ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ನೇಮಕಾತಿ ಅಧಿಸೂಚನೆ-2026

ಕರ್ನಾಟಕ ರಾಜ್ಯ ಸರ್ಕಾರವು ಶಿಕ್ಷಕ ಹುದ್ದೆಯ ನಿರೀಕ್ಷೆಯಲ್ಲಿರುವವರಿಗೆ ಭರ್ಜರಿ ಸಿಹಿ ಸುದ್ದಿಯನ್ನು ನೀಡಿದ್ದು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಬರುವ ವಸತಿ ಶಾಲೆಗಳಲ್ಲಿನ (ಮೋರಾರ್ಜಿ ದೇಸಾಯಿ/ಕಿತ್ತೂರು ರಾಣಿ ಚೆನ್ನಮ್ಮ/ಅಟಲ್ ಬಿಹಾರಿ ವಾಜಪೇಯಿ/ಶ್ರೀಮತಿ ಇಂದಿರಾಗಾಂಧಿ /ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಗಳು) ಉಳಿಕೆ ಮೂಲ ವೃಂದದಲ್ಲಿ ಖಾಲಿಯಿರುವ ವಿವಿಧ ಗ್ರೂಪ್-ಸಿ ವೃಂದದ ಶಿಕ್ಷಕರ ಹುದ್ದೆಗಳಿಗೆ ನೇರ ನೇಮಕಾತಿಯ ಸಲುವಾಗಿ ಅಧಿಸೂಚನೆಯನ್ನು ಹೊರಡಿಸಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮುಖಾಂತರ ಆನಲೈನ ಮೂಲಕ ಅರ್ಜಿಯನ್ನು ಆಹ್ವಾನಿಸಿದೆ.kreis.Teacher.recruitment

ಹುದ್ದೆಗಳ ವಿವರ:-

  • ಒಟ್ಟು ಶಿಕ್ಷಕರ ಹುದ್ದೆಗಳು:- 767

ವಿಷಯವಾರು ಹುದ್ದೆಗಳ ವಿವರ:-

  • ಕನ್ನಡ ಭಾಷಾ ಶಿಕ್ಷಕರು-103
  • ಇಂಗ್ಲಿಷ್ ಭಾಷಾ ಶಿಕ್ಷಕರು-108
  • ಹಿಂದಿ ಭಾಷಾ ಶಿಕ್ಷಕರು-55
  • ಗಣಿತ ಶಿಕ್ಷಕರು-103
  • ವಿಜ್ಞಾನ ಶಿಕ್ಷಕರು-106
  • ಸಮಾಜ ವಿಜ್ಞಾನ ಶಿಕ್ಷಕರು-154
  • ಗಣಕಯಂತ್ರ ಶಿಕ್ಷಕರು-57
  • ದೈಹಿಕ ಶಿಕ್ಷಣ ಶಿಕ್ಷಕರು-81

ವಿದ್ಯಾರ್ಹತೆ:-

1. ಕನ್ನಡ ಭಾಷಾ ಶಿಕ್ಷಕರು:- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನ್ನಡ ಭಾಷೆಯನ್ನು ಒಂದು ಐಚ್ಛಿಕ ವಿಷಯವನ್ನಾಗಿ ಓದಿ ಕಲಾ ವಿಭಾಗದಲ್ಲಿ ಸ್ನಾತಕ ಪದವಿಯನ್ನು ಪಡೆದಿರಬೇಕು. ಅಥವಾ

ಅಭ್ಯರ್ಥಿಗಳು ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ, ಮಂಡಳಿ, ಬೆಂಗಳೂರು ಇವರು ನಡೆಸಲಾಗುವ ನಾಲ್ಕು ವರ್ಷಗಳ ಕನ್ನಡ ಪಂಡಿತ” ಕೋರ್ಸ್‌ನಲ್ಲಿ ಉತ್ತೀರ್ಣರಾಗಿರಬೇಕು.ಮತ್ತು

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನ್ನಡ ಬಿ.ಎಡ್. ಪದವಿಯನ್ನು ಪಡೆದಿರಬೇಕು.ಅಥವಾ

  • ಅಭ್ಯರ್ಥಿಯು ಸ್ನಾತಕ ಪದವಿಯಲ್ಲಿ ಕನ್ನಡವನ್ನು ಐಚ್ಛಿಕ ವಿಷಯವನ್ನಾಗಿ ಅಭ್ಯಾಸಿಸಿಲ್ಲದಿದ್ದಲ್ಲಿ, ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.

2. ಆಂಗ್ಲ ಭಾಷಾ ಶಿಕ್ಷಕರು:- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಆಂಗ್ಲ ಭಾಷೆಯನ್ನು ಒಂದು ಐಚ್ಛಿಕ ವಿಷಯವನ್ನಾಗಿ ಓದಿ ಕಲಾ ವಿಭಾಗದಲ್ಲಿ ಸ್ನಾತಕ ಪದವಿಯನ್ನು ಪಡೆದಿರಬೇಕು.ಅಥವಾ

ದಕ್ಷಿಣ ಭಾರತದ ಪ್ರೌಢಶಿಕ್ಷಣ ಸಂಘದಿಂದ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪ್ರಮಾಣ ಪತ್ರ ಕೋರ್ಸ್‌ನಲ್ಲಿ ಉತ್ತೀರ್ಣರಾಗಿರಬೇಕು.ಮತ್ತು

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪ್ರಮುಖವಾಗಿ ಇಂಗ್ಲಿಷ್ ಪದ್ಧತಿ (Methods) ಯಲ್ಲಿ ಬಿ.ಎಡ್. ಪದವಿಯನ್ನು ಪಡೆದಿರಬೇಕು. ಅಥವಾ

  • ಅಭ್ಯರ್ಥಿಯು ಸ್ನಾತಕ ಪದವಿಯಲ್ಲಿ ಇಂಗ್ಲಿಷ್ ಅನ್ನು ಐಚ್ಛಿಕ ವಿಷಯವನ್ನಾಗಿ ಅಭ್ಯಾಸಿಸಿಲ್ಲದಿದ್ದಲ್ಲಿ, ಇಂಗ್ಲಿಷ್ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.

ಅಭ್ಯರ್ಥಿಯು ಸ್ನಾತಕೋತ್ತರ ಅಥವಾ ಸ್ನಾತಕ ಪದವಿ ಅಥವಾ ಪದವಿ ಪೂರ್ವ ಕೋರ್ಸ್ ಅಥವಾ ಎಸ್‌ಎಸ್‌ಎಲ್‌ಸಿ ಯಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಅಭ್ಯಾಸಿಸಿರಬೇಕು. ಅಥವಾ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ, ಮಂಡಳಿ / ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು ಇವರಿಂದ ನಡೆಸಲಾಗುವ ಕನ್ನಡ ಪ್ರಮಾಣ ಪತ್ರ ಕೋರ್ಸ್ (ಕಾವ/ಜಾಣ/ರತ್ನ)ದಲ್ಲಿ ಉತ್ತೀರ್ಣರಾಗಿರಬೇಕು. ಅಥವಾ ಕನ್ನಡದಲ್ಲಿ ಡಿಪ್ಲೊಮಾ ಹೊಂದಿರಬೇಕು.

3.ಹಿಂದಿ ಭಾಷಾ ಶಿಕ್ಷಕರು:- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಹಿಂದಿ ಭಾಷೆಯನ್ನು ಒಂದು ಐಚ್ಛಿಕ ವಿಷಯವನ್ನಾಗಿ ಓದಿ ಕಲಾ ವಿಭಾಗದಲ್ಲಿ ಸ್ನಾತಕ ಪದವಿಯನ್ನು ಪಡೆದಿರಬೇಕು.

  • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ ಆಫ್ ಎಜುಕೇಷನ್ (B.Ed.) ಪದವಿ ಪಡೆದಿರಬೇಕು.

ಪದವಿಯಲ್ಲಿ ಹಿಂದಿ ಭಾಷೆಯನ್ನು ಐಚ್ಛಿಕ ವಿಷಯವನ್ನಾಗಿ ಅಧ್ಯಯನ ಮಾಡದಿರುವ ಈ ಕೆಳಗಿನ ಅಭ್ಯರ್ಥಿಗಳನ್ನು ಪ್ರಾಧಾನ್ಯತೆಯಲ್ಲಿ ಅರ್ಹರೆಂದು ಪರಿಗಣಿಸಲಾಗುವುದು.

a) ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಹಿಂದಿ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು. ಮತ್ತು

b) ಹಿಂದಿ ಭಾಷಾ ಶಿಕ್ಷಕರನ್ನಾಗಿ ಪರಿಗಣಿಸಲು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿಯಲ್ಲಿ ಹಿಂದಿ ವಿಷಯವನ್ನು ಪ್ರಮುಖ (Major) ವಿಷಯವನ್ನಾಗಿ ಆಯ್ಕೆ ಮಾಡಿಕೊಂಡಿರಬೇಕು. ಮತ್ತು

c) ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ ಆಫ್ ಎಜುಕೇಷನ್ (B.Ed.) ಪದವಿಯನ್ನು ಹಿಂದಿ ಭಾಷೆಯಲ್ಲಿ ಅಥವಾ ಹಿಂದಿ ಬೋಧನಾ ವಿಷಯ (Methods) ದಲ್ಲಿ ಪಡೆದಿರಬೇಕು.

ಅಭ್ಯರ್ಥಿಯು ಸ್ನಾತಕೋತ್ತರ ಅಥವಾ ಪದವಿ ಅಥವಾ ಪದವಿ ಪೂರ್ವ ಕೋರ್ಸ್ ಅಥವಾ ಎಸ್.ಎಸ್.ಎಲ್.ಸಿ.ಯಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಅಧ್ಯಯನ ಮಾಡಿರಬೇಕು. ಅಥವಾ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ/ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು ಇವರು ನಡೆಸುವ ಕಾವ/ಜಾಣ/ರತ್ನ ಕನ್ನಡ ಪರೀಕ್ಷೆಯ ಪ್ರಮಾಣ ಪತ್ರ ಪಡೆದಿರಬೇಕು.

4. ಗಣಿತ ಶಿಕ್ಷಕರು:- ಗಣಿತ ಮತ್ತು ಭೌತಶಾಸ್ತ್ರವನ್ನು ಕಡ್ಡಾಯ ವಿಷಯದೊಂದಿಗೆ ವಿಜ್ಞಾನ ವಿಭಾಗದಲ್ಲಿ ಸ್ನಾತಕ ಪದವಿಯನ್ನು ಪಡೆದಿರಬೇಕು ಮತ್ತು ಇದರೊಂದಿಗೆ ಈ ಕೆಳಕಂಡ ಯಾವುದಾದರೂ ಒಂದನ್ನು ಐಚ್ಛಿಕ ವಿಷಯವಾಗಿ ಅಭ್ಯಾಸಿಸಿರಬೇಕು. ಎಂದರೆ:-ರಸಾಯನಶಾಸ್ತ್ರ  ಮತ್ತು

  • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ವಿಜ್ಞಾನ ಪದ್ಧತಿ (Method) ಯಲ್ಲಿ ಬಿ.ಎಡ್. ಪದವಿಯನ್ನು ಪಡೆದಿರಬೇಕು. ಮತ್ತು

ಅಭ್ಯರ್ಥಿಯು ಸ್ನಾತಕ ಪದವಿ ಅಥವಾ ಪದವಿ ಪೂರ್ವ ಕೋರ್ಸ್ ಅಥವಾ ಎಸ್.ಎಸ್.ಎಲ್.ಸಿ.ಯಲ್ಲಿ ಕನ್ನಡವನ್ನು ಒಂದು ಭಾಷೆಯನ್ನಾಗಿ ಅಭ್ಯಾಸ ಮಾಡಿರಬೇಕು. ಅಥವಾ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ, ಮಂಡಳಿ / ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು ಇವರು ನಡೆಸುವ ಕನ್ನಡ ಪ್ರಮಾಣ ಪತ್ರ ಕೋರ್ಸ್ (ಕಾವ/ಜಾಣ/ರತ್ನ) ನಲ್ಲಿ ಉತ್ತೀರ್ಣರಾಗಿರಬೇಕು.

5.ವಿಜ್ಞಾನ ಶಿಕ್ಷಕರು:- ಕಡ್ಡಾಯವಾಗಿ ರಸಾಯನಶಾಸ್ತ್ರ ವಿಷಯದೊಂದಿಗೆ ಮತ್ತು ಈ ಕೆಳಕಂಡ ಯಾವುದಾದರೂ ಒಂದು ಐಚ್ಛಿಕ ವಿಷಯಗಳೊಂದಿಗೆ, ಎಂದರೆ: ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ ವಿಜ್ಞಾನದಲ್ಲಿ ಸ್ನಾತಕ ಪದವಿಯನ್ನು ಪಡೆದಿರಬೇಕು. ಮತ್ತು

  • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ವಿಜ್ಞಾನ ವಿಷಯದ ಪದ್ಧತಿ (Method) ಯಲ್ಲಿ ಬಿ.ಎಡ್. ಪದವಿಯನ್ನು ಪಡೆದಿರಬೇಕು. ಮತ್ತು

ಅಭ್ಯರ್ಥಿಯು ಸ್ನಾತಕ ಪದವಿ ಅಥವಾ ಪದವಿ ಪೂರ್ವ ಕೋರ್ಸ್ ಅಥವಾ ಎಸ್.ಎಸ್.ಎಲ್.ಸಿ.ಯಲ್ಲಿ ಕನ್ನಡವನ್ನು ಒಂದು ಭಾಷೆಯನ್ನಾಗಿ ಅಭ್ಯಾಸ ಮಾಡಿರಬೇಕು. ಅಥವಾ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ, ಮಂಡಳಿ / ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು ಇವರು ನಡೆಸುವ ಕನ್ನಡ ಪ್ರಮಾಣ ಪತ್ರ ಕೋರ್ಸ್ (ಕಾವ/ಜಾಣ/ರತ್ನ) ನಲ್ಲಿ ಉತ್ತೀರ್ಣರಾಗಿರಬೇಕು.

6.ಸಮಾಜ ವಿಜ್ಞಾನ ಶಿಕ್ಷಕರು:- ಈ ಕೆಳಕಂಡ ಯಾವುದೇ ಎರಡು ವಿಷಯಗಳನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡು ಕಲಾ ವಿಭಾಗದಲ್ಲಿ ಸ್ನಾತಕ ಪದವಿಯನ್ನು ಪಡೆದಿರಬೇಕು. ಎಂದರೆ:- ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ ಮತ್ತು ಭೂಗೋಳಶಾಸ್ತ್ರ. ಮತ್ತು

  • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಲಾ ವಿಭಾಗದಲ್ಲಿ (Arts Method) ಬಿ.ಎಡ್. ಪದವಿಯನ್ನು ಪಡೆದಿರಬೇಕು. ಮತ್ತು

ಅಭ್ಯರ್ಥಿಯು ಸ್ನಾತಕ ಪದವಿ ಅಥವಾ ಪದವಿ ಪೂರ್ವ ಕೋರ್ಸ್ ಅಥವಾ ಎಸ್.ಎಸ್.ಎಲ್.ಸಿ.ಯಲ್ಲಿ ಕನ್ನಡವನ್ನು ಒಂದು ಭಾಷೆಯನ್ನಾಗಿ ಅಭ್ಯಾಸ ಮಾಡಿರಬೇಕು. ಅಥವಾ ಕನ್ನಡದಲ್ಲಿ ಡಿಪ್ಲೊಮಾ ಹೊಂದಿರಬೇಕು. ಅಥವಾ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ, ಮಂಡಳಿ / ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು ಇವರು ನಡೆಸುವ ಕನ್ನಡ ಪ್ರಮಾಣ ಪತ್ರ ಕೋರ್ಸ್ (ಕಾವ/ಜಾಣ/ರತ್ನ) ನಲ್ಲಿ ಉತ್ತೀರ್ಣರಾಗಿರಬೇಕು.

ವಿಶೇಷ ಸೂಚನೆ: ವಸತಿ ಶಾಲೆಗಳು ಆಂಗ್ಲ ಮಾಧ್ಯಮದಲ್ಲಿ ನಡೆಯುತ್ತಿರುವುದರಿಂದ ಸಮಾಜ ವಿಜ್ಞಾನ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿಯನ್ನು ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರಬೇಕು. ಪದವಿಯನ್ನು ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವ ಬಗ್ಗೆ ಸಂಬಂಧಪಟ್ಟ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ರವರಿಂದ/ಸಂಬಂಧಿತ ಕಾಲೇಜಿನ ಪ್ರಾಂಶುಪಾಲರಿಂದ ದೃಢೀಕೃತ ಪತ್ರವನ್ನು ಪಡೆದಿಟ್ಟುಕೊಂಡು ಮೂಲ ದಾಖಲಾತಿ ಪರಿಶೀಲನೆ ಸಮಯದಲ್ಲಿ ಹಾಜರುಪಡಿಸಬೇಕು

7.ಗಣಕಯಂತ್ರ ಶಿಕ್ಷಕರು:- ಈ ಕೆಳಕಂಡ ಇಂಜಿನಿಯರಿಂಗ್ ವಿಷಯದಲ್ಲಿ ಸ್ನಾತಕ ಪದವಿಯನ್ನು ಪಡೆದಿರಬೇಕು, ಎಂದರೆ:-

  1. ಗಣಕ ವಿಜ್ಞಾನ, ಮಾಹಿತಿ ವಿಜ್ಞಾನ ಅಥವಾ
  1. ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ (ಬಿಸಿಎ) ಅಥವಾ
  1. ಗಣಕ ವಿಜ್ಞಾನದೊಂದಿಗೆ ಬಿ.ಎಸ್ಸಿ ಅಥವಾ ಅದಕ್ಕೆ ತತ್ಸಮಾನವಾದ ವಿದ್ಯಾರ್ಹತೆ ಹೊಂದಿರಬೇಕು. ಮತ್ತು

ಸ್ನಾತಕ ಪದವಿ ಅಥವಾ ಪದವಿ ಪೂರ್ವ ಕೋರ್ಸ್ ಅಥವಾ ಎಸ್ಎಸ್‌ಎಲ್‌ಸಿ ಯಲ್ಲಿ ಕನ್ನಡವನ್ನು ಒಂದು ಭಾಷೆಯನ್ನಾಗಿ ಅಭ್ಯಾಸ ಮಾಡಿರಬೇಕು ಅಥವಾ ಕನ್ನಡದಲ್ಲಿ ಡಿಪ್ಲೋಮಾ ಹೊಂದಿರಬೇಕು ಅಥವಾ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ / ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು ಇವರು ನಡೆಸುವ ಕನ್ನಡ ಪ್ರಮಾಣ ಪತ್ರ ಕೋರ್ಸ್‌ನಲ್ಲಿ (ಕಾವ/ಜಾಣ/ರತ್ನ) ಉತ್ತೀರ್ಣರಾಗಿರಬೇಕು.

8.ದೈಹಿಕ ಶಿಕ್ಷಣ ಶಿಕ್ಷಕರು:-ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸ್ನಾತಕ ಪದವಿ ಪಡೆದಿರಬೇಕು. ಮತ್ತು

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ದೈಹಿಕ ಶಿಕ್ಷಣ ಸ್ನಾತಕ ಪದವಿ (BP.Ed) ಯನ್ನು ಪಡೆದಿರಬೇಕು.

ಅಭ್ಯರ್ಥಿಯು ಸ್ನಾತಕೋತ್ತರ ಅಥವಾ ಪದವಿ ಅಥವಾ ಪದವಿ ಪೂರ್ವ ಕೋರ್ಸ್ ಅಥವಾ ಎಸ್ಎಸ್‌ಎಲ್‌ಸಿ ಯಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಅಥವಾ ಕನ್ನಡದಲ್ಲಿ ಡಿಪ್ಲೋಮಾ ಕೋರ್ಸ್ ಅಭ್ಯಾಸ ಮಾಡಿರಬೇಕು ಅಥವಾ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ / ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು ಇವರು ನಡೆಸುವ ಕಾವ/ಜಾಣ/ರತ್ನ ಕನ್ನಡ ಪರೀಕ್ಷೆಯ ಪ್ರಮಾಣ ಪತ್ರ ಪಡೆದಿರಬೇಕು.

ಹೆಚ್ಚುವರಿ ವಿದ್ಯಾರ್ಹತೆ:-

  • ಕನ್ನಡ ಭಾಷಾ ಶಿಕ್ಷಕರು/ಆಂಗ್ಲ ಭಾಷಾ ಶಿಕ್ಷಕರು/ಹಿಂದಿ ಭಾಷಾ ಶಿಕ್ಷಕರು/ವಿಜ್ಞಾನ ಶಿಕ್ಷಕರು/ಗಣಿತ ಶಿಕ್ಷಕರು ಮತ್ತು ಸಮಾಜ ವಿಜ್ಞಾನ ಶಿಕ್ಷಕರ ಹುದ್ದೆಗಳಿಗೆ, ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ನಡೆಸುವ ಶಿಕ್ಷಕರ ಅರ್ಹತಾ ಪರೀಕ್ಷೆ TET (ಪತ್ರಿಕೆ-2) ಅಥವಾ ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ ನಡೆಸುವ ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ(CTET) ಯಲ್ಲಿ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುತ್ತಾರೆ.
  • ವಿಷಯಕ್ಕೆ ಅನುಗುಣವಾಗಿ ವಿದ್ಯಾರ್ಹತೆಯನ್ನು ಹೊಂದದೇ ಇರುವ ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರೆ, ನಂತರ ಪ್ರಾಧಿಕಾರಕ್ಕೆ ಅಥವಾ ನೇಮಕಾತಿ ಸಮಿತಿಗೆ ವಿದ್ಯಾರ್ಹತೆ ಹೊಂದಿರುವುದಿಲ್ಲವೆಂದು ಪತ್ತೆಯಾದಲ್ಲಿ ಅಂತಹ ಅಭ್ಯರ್ಥಿಗಳ ಅಭ್ಯರ್ಥಿತನವನ್ನು ಯಾವುದೇ ಹಂತದಲ್ಲಾದರೂ ಹಾಗೂ ಯಾವುದೇ ಮುನ್ಸೂಚನೆ ನೀಡದೆ ರದ್ದು ಪಡಿಸಲಾಗುವುದು.
  • ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ನಿಗದಿತ ವಿದ್ಯಾರ್ಹತೆ ಪಡೆಯಲು ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ. ಮೇಲಿನ ವಿದ್ಯಾರ್ಹತೆಯನ್ನು ಹೊರತುಪಡಿಸಿ ಬೇರೆ ಯಾವ ವಿದ್ಯಾರ್ಹತೆಯನ್ನೂ ಪರಿಗಣಿಸಲಾಗುವುದಿಲ್ಲ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದೊಳಗೆ ಎಲ್ಲಾ ಅಭ್ಯರ್ಥಿಗಳು ಪದವಿ ಅಥವಾ ತತ್ಸಮಾನ ಪರೀಕ್ಷೆಯ ಅಂಕಪಟ್ಟಿಯನ್ನು ಹೊಂದಿರಬೇಕು.

ವೇತನ ಶ್ರೇಣಿ:-

  • 2024 ರ ಪರಿಷ್ಕೃತ ರಾಜ್ಯ ವೇತನ ಶ್ರೇಣಿ ಪ್ರಕಾರ 54175-1375-58300-1500-64300-1650-74200-1900-85600-2300- 99400

ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ವಯೋಮಿತಿ:-

ಕರ್ನಾಟಕ ನಾಗರಿಕ ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮಗಳು, 1977 ರಲ್ಲಿ ನಿರ್ದಿಷ್ಟಪಡಿಸಿರುವಂತೆ ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು ಕನಿಷ್ಠ 18 ವರ್ಷ ಪೂರೈಸಿರಬೇಕು. ಹಾಗೂ ಸರ್ಕಾರದ ಆದೇಶ ಸಂಖ್ಯೆ ಸಿಆಸುಇ 262 ಸೇನೆನಿ 2025, ದಿನಾಂಕ 29-01-2026 ರಂತೆ ಒಂದು ಬಾರಿಗೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆ ವಯೋಮಿತಿ ಸಡಿಲಿಕೆಯನ್ನು ನೀಡಿದ ಪ್ರಯುಕ್ತ, ಅದನ್ನು ವಯೋಮಿತಿಯಲ್ಲಿ ಅಳವಡಿಸಿಕೊಂಡ ನಂತರ ಅಭ್ಯರ್ಥಿಗಳು ಈ ಕೆಳಗೆ ತೋರಿಸಿರುವಂತೆ ಗರಿಷ್ಠ ಮಯೋಮಿತಿಯನ್ನು ಮೀರಿರಬಾರದು.

(ಕನ್ನಡ ಭಾಷೆ,ಆಂಗ್ಲ ಭಾಷೆ,ಹಿಂದಿ ಭಾಷೆ,ಗಣಿತ,ವಿಜ್ಞಾನ & ಸಮಾಜ ವಿಜ್ಞಾನ ಶಿಕ್ಷಕರ ಹುದ್ದೆಗಳಿಗೆ ಮಾತ್ರ ಅನ್ವಯ)

  • ಸಾಮಾನ್ಯ ಅಭ್ಯರ್ಥಿಗಳು- 45ವರ್ಷಗಳು
  • ಪ್ರವರ್ಗ 2ಎ,2ಬಿ,3ಎ,3ಬಿ- 48 ವರ್ಷಗಳು
  • ಎಸ್.ಸ್ಸಿ/ಎಸ್.ಟಿ/ ಪ್ರವರ್ಗ- 50 ವರ್ಷಗಳು

ಉದ್ಯೋಗದ ಸ್ಥಳ:-

  • ಕರ್ನಾಟಕದಾದ್ಯಂತ

ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಅರ್ಜಿ ಶುಲ್ಕ:-

  • ಸಾಮಾನ್ಯ ವರ್ಗ & ಇತರೆ ಹಿಂದುಳಿದ ವರ್ಗಗಳು (2A, 2B, 3A, 3B):- 750/-
  • ಪ್ರವರ್ಗ-1/Sc /St/Ex-Army/ತೃತೀಯ ಲಿಂಗಿಗಳಿಗೆ:- 500/-
  • ವಿಶೇಷ ಚೇತನ ಅಭ್ಯರ್ಥಿಗಳಿಗೆ:- 250/-

ಪ್ರಮುಖ ದಿನಾಂಕಗಳು:-

  • ಅಧಿಸೂಚನೆ ಬಿಡುಗಡೆ ಮಾಡಿದ ದಿನಾಂಕ: 10 ಜುಲೈ 2026
  • ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭಿಸಿದ ದಿನಾಂಕ: 15 ಜುಲೈ 2026
  • ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13 ಅಗಸ್ಟ್ 2026
  • ಆನ್‌ಲೈನ್ ಮುಖಾಂತರ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 14 ಅಗಸ್ಟ್ 2026

ಖಾಯಂಪೂರ್ವ ಅವಧಿ:-

  • ನೇರ ನೇಮಕಾತಿ ಮೂಲಕ ಆಯ್ಕೆಗೊಂಡ ಅಭ್ಯರ್ಥಿಗಳು 2 ವರ್ಷ ಖಾಯಂಪೂರ್ವ ಅವಧಿಯಲ್ಲಿರುತ್ತಾರೆ.

ಪಿಂಚಣಿ/ಕೆ.ಜಿ.ಐ.ಡಿ/ಪಿ.ಎಫ್.ಯೋಜನೆ ಸೌಲಭ್ಯ ಕುರಿತು:-

ಸರ್ಕಾರದ ಆದೇಶ ಸಂಖ್ಯೆ: ಎಫ್‌ಡಿ(ಎಸ್ಪಿಎಲ್) 04 ಪಿಇಟಿ 2005, ದಿನಾಂಕ: 31.03.2006 ರಂತೆ

  • ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್.ಪಿ.ಎಸ್) ಸೌಲಭ್ಯ ಅನ್ವಯವಾಗುವುದು.
  • ಸಂಘದ ವ್ಯಾಪ್ತಿಯಲ್ಲಿನ ನೌಕರರಿಗೆ ಕೆ.ಜಿ.ಐ.ಡಿ. ಯೋಜನೆ ಇರುವುದಿಲ್ಲ;
  • ಪಿ.ಎಫ್. ಯೋಜನೆ ಇರುವುದಿಲ್ಲ.

ಪರೀಕ್ಷಾ ವಿಧಾನ:-

  • ಮೇಲ್ಕಂಡ ಶಿಕ್ಷಕರ ಹುದ್ದೆಗೆ ಲಿಖಿತ ಪರೀಕ್ಷೆಯನ್ನು ಆಫಲೈನ್ –ಒಎಂಆರ್ ಮಾದರಿ (Offline-OMR Type) ಯಲ್ಲಿ ನಡೆಸಲಾಗುತ್ತದೆ.
  • ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಾಗುವ ಪರೀಕ್ಷಾ ಕೇಂದ್ರದ ವಿವರಗಳನ್ನು ನಂತರದಲ್ಲಿ ತಿಳಿಸುವರು.

ಪ್ರಶ್ನೆಪತ್ರಿಕೆ & ಪಠ್ಯಕ್ರಮ:-

  • ಲಿಖಿತ ಪರೀಕ್ಷೆಯು ಪತ್ರಿಕೆ-1 & ಪತ್ರಿಕೆ-2 ನ್ನು ಒಳಗೊಂಡಿದ್ದು, ಪತ್ರಿಕೆ-1 ಸಾಮಾನ್ಯ ಜ್ಞಾನ ಇದ್ದು, ಸದರಿ ಪತ್ರಿಕೆಯು 100 ಪ್ರಶ್ನೆ & 100 ಅಂಕಗಳನ್ನು ಒಳಗೊಂಡಿದ್ದು, ಸದರಿ ಪ್ರಶ್ನೆಗಳಿಗೆ 2 ಗಂಟೆಯ ಅವಧಿಯೊಳಗೆ ಉತ್ತರಗಳನ್ನು ನೀಡತಕ್ಕದ್ದು.
  • ಪತ್ರಿಕೆ-2 ನಿರ್ದಿಷ್ಟ ಪತ್ರಿಕೆಯಾಗಿದ್ದು, ಸದರಿ ಪತ್ರಿಕೆಯು 100 ಪ್ರಶ್ನೆ & 100 ಅಂಕಗಳನ್ನು ಒಳಗೊಂಡಿದ್ದು, ಸದರಿ ಪ್ರಶ್ನೆಗಳಿಗೆ 2 ಗಂಟೆಯ ಅವಧಿಯೊಳಗೆ ಉತ್ತರಗಳನ್ನು ನೀಡತಕ್ಕದ್ದು.

ವಿಶೇಷ ಸೂಚನೆ:- ಸ್ಫರ್ಧಾತ್ಮಕ ಪರೀಕ್ಷೆಯಲ್ಲಿ ಅಭ್ಯರ್ಥಿಯು ಕನಿಷ್ಠ ಶೇ.35 ರಷ್ಟು ಅಂಕಗಳನ್ನು ಪಡೆಯುವುದು ಕಡ್ಡಾಯವಾಗಿದ್ದು, ಕನಿಷ್ಠ ಅಂಕಗಳನ್ನು ಪಡೆಯದ ಅಭ್ಯರ್ಥಿಗಳು ಆಯ್ಕೆ ಪ್ರಕ್ಯಿಯೆಗೆ ಅನರ್ಹರಾಗುತ್ತಾರೆ.

ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ:-

  • ಅಭ್ಯರ್ಥಿಯು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅಥವಾ ರಾಜ್ಯ ಸರ್ಕಾರವು ಅದರ ಸಮಾನವೆಂದು ಘೋಷಿಸಿದ ಯಾವುದೇ ಪರೀಕ್ಷೆಯಲ್ಲಿ ಅಥವಾ ಎಸ್.ಎಸ್.ಎಲ್.ಸಿ.ಗಿಂತ ಉನ್ನತ ಮಟ್ಟದ ಪರೀಕ್ಷೆಗಳಲ್ಲಿ ಕನ್ನಡ ವಿಷಯವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಅಭ್ಯಾಸ ಮಾಡಿರುವ ಅಭ್ಯರ್ಥಿಗಳು ಇಂತಹ ಪರೀಕ್ಷೆಗಳನ್ನು ಪಾಸು ಮಾಡಿದ್ದರೆ ಅಥವಾ KPSC/KEA ಈ ಹಿಂದೆ ನಡೆಸಿದ ಕನ್ನಡ ಭಾಷೆಯ ಪರೀಕ್ಷೆಯಲ್ಲಿ (ಕಡ್ಡಾಯ ಕನ್ನಡ ಪರೀಕ್ಷೆ) ಉತ್ತೀರ್ಣರಾಗಿದ್ದರೆ, ಅಂತಹ ಅಭ್ಯರ್ಥಿಗಳು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯಿಂದ ವಿನಾಯಿತಿ ಹೊಂದುತ್ತಾರೆ.
  • ಇಲ್ಲವಾದಲ್ಲಿ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯು ಬಹು ಆಯ್ಕೆ ಮಾದರಿ ಪರೀಕ್ಷೆಯಾಗಿದ್ದು, ಗರಿಷ್ಠ 150 ಅಂಕಗಳನ್ನು ಒಳಗೊಂಡಿರುತ್ತದೆ ಮತ್ತು ಅಭ್ಯರ್ಥಿಗಳು ಇದರಲ್ಲಿ ಕನಿಷ್ಠ 50 ಅಂಕಗಳನ್ನು ಪಡೆದು ಪಾಸಾಗುವುದು ಕಡ್ಡಾಯ, ಸದರಿ ಪರೀಕ್ಷೆಗೆ ಗೈರು ಹಾಜರಾದ ಅಥವಾ ಕನಿಷ್ಠ 50 ಅಂಕಗಳನ್ನು ಗಳಿಸದ ಅಭ್ಯರ್ಥಿಗಳು ಆಯ್ಕೆ ಪ್ರಕ್ರಿಯೆಗೆ ಅನರ್ಹರಾಗುವರು.

ಋಣಾತ್ಮಕ ಮೌಲ್ಯಮಾಪನ (Negative Valuation):

  • ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆಪತ್ರಿಕೆಯು ವಸ್ತುನಿಷ್ಠ ಬಹು ಆಯ್ಕೆ ಮಾದರಿಯಲ್ಲಿದ್ದು, ಪ್ರಶ್ನೆ ಪತ್ರಿಕೆಗಳಲ್ಲಿನ ಪ್ರತಿಯೊಂದು ಪ್ರಶ್ನೆಗೂ 04 ಪರ್ಯಾಯ ಉತ್ತರಗಳಿದ್ದು, ಅಭ್ಯರ್ಥಿಯು ಯಾವುದಾದರೂ ಒಂದು ಸರಿ ಉತ್ತರವನ್ನು ಮಾತ್ರ ಆಯ್ಕೆ ಮಾಡಬೇಕು. ಪ್ರತಿ ತಪ್ಪು ಉತ್ತರಕ್ಕೆ ನಾಲ್ಕನೇ ಒಂದಂಶದಷ್ಟು 25 ಅಂಕಗಳನ್ನು ಕಳೆಯಲಾಗುವುದು.
  • ಒ.ಎಂ.ಆರ್ ಉತ್ತರ ಪತ್ರಿಕೆಯಲ್ಲಿ 5ನೇ ಆಯ್ಕೆ/ವೃತ್ತವನ್ನು ನೀಡಿದ್ದು, ಉತ್ತರಿಸದೇ ಇರುವ ಪ್ರಶ್ನೆಗಳಿಗೆ 5ನೇ ಆಯ್ಕೆ/ವೃತ್ತವನ್ನು ಶೇಡ ಮಾಡಲು ಕೋನೆಯ ಬೆಲ ಆದ ನಂತರ ಹೆಚ್ಚುವರಿ 5 ನಿಮಿಷಗಳನ್ನು ನೀಡುತ್ತಾರೆ, ಯಾವುದೇ ಆಯ್ಕೆಯನ್ನು / ಉತ್ತರವನ್ನು ಶೇಡ್ ಮಾಡಿಲ್ಲದಿದ್ದರೆ, ಪ್ರತಿ ಪ್ರಶ್ನೆಗೆ 25 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.

ಆನಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-

  • 10 ನೇ ತರಗತಿ ಅಂಕಪಟ್ಟಿ
  • ಆಧಾರ ಕಾರ್ಡ
  • ವಿಷಯವಾರು ಶಿಕ್ಷಕರ ಹುದ್ದೆಗಳಿಗೆ ನಿಗಧಿಪಡಿಸಿದ ವಿದ್ಯಾರ್ಹತೆಯ ಎಲ್ಲ ಸೆಮಿಸ್ಟರನ ಅಂಕಪಟ್ಟಿಗಳು  & ಪಾಸಿಂಗ್/ಘಟಿಕೋತ್ಸವ ಪ್ರಮಾಣ ಪತ್ರಗಳು
  • ಜಾತಿ ಪ್ರಮಾಣ ಪತ್ರ
  • ಮೀಸಲಾತಿ ಪ್ರಮಾಣ ಪತ್ರಗಳು (ಕನ್ನಡ/ಗ್ರಾಮೀಣ/ಮುಳುಗಡೆ/ಇತರೆ)
  • ಮೊಬೈಲ್ ಸಂಖ್ಯೆ & ಮೇಲ್ ಐಡಿ
  • ಇತ್ತೀಚಿನ  ಭಾವಚಿತ್ರ & ಕಪ್ಪು ಬಣ್ಣದ ಸಹಿ ಪ್ರಶ್ನೆ

ಕ್ರೈಸ ಶಿಕ್ಷಕರ ಹುದ್ದೆಯ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ ಮಾಡಿ.https://cetonline.karnataka.gov.in/keawebentry456/kreisrpc2026/kries_rpc_notification_10072026kannada.pdf

ಆನಲೈನ ಮುಖಾಂತರ ಕ್ರೈಸ ಶಿಕ್ಷಕರ  ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ ಮಾಡಿ.https://cetonline.karnataka.gov.in/kea/kreisrpc2026

 

 

Leave a Comment

Your email address will not be published. Required fields are marked *

Scroll to Top