ಕರ್ನಾಟಕ ರಾಜ್ಯ ಸರ್ಕಾರವು ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಸುದ್ದಿಯನ್ನು ನೀಡಿದ್ದು, ಕಂದಾಯ ಇಲಾಖೆಯ ಉಳಿಕೆ ಮೂಲ ವೃಂದದಲ್ಲಿ (Residual Parent Cadre) ಖಾಲಿ ಇರುವ ಒಟ್ಟು 505 ಗ್ರಾಮ ಆಡಳಿತಾಧಿಕಾರಿಗಳ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಆನಲೈನ ಮೂಲಕ ಅರ್ಜಿಯನ್ನು ಆಹ್ವಾನಿಸಿದೆ.
ಹುದ್ದೆಗಳ ವಿವರ:-
- ಒಟ್ಟು ಹುದ್ದೆಗಳು:– 505
- ಹುದ್ದೆಯ ಹೆಸರು:- ಗ್ರಾಮ ಆಡಳಿತಾಧಿಕಾರಿ
ವೇತನ ಶ್ರೇಣಿ:-
- 34100-800-35700-900-39300-1000-43300-1125-47800-1250-52800-1375-58300-1500-64300-1650-67000 & ಇತರೆ ಭತ್ಯೆಗಳು
ಶೈಕ್ಷಣಿಕ ವಿದ್ಯಾರ್ಹತೆ:-
- ಪಿ.ಯು.ಸಿ ಅಥವಾ ತತ್ಸಮಾನ ವಿದ್ಯಾರ್ಹತೆ
ತತ್ಸಮಾನ ವಿದ್ಯಾರ್ಹತೆ:-
ಸರ್ಕಾರದ ಸುತ್ತೋಲೆ/ಆದೇಶ ಸಂ:ಸಿಆಸುಇ 81ಸೇವನೆ 2017, ದಿನಾಂಕ:27.02.2018 ರಲ್ಲಿ ಕರ್ನಾಟಕ ಪದವಿ ಪೂರ್ವ ಮಂಡಳಿಯು ನಡೆಸುವ ಪಿ.ಯು.ಸಿ. ವಿದ್ಯಾರ್ಹತೆಯ ತತ್ಸಮಾನ ವಿದ್ಯಾರ್ಹತೆಯ ವಿವರಗಳು ಈ ಕೆಳಗಿನಂತೆ ಇರುತ್ತವೆ.
- ಸಿ.ಬಿ.ಎಸ್.ಇ & ಐ.ಎಸ್.ಸಿ ಮಂಡಳಿಯು ನಡೆಸುವ 12ನೇ ತರಗತಿ ಪರೀಕ್ಷೆ
- ಇತರೆ ರಾಜ್ಯ ಸರ್ಕಾರದ ಪರೀಕ್ಷಾ ಮಂಡಳಿಗಳು ನಡೆಸುವ 12ನೇ ತರಗತಿ ಪರೀಕ್ಷೆ
- ನ್ಯಾಷನಲ್ ಇನ್ಸಿಸ್ಟಿಟೂಟ್ ಆಫ್ ಓಪನ್ ಸ್ಕೂಲಿಂಗ್ (ಎನ್.ಐ.ಒ.ಎಸ್) ವತಿಯಿಂದ ನಡೆಸುವ ಉನ್ನತ ಪ್ರೌಢ ಶಿಕ್ಷಣ ಕೋರ್ಸ/ಎಚ್.ಎಸ್.ಸಿ
- ಎರಡು ವರ್ಷಗಳ ಐ.ಟಿ.ಐ ಕೋರ್ಸ ಪಡೆದ ಅಭ್ಯರ್ಥಿಗಳು ಎನ್.ಐ.ಒ.ಎಸ್ ವತಿಯಿಂದ ನಡೆಸುವ ಒಂದು ಭಾಷಾ ಕೋರ್ಸ ಮತ್ತು ಒಂದು ಶೈಕ್ಷಣಿಕ ವಿಷಯದಲ್ಲಿ (ದೂರಕಲಿಕೆ ಮಾದರಿಯಲ್ಲಿ) ಅಥವಾ ಪದವಿಪೂರ್ವ ಮಂಡಳಿಯು ನಡೆಸುವ ಪರೀಕ್ಷೆಯಲ್ಲಿ ಒಂದು ಭಾಷೆ ಮತ್ತು ಒಂದು ವಿಷಯದಲ್ಲಿ ತೇರ್ಗಡೆಯಾಗಿದ್ದಲ್ಲಿ ಮಾತ್ರ ಪಿ.ಯು.ಸಿ ಗೆ ತತ್ಸಮಾನ ವಿದ್ಯಾರ್ಹತೆ ಎಂದು ಪರಿಗಣಿಸಲಾಗುವುದು.
ಸರ್ಕಾರದ ಸುತ್ತೋಲೆ/ಆದೇಶ ಸಂ:ಇಡಿ 19 ಟಿವಿಇ 2019, ದಿನಾಂಕ:06.08.2021 ರಲ್ಲಿ ಕರ್ನಾಟಕ ರಾಜ್ಯ ವೃತ್ತಿ ಶಿಕ್ಷಣ ಕೋರ್ಸುಗಳು (ಜೆ.ಒ.ಸಿ) ಪಿ.ಯು.ಸಿ.ಗೆ ತತ್ಸಮಾನ ವಿದ್ಯಾರ್ಹತೆ ಎಂದು ಈ ಕೆಳಕಂಡ ಅಂಶಗಳಿಗೆ ಮಾತ್ರ ಪರಿಗಣಿಸಲು ಆದೇಶಿಸಿದೆ.
- PUC ಅಥವಾ JOC ಅಂಕಗಳನ್ನು ಪರಿಗಣಿಸದೆ ಕೇವಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪರಿಗಣಿಸಿ, ಉದ್ಯೋಗಕ್ಕೆ ಆಯ್ಕೆ, ಮಾಡುವುದಾದರೆ JOC ಅನ್ನು ಪಿ.ಯು.ಸಿ ಗೆ ತತ್ಸಮಾನ ವಿದ್ಯಾರ್ಹತೆಯೆಂದು ಕನಿಷ್ಠ ಶೈಕ್ಷಣಿಕ ಅರ್ಹತೆಯಾಗಿ ಪರಿಗಣಿಸಲಾಗುತ್ತದೆ.
ಸರ್ಕಾರದ ಸುತ್ತೋಲೆ/ಆದೇಶ ಸಂ:ಇಪಿ 33 ಟಿವಿಇ 2021, ದಿನಾಂಕ:30.09.2021 ರಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆಯ 3 ವರ್ಷದ ಡಿಪ್ಲೊಮಾ ಕೋರ್ಸ್ ಅನ್ನು ಕೆಳಗಿನ ಷರತ್ತುಗಳ ಅಡಿಯಲ್ಲಿ ಪಿ.ಯು.ಸಿ.ಗೆ ತತ್ಸಮಾನ ವಿದ್ಯಾರ್ಹತೆ ಎಂದು ಪರಿಗಣಿಸಲಾಗಿದೆ
- ನೇರ ನೇಮಕಾತಿ, ಅನುಕಂಪದ ಆಧಾರದ ನೇಮಕಾತಿ ಹಾಗೂ ಉನ್ನತ ಶಿಕ್ಷಣಕ್ಕಾಗಿ ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಪಡೆದ 3 ವರ್ಷದ ಡಿಪ್ಲೊಮಾವನ್ನು ಪಿಯುಸಿಗೆ ತತ್ಸಮಾನ ವಿದ್ಯಾರ್ಹತೆ ಪರಿಗಣಿಸಲಾಗುತ್ತದೆ.
- 2015ರ ಮೊದಲು 3 ವರ್ಷದ ತಾಂತ್ರಿಕ ಶಿಕ್ಷಣ ಇಲಾಖೆಯ ಡಿಪ್ಲೊಮಾ ಪೂರ್ಣಗೊಳಿಸಿದ ಅಭ್ಯರ್ಥಿಗಳು ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸುವ ಇಲಾಖಾ ಪರೀಕ್ಷೆಗಳು ಹಾಗೂ ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು.
ವಯೋಮಿತಿ:-
ಅರ್ಜಿಗಳನ್ನು ಸ್ವೀಕರಿಸಲು ನಿಗಧಿಪಡಿಸಿದ ಕೋನೆಯ ದಿನಾಂಕದಂದು ಕನಿಷ್ಠ 18 ವರ್ಷಗಳನ್ನು ಪೂರೈಸಿರಬೇಕು ಮತ್ತು ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ:ಸಿಆಸುಇ 262 ಸೇನೆನಿ 2025 ದಿನಾಂಕ:29.01.2026 ರಲ್ಲಿ ಆದೇಸಿರುವಂತೆ ಒಂದು ಬಾರಿಗೆ ಅನ್ವಯವಾಗಿವಂತೆ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಿದ ಪ್ರಯುಕ್ತ, ಅದನ್ನು ವಯೋಮಿತಿಯಲ್ಲಿ ಅಳವಡಿಸಿಕೊಂಡ ನಂತರ ಅಭ್ಯರ್ಥಿಗಳು ಈ ಕೆಳಗೆ ತೋರಿಸಿರುವಂತೆ ಗರಿಷ್ಠ ಮಯೋಮಿತಿಯನ್ನು ಮೀರಿರಬಾರದು.
- ಸಾಮಾನ್ಯ ಅಭ್ಯರ್ಥಿಗಳು-18 ರಿಂದ 40 ವರ್ಷಗಳು
- ಪ್ರವರ್ಗ 2ಎ,2ಬಿ,3ಎ,3ಬಿ- 18 ರಿಂದ 43 ವರ್ಷಗಳು
- ಎಸ್.ಸ್ಸಿ/ಎಸ್.ಟಿ/ ಪ್ರವರ್ಗ-18 ರಿಂದ 45 ವರ್ಷಗಳು
ಉದ್ಯೋಗದ ಸ್ಥಳ:-
- ಕರ್ನಾಟಕದಾದ್ಯಂತ
ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಅರ್ಜಿ ಶುಲ್ಕ:-
- ಸಾಮಾನ್ಯ ವರ್ಗ & ಇತರೆ ಹಿಂದುಳಿದ ವರ್ಗಗಳು (2A, 2B, 3A, 3B):- 750/-
- ಪ್ರವರ್ಗ-1/Sc /St/Ex-Army/ತೃತೀಯ ಲಿಂಗಿಗಳಿಗೆ:- 500/-
- ವಿಶೇಷ ಚೇತನ ಅಭ್ಯರ್ಥಿಗಳಿಗೆ:- 250/-
ಪ್ರಮುಖ ದಿನಾಂಕಗಳು:-
- ಅಧಿಸೂಚನೆ ಬಿಡುಗಡೆ ಮಾಡಿದ ದಿನಾಂಕ: 10 ಜುಲೈ 2026
- ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭಿಸಿದ ದಿನಾಂಕ: 11 ಜುಲೈ 2026
- ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30 ಜುಲೈ 2026
- ಆನ್‌ಲೈನ್ ಮುಖಾಂತರ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 31 ಜುಲೈ 2026
ಖಾಯಂಪೂರ್ವ ಅವಧಿ:-
- ನೇರ ನೇಮಕಾತಿ ಮೂಲಕ ಆಯ್ಕೆಗೊಂಡ ಅಭ್ಯರ್ಥಿಗಳು ಸೇವೆಗೆ ಸೇರಿದ ದಿನಾಂಕದಿಂದ ಎರಡು ವರ್ಷಗಳ ಕಾಲ ಖಾಯಂಪೂರ್ವ ಅವಧಿಯಲ್ಲಿರುತ್ತಾರೆ.
ಪಿಂಚಣಿ ಸೌಲಭ್ಯ:-
- ಸರ್ಕಾರದ ಆದೇಶ ಸಂಖ್ಯೆ:ಎಫ್.ಡಿ (ಎಸ್.ಪಿ.ಎಲ್) 04 ಪಿಇಟಿ 2005, ದಿನಾಂಕ:31.03.2006 ರನ್ವಯ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್.ಪಿ.ಎಸ್) ಸೌಲಭ್ಯ ಅನ್ವಯವಾಗುವುದು.
ಲಿಖಿತ ಪರೀಕ್ಷಾ ವಿಧಾನ:-
- ಗ್ರಾಮ ಆಡಳಿತಾಧಿಕಾರಿಗಳ ಲಿಖಿತ ಪರೀಕ್ಷೆಯನ್ನು ಆಫಲೈನ್ –ಒಎಂಆರ್ ಮಾದರಿ (Offline-OMR Type) ಯಲ್ಲಿ ನಡೆಸಲಾಗುತ್ತದೆ.
- ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಾಗುವ ಪರೀಕ್ಷಾ ಕೇಂದ್ರದ ವಿವರಗಳನ್ನು ನಂತರದಲ್ಲಿ ತಿಳಿಸುವರು.
ಪ್ರಶ್ನೆಪತ್ರಿಕೆ & ಪಠ್ಯಕ್ರಮ:-
- ಲಿಖಿತ ಪರೀಕ್ಷೆಯು ಪತ್ರಿಕೆ-1 & ಪತ್ರಿಕೆ-2 ನ್ನು ಒಳಗೊಂಡಿದ್ದು, ಪತ್ರಿಕೆ-1 ಸಾಮಾನ್ಯ ಜ್ಞಾನ ಇದ್ದು, ಸದರಿ ಪ್ರಶ್ನೆಪತ್ರಿಕೆಯು 100 ಪ್ರಶ್ನೆ & 100 ಅಂಕಗಳನ್ನು ಒಳಗೊಂಡಿದ್ದು, ಸದರಿ ಪ್ರಶ್ನೆಗಳಿಗೆ 2 ಗಂಟೆಯ ಅವಧಿಯೊಳಗೆ ಉತ್ತರಗಳನ್ನು ನೀಡತಕ್ಕದ್ದು.
- ಪತ್ರಿಕೆ-2 ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲೀಷ ಮತ್ತು ಕಂಪ್ಯೂಟರ್ ಜ್ಞಾನವನ್ನು ಒಳಗೊಂಡಿದ್ದು, ಸದರಿ ಪ್ರಶ್ನೆಪತ್ರಿಕೆಯು 100 ಪ್ರಶ್ನೆ & 100 ಅಂಕಗಳನ್ನು ಒಳಗೊಂಡಿದ್ದು, ಸದರಿ ಪ್ರಶ್ನೆಗಳಿಗೆ 2 ಗಂಟೆಯ ಅವಧಿಯೊಳಗೆ ಉತ್ತರಗಳನ್ನು ನೀಡತಕ್ಕದ್ದು.
ವಿಶೇಷ ಸೂಚನೆ:- ಸ್ಫರ್ಧಾತ್ಮಕ ಪರೀಕ್ಷೆಯಲ್ಲಿ ಅಭ್ಯರ್ಥಿಯು ಕನಿಷ್ಠ ಶೇ.35 ರಷ್ಟು ಅಂಕಗಳನ್ನು ಪಡೆಯುವುದು ಕಡ್ಡಾಯವಾಗಿದ್ದು, ಕನಿಷ್ಠ ಅಂಕಗಳನ್ನು ಪಡೆಯದ ಅಭ್ಯರ್ಥಿಗಳು ಆಯ್ಕೆ ಪ್ರಕ್ಯಿಯೆಗೆ ಅನರ್ಹರಾಗುತ್ತಾರೆ.
ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ:-
- ಅಭ್ಯರ್ಥಿಯು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅಥವಾ ರಾಜ್ಯ ಸರ್ಕಾರವು ಅದರ ಸಮಾನವೆಂದು ಘೋಷಿಸಿದ ಯಾವುದೇ ಪರೀಕ್ಷೆಯಲ್ಲಿ ಅಥವಾ ಎಸ್.ಎಸ್.ಎಲ್.ಸಿ.ಗಿಂತ ಉನ್ನತ ಮಟ್ಟದ ಪರೀಕ್ಷೆಗಳಲ್ಲಿ ಕನ್ನಡ ವಿಷಯವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಅಭ್ಯಾಸ ಮಾಡಿರುವ ಅಭ್ಯರ್ಥಿಗಳು ಇಂತಹ ಪರೀಕ್ಷೆಗಳನ್ನು ಪಾಸು ಮಾಡಿದ್ದರೆ ಅಥವಾ KPSC/KEA ಈ ಹಿಂದೆ ನಡೆಸಿದ ಕನ್ನಡ ಭಾಷೆಯ ಪರೀಕ್ಷೆಯಲ್ಲಿ (ಕಡ್ಡಾಯ ಕನ್ನಡ ಪರೀಕ್ಷೆ) ಉತ್ತೀರ್ಣರಾಗಿದ್ದರೆ, ಅಂತಹ ಅಭ್ಯರ್ಥಿಗಳು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯಿಂದ ವಿನಾಯಿತಿ ಹೊಂದುತ್ತಾರೆ.
- ಇಲ್ಲವಾದಲ್ಲಿ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯು ಬಹು ಆಯ್ಕೆ ಮಾದರಿ ಪರೀಕ್ಷೆಯಾಗಿದ್ದು, ಗರಿಷ್ಠ 150 ಅಂಕಗಳನ್ನು ಒಳಗೊಂಡಿರುತ್ತದೆ ಮತ್ತು ಅಭ್ಯರ್ಥಿಗಳು ಇದರಲ್ಲಿ ಕನಿಷ್ಠ 50 ಅಂಕಗಳನ್ನು ಪಡೆದು ಪಾಸಾಗುವುದು ಕಡ್ಡಾಯ, ಸದರಿ ಪರೀಕ್ಷೆಗೆ ಗೈರು ಹಾಜರಾದ ಅಥವಾ ಕನಿಷ್ಠ 50 ಅಂಕಗಳನ್ನು ಗಳಿಸದ ಅಭ್ಯರ್ಥಿಗಳು ಆಯ್ಕೆ ಪ್ರಕ್ರಿಯೆಗೆ ಅನರ್ಹರಾಗುವರು.
ಲಿಖಿತ ಪರೀಕ್ಷಾ ವೇಳಾಪಟ್ಟಿ & ದಿನಾಂಕ:-
- ದಿನಾಂಕ:04-10-2026 ರಂದು ಬೆಳಿಗ್ಗೆ 10.30 ರಿಂದ 12.30 ರವರೆಗೆ ಪತ್ರಿಕೆ-1 ನ್ನು ಮತ್ತು ಮಧ್ಯಾಹ್ನ 2.30 ರಿಂದ 4.30 ರವರೆಗೆ ಪತ್ರಿಕೆ-2 ನ್ನು ನಡೆಸಲಾಗುತ್ತದೆ.
ಋಣಾತ್ಮಕ ಮೌಲ್ಯಮಾಪನ (Negative Valuation):
- ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆಪತ್ರಿಕೆಯು ವಸ್ತುನಿಷ್ಠ ಬಹು ಆಯ್ಕೆ ಮಾದರಿಯಲ್ಲಿದ್ದು, ಪ್ರಶ್ನೆ ಪತ್ರಿಕೆಗಳಲ್ಲಿನ ಪ್ರತಿಯೊಂದು ಪ್ರಶ್ನೆಗೂ 04 ಪರ್ಯಾಯ ಉತ್ತರಗಳಿದ್ದು, ಅಭ್ಯರ್ಥಿಯು ಯಾವುದಾದರೂ ಒಂದು ಸರಿ ಉತ್ತರವನ್ನು ಮಾತ್ರ ಆಯ್ಕೆ ಮಾಡಬೇಕು. ಪ್ರತಿ ತಪ್ಪು ಉತ್ತರಕ್ಕೆ ನಾಲ್ಕನೇ ಒಂದಂಶದಷ್ಟು 25 ಅಂಕಗಳನ್ನು ಕಳೆಯಲಾಗುವುದು.
- ಒ.ಎಂ.ಆರ್ ಉತ್ತರ ಪತ್ರಿಕೆಯಲ್ಲಿ 5ನೇ ಆಯ್ಕೆ/ವೃತ್ತವನ್ನು ನೀಡಿದ್ದು, ಉತ್ತರಿಸದೇ ಇರುವ ಪ್ರಶ್ನೆಗಳಿಗೆ 5ನೇ ಆಯ್ಕೆ/ವೃತ್ತವನ್ನು ಶೇಡ ಮಾಡಲು ಕೋನೆಯ ಬೆಲ ಆದ ನಂತರ ಹೆಚ್ಚುವರಿ 5 ನಿಮಿಷಗಳನ್ನು ನೀಡುತ್ತಾರೆ, ಯಾವುದೇ ಆಯ್ಕೆಯನ್ನು / ಉತ್ತರವನ್ನು ಶೇಡ್ ಮಾಡಿಲ್ಲದಿದ್ದರೆ, ಪ್ರತಿ ಪ್ರಶ್ನೆಗೆ 25 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.
ನೇಮಕಾತಿ ವಿಧಾನ:-
- ಗ್ರಾಮ ಆಡಳಿತ ಅಧಿಕಾರಿ ಹುದ್ದೆಯ ಜಿಲ್ಲಾ ಮಟ್ಟದ ಜೇಷ್ಠತೆಯನ್ನು ಹೊಂದಿದ್ದು, ಸಂಬಂಧಪಟ್ಟ ಜಿಲ್ಲಾಧಿಕಾರಿಯವರು ಸಕ್ಷಮ ಪ್ರಾಧಿಕಾರ ಹಾಗೂ ಆಯ್ಕೆ ಮತ್ತು ನೇಮಕಾತಿ ಪ್ರಾಧಿಕಾರ ಆಗಿರುತ್ತಾರೆ.
- ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಿ, ಪ್ರತ್ಯೇಕವಾಗಿ ಜಿಲ್ಲಾವಾರು ಅಭ್ಯರ್ಥಿಗಳ ಅರ್ಹತಾ ಪಟ್ಟಿ/ಅಂಕಪಟ್ಟಿಯನ್ನು ಸರ್ಕಾರಕ್ಕೆ ಹಸ್ತಾಂತರಿಸಲಾಗುವುದು. ಅದರಂತೆ ಸರ್ಕಾರವು ಅಭ್ಯರ್ಥಿಗಳ ಅರ್ಹತಾ ಪಟ್ಟಿ/ ಅಂಕಪಟ್ಟಿಯನ್ನು ಜಿಲ್ಲಾವಾರು ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗುವುದು ಹಾಗೂ ಜಿಲ್ಲಾಧಿಕಾರಿಗಳು ಮುಂದಿನ ನೇಮಕಾತಿ ಪ್ರಕ್ರಿಯೆಯನ್ನು ನಿಯಮಾನುಸಾರ ಕೈಗೊಳ್ಳುವರು.
ದಾಖಲೆಗಳ ಪರಿಶೀಲನೆ:-
- ಶೈಕ್ಷಣಿಕ ವಿದ್ಯಾರ್ಹತೆ:- ಅಭ್ಯರ್ಥಿಯು ಎಸ್.ಎಸ್.ಎಲ್.ಸಿ & ಪಿ.ಯು,ಸಿ ಮೂಲ ಅಂಕಪಟ್ಟಿಗಳನ್ನು ಅಥವಾ ತತ್ಸಮಾನ ವಿದ್ಯಾರ್ಹತೆಯ ಮೂಲ ಅಂಕಪಟ್ಟಿಗಳನ್ನು ದಾಖಲೆಗಳ ಪರಿಶೀಲನೆ ಸಮಯದಲ್ಲಿ ಪ್ರಾಧಿಕಾರದ ಮುಂದೆ ಹಾಜರುಪಡಿಸಬೇಕು.
- ಜನ್ಮ ದಿನಾಂಕಃ– ಅಭ್ಯರ್ಥಿಯು ಎಸ್.ಎಸ್.ಎಲ್.ಸಿ ಮೂಲ ಅಂಕಪಟ್ಟಿ ಅಥವಾ ಮೂಲ ಜನನ ಪ್ರಮಾಣ ಪತ್ರವನ್ನು ದಾಖಲೆಗಳ ಪರಿಶೀಲನೆ ಸಮಯದಲ್ಲಿ ಪ್ರಾಧಿಕಾರದ ಮುದೆ ಹಾಜರುಪಡಿಸಬೇಕು.
- ಜಾತಿ ಪ್ರಮಾಣ ಪತ್ರ:- ಅಭ್ಯರ್ಥಿಯು ದಾಖಲೆಗಳ ಪರಿಶೀಲನೆ ಸಮಯದಲ್ಲಿ ಜಾತಿ ಪ್ರಮಾಣ ಪತ್ರವನ್ನು ಪ್ರಾಧಿಕಾರದ ಮುಂದೆ ಹಾಜರುಪಡಿಸಬೇಕು.
- ಮೀಸಲಾತಿ ಕೋರಲು ಮಾನ್ಯವಿರುವ ಮೂಲ ಪ್ರಮಾಣ ಪತ್ರಗಳು:- ಅಭ್ಯರ್ಥಿಯು ದಾಖಲೆಗಳ ಪರಿಶೀಲನೆ ಸಮಯದಲ್ಲಿ ಪ್ರಾಧಿಕಾರದ ಮುಂದೆ ಹಾಜರುಪಡಿಸಬೇಕು.
- ಗುರುತಿನ ಪುರಾವೆ:- ಅಭ್ಯರ್ಥಿಯು ದಾಖಲೆಗಳ ಪರಿಶೀಲನೆ ಸಮಯದಲ್ಲಿ ಗುರುತಿನ ಪುರಾವೆಯಾಗಿ ಮೂಲ ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಇತರೆ ದಾಖಲೆಗಳನ್ನು ಪ್ರಾಧಿಕಾರದ ಮುಂದೆ ಹಾಜರುಪಡಿಸಬೇಕು. ಪ್ರಾಧಿಕಾರವು ನಿರ್ದೇಶಿಸಿದಾಗ ಸಂಬಂಧಪಟ್ಟ ದಾಖಲೆಗಳನ್ನು ಅಭ್ಯರ್ಥಿಗಳು ಹಾಜರುಪಡಿಸಬೇಕು.
- ಇತರೆ ದಾಖಲಾತಿಗಳು
ಆನಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
- 10 ನೇ ತರಗತಿ ಅಂಕಪಟ್ಟಿ
- 12 ನೇ ತರಗತಿ ಅಂಕಪಟ್ಟಿ
- ಆಧಾರ ಕಾರ್ಡ
- ತತ್ಸಮಾನ ವಿದ್ಯಾರ್ಹತೆ ಪ್ರಮಾಣ ಪತ್ರಗಳು (ಅನ್ವಯಿಸಿದಲ್ಲಿ ಮಾತ್ರ)
- ಜಾತಿ ಪ್ರಮಾಣ ಪತ್ರ
- ಮೀಸಲಾತಿ ಪ್ರಮಾಣ ಪತ್ರಗಳು (ಕನ್ನಡ/ಗ್ರಾಮೀಣ/ಮುಳುಗಡೆ/ಇತರೆ)
- ಮೊಬೈಲ್ ಸಂಖ್ಯೆ & ಇ–ಮೇಲ್ ಐಡಿ
- ಇತ್ತೀಚಿನ ಭಾವಚಿತ್ರ & ಕಪ್ಪು ಬಣ್ಣದ ಸಹಿ
ಗ್ರಾಮ ಆಡಳಿತಾಧಿಕಾರಿ ಹುದ್ದೆಯ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ ಮಾಡಿ.https://cetonline.karnataka.gov.in/keawebentry456/vaorpc2026/vao_rpc_notification_10072026kannada.pdf
ಗ್ರಾಮ ಆಡಳಿತಾಧಿಕಾರಿ ಜಿಲ್ಲಾವಾರು ಹುದ್ದೆಗಳ ಮಾಹಿತಿಗಾಗಿ ಇಲ್ಲಿ ಕ್ಲಿಕ ಮಾಡಿ. https://cetonline.karnataka.gov.in/keawebentry456/vaorpc2026/vao_rpc_postclasification_10072026kannada.pdf
ಮಿಸಲಾತಿ ಪ್ರಮಾಣ ಪತ್ರಗಳ ನಮೂನೆಗಾಗಿ ಇಲ್ಲಿ ಕ್ಲಿಕ ಮಾಡಿhttps://cetonline.karnataka.gov.in/keawebentry456/cpcrpc2026/Certificate_formats_performakannada.pdf
ಆನಲೈನ ಮುಖಾಂತರ ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ ಮಾಡಿ.https://cetonline.karnataka.gov.in/login


