ಕರ್ನಾಟಕ ರಾಜ್ಯ ಪೋಲಿಸ್ ಇಲಾಖೆ (ಕೆ.ಎಸ್.ಆರ್.ಪಿ) ನೇಮಕಾತಿ ಅಧಿಸೂಚನೆ-2026

ಕರ್ನಾಟಕ ಪೋಲಿಸ್ ಇಲಾಖೆಯಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಸರ್ಕಾರವು ಭರ್ಜರಿ ಶುಭ ಸುದ್ದಿಯನ್ನು ನೀಡಿದ್ದು, ರಾಜ್ಯ ಪೊಲೀಸ್ ಇಲಾಖೆಯು ಮಿಕ್ಕುಳಿದ ವೃಂದದಲ್ಲಿ (Residual Parent Cadre) ಖಾಲಿ ಇರುವ ಒಟ್ಟು 1455 ವಿಶೇಷ ಮೀಸಲು ಪೊಲೀಸ್ ಕಾನ್ಸಟೇಬಲ್ (ಕೆ.ಎಸ್.ಆರ್.ಪಿ) ಪುರುಷ & ಮಹಿಳಾ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮುಖಾಂತರ ಆನಲೈನ್ ಅರ್ಜಿಯನ್ನು ಆಹ್ವಾನಿಸಿದೆ.

KSRP-2026ಹುದ್ದೆಗಳ ವಿವರ:-

  • ಒಟ್ಟು ಹುದ್ದೆಗಳು:- 1455 (ಪುರುಷ-1382 & ಮಹಿಳಾ-73)
  • ಹುದ್ದೆಯ ಹೆಸರು:- ವಿಶೇಷ ಮೀಸಲು ಪೊಲೀಸ್ ಕಾನ್ಸಟೇಬಲ್ (ಕೆ.ಎಸ್.ಆರ್.ಪಿ)

ಪ್ರಮುಖ ದಿನಾಂಕಗಳು:-

  • ಅಧಿಸೂಚನೆ ಬಿಡುಗಡೆ ಮಾಡಿದ ದಿನಾಂಕ: 10 ಜುಲೈ 2026
  • ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭಿಸಿದ ದಿನಾಂಕ: 13 ಜುಲೈ 2026
  • ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10 ಅಗಸ್ಟ್ 2026
  • ಆನ್‌ಲೈನ್ ಮುಖಾಂತರ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 11 ಅಗಸ್ಟ್ 2026

ವೇತನ ಶ್ರೇಣಿ:-

  • 37500-900-39300-1000-43300-1125-47800-1250-52800-1375-58300-1500-64300-1650-74200-1900-76100 & ಇತರೆ ಭತ್ಯೆಗಳು

ಶೈಕ್ಷಣಿಕ ವಿದ್ಯಾರ್ಹತೆ:-

  • ಪಿ.ಯು.ಸಿ ಅಥವಾ ತತ್ಸಮಾನ ವಿದ್ಯಾರ್ಹತೆ

ತತ್ಸಮಾನ ವಿದ್ಯಾರ್ಹತೆ:-

ಸರ್ಕಾರದ ಸುತ್ತೋಲೆ/ಆದೇಶ ಸಂ:ಸಿಆಸುಇ 81 ಸೇವನೆ 2017, ದಿನಾಂಕ:27.02.2018 ರಲ್ಲಿ ಕರ್ನಾಟಕ ಪದವಿ ಪೂರ್ವ ಮಂಡಳಿಯು ನಡೆಸುವ ಪಿ.ಯು.ಸಿ. ವಿದ್ಯಾರ್ಹತೆಯ ತತ್ಸಮಾನ ವಿದ್ಯಾರ್ಹತೆಯ ವಿವರಗಳು ಈ ಕೆಳಗಿನಂತೆ ಇರುತ್ತವೆ.

  • ಸಿ.ಬಿ.ಎಸ್.ಇ & ಐ.ಎಸ್.ಸಿ ಮಂಡಳಿಯು ನಡೆಸುವ 12ನೇ ತರಗತಿ ಪರೀಕ್ಷೆ
  • ಇತರೆ ರಾಜ್ಯ ಸರ್ಕಾರದ ಪರೀಕ್ಷಾ ಮಂಡಳಿಗಳು ನಡೆಸುವ 12ನೇ ತರಗತಿ ಪರೀಕ್ಷೆ
  • ನ್ಯಾಷನಲ್ ಇನ್ಸಿಸ್ಟಿಟೂಟ್ ಆಫ್ ಓಪನ್ ಸ್ಕೂಲಿಂಗ್ (ಎನ್.ಐ.ಒ.ಎಸ್) ವತಿಯಿಂದ ನಡೆಸುವ ಉನ್ನತ ಪ್ರೌಢ ಶಿಕ್ಷಣ ಕೋರ್ಸ/ಎಚ್.ಎಸ್.ಸಿ
  • ಎರಡು ವರ್ಷಗಳ ಐ.ಟಿ.ಐ ಕೋರ್ಸ ಪಡೆದ ಅಭ್ಯರ್ಥಿಗಳು ಎನ್.ಐ.ಒ.ಎಸ್ ವತಿಯಿಂದ ನಡೆಸುವ ಒಂದು ಭಾಷಾ ಕೋರ್ಸ ಮತ್ತು ಒಂದು ಶೈಕ್ಷಣಿಕ ವಿಷಯದಲ್ಲಿ (ದೂರಕಲಿಕೆ ಮಾದರಿಯಲ್ಲಿ) ಅಥವಾ ಪದವಿಪೂರ್ವ ಮಂಡಳಿಯು ನಡೆಸುವ ಪರೀಕ್ಷೆಯಲ್ಲಿ ಒಂದು ಭಾಷೆ ಮತ್ತು ಒಂದು ವಿಷಯದಲ್ಲಿ ತೇರ್ಗಡೆಯಾಗಿದ್ದಲ್ಲಿ ಮಾತ್ರ ಪಿ.ಯು.ಸಿ ಗೆ ತತ್ಸಮಾನ ವಿದ್ಯಾರ್ಹತೆ ಎಂದು ಪರಿಗಣನೆ.

ಸರ್ಕಾರದ ಸುತ್ತೋಲೆ/ಆದೇಶ ಸಂ:ಇಡಿ 19 ಟಿವಿಇ 2019, ದಿನಾಂಕ:06.08.2021 ರಲ್ಲಿ ಕರ್ನಾಟಕ ರಾಜ್ಯ ವೃತ್ತಿ ಶಿಕ್ಷಣ ಕೋರ್ಸುಗಳು (ಜೆ.ಒ.ಸಿ) ಪಿ.ಯು.ಸಿ.ಗೆ ತತ್ಸಮಾನ ವಿದ್ಯಾರ್ಹತೆ ಎಂದು ಈ ಕೆಳಕಂಡ ಅಂಶಗಳಿಗೆ ಮಾತ್ರ ಪರಿಗಣಿಸಲು ಆದೇಶಿಸಿದೆ.

  • ಅನುಕಂಪದ ಆಧಾರದ ಮೇಲೆ ನೇಮಕಾತಿ ಪಡೆಯುವ ಅಥವಾ ನೇಮಕಾತಿ ಆದೇಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಮಾತ್ರ JOC ಅನ್ನು ಪಿಯುಸಿಗೆ ಸಮಾನವೆಂದು ಪರಿಗಣಿಸಲಾಗುತ್ತದೆ.
  • ಅಭ್ಯರ್ಥಿಗಳ ಆಯ್ಕೆ ಕೇವಲ ಸ್ಪರ್ಧಾತ್ಮಕ ಪರೀಕ್ಷೆಯ ಆಧಾರದ ಮೇಲೆ ನಡೆಯುವ ನೇಮಕಾತಿ ಪ್ರಕ್ರಿಯೆಗಳಲ್ಲಿ, PUC ಅಥವಾ JOC ಅಂಕಗಳನ್ನು ಪರಿಗಣಿಸದ ಹುದ್ದೆಗಳಿಗೆ JOC ಅನ್ನು ಕನಿಷ್ಠ ಶೈಕ್ಷಣಿಕ ಅರ್ಹತೆಯಾಗಿ ಪರಿಗಣಿಸಲಾಗುತ್ತದೆ.

ಸರ್ಕಾರದ ಸುತ್ತೋಲೆ/ಆದೇಶ ಸಂ:ಇಪಿ 33 ಟಿವಿಇ 2021, ದಿನಾಂಕ:30.09.2021 ರಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆಯ 3 ವರ್ಷದ ಡಿಪ್ಲೊಮಾ ಕೋರ್ಸ್ ಅನ್ನು ಕೆಳಗಿನ ಷರತ್ತುಗಳ ಅಡಿಯಲ್ಲಿ ಪಿ.ಯು.ಸಿ.ಗೆ ತತ್ಸಮಾನ ವಿದ್ಯಾರ್ಹತೆ ಎಂದು ಪರಿಗಣಿಸಲಾಗಿದೆ

  • ನೇರ ನೇಮಕಾತಿ, ಅನುಕಂಪದ ಆಧಾರದ ನೇಮಕಾತಿ ಹಾಗೂ ಉನ್ನತ ಶಿಕ್ಷಣಕ್ಕಾಗಿ ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಪಡೆದ 3 ವರ್ಷದ ಡಿಪ್ಲೊಮಾವನ್ನು ಪಿಯುಸಿಗೆ ತತ್ಸಮಾನ ವಿದ್ಯಾರ್ಹತೆ ಪರಿಗಣಿಸಲಾಗುತ್ತದೆ.
  • 2015ರ ಮೊದಲು 3 ವರ್ಷದ ತಾಂತ್ರಿಕ ಶಿಕ್ಷಣ ಇಲಾಖೆಯ ಡಿಪ್ಲೊಮಾ ಪೂರ್ಣಗೊಳಿಸಿದ ಅಭ್ಯರ್ಥಿಗಳು ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸುವ ಇಲಾಖಾ ಪರೀಕ್ಷೆಗಳು ಹಾಗೂ ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು.

ವಯೋಮಿತಿ:-

ಅರ್ಜಿಗಳನ್ನು ಸ್ವೀಕರಿಸಲು ನಿಗಧಿಪಡಿಸಿದ ಕೋನೆಯ ದಿನಾಂಕದಂದು ಕನಿಷ್ಠ 18 ವರ್ಷಗಳನ್ನು ಪೂರೈಸಿರಬೇಕು

ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ:ಸಿಆಸುಇ 262 ಸೇನೆನಿ 2025 ದಿನಾಂಕ:29.01.2026 ರಲ್ಲಿ ನಿರ್ದೇಶಿಸಿರುವಂತೆ ಒಂದು ಬಾರಿಗೆ ಅನ್ವಯವಾಗಿವಂತೆ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

  • ಸಾಮಾನ್ಯ ಅಭ್ಯರ್ಥಿಗಳು-18 ರಿಂದ 33 ವರ್ಷಗಳು
  • ಎಸ್.ಸ್ಸಿ/ಎಸ್.ಟಿ/ ಪ್ರವರ್ಗ-1,2ಎ,2ಬಿ,3ಎ,3ಬಿ- 18 ರಿಂದ 35 ವರ್ಷಗಳು
  • ಕರ್ನಾಟಕ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಅಭ್ಯರ್ಥಿಗಳಿಗೆ-18 ರಿಂದ 38 ವರ್ಷಗಳು

ಉದ್ಯೋಗದ ಸ್ಥಳ:-

  • ಕರ್ನಾಟಕದಾದ್ಯಂತ

ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಅರ್ಜಿ ಶುಲ್ಕ:-

  • ಸಾಮಾನ್ಯ ವರ್ಗ & ಇತರೆ ಹಿಂದುಳಿದ ವರ್ಗಗಳು (2A, 2B, 3A, 3B):- 750/-
  • ಪ್ರವರ್ಗ-1/Sc /St/Ex-Army:- 500/-

ತರಬೇತಿ:-

  • ಕೆ.ಎಸ್.ಆರ್.ಪಿ ಪೊಲೀಸ್ ಕಾನ್ಸಟೇಬಲ್ ಹುದ್ದೆಗೆ ನೇಮಕಾತಿ ಹೊಂದಿದ ಅಭ್ಯರ್ಥಿಗಳು ಡಿಜಿ ಮತ್ತು ಐಜಿಪಿ ರವರು ಕಾಲ-ಕಾಲಕ್ಕೆ ನಿರ್ದಿಷ್ಟ ಪಡಿಸಿದ ಪೊಲೀಸ್ ತರಬೇತಿ ಶಾಲೆಗಳಲ್ಲಿ 9 ತಿಂಗಳ ಮೂಲ ಬುನಾದಿ ತರಬೇತಿಯನ್ನು ಕಡ್ಡಾಯವಾಗಿ ಪಡೆಯಬೇಕು ಮತ್ತು ತರಬೇತಿಯಲ್ಲಿ ನಿಗಧಿಪಡಿಸಿದ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು, ಸದರಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶವನ್ನು ನೀಡಿದ ನಂತರ, ಸದರಿ ಅವಕಾಶದಲ್ಲಿಯೂ ಸಹ ಅನುತ್ತೀರ್ಣರಾದ ಅಭ್ಯರ್ಥಿಗಳನ್ನು ಸೇವೆಯಿಂದ ವಜಾಗೊಳಿಸಲಾಗುತ್ತದೆ.

ಖಾಯಂಪೂರ್ವ ಅವಧಿ:-

  • ಕರ್ನಾಟಕ ನಾಗರಿಕ ಸೇವಾ (ಖಾಯಂ ಪೂರ್ವ) ನಿಯಮಗಳು, 1977 ರನ್ವಯ ನೇರ ನೇಮಕಾತಿ ಮೂಲಕ ಆಯ್ಕೆಗೊಂಡ ಅಭ್ಯರ್ಥಿಗಳು ಸೇವೆಗೆ ಸೇರಿದ ದಿನಾಂಕದಿಂದ (ಮೂಲ ಬುನಾದಿ ತರಬೇತಿ ಸೇರಿದಂತೆ) 2 ವರ್ಷ 6 ತಿಂಗಳು ಖಾಯಂಪೂರ್ವ ಅವಧಿಯಲ್ಲಿರುತ್ತಾರೆ.

ಪಿಂಚಣಿ ಸೌಲಭ್ಯ:-

  • ಸರ್ಕಾರದ ಆದೇಶ ಸಂಖ್ಯೆ:ಎಫ್.ಡಿ (ಎಸ್.ಪಿ.ಎಲ್) 04 ಪಿಇಟಿ 2005, ದಿನಾಂಕ:31.03.2006 ರನ್ವಯ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್.ಪಿ.ಎಸ್) ಸೌಲಭ್ಯ ಅನ್ವಯವಾಗುವುದು.

ಲಿಖಿತ ಪರೀಕ್ಷಾ ವಿಧಾನ:-

  • ಕೆ.ಎಸ್.ಆರ್.ಪಿ ಪೊಲೀಸ್ ಕಾನ್ಸಟೇಬಲ್ ಹುದ್ದೆಗೆ ಲಿಖಿತ ಪರೀಕ್ಷೆಯನ್ನು ಆಫಲೈನ್ –ಒಎಂಆರ್ ಮಾದರಿ (Offline-OMR Type) ಯಲ್ಲಿ ನಡೆಸಲಾಗುತ್ತದೆ. ಮತ್ತು ಲಿಖಿತ ಪರೀಕ್ಷೆಯನ್ನು ರಾಜ್ಯದ ಆಯ್ದ ಜಿಲ್ಲಾಕೇಂದ್ರಗಳಲ್ಲಿ ನಡೆಸಲಾಗುತ್ತದೆ & (ಆಡಳಿತಾತ್ಮಕ ಉದ್ದೇಶದಿಂದ ಜಿಲ್ಲಾ ಪರೀಕ್ಷಾ ಕೇಂದ್ರಗಳು ಬದಲಾವಣೆಯ ಷರತ್ತಿಗೆ ಒಳಪಟ್ಟಿರುತ್ತವೆ)

ಪ್ರಶ್ನೆಪತ್ರಿಕೆ & ಪಠ್ಯಕ್ರಮ:-

  • ಲಿಖಿತ ಪರೀಕ್ಷೆಯು ಸಾಮಾನ್ಯ ಅಧ್ಯಯನ, & ಮಾನಸಿಕ ಸಾಮರ್ಥ ಒಳಗೊಂಡಿರುತ್ತದೆ.
  • ಪ್ರಶ್ನೆಪತ್ರಿಕೆಯು ಒಟ್ಟು 100 ಪ್ರಶ್ನೆಗಳನ್ನು ಹಾಗೂ 100 ಅಂಕಗಳನ್ನು ಒಳಗೊಂಡಿದ್ದು ಸದರಿ ಪ್ರಶ್ನೆಗಳಿಗೆ 1 ½ (90 ನಿಮಿಷಗಳಲ್ಲಿ) ಉತ್ತರಿಸಲಾಗುತ್ತದೆ.

ಲಿಖಿತ ಪರೀಕ್ಷಾ ವೇಳಾಪಟ್ಟಿ & ದಿನಾಂಕ:-

  • ಲಿಖಿತ ಪರೀಕ್ಷೆಯನ್ನು ದಿನಾಂಕ:20-09-2026 ರಂದು ಬೆಳಿಗ್ಗೆ 10.30 ರಿಂದ 12.00 ರವರೆಗೆ ನಡೆಸಲಾಗುತ್ತದೆ.

ದೇಹದಾರ್ಢ್ಯತೆ ಪರೀಕ್ಷೆಯ ವಿವರ (Physical Standards)

  • ಕನಿಷ್ಠ ಎತ್ತರ: 168 ಸೆಂ.ಮೀ (ಸಾಮಾನ್ಯ ಅಭ್ಯರ್ಥಿಗಳಿಗೆ)
  • ಎದೆಯಳತೆ: 86 ಸೆಂ.ಮೀ (ಕನಿಷ್ಠ 5 ಸೆಂ.ಮೀ ವಿಸ್ತರಣೆಯೊಂದಿಗೆ)
  • ಕನಿಷ್ಠ ಎತ್ತರ: 155 ಸೆಂ.ಮೀ (ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಬುಡಕಟ್ಟು ಪುರುಷ & 150 ಸೆಂ.ಮಿ ಮಹಿಳಾ ಅಭ್ಯರ್ಥಿಗಳಿಗೆ )
  • ಎದೆಯಳತೆ: 75 ಸೆಂ.ಮೀ (ಕನಿಷ್ಠ 5 ಸೆಂ.ಮೀ ವಿಸ್ತರಣೆಯೊಂದಿಗೆ)
  • ಕನಿಷ್ಠ ತೂಕ: 45 ಕೆ.ಜಿ

ಆಯ್ಕೆ ಪ್ರಕ್ರಿಯೆ (Selection Process) :-

ಆಯ್ಕೆಯು ಪ್ರಮುಖವಾಗಿ ಮೂರು ಹಂತಗಳಲ್ಲಿ ನಡೆಯುತ್ತದೆ

  • ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ:100 ಅಂಕಗಳ ವಸ್ತುನಿಷ್ಠ (Objective) ಪರೀಕ್ಷೆ ಇರುತ್ತದೆ. (90 ನಿಮಿಷಗಳ ಸಮಯ. ಪ್ರತಿ ತಪ್ಪು ಉತ್ತರಕ್ಕೆ 0.25 ನೆಗೆಟಿವ್ ಮಾರ್ಕಿಂಗ್ ಇರುತ್ತದೆ).
  • ದೈಹಿಕ ಸಾಮರ್ಥ್ಯ ಮತ್ತು ಸಹಿಷ್ಣುತೆ ಪರೀಕ್ಷೆ (PST / PET)
  • ವೈದ್ಯಕೀಯ ತಪಾಸಣೆ ಮತ್ತು ಮೂಲ ದಾಖಲೆಗಳ ಪರಿಶೀಲನೆ
  • ದೇಹದಾರ್ಢ್ಯತೆ ಮತ್ತು ಸಹಿಷ್ಣುತೆ ಪರೀಕ್ಷೆ(ಪುರುಷ ಅಭ್ಯರ್ಥಿಗಳಿಗೆ):- ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು 1:5 ಅನುಪಾತದಲ್ಲಿ ದೈಹಿಕ ಪರೀಕ್ಷೆಗೆ ಕರೆಯಲಾಗುತ್ತದೆ. ದೈಹಿಕ ಸಹಿಷ್ಣುತೆ ಪರೀಕ್ಷೆಯಲ್ಲಿ 1600 ಮೀಟರ್ ಓಟ (6 ನಿಮಿಷ 30 ಸೆಕೆಂಡ್ಗಳಲ್ಲಿ), ಉದ್ದ ಜಿಗಿತ ಅಥವಾ ಎತ್ತರ ಜಿಗಿತ ಮತ್ತು ಗುಂಡು ಎಸೆತ ಸ್ಪರ್ಧೆಗಳು ಇರುತ್ತವೆ.
  • ದೇಹದಾರ್ಢ್ಯತೆ ಮತ್ತು ಸಹಿಷ್ಣುತೆ ಪರೀಕ್ಷೆ(ಮಹಿಳಾ ಅಭ್ಯರ್ಥಿಗಳಿಗೆ):- ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು 1:5 ಅನುಪಾತದಲ್ಲಿ ದೈಹಿಕ ಪರೀಕ್ಷೆಗೆ ಕರೆಯಲಾಗುತ್ತದೆ. ದೈಹಿಕ ಸಹಿಷ್ಣುತೆ ಪರೀಕ್ಷೆಯಲ್ಲಿ 400 ಮೀಟರ್ ಓಟ (1 ನಿಮಿಷ 30 ಸೆಕೆಂಡ್ಗಳಲ್ಲಿ), ಉದ್ದ ಜಿಗಿತ ಅಥವಾ ಎತ್ತರ ಜಿಗಿತ ಮತ್ತು ಗುಂಡು ಎಸೆತ ಸ್ಪರ್ಧೆಗಳು ಇರುತ್ತವೆ.

ನೇಮಕಾತಿ ವಿಧಾನ:-

  • ಲಿಖಿತ ಹಾಗೂ ದೇಹದಾರ್ಡ್ಯತೆ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಗೆ ವೈದ್ಯಕೀಯ ಮಂಡಳಿಯು ವೈದ್ಯಕೀಯ ಪರೀಕ್ಷೆಯನ್ನು ನಡೆಸಿ, ನೀಡುವ ವರದಿಗಳನ್ನು ಆಧರಿಸಿ ಆಯ್ಕೆ ಪ್ರಾಧಿಕಾರವು ಹುದ್ದೆಗಳಿಗೆ ಅನುಸಾರ ಆಯ್ಕೆ ಪಟ್ಟಿಯನ್ನು ತಯಾರಿಸಿ ನೇಮಕಾತಿ ಪ್ರಾಧಿಕಾರಕ್ಕೆ ಕಳುಹಿಸಿ ಮತ್ತು ಸದರಿ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ, ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳು ಆಯ್ಕೆಯೆ ಎಲ್ಲಾ ರೀತಿಯಿಂದಲೂ ಆರ್ಹತೆಯನ್ನು ಹೊಂದಿರುವ ಬಗ್ಗೆ ನೇಮಕಾತಿ ಪ್ರಾಧಿಕಾರವು ದೃಡಪಡಿಸಿಕೊಂಡ ನಂತರ ಖಾಲಿ ಹುದ್ದೆಗಳ ಅನುಸಾರ ನೇಮಕಾತಿಯನ್ನು ಮಾಡಲಾಗುತ್ತದೆ.

ದೇಹದಾರ್ಢ್ಯತೆ ಮತ್ತು ಸಹಿಷ್ಣುತೆ ಪರೀಕ್ಷೆಗಳ ವಿವರ:-

  • ಅಭ್ಯರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅರ್ಹತಾ ಪಟ್ಟಿಯನ್ನು ತಯಾರಿಸಿ, ಈ ಅರ್ಹತಾ ಪಟ್ಟಿಯಿಂದ ಪ್ರತಿ ವರ್ಗದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಮೆರಿಟ್ ಹಾಗೂ ಮೀಸಲಾತಿಗೆ ಅನುಗುಣವಾಗಿ ದೇಹದಾರ್ಢ್ಯತೆ ಮತ್ತು ಸಹಿಷ್ಣುತೆ ಪರೀಕ್ಷೆಗಳಿಗೆ 1:5 ರ ಅನುಪಾತದಲ್ಲಿ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನುತಯಾರಿಸಿ, 1:5 ರ ಅನುಪಾತದಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳು ದೇಹದಾರ್ಢ್ಯತೆ ಮತ್ತು ಸಹಿಷ್ಣುತೆ ಪರೀಕ್ಷೆಗಳಲ್ಲಿ, ಅರ್ಹರಾಗದಿದ್ದಲ್ಲಿ ಮುಂದಿನ 1:5 ರ ಅನುಪಾತದಲ್ಲಿ ಅಭ್ಯರ್ಥಿಗಳನ್ನು ದೇಹದಾರ್ಢ್ಯತೆ ಮತ್ತು ಸಹಿಷ್ಣುತೆ ಪರೀಕ್ಷೆಗಳಲ್ಲಿ ಕರೆಯಲಾಗುವುದು. ಈ ಅನುಪಾತವು ಯಾವುದೇ ಕಾರಣಕ್ಕೂ 1:10 ಅನುಪಾತವನ್ನು ಮೀರಬಾರದು.

ದಾಖಲೆಗಳ ಪರಿಶೀಲನೆ:-

  • ಶೈಕ್ಷಣಿಕ ವಿದ್ಯಾರ್ಹತೆ:- ಅಭ್ಯರ್ಥಿಯು ಎಸ್.ಎಸ್.ಎಲ್.ಸಿ & ಪಿ.ಯು,ಸಿ ಮೂಲ ಅಂಕಪಟ್ಟಿಗಳನ್ನು ಅಥವಾ ತತ್ಸಮಾನ ವಿದ್ಯಾರ್ಹತೆಯ ಮೂಲ ಅಂಕಪಟ್ಟಿಗಳನ್ನು ದಾಖಲೆಗಳ ಪರಿಶೀಲನೆ ಸಮಯದಲ್ಲಿ ಪ್ರಾಧಿಕಾರದ ಮುಂದೆ ಹಾಜರುಪಡಿಸಬೇಕು.
  • ಜನ್ಮ ದಿನಾಂಕಃ ಅಭ್ಯರ್ಥಿಯು ಎಸ್.ಎಸ್.ಎಲ್.ಸಿ ಮೂಲ ಅಂಕಪಟ್ಟಿ ಅಥವಾ ಮೂಲ ಜನನ ಪ್ರಮಾಣ ಪತ್ರವನ್ನು ದಾಖಲೆಗಳ ಪರಿಶೀಲನೆ ಸಮಯದಲ್ಲಿ ಪ್ರಾಧಿಕಾರದ ಮುದೆ ಹಾಜರುಪಡಿಸಬೇಕು.
  • ಜಾತಿ ಪ್ರಮಾಣ ಪತ್ರ:- ಅಭ್ಯರ್ಥಿಯು ದಾಖಲೆಗಳ ಪರಿಶೀಲನೆ ಸಮಯದಲ್ಲಿ ಜಾತಿ ಪ್ರಮಾಣ ಪತ್ರವನ್ನು  ಪ್ರಾಧಿಕಾರದ ಮುಂದೆ ಹಾಜರುಪಡಿಸಬೇಕು.
  • ಮೀಸಲಾತಿ ಕೋರಲು ಮಾನ್ಯವಿರುವ ಮೂಲ ಪ್ರಮಾಣ ಪತ್ರಗಳು:- ಅಭ್ಯರ್ಥಿಯು ದಾಖಲೆಗಳ ಪರಿಶೀಲನೆ ಸಮಯದಲ್ಲಿ ಪ್ರಾಧಿಕಾರದ ಮುಂದೆ ಹಾಜರುಪಡಿಸಬೇಕು.
  • ಗುರುತಿನ ಪುರಾವೆ:- ಅಭ್ಯರ್ಥಿಯು ದಾಖಲೆಗಳ ಪರಿಶೀಲನೆ ಸಮಯದಲ್ಲಿ ಗುರುತಿನ ಪುರಾವೆಯಾಗಿ ಮೂಲ ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಇತರೆ ದಾಖಲೆಗಳನ್ನು ಪ್ರಾಧಿಕಾರದ ಮುಂದೆ ಹಾಜರುಪಡಿಸಬೇಕು. ಪ್ರಾಧಿಕಾರವು ನಿರ್ದೇಶಿಸಿದಾಗ ಸಂಬಂಧಪಟ್ಟ ದಾಖಲೆಗಳನ್ನು ಅಭ್ಯರ್ಥಿಗಳು ಹಾಜರುಪಡಿಸಬೇಕು.

ಆನಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-

  • 10 ನೇ ತರಗತಿ ಅಂಕಪಟ್ಟಿ
  • 12 ನೇ ತರಗತಿ ಅಂಕಪಟ್ಟಿ
  • ಆಧಾರ ಕಾರ್ಡ
  • ತತ್ಸಮಾನ ವಿದ್ಯಾರ್ಹತೆ ಪ್ರಮಾಣ ಪತ್ರಗಳು (ಅನ್ವಯಿಸಿದಲ್ಲಿ ಮಾತ್ರ)
  • ಜಾತಿ ಪ್ರಮಾಣ ಪತ್ರ
  • ಮೀಸಲಾತಿ ಪ್ರಮಾಣ ಪತ್ರಗಳು (ಕನ್ನಡ/ಗ್ರಾಮೀಣ/ಮುಳುಗಡೆ/ಇತರೆ)
  • ಮೊಬೈಲ್ ಸಂಖ್ಯೆ & ಮೇಲ್ ಐಡಿ
  • ಇತ್ತೀಚಿನ  ಭಾವಚಿತ್ರ & ಸಹಿ

For Notification Click Here :-https://cetonline.karnataka.gov.in/keawebentry456/kisrpc2026/ksrpnkkkannada.pdf

For Post Details Click Here :-https://cetonline.karnataka.gov.in/keawebentry456/kisrpc2026/(KSRP)_RPC_1455_FINALkannada.pdf

For Reservation Certificate Formats Click Here :-https://cetonline.karnataka.gov.in/keawebentry456/cpcrpc2026/Certificate_formats_performakannada.pdf

For Online Application Click Here :- https://cetonline.karnataka.gov.in/kea/kisrpc2026

 

 

 

 

 

Leave a Comment

Your email address will not be published. Required fields are marked *

Scroll to Top