ದಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ., ಬೆಳಗಾವಿ ನೇಮಕಾತಿ-2026

ಬೆಳಗಾವಿ ಜಿಲ್ಲೆಯ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಭರ್ಜರಿ ಸಿಹಿ ಸುದ್ದಿ, ದಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ., ಬೆಳಗಾವಿ ಇದರಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳ ನೇರ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿ, ಆನಲೈನ ಮುಖಾಂತರ ಅರ್ಜಿಯನ್ನು ಆಹ್ವಾನಿಸಲಾಗಿದೆ.dcc.bank.recruitment.belagavi

ಹುದ್ದೆಗಳ ವಿವರ:-

  • ಒಟ್ಟು ಹುದ್ದೆಗಳು:- 104

ಹುದ್ದೆಗಳ ವಿವರ:-

  • ದ್ವಿತೀಯ ದರ್ಜೆ ಗುಮಾಸ್ತರು-83
  • ಬಂದೂಕಾಧಾರಿ-01
  • ಜವಾನ-20

ಶೈಕ್ಷಣಿಕ ವಿದ್ಯಾರ್ಹತೆ:-

  • ದ್ವಿತೀಯ ದರ್ಜೆ ಗುಮಾಸ್ತರು:- ಅಭ್ಯರ್ಥಿಯು ಭಾರತದಲ್ಲಿ ಕಾನೂನಿನ ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿ.ಎ / ಬಿ.ಕಾಮ್ / ಬಿ.ಎಸ್ಸಿ. ಪದವಿ ವಿದ್ಯಾರ್ಹತೆ ಹೊಂದಿರತಕ್ಕದ್ದು.
  • ಬಂದೂಕಾಧಾರಿ:- ಎಸ್‌.ಎಸ್‌.ಎಲ್‌.ಸಿ (SSLC) / 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರತಕ್ಕದ್ದು. ಮಾಜಿ ಸೈನಿಕರು/ ಮಾಜಿ ಸಶಸ್ತ್ರ ಪಡೆಯಿಂದ ನಿವೃತ್ತರಾದ ಮಾಜಿ ಸಿಬ್ಬಂದಿಗಳಾಗಿದ್ದು ಮತ್ತು ಚಾಲ್ತಿಯಲ್ಲಿರುವ ಬಂದೂಕು ರವಾನೆದಾರ (Valid Arm License) ಹೊಂದಿರತಕ್ಕದ್ದು.
  • ಜವಾನ:- ಎಸ್‌.ಎಸ್‌.ಎಲ್‌.ಸಿ (SSLC) / 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರತಕ್ಕದ್ದು.

ವೇತನ ಶ್ರೇಣಿ:-

  • ದ್ವಿತೀಯ ದರ್ಜೆ ಗುಮಾಸ್ತರು:- 53150-115150
  • ಬಂದೂಕಾಧಾರಿ:- 47650-105650
  • ಜವಾನ:- 42650-96650

ಪ್ರವರ್ಗವಾರು ಹುದ್ದೆಗಳ ವಿವರ:-

ದ್ವಿತೀಯ ದರ್ಜೆ ಗುಮಾಸ್ತರು:-ಒಟ್ಟು ಹುದ್ದೆಗಳು-83

  • ಪರಿಶಿಷ್ಟ ಜಾತಿ-12
  • ಪರಿಶಿಷ್ಟ ಪಂಗಡ-03
  • ಪ್ರವರ್ಗ 1-04
  • ಪ್ರವರ್ಗ 2ಎ-12
  • ಪ್ರವರ್ಗ 2ಬಿ-03
  • ಪ್ರವರ್ಗ 3ಎ-03
  • ಪ್ರವರ್ಗ 3ಬಿ-04
  • ಸಾಮಾನ್ಯ ವರ್ಗ-42

