜನಗರ-09
- ಕೊಡಗು-11
- ಕೆನರಾ-01
- ಮೈಸೂರು-27
ಪ್ರಮುಖ ದಿನಾಂಕಗಳು:-
- ಅಧಿಸೂಚನೆ ಬಿಡುಗಡೆ ಮಾಡಿದ ದಿನಾಂಕ: 01 ಅಗಸ್ಟ 2026
- ಆಫಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭಿಸಿದ ದಿನಾಂಕ: 05 ಅಗಸ್ಟ್ 2026 ಸಂಜೆ 5.30 ರವರೆಗೆ
- ಆಫಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03 ಸಪ್ಟೆಂಬರ್ 2026
ವೇತನ ಶ್ರೇಣಿ:-
- 29600-725-32500-800-35700-900-39300-1000-43300-1125-47800-1250-52800
ಶೈಕ್ಷಣಿಕ ವಿದ್ಯಾರ್ಹತೆ:-
ಅನುಭವ: ಆನೆ ನಿರ್ವಹಣೆಯಲ್ಲಿ ಅನುಭವ ಹೊಂದಿರುವುದು ಕಡ್ಡಾಯವಾಗಿರುತ್ತದೆ.
- ಮೇಲೆ ನಮೂದಿಸಿರುವ ಆನೆ ನಿರ್ವಹಣೆಯ ಅನುಭವವನ್ನು ಹೊಂದದೆ ಇರುವ ಅಥವಾ ಇತರೆ ಕಾರಣಗಳಿಂದ ಅನರ್ಹರಿರುವ ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಅರ್ಜಿ ಸಲ್ಲಿಸಿ, ಯಾವುದೇ ಕಾರಣದಿಂದ ಭಾಗವಹಿಸಿದಲ್ಲಿ, ನಂತರ ನಿಗದಿಪಡಿಸಲಾದ ಅಥವಾ ಇತರೆ ಕಾರಣಗಳಿಂದ ಅನರ್ಹರಿರುವುದು ಆಯ್ಕೆ ಪ್ರಾಧಿಕಾರ/ ನೇಮಕಾತಿ ಪ್ರಾಧಿಕಾರಕ್ಕೆ ಕಂಡುಬಂದಲ್ಲಿ ಅಂತಹ ಅಭ್ಯರ್ಥಿಗಳ ಅಭ್ಯರ್ಥಿತನವನ್ನು ಯಾವುದೇ ಹಂತದಲ್ಲಾದರೂ ರದ್ದುಪಡಿಸಲಾಗುತ್ತದೆ ಹಾಗೂ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದೇನೆ ಎಂಬ ಕಾರಣಕ್ಕಾಗಿ ಅಭ್ಯರ್ಥಿಯು ಯಾವುದೇ ಹಕ್ಕನ್ನು ಹೊಂದಿರುವುದಿಲ್ಲ. ಈ ಕುರಿತು ಆಯ್ಕೆ ಪ್ರಾಧಿಕಾರ/ ನೇಮಕಾತಿ ಪ್ರಾಧಿಕಾರವು ತೆಗೆದುಕೊಳ್ಳುವ ನಿರ್ಣಯವೇ ಅಂತಿಮವಾಗಿರುತ್ತದೆ.
ವಯೋಮಿತಿ:-
- ಕರ್ನಾಟಕ ನಾಗರೀಕ ಸೇವೆಗಳ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ನಿಯಮ 6ರಲ್ಲಿ ಒಳಗೊಂಡಿರುವ ಯಾವುದೇ ವಿಷಯದ ಹೊರತಾಗಿಯೂ ಅಭ್ಯರ್ಥಿಗಳು ಅಧಿಸೂಚನೆ ಹೊರಡಿಸಿದ ದಿನಾಂಕಕ್ಕೆ ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು ಹಾಗೂ ಅಧಿಸೂಚನೆ ಪ್ರಾರಂಭಿಕ ದಿನಾಂಕಕ್ಕೆ ಈ ಕೆಳಕಂಡತೆ ಗರಿಷ್ಠ ವಯೋಮಿತಿ ಒಳಗೆ ಇರಬೇಕು.
- ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 262 ಸೇನೆನಿ 2025, ದಿನಾಂಕ:29.01.2026 ರನ್ವಯ ಈ ಆದೇಶದ ದಿನಾಂಕದ ನಂತರ ಮುಂದಿನ ದಿನಾಂಕ:31.12.2027ರವರೆಗೆ ನೇರ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿ ಹೊರಡಿಸುವ ಅಧಿಸೂಚನೆಗಳನ್ವಯ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಈ ಕೆಳಕಂಡಂತೆ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿಯ ಕ್ರಮವಾಗಿ (as a one-time measure) 5 ವರ್ಷಗಳ ಸಡಿಲಿಕೆಯನ್ನು ನೀಡಲಾಗಿರುತ್ತದೆ.
| ಕ್ರ ಸಂ | ಪ್ರವರ್ಗ | ಗರಿಷ್ಠ ವಯೋಮಿತಿ ವಿವರ |
| 1. | ಸಾಮಾನ್ಯ ಅಭ್ಯರ್ಥಿ | 35 ವರ್ಷ |
| 2. | ಪ್ರವರ್ಗ 2A, 2B, 3A, 3B ಹಿಂದುಳಿದ ಪ್ರವರ್ಗಗಳು | 38 ವರ್ಷ |
| 3. | ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 | 40 ವರ್ಷ |
| 4. | ಮಾಜಿ ಸೈನಿಕರಿಗೆ | ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿ ನಿಯಮಾನುಸಾರ ನಿವೃತ್ತಿ/ಡಿಮೊಬಿಲೈಸೇಷನ್ (Demobilisation) ಅಥವಾ ರಿಟ್ರೆಂಚ್ಮೆಂಟ್ (Retrenchment) ಹೊಂದಿದ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಅವರು ಯಾವ ಪ್ರವರ್ಗಕ್ಕೆ ಸೇರುತ್ತಾರೆಯೋ ಈ ಮೇಲಿನ ಪ್ರವರ್ಗಕ್ಕೆ ನಿಗದಿಪಡಿಸಿದ ಗರಿಷ್ಠ ವಯೋಮಿತಿಗೆ ಅವರು ಎಷ್ಟು ವರ್ಷ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿರುವರೋ ಅಷ್ಟು ವರ್ಷಗಳಿಗೆ ಮೂರು (3) ವರ್ಷ ಸೇರಿಸಿದರೆ ಎಷ್ಟು ವರ್ಷಗಳಾಗುವುದೋ ಅಷ್ಟು ವರ್ಷಗಳ ಸಡಿಲಿಕೆ ಇರುತ್ತದೆ. |
- ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 42 ಎಸ್.ಆರ್.ಆರ್. 2008, ಬೆಂಗಳೂರು ದಿನಾಂಕ: 18.12.2008 ರನ್ವಯ ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಾವಳಿ 1977 ರ ನಿಯಮ 6 ರ ತಿದ್ದುಪಡಿಯನ್ವಯ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
ಉದ್ಯೋಗದ ಸ್ಥಳ:-
- ಕರ್ನಾಟಕ
ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಅರ್ಜಿ ಶುಲ್ಕ:-
- ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಅರ್ಜಿ ಸಲ್ಲಿಸುವ ವಿಧಾನ:-
- ಈ ನೇರ ನೇಮಕಾತಿಯ ಅಧಿಸೂಚನೆಗಳನ್ನು ಕರ್ನಾಟಕ ಅರಣ್ಯ ಇಲಾಖೆಯ ಅಧಿಕೃತ ಜಾಲತಾಣ https://aranya.gov.in/ ಮುಖ್ಯ ಪುಟದ ಕೆಳಭಾಗದಲ್ಲಿ ಇರುವ “ನೇಮಕಾತಿ” ಶೀರ್ಷಿಕೆಯಡಿ ಪ್ರಕಟಿಸಲಾಗಿದೆ. ಅರ್ಜಿ ಸಲ್ಲಿಸಲು ಇಚ್ಛಿಸುವ ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿಯ ಡೌನ್ಲೋಡ್ ಮಾಡಿದ ಅರ್ಜಿಯನ್ನು ಖುದ್ದಾಗಿ ಅಥವಾ ಅಂಚೆ ಮೂಲಕ “ಆನೆ ಕವಾಡಿಗ ಹುದ್ದೆಗೆ ಅರ್ಜಿ” ಎಂದು ಲಕೋಟೆಯ ಮೇಲೆ ಯಾವ ವೃತ್ತಕ್ಕೆ ಅರ್ಜಿ ಸಲ್ಲಿಸಲು ಬಯಸುತ್ತಿರುವಿರಿ ಆ ವೃತ್ತ ಹೆಸರನ್ನು ಬರೆದು ದಿನಾಂಕ: 05.08.2026 ರಿಂದ09.2026 ರ ಸಂಜೆ 5.30 ಗಂಟೆಯವರೆಗಿನ ಕಚೇರಿ ಅವಧಿಯೊಳಗೆ ಸಲ್ಲಿಸಬೇಕಾಗಿರುತ್ತದೆ. ಅರ್ಜಿ ನಮೂನೆ ಮಾದರಿ ಹಾಗೂ ಅಧಿಸೂಚನೆಗಳನ್ನು ಅರಣ್ಯ ಇಲಾಖೆಯ ವೆಬ್ಸೈಟ್ನಲ್ಲಿ ಹಾಗೂ ವೃತ್ತವಾರು ಕಚೇರಿಯ ಸೂಚನಾ ಫಲಕಗಳಲ್ಲಿ ಪ್ರಕಟಿಸಲಾಗಿರುತ್ತದೆ.. ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದ ನಂತರ ಖುದ್ದಾಗಿ ಅಥವಾ ಅಂಚೆ ಮೂಲಕ ಸ್ವೀಕರಿಸದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕವು ಸಾರ್ವತ್ರಿಕ ರಜಾ ದಿನವಾಗಿ ಘೋಷಿಸಲ್ಪಟ್ಟರೆ, ಆ ದಿನಾಂಕದ ಮರು ಕಚೇರಿ ತೆರೆದ ದಿನವು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ. ಆಫಲೈನ ವಿಧಾನವನ್ನು ಹೊರತುಪಡಿಸಿ ಬೇರೆ ಯಾವುದೇ ವಿಧಾನದಲ್ಲಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುವುದಿಲ್ಲ.
- ಸೂಚನೆ: ಒಮ್ಮೆ ಅರ್ಜಿ ಸಲ್ಲಿಸಿದ ನಂತರ ಅರ್ಜಿಯಲ್ಲಿರುವ ವಿವರಗಳನ್ನು ತಿದ್ದುಪಡಿ/ಸೇರ್ಪಡೆ ಮಾಡಲು ಅವಕಾಶವಿರುವುದಿಲ್ಲ ಹಾಗೂ ಅಂತಹ ಮನವಿಗಳನ್ನು ಪರಿಗಣಿಸಲಾಗುವುದಿಲ್ಲ.
- ಜನ್ಮ ದಿನಾಂಕ ದೃಢೀಕರಿಸುವ ಪ್ರಮಾಣ ಪತ್ರ, ಶೈಕ್ಷಣಿಕ ವಿದ್ಯಾರ್ಹತೆಯ ಪ್ರಮಾಣ ಪತ್ರಗಳು ಹಾಗೂ ನಿಗದಿತ ಜಾತಿ/ ಪ್ರವರ್ಗ/ ಗ್ರಾಮೀಣ ಅಭ್ಯರ್ಥಿ/ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿ/ ಯೋಜನಾ ನೀರಾಶ್ರಿತಗೊಂಡ ಕುಟುಂಬದ ಅಭ್ಯರ್ಥಿ/ ಮಾಜಿ ಸೈನಿಕ ಅಭ್ಯರ್ಥಿ/ ತೃತೀಯ ಲಿಂಗ ಅಭ್ಯರ್ಥಿ ಇತ್ಯಾದಿ ದೃಢೀಕರಣ ಪ್ರಮಾಣ ಪತ್ರಗಳನ್ನು ಅಭ್ಯರ್ಥಿಯು ಸ್ವಯಂ ಪ್ರಮಾಣ ಪತ್ರ/ ದಾಖಲೆಗಳನ್ನು ಅರ್ಜಿ ಸಲ್ಲಿಸುವ ವೇಳೆ ಲಗತ್ತಿಸುತ್ತಿರುತ್ತಾರೆ ಅಥವಾ ನಮೂದಿಸುತ್ತಿರುತ್ತಾರೆ ಅದೆ ಪ್ರಮಾಣ ಪತ್ರ/ ದಾಖಲೆಗಳನ್ನು ಆಯ್ಕೆ ಪ್ರಕ್ರಿಯೆಯ ಎಲ್ಲಾ ಹಂತಗಳಲ್ಲಿಯೂ ಪರಿಶೀಲಿಸಿ ಅಂತಿಮಗೊಳಿಸಲಾಗುತ್ತದೆ. ಇದನ್ನು ಯಾವುದೇ ಹಂತದಲ್ಲಿಯೂ ಬದಲಾವಣೆ ಮಾಡಲು ಅವಕಾಶವಿರುವುದಿಲ್ಲ.
ಅರ್ಜಿಗಳ ಪರಾಮರ್ಶೆ:-
- ಅಧಿಸೂಚನೆಯಲ್ಲಿ ನಿಗದಿಪಡಿಸುವ ಅರ್ಹತೆ ಮತ್ತು ದಾಖಲೆಗಳ ಆಧಾರ ಮೇರೆಗೆ ಸ್ವೀಕೃತವಾದ ಅರ್ಜಿಗಳನ್ನು ಪರಿಶೀಲಿಸಿ, ಪುರಸ್ಕರಿಸಿದ ಅರ್ಜಿಗಳು ಹಾಗೂ ತಿರಸ್ಕರಿಸಿದ ಅರ್ಜಿಗಳಾಗಿ ವಿಂಗಡಿಸಿ, ಅರ್ಹ ಅರ್ಜಿಗಳ ಸಂಬಂಧ ಅಭ್ಯರ್ಥಿಗಳಿಗೆ ನಿಗದಿಪಡಿಸಲಾದ ಸಂದರ್ಶನ ದಿನಾಂಕಕ್ಕೆ ಮೂಲ ದಾಖಲಾತಿಗಳು ಹಾಗೂ ಅವುಗಳ ದೃಢೀಕೃತ ಪ್ರತಿಗಳೊಂದಿಗೆ ಆಯ್ಕೆ ಸಮಿತಿಯ ಮುಂದೆ ಹಾಜರಾಗಲು ಸಂದರ್ಶನ ಪತ್ರವನ್ನು ಕಳುಹಿಸಲಾಗುವುದು ಹಾಗೂ ಅಭ್ಯರ್ಥಿಗಳು ಸಂದರ್ಶನಕ್ಕೆ ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗಬೇಕಾಗಿರುತ್ತದೆ.
ಸಂದರ್ಶನ ಪ್ರಕ್ರಿಯೆ ಮತ್ತು ನೇಮಕಾತಿ/ಆಯ್ಕೆ ವಿಧಾನ:-
- ಸಂದರ್ಶನ ಮತ್ತು ಆನೆ ನಿರ್ವಹಣೆಯ ಅನುಭವ ಪರೀಕ್ಷೆಗೆ ಸಂಬಂಧಿಸಿದಂತೆ, ನಿಗಧಿತ ದಿನಾಂಕ ಹಾಗೂ ಸಮಯದಲ್ಲಿ ಹಾಜರಾಗದಿದ್ದರೆ ಅಂತಹ ಅಭ್ಯರ್ಥಿಯ ಅಭ್ಯರ್ಥಿತನವನ್ನು ರದ್ದು/ ಅನರ್ಹಗೊಳಿಸಲಾಗುತ್ತದೆ ಹಾಗೂ ಮರು ದಿನಾಂಕವನ್ನು ನೀಡಲಾಗುವುದಿಲ್ಲ.
- ಸಂದರ್ಶನಕ್ಕೆ ನಿಗದಿಪಡಿಸಿದ ದಿನಾಂಕಂದು ನಿಗಧಿತ ಸಮಯ ಹಾಗೂ ಸ್ಥಳಕ್ಕೆ ಅಭ್ಯರ್ಥಿಗಳು ಅಗತ್ಯವಾದ ಎಲ್ಲ ಮೂಲ ಹಾಗೂ ದೃಢೀಕೃತ ದಾಖಲೆಗಳೊಂದಿಗೆ ಆಯ್ಕೆ ಸಮಿತಿಯ ಮುಂದೆ ಕಡ್ಡಾಯವಾಗಿ ಹಾಜರಾಗಬೇಕು
- ಮೂಲ ದಾಖಲೆಗಳ ಹಾಗೂ ದೃಢೀಕೃತ ದಾಖಲೆಗಳೊಂದಿಗೆ ಆಯ್ಕೆ ಸಮಿತಿಯ ಮುಂದೆ ಕಡ್ಡಾಯವಾಗಿ ಈ ಕೆಳಗಿನಂತೆ ಹಾಜರಾಗಬೇಕು.
- ಆನೆಗಳ ನಿರ್ವಹಣೆಯಲ್ಲಿ ಅನುಭವ ಹೊಂದಿರುವ ಬಗ್ಗೆ ವಲಯ ಅರಣ್ಯಾಧಿಕಾರಿ ಅಥವಾ ಅವರಿಗಿಂತ ಮೇಲ್ಪಟ್ಟ ಅಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ.
- ಕರ್ನಾಟಕ ರಾಜ್ಯ ವ್ಯಾಪ್ತಿಯ ಅಧಿಸೂಚಿತ ಅರಣ್ಯದೊಳಗೆ ಪ್ರಸ್ತುತ ವಾಸ ಮಾಡುತ್ತಿದ್ದಾರೆ ಎಂಬ ಬಗ್ಗೆ ಸಂಬಂಧಿಸಿದ ವ್ಯಾಪ್ತಿಯ ತಹಶೀಲ್ದಾರರಿಂದ ಪಡೆದ ಪ್ರಮಾಣ ಪತ್ರ.
- ಜನ್ಮ ದಿನಾಂಕದ ದೃಢೀಕೃತ ಪತ್ರ (ಜನನ ಪ್ರಮಾಣ ಪತ್ರ/ ಶಾಲಾ ದಾಖಲಾತಿ ಪತ್ರ/ ಆಧಾರ್ ಕಾರ್ಡ್)
- ನಿಗಧಿತ ನಮೂನೆಯಲ್ಲಿ ಜಾತಿ ಪ್ರಮಾಣ ಪತ್ರ.
- ವಿವಿಧ ಪ್ರವರ್ಗಗಳ ಅಡಿಯಲ್ಲಿ ಮೀಸಲಾತಿ ಕೋರಿದ ಅಭ್ಯರ್ಥಿಗಳು ಮೂಲ ದಾಖಲೆ ಪರಿಶೀಲನಾ ಸಮಯದಲ್ಲಿ ಹಾಜರುಪಡಿಸಬೇಕಾದ ಪ್ರಮಾಣ ಪತ್ರಗಳನ್ನು ಹಾಜರುಪಡಿಸದೆ ಇದ್ದ ಪಕ್ಷದಲ್ಲಿ ಅಭ್ಯರ್ಥಿಯು ಕೋರಿರುವ ಪ್ರವರ್ಗವಾರು ಮೀಸಲಾತಿಯನ್ನು ರದ್ದುಪಡಿಸಿ, ಸಾಮಾನ್ಯ ಅಭ್ಯರ್ಥಿಯ ಅಭ್ಯರ್ಥಿಯೆಂದು ಅವರನ್ನು ಪರಿಗಣಿಸಲಾಗುತ್ತದೆ.
- ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ನಂತರ ಸಂದರ್ಶನ ಪ್ರಕ್ರಿಯೆಗೆ ಕಡ್ಡಾಯವಾಗಿ ಆಯ್ಕೆ ಸಮಿತಿಯ ಮುಂದೆ ಹಾಜರಾಗುವುದು.
- ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳಿಗೆ ಕನ್ನಡ ಭಾಷೆಯನ್ನು ಮಾತನಾಡಲು ಮತ್ತು ಅಭ್ಯರ್ಥಿಸಿಕೊಳ್ಳುವ ಸಾಮರ್ಥ್ಯದ ಬಗ್ಗೆ ಹಾಗೂ ಆನೆಗಳ ನಿರ್ವಗಣೆಯ ಅನುಭವ ಸಾಮರ್ಥ್ಯದ ಬಗ್ಗೆ ಗರಿಷ್ಠ ನೂರು(100) ಅಂಕಗಳ ಪರೀಕ್ಷೆಗೆ ಒಳಪಡಿಸಲಾಗುವುದು.
- ಸಂಬಂಧಿಸಿದ ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಮತ್ತು ಪ್ರಸ್ತುತ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಗಳ ಅನುಸಾರ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿ, ನೇಮಕಾತಿ ಪ್ರಾಧಿಕಾರಕ್ಕೆ ಕಳುಹಿಸಲಾಗುತ್ತದೆ.
- ನೇಮಕಾತಿ ಪ್ರಾಧಿಕಾರದಿಂದ ಆಯ್ಕೆ ಪಟ್ಟಿಯಲ್ಲಿರವ ಅಭ್ಯರ್ಥಿಗಳು ನೇಮಕಾತಿ ನೇಮಕಾತಿ ಹೊಂದಲು ಎಲ್ಲ ರೀತಿಯಲ್ಲೂ ನೇಮಕಾತಿಗೆ ಅರ್ಹತೆ / ಸಿಂಧೂವಾಗಿರುವ ಬಗ್ಗೆ ಖಾತ್ರಿಪಡಿಸಿಕೊಂಡ ನಂತರವೇ ನೇಮಕಾತಿ ಆದೇಶವನ್ನು ನೀಡಲಾಗುತ್ತದೆ.
ನೇಮಕಾತಿ/ಆಯ್ಕೆ ವಿಧಾನ:-
- ಅಭ್ಯರ್ಥಿಗಳು ಸಂದರ್ಶನ ಪರೀಕ್ಷೆ ಮತ್ತು ಆನೆ ನಿರ್ವಹಣೆಯಲ್ಲಿ ಅನುಭವ ಹೊಂದಿರುವ ಬಗ್ಗೆ ಗಳಿಸಿದ ಅಂಕಗಳ ಆಧಾರದ ಮೇಲೆ ಮತ್ತು ಪ್ರಸ್ತುತ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಗಳ ಅನುಸಾರ ವೃತ್ತ ಮಟ್ಟದ ಅರ್ಹತಾ ಪಟ್ಟಿಯನ್ನು ಸಿದ್ಧಪಡಿಸಿ, ಕಾಲಕಾಲಕ್ಕೆ ಕರ್ನಾಟಕ ಅರಣ್ಯ ಇಲಾಖೆಯ ಅಧಿಕೃತ ಜಾಲತಾಣ: https://aranya.gov.in/ನಲ್ಲಿ ಮುಖ ಪುಟದ ಕೆಳಭಾಗದಲ್ಲಿರುವ “ನೇಮಕಾತಿ” ಶೀರ್ಷಿಕೆಯ ಅಡಿಯಲ್ಲಿ ಪ್ರಕಟಿಸಲಾಗುತ್ತದೆ ಈ ಕುರಿತು ಅರಣ್ಯ ಇಲಾಖೆಯ ವತಿಯಿಂದ ಅಭ್ಯರ್ಥಿಗಳೊಂದಿಗೆ ಯಾವುದೇ ಪತ್ರ ವ್ಯವಹಾರವನ್ನು ನಡೆಸಲಾಗುವುದಿಲ್ಲ.
ತಾತ್ಕಾಲಿಕ ಆಯ್ಕೆ ಪಟ್ಟಿ:-
- ಸಂದರ್ಶನ ಮತ್ತು ಆನೆ ನಿರ್ವಹಣೆ ಪರೀಕ್ಷೆಗಳಲ್ಲಿ ಅಭ್ಯರ್ಥಿಯು ಗಳಿಸಿದ ಅಂಕಗಳ ಆಧಾರ ಮೇಲೆ ಮತ್ತು ಪ್ರಚಲಿತ ಚಾಲ್ತಿಯಲ್ಲಿರುವ ವೃಂದ ಮತ್ತು ನೇಮಕಾತಿ ನಿಯಮ ಹಾಗೂ ಪ್ರವರ್ಗವಾರು ಮೀಸಲಾತಿ ನಿಯಮಗಳನುಸಾರ ವೃತ್ತವಾರು ಅಧಿಸೂಚನೆಗಳಲ್ಲಿ ಅಧಿಸೂಚಿಸಿರುವ ಪ್ರವರ್ಗವಾರು ಖಾಲಿ ಹುದ್ದೆಗಳಿಗೆ 1:1 (ಹುದ್ದೆ:ಅಭ್ಯರ್ಥಿ) ಅನುಪಾತದಲ್ಲಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಿ ಕರ್ನಾಟಕ ಅರಣ್ಯ ಇಲಾಖೆಯ ಅಧಿಕೃತ ಜಾಲತಾಣ https://aranya.gov.in/ ಮುಖ್ಯ ಪುಟದ ಕೆಳಭಾಗದಲ್ಲಿರುವ “ನೇಮಕಾತಿ” ಶೀರ್ಷಿಕೆಯಡಿ ಪ್ರಕಟಿಸಲಾಗುತ್ತದೆ.
ಅಂತೀಮ ಆಯ್ಕೆ ಪಟ್ಟಿ:-
- ವೃತ್ತಗಳ ಮಟ್ಟದಲ್ಲಿ ಅಧಿಸೂಚಿಸಲಾದ ಖಾಲಿ ಹುದ್ದೆಗಳ ಸಂಖ್ಯೆಗೆ ಸಮಾನವಾದ 1:1 (ಹುದ್ದೆ:ಅಭ್ಯರ್ಥಿ) ಅನುಪಾತದಲ್ಲಿ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ಆಹ್ವಾನಿಸಿ ನಿಯಮಾನುಸಾರ ಪರಿಶೀಲಿಸಿದ ನಂತರ ಪ್ರಚಲಿತ ಚಾಲ್ತಿಯಲ್ಲಿರುವ ವೃಂದ ಮತ್ತು ನೇಮಕಾತಿ ನಿಯಮ ಹಾಗೂ ಪ್ರವರ್ಗವಾರು ಮೀಸಲಾತಿ ನಿಯಮಗಳನುಸಾರ ಅಧಿಸೂಚನೆಯಲ್ಲಿ ಅಧಿಸೂಚಿಸಿರುವ ವಿಭಾಗವಾರು ಮತ್ತು ಪ್ರವರ್ಗವಾರು ಖಾಲಿ ಹುದ್ದೆಗಳಿಗೆ 1:1 (ಹುದ್ದೆ:ಅಭ್ಯರ್ಥಿ) ಅನುಪಾತದಲ್ಲಿ ಅಭ್ಯರ್ಥಿಗಳನ್ನು ಆನೆ ಕವಾಡಿಗ ವೃಂದದ ಹುದ್ದೆಗೆ ಅಂತಿಮವಾಗಿ ಆಯ್ಕೆ ಮಾಡಿ, ಅಂತಿಮ ಆಯ್ಕೆ ಪಟ್ಟಿಯನ್ನು ಕರ್ನಾಟಕ ಅರಣ್ಯ ಇಲಾಖೆಯ ಅಧಿಕೃತ ಜಾಲತಾಣ https://aranya.gov.in/ ಮುಖ್ಯ ಪುಟದ ಕೆಳಭಾಗದಲ್ಲಿರುವ “ನೇಮಕಾತಿ” ಶೀರ್ಷಿಕೆಯಡಿ ಪ್ರಕಟಿಸಲಾಗುವುದು.
ನೇಮಕಾತಿ ಹೊಂದಿದ ಅಭ್ಯರ್ಥಿಗಳ ಪರೀಕ್ಷಾರ್ಥ ಅವಧಿ ಹಾಗೂ ಸ್ಥಳ ನಿಯುಕ್ತಿ:-
- ಆನೆ ಕವಾಡಿಗ ಹುದ್ದೆಗೆ ಆಯ್ಕೆಗೊಂಡ ನಂತರ ಸದರಿ ಅಭ್ಯರ್ಥಿಯು ನೇಮಕಾತಿ ಪ್ರಾಧಿಕಾರದ ಸಮಕ್ಷಮ ಇಲಾಖೆಯಲ್ಲಿ ಕಾರ್ಯವದಿ ಮಾಡಿಕೊಂಡ ದಿನಾಂಕದಿಂದ ಕನಿಷ್ಠ ಎರಡು (2) ವರ್ಷ ಸೇವೆ ಸಲ್ಲಿಸುವುದು. ಪರೀಕ್ಷಾರ್ಥ ಅವಧಿಯನ್ನು ತೃಪ್ತಿಕರವಾಗಿ ಪೂರ್ಣಗೊಳಿಸುವುದು.
- ಕೆನರಾ ವೃತ್ತದ ಅಧಿಸೂಚನೆ & ಅರ್ಜಿ ನಮೂನೆಗಾಗಿ ಇಲ್ಲಿ ಕ್ಲೀಕ ಮಾಡಿ:-https://aranya.gov.in/aranyacms/(S(nu4cqtsprjkxez3hhedyqt3h))/downloads/Recruitment/Canara%20Circle%20Ane%20Kawadi%20Revised%202026-27.pdf
- ಕೊಡಗು ವೃತ್ತದ ಅಧಿಸೂಚನೆ & ಅರ್ಜಿ ನಮೂನೆಗಾಗಿ ಇಲ್ಲಿ ಕ್ಲೀಕ ಮಾಡಿ:-https://aranya.gov.in/aranyacms/(S(nu4cqtsprjkxez3hhedyqt3h))/downloads/Recruitment/Kodagu%20Elephant%20Kavadi%20Revised%202026-27.pdf
- ಮೈಸೂರು ವೃತ್ತದ ಅಧಿಸೂಚನೆ & ಅರ್ಜಿ ನಮೂನೆಗಾಗಿ ಇಲ್ಲಿ ಕ್ಲೀಕ ಮಾಡಿ:https://aranya.gov.in/aranyacms/(S(nu4cqtsprjkxez3hhedyqt3h))/downloads/Recruitment/%E0%B2%86%E0%B2%A8%E0%B3%86%20%E0%B2%95%E0%B2%BE%E0%B2%B5%E0%B2%BE%E0%B2%A1%E0%B2%BF%20%E0%B2%A8%E0%B3%87%E0%B2%B0%20%E0%B2%A8%E0%B3%87%E0%B2%AE%E0%B2%95%E0%B2%BE%E0%B2%A4%E0%B2%BF_0001_29-07-2026_12.47.25.pdf
- ಚಾಮರಾಜನಗರ ಅಧಿಸೂಚನೆ & ಅರ್ಜಿ ನಮೂನೆಗಾಗಿ ಇಲ್ಲಿ ಕ್ಲೀಕ ಮಾಡಿ:-https://aranya.gov.in/aranyacms/(S(nu4cqtsprjkxez3hhedyqt3h))/downloads/Recruitment/Elephant%20kavadi%202026-27%20Chamarajanagar%20Circle_28-07-2026_04.29.12.pdf
- ಶಿವಮೊಗ್ಗ ವೃತ್ತದ ಅಧಿಸೂಚನೆ & ಅರ್ಜಿ ನಮೂನೆಗಾಗಿ ಇಲ್ಲಿ ಕ್ಲೀಕ ಮಾಡಿ:-https://aranya.gov.in/aranyacms/(S(nu4cqtsprjkxez3hhedyqt3h))/downloads/Recruitment/Shimoga%20Ane%20Kawadi%20revised%202026-27.pdf