ಬಂದೂಕುಧಾರಿ:-ಒಟ್ಟು ಹುದ್ದೆಗಳು-01

  • ಸಾಮಾನ್ಯ ವರ್ಗ-01

ಜವಾನ:-ಒಟ್ಟು ಹುದ್ದೆಗಳು-20

  • ಪರಿಶಿಷ್ಟ ಜಾತಿ-03
  • ಪರಿಶಿಷ್ಟ ಪಂಗಡ-01
  • ಪ್ರವರ್ಗ 1-01
  • ಪ್ರವರ್ಗ 2ಎ-03
  • ಪ್ರವರ್ಗ 2ಬಿ-01
  • ಪ್ರವರ್ಗ 3ಎ-01
  • ಪ್ರವರ್ಗ 3ಬಿ-01
  • ಸಾಮಾನ್ಯ ವರ್ಗ-09

ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಸಾಮಾನ್ಯ ನಿಬಂಧನೆಗಳು:-

  • ಮೇಲ್ಕಂಡ ಹುದ್ದೆಗಳಿಲ್ಲಿ ಜವಾನ ಮತ್ತು ಗನ್‌ಮ್ಯಾನ್ ಹುದ್ದೆಗಳನ್ನು ಹೊರತುಪಡಿಸಿ, ದ್ವಿತೀಯ ದರ್ಜೆ ಗುಮಾಸ್ತ ಹುದ್ದೆಗಳ ನೇಮಕಾತಿಗೆ ಅಭ್ಯರ್ಥಿಗಳು ಕಂಪ್ಯೂಟರ್ ಆಪರೇಷನ್ ಮತ್ತು ಅಪ್ಲಿಕೇಷನ್‌ಗಳ ಜ್ಞಾನವನ್ನು (Basics of Computer and Applications knowledge) ಕಡ್ಡಾಯವಾಗಿ ಹೊಂದಿರತಕ್ಕದ್ದು. ಅಂದರೆ ಕನಿಷ್ಠಪಕ್ಷ 6 ತಿಂಗಳ ಒಂದು ಕೋರ್ಸ್ ಕಂಪ್ಯೂಟರ್ ತರಬೇತಿ ಪ್ರಮಾಣ ಪತ್ರವನ್ನು ಕಂಪ್ಯೂಟರ್ ಸರ್ಟಿಫಿಕೇಟ್ ತರಬೇತಿ ನೀಡುವ ದಿನಾಂಕಕ್ಕೆ ಪಡೆದಿರಬೇಕು.
  • ಬ್ಯಾಂಕಿನಲ್ಲಿ ಖಾಲಿ ಇರುವ ಈ ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಸಂಬಂಧ ನೇಮಕಾತಿ ಪ್ರಕ್ರಿಯೆಯ ಸಂಪೂರ್ಣ ವಿವರಗಳನ್ನುbelagavidccb.bank.in ವೆಬ್‌ಸೈಟ್ (WEBSITE) ನಲ್ಲಿ ಲಭ್ಯವಿದ್ದು, ಅಭ್ಯರ್ಥಿಗಳು ಕಡ್ಡಾಯವಾಗಿ ಆನ್‌ಲೈನ್ (ONLINE) ಮೂಲಕವೇ ಅರ್ಜಿ ಸಲ್ಲಿಸಬೇಕು.
  • ಅಭ್ಯರ್ಥಿಗಳು ಭಾರತೀಯ ನಾಗರೀಕರಾಗಿರತಕ್ಕದ್ದು.
  • ಅಧಿಸೂಚನೆಯಲ್ಲಿ ಪ್ರಕಟಿಸಲಾಗಿರುವ ಹುದ್ದೆಗಳ ಸಂಖ್ಯೆಯಲ್ಲಿ ಬದಲಾವಣೆ (ಹೆಚ್ಚು / ಕಡಿಮೆ) ಮಾಡುವ ಹಕ್ಕನ್ನು ಬ್ಯಾಂಕ್ ನೇಮಕಾತಿ ಪ್ರಾಧಿಕಾರವು ಹೊಂದಿರುತ್ತದೆ.
  • ಅಭ್ಯರ್ಥಿಗಳು ಒಂದು ಹುದ್ದೆಗೆ ಒಂದೇ ಅರ್ಜಿ ಸಲ್ಲಿಸತಕ್ಕದ್ದು. ಒಂದೇ ಹುದ್ದೆಗೆ ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದ್ದಲ್ಲಿ ಕೊನೆಯಲ್ಲಿ ಸಲ್ಲಿಸಿದ ಅರ್ಜಿಯನ್ನು ಮಾತ್ರ ಮಾನ್ಯ ಮಾಡಲಾಗುವುದು.
  • ಒಂದಕ್ಕಿಂತ ಹೆಚ್ಚಿನ ವೃಂದದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಒಂದೇ ನೋಂದಣಿ ಸಂಖ್ಯೆಯಡಿಯಲ್ಲದೇ ಪ್ರತಿ ಹುದ್ದೆಗೆ ಪ್ರತ್ಯೇಕವಾಗಿ ಅರ್ಜಿಯನ್ನು ಸಲ್ಲಿಸಿ, ಪ್ರತ್ಯೇಕ ಅರ್ಜಿ ಶುಲ್ಕವನ್ನು ಪಾವತಿಸಬೇಕು.
  • ನೇಮಕಾತಿ ಅರ್ಜಿಗಳನ್ನು ಖುದ್ದಾಗಿ/ಅಂಚೆ/ಕೊರಿಯರ್ ಮೂಲಕ ಸಲ್ಲಿಸಲು ಅವಕಾಶವಿರುವುದಿಲ್ಲ. ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
  • ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಸಲ್ಲಿಸುವ ಅರ್ಜಿಗಳಲ್ಲಿ ಅಪೂರ್ಣ ಹಾಗೂ ಅಸ್ಪಷ್ಟ ಮಾಹಿತಿಗಳನ್ನು ಅಥವಾ ದಾಖಲೆಗಳನ್ನು ನೀಡಿದ್ದಲ್ಲಿ, ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು
  • ನಿಗದಿತ ಶುಲ್ಕ ಪಾವತಿಸದೆ ಇದ್ದುದ್ದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
  • ಒಮ್ಮೆ ಪಾವತಿಸಿದ ಶುಲ್ಕವನ್ನು ಯಾವುದೇ ಕಾರಣಕ್ಕೂ ಹಿಂತಿರುಗಿಸಲಾಗುವುದಿಲ್ಲ.
  • ಬ್ಯಾಂಕ್ ಈ ನೇಮಕಾತಿ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಕಾಲಕಾಲಕ್ಕೆ ತಿದ್ದುಪಡಿ ಮಾಡುವ ಅಧಿಕಾರವನ್ನು ತಡೆಹಿಡಿಯುವ, ಬ್ಯಾಂಕ್ ಜವಾಬ್ದಾರಿಯಿರುವುದಿಲ್ಲ.
  • ಅಭ್ಯರ್ಥಿಯು ಸಲ್ಲಿಸಿರುವ ಅರ್ಜಿಗಳ ತಿದ್ದುಪಡಿ/ಮಾರ್ಪಾಡು ಕುರಿತು ನೀಡುವ ತಿದ್ದುಪಡಿ ಕೋರಿಕೆಯನ್ನು ಬ್ಯಾಂಕಿನ ನೇರ ನೇಮಕಾತಿ ಪ್ರಾಧಿಕಾರವು ಹೊಂದಿರುತ್ತದೆ.
  • ಈ ನೇಮಕಾತಿ ಸಂಬಂಧ ಅಭ್ಯರ್ಥಿಗಳು ಸ್ಪಷ್ಠೀಕರಣ, ಪ್ರಶ್ನೋತ್ತರಗಳು, ತಕರಾರು ಇತ್ಯಾಧಿಗಳಿಗೆ ಪತ್ರ/ಇ-ಮೇಲ್/ದೂರವಾಣಿ ಮುಖಾಂತರದ ವ್ಯವಹಾರಗಳಿಗೆ ಯಾವುದೇ ಅವಕಾಶವಿರುವುದಿಲ್ಲ.

ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ವಯೋಮಿತಿ:-

ಆನಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು ಕನಿಷ್ಠ 18 ವರ್ಷ ಪೂರೈಸಿರಬೇಕು. ಗರಿಷ್ಠ ವಯೋಮಿತಿ ಈ ಕೆಳಗಿನಂತೆ ಇರುತ್ತದೆ.

  • ಸಾಮಾನ್ಯ ಅಭ್ಯರ್ಥಿಗಳು- 35ವರ್ಷಗಳು
  • ಪ್ರವರ್ಗ 2ಎ,2ಬಿ,3ಎ,3ಬಿ- 38 ವರ್ಷಗಳು
  • ಎಸ್.ಸ್ಸಿ/ಎಸ್.ಟಿ/ ಪ್ರವರ್ಗ- 40 ವರ್ಷಗಳು

ಉದ್ಯೋಗದ ಸ್ಥಳ:-

  • ಬೆಳಗಾವಿ ಜಿಲ್ಲೆ

ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಅರ್ಜಿ ಶುಲ್ಕ:-

  • ಸಾಮಾನ್ಯ ವರ್ಗ & ಇತರೆ ಹಿಂದುಳಿದ ವರ್ಗಗಳು (2A, 2B, 3A, 3B):- 1000/-
  • ಪ್ರವರ್ಗ-1/Sc /St :- 500/-
  • ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡಲು online ನಲ್ಲಿ ನೀಡುವ ಸೂಚನೆಗಳನ್ನು ತಪ್ಪದೇ ಪಾಲಿಸುವುದು.
  • ತಪ್ಪು ಮಾಹಿತಿಗಳನ್ನು ಮತ್ತು ಸುಳ್ಳು ಮಾಹಿತಿ ನೀಡಿ ಅರ್ಜಿ ಸಲ್ಲಿಸಿದ್ದಲ್ಲಿ ಅಂತಹವರ ಅರ್ಜಿಯನ್ನು ಯಾವುದೇ ಮಾಹಿತಿ ನೀಡದೇ ತಿರಸ್ಕರಿಸಲಾಗುವುದು.
  • ನಿಗದಿತ ಶುಲ್ಕವನ್ನು ಪಾವತಿಸದೇ ಇದ್ದುದ್ದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
  • ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸಿದ್ದಲ್ಲಿ ಅಂತಹ ಅಭ್ಯರ್ಥಿಗಳು ಪ್ರತಿ ಹುದ್ದೆಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿ, ಪ್ರತ್ಯೇಕವಾಗಿ ಅರ್ಜಿ ಶುಲ್ಕವನ್ನು ಪಾವತಿಸತಕ್ಕದ್ದು
  • ಅರ್ಜಿ ಶುಲ್ಕವನ್ನು ಪಾವತಿಸುವುದಕ್ಕೆ ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್ / ಯುಪಿಐ ಮೂಲಕ ನಿಗದಿತ ಶುಲ್ಕ + ಸೇವಾಶುಲ್ಕ (ಬ್ಯಾಂಕ್ ಗೇಟ್‌ವೇ ಶುಲ್ಕ ಪ್ರತ್ಯೇಕ) ಪ್ರತ್ಯೇಕವಾಗಿ ಪಾವತಿ ಮಾಡತಕ್ಕದ್ದು.
  • ಶುಲ್ಕವನ್ನು ಪಾವತಿಸಲು ನಿಗದಿಪಡಿಸಿದ ಕೊನೆಯ ದಿನಾಂಕ : 27-08-2026 ರ ನಂತರ ಶುಲ್ಕವನ್ನು ಪಾವತಿಸದೇ ಇದ್ದುದ್ದಲ್ಲಿ ಅಂತಹವರ ಅರ್ಜಿಯನ್ನು ತಿರಸ್ಕರಿಸಲಾಗುವುದು. ಡಿ.ಡಿ. / ಚೆಕ್ / ಪೋಸ್ಟಲ್ ಆರ್ಡರ್ / ಮನಿ ಆರ್ಡರ್ / ನಗದು ರೂಪದಲ್ಲಿ ಹಣವನ್ನು ಸ್ವೀಕರಿಸಲಾಗುವುದಿಲ್ಲ.
  • ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಸಾಲದ ಮಂಜೂರಾತಿಯಾದ ಅರ್ಜಿಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ.
  • ತಪ್ಪು ಮಾಹಿತಿಗಳನ್ನು ನೀಡಿ ಅರ್ಜಿ ಸಲ್ಲಿಸಿದ್ದಲ್ಲಿ ಅಂತಹವರ ವಿರುದ್ಧ ಬ್ಯಾಂಕ್ ಕಾನೂನುಬದ್ಧವಾಗಿ ಸೂಕ್ತ ಕ್ರಮ ಕೈಗೊಳ್ಳುವ ಹಕ್ಕನ್ನು ಕಾಯ್ದಿರಿಸಿಕೊಂಡಿದೆ.
  • ಒಮ್ಮೆ ಶುಲ್ಕವನ್ನು ಪಾವತಿಸಿದ ನಂತರ ಯಾವುದೇ ಕಾರಣಕ್ಕೂ ಪಾವತಿಸಿದ ಅರ್ಜಿ ಶುಲ್ಕವನ್ನು ಹಿಂತಿರುಗಿಸಲಾಗುವುದಿಲ್ಲ ಅಥವಾ ಇತರ ಯಾವುದೇ ನೇಮಕಾತಿಗಳಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗುವುದಿಲ್ಲ.

ಸೂಚನೆಗಳು:-

  • ಅರ್ಜಿಗಳನ್ನು ಭರ್ತಿ ಮಾಡಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ನೇಮಕಾತಿ ಪ್ರಕಟಣೆಯಲ್ಲಿ ಉಲ್ಲೇಖಿಸಿರುವ ಅರ್ಹತೆಗಳಿಗೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಅಭ್ಯರ್ಥಿಗಳು ಕಡ್ಡಾಯವಾಗಿ ಹೊಂದಿರತಕ್ಕದ್ದು. ಬ್ಯಾಂಕಿನ ಅನುಮೊದಿತ ವೃಂದ & ನೇಮಕಾತಿ ಪ್ರಕಟಣೆಯಲ್ಲಿ ನಿಗಧಿಪಡಿಸಿರುವ ವಿದ್ಯಾರ್ಹತೆಯನ್ನು ಹೊರತುಪಡಿಸಿ, ಇತರೆ ಯಾವುದೇ ವಿದ್ಯಾರ್ಹತೆಯನ್ನು ಪರಿಗಣಿಸಲಾಗುವುದಿಲ್ಲ.
  • ಕನ್ನಡ ಭಾಷಾ ಜ್ಞಾನ (ಓದಲು, ಬರೆಯಲು, ಮಾತನಾಡಲು, ಗ್ರಹಿಸಿಕೊಳ್ಳುವುದು ಮತ್ತು ಅರ್ಥೈಸುವ ಸಾಮರ್ಥ್ಯವನ್ನು) ಕಡ್ಡಾಯವಾಗಿರಬೇಕು.
  • ಆಯ್ಕೆಗೊಂಡ ಅಭ್ಯರ್ಥಿಗಳ ಪರೀಕ್ಷಾವಧಿ, ಬ್ಯಾಂಕ ನಿಗಧಿಪಡಿಸಿದಂತೆ ಇರುತ್ತದೆ, ಅವಶ್ಯವಿದ್ದಲ್ಲಿ ಪರೀಕ್ಷಾವಧಿಯನ್ನು ವಿಸ್ತರಿಸಲಾಗುತ್ತದೆ, ಈ ಅವಧಿಯಲ್ಲಿ ಅಭ್ಯರ್ಥಿಗಳ ಸೇವೆ ತೃಪ್ತಿಕರವಾಗಿದ್ದಲ್ಲಿ ಮಾತ್ರ ಅಂತವರ ಸೇವೆಯನ್ನು ಖಾಯಂಗೊಳಿಸಲಾಗುತ್ತದೆ.
  • ಅರ್ಜಿಯಲ್ಲಿ ನಮೂದಿಸಿದ ಅಂಕಗಳು / ಇತರ ವಿವರಣೆಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಲ್ಲಿ ಅಂತಹ ಅರ್ಜಿಯನ್ನು ತಿರಸ್ಕರಿಸಲಾಗುವುದು.
  • ಈ ನೇಮಕಾತಿ ಪ್ರಕ್ರಿಯೆಯನ್ನು ಯಾವುದೇ ಕಾರಣ ನೀಡದೇ ಯಾವುದೇ ಹಂತದಲ್ಲಿ ರದ್ದುಗೊಳಿಸುವ / ತಡೆಹಿಡಿಯುವ ಅಧಿಕಾರವನ್ನು ಬ್ಯಾಂಕ್ ಹೊಂದಿರುತ್ತದೆ.
  • ಅಭ್ಯರ್ಥಿಗಳು ಆಯ್ಕೆಯಾದ ನಂತರ ಸಲ್ಲಿಸುವ ದಾಖಲೆಗಳ ನೈಜತೆಯನ್ನು ಸಂಬಂಧಪಟ್ಟ ಸಂಸ್ಥೆ / ಪ್ರಾಧಿಕಾರ / ವಿಶ್ವವಿದ್ಯಾಲಯದಿಂದ ದೃಢೀಕರಿಸಿಕೊಳ್ಳುವ ಹಕ್ಕನ್ನು ಬ್ಯಾಂಕ್ ಕಾಯ್ದಿರಿಸಿಕೊಂಡಿದೆ.

ಲಿಖಿತ ಪರೀಕ್ಷೆಯ ಬಗ್ಗೆ:-

  • ಲಿಖಿತ ಪರೀಕ್ಷೆಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಹಾಗೂ ಲಿಖಿತ ಪರೀಕ್ಷೆಯ ದಿನಾಂಕವನ್ನು ಬ್ಯಾಂಕಿನ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಲಿಖಿತ ಪರೀಕ್ಷೆಯ ಪ್ರವೇಶ ಪತ್ರ, ದಿನಾಂಕ, ಸ್ಥಳ ಮತ್ತು ವೇಳಾಪಟ್ಟಿಯನ್ನು ಅರ್ಹ ಅಭ್ಯರ್ಥಿಗಳಿಗೆ ಬ್ಯಾಂಕಿನ ವೆಬ್‌ಸೈಟ್ ಮೂಲಕ ಕಳುಹಿಸಲಾಗುವುದು. ಅಭ್ಯರ್ಥಿಗಳು ಲಿಖಿತ ಪರೀಕ್ಷೆಯ ಪ್ರವೇಶ ಪತ್ರಗಳನ್ನು/ಅರ್ಹತೆಯನ್ನು ಹೊಂದಿದ ಅಭ್ಯರ್ಥಿಗಳನ್ನು ಬ್ಯಾಂಕಿನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾದ ನಿಗದಿಪಡಿಸಿದ ದಿನಾಂಕ ಮತ್ತು ವೇಳೆಯ ಕೊನೆಯದಾಗಿ ಮಾನ್ಯತೆ ಪಡೆದ ಗುರುತಿನ ಚೀಟಿಯೊಂದಿಗೆ ಲಿಖಿತ ಪರೀಕ್ಷೆ/ಸಂದರ್ಶನಕ್ಕೆ ಹಾಜರಾಗತಕ್ಕದ್ದು. ಈ ಬಗ್ಗೆ ಮಾಹಿತಿಯನ್ನುbelagavidccb.bank.in ವೆಬ್‌ಸೈಟ್‌ನಲ್ಲಿ ಪಡೆದುಕೊಳ್ಳುವುದು ಅಭ್ಯರ್ಥಿಗಳ ಜವಾಬ್ದಾರಿಯಾಗಿರುತ್ತದೆ.

ಪತ್ರವ್ಯವಹಾರದ ಪತ್ರ ವ್ಯವಹಾರ:-

  • ಬ್ಯಾಂಕ್ ನೇಮಕಾತಿ ಪ್ರಕ್ರಿಯೆ ಕುರಿತಂತೆ ಅಭ್ಯರ್ಥಿಗಳೊಂದಿಗೆ ಯಾವುದೇ ಪತ್ರ ವ್ಯವಹಾರವನ್ನು ನಡೆಸುವುದಿಲ್ಲ.

ಸೇವಾ ಸೌಲಭ್ಯಗಳ ಕುರಿತು:-

  • ಬ್ಯಾಂಕಿನ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬ್ಯಾಂಕಿನ ಸೇವಾ ನಿಯಮಗಳು ಅನ್ವಯಿಸುತ್ತವೆ.
  • ಬ್ಯಾಂಕಿನ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳು ನೇಮಕಾತಿ ಪ್ರಕಟಣೆಯಲ್ಲಿ ತಿಳಿಸಿದ ವೇತನ ಶ್ರೇಣಿಯಲ್ಲಿ ಸೇವಾ ಸೌಲಭ್ಯವನ್ನು ಪಡೆಯಲು ಮಾತ್ರ ಅರ್ಹರಾಗಿರುತ್ತಾರೆ.
  • ಆಯ್ಕೆಯಾಗುವ ಅಭ್ಯರ್ಥಿಗಳು ನಿಯೋಜಿಸಿದ ಬ್ಯಾಂಕಿನ ಕೇಂದ್ರ ಕಚೇರಿ ಅಥವಾ ಯಾವುದೇ ಶಾಖೆಗಳಲ್ಲಿ ಯಾವುದೇ ಪಾಳಿಗಳಲ್ಲಿ ಕರ್ತವ್ಯ ನಿರ್ವಹಿಸಲು ಬದ್ಧರಾಗಿರಬೇಕು.
  • ಬ್ಯಾಂಕಿನ ಹಿತದೃಷ್ಟಿಯಿಂದ ಬ್ಯಾಂಕಿನ ವ್ಯಾಪ್ತಿಯನ್ನು ಹೊರತುಪಡಿಸಿದ ಯಾವುದೇ ಸ್ಥಳಗಳಿಗೂ ಸಹ ಅಭ್ಯರ್ಥಿಗಳನ್ನು ನಿಯೋಜಿಸಬಹುದಾದ ಹಕ್ಕನ್ನು ಬ್ಯಾಂಕು ಹೊಂದಿರುತ್ತದೆ.
  • ಅಭ್ಯರ್ಥಿಗಳ ಆಯ್ಕೆಯ ನಂತರ ಅರ್ಜಿಯ ಜೊತೆ ಸಲ್ಲಿಸಿರುವ ವಿದ್ಯಾರ್ಹತೆ, ಮೀಸಲಾತಿ, ಜನ್ಮ ದಿನಾಂಕ ಮತ್ತು ಇತರೆ ದಾಖಲೆಗಳನ್ನು ಸಂಬಂಧಪಟ್ಟ ಸಂಸ್ಥೆ/ಪ್ರಾಧಿಕಾರ/ಶಾಲಾ/ಕಾಲೇಜು/ವಿಶ್ವವಿದ್ಯಾಲಯಗಳಿಂದ ನೈಜತೆಯ ಬಗ್ಗೆ ದೃಢೀಕರಿಸಿಕೊಳ್ಳುವ ಹಕ್ಕನ್ನು ಬ್ಯಾಂಕು ಕಾಯ್ದಿರಿಸಿಕೊಂಡಿದೆ. ಸದರಿ ದಾಖಲೆಗಳ ಪರಿಶೀಲನೆಯಲ್ಲಿ ಯಾವುದಾದರು ನ್ಯೂನ್ಯತೆ/ಸುಳ್ಳು/ನಕಲು/ದೋಷಪೂರಿತ ಅಂಶ ಎಂದು ಕಂಡುಬಂದಲ್ಲಿ ಯಾವುದೇ ಮುನ್ಸೂಚನೆ ನೀಡದೇ ಅಂತಹವರ ನೇಮಕಾತಿಯನ್ನು ರದ್ದುಪಡಿಸುವ/ಸೇವೆಯಿಂದ ವಜಾಗೊಳಿಸುವ ಹಾಗೂ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುತ್ತದೆ.

ಶೈಕ್ಷಣಿಕ ವಿದ್ಯಾರ್ಹತೆ:-

  • ಆನಲೈನ ಮುಖಾಂತರ ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಸಂಬಂಧಿಸಿದ ಹುದ್ದೆಗಳಿಗೆ ಸೂಚಿಸಿರುವ ವಿದ್ಯಾರ್ಹತೆಯನ್ನು ಅಭ್ಯರ್ಥಿಗಳು ಹೊಂದಿರಲೇಬೇಕು. ಅಭ್ಯರ್ಥಿಗಳು ಅರ್ಜಿಯಲ್ಲಿ ಎಲ್ಲಾ ಸೆಮಿಸ್ಟರ್ / ವರ್ಷಗಳಲ್ಲಿ ನಿಗದಿಪಡಿಸಿರುವ ಗರಿಷ್ಠ ಮತ್ತು ಪಡೆದಿರುವ ಅಂಕಗಳನ್ನು ಕ್ರೋಢೀಕರಿಸಿ ಸರಾಸರಿ ಅಂಕಗಳನ್ನು ಸ್ಪಷ್ಟವಾಗಿ ನಮೂದಿಸುವುದು.
  • ಗ್ರೇಡ್ ಅಂಕಗಳನ್ನು ಪಡೆದ ಅಭ್ಯರ್ಥಿಗಳು ಅವರ ಗ್ರೇಡ್ ಅಂಕಗಳನ್ನು ಶೇಕಡಾವಾರು ಅಂಕಗಳಿಗೆ ಪರಿವರ್ತಿಸಿ ವಿಶ್ವವಿದ್ಯಾಲಯ ನೀಡಿರುವ ಪ್ರಮಾಣ ಪತ್ರದಲ್ಲಿ ನಮೂದಿಸಿರುವ ಶೇಕಡಾವಾರು ಅಂಕಗಳನ್ನು ತಪ್ಪದೇ ನಮೂದಿಸಬೇಕು.
  • “ಪದವಿ” ಎಂದರೆ, ಕೇಂದ್ರ/ ರಾಜ್ಯ ಸರ್ಕಾರ ಕಾಲಕಾಲಕ್ಕೆ ಹೊರಡಿಸುವ ಅಧಿಸೂಚನೆಗಳ ರೀತ್ಯಾ ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಅಂಗೀಕೃತ ಪದವಿ.

ಆಯ್ಕೆ ವಿಧಾನ:-

  • ಕರ್ನಾಟಕ ಸಹಕಾರ ಸಂಘಗಳ ನಿಯಮಗಳು 1960ರನಿಯಮ 18(2)ರಂತೆ ದ್ವಿತೀಯ ದರ್ಜೆ ಗುಮಾಸ್ತ ಹುದ್ದೆಗಳಿಗೆ ಸಂಬಂಧಿಸಿದಂತೆ ಲಿಖಿತ ಪರೀಕ್ಷೆಯನ್ನು ಒಟ್ಟು 200 ಅಂಕಗಳಿಗೆ ಏರ್ಪಡಿಸಲಾಗುವುದು. ಕನ್ನಡ ಭಾಷೆಗೆ 50 ಅಂಕಗಳು, ಸಾಮಾನ್ಯ ಇಂಗ್ಲಿಷ್‌ಗಾಗಿ 25 ಅಂಕಗಳು, ಸಾಮಾನ್ಯ ಜ್ಞಾನಕ್ಕಾಗಿ 25 ಅಂಕಗಳು, ಸಹಕಾರ ವಿಷಯಗಳಿಗಾಗಿ 50 ಅಂಕಗಳು, ಭಾರತದ ಸಂವಿಧಾನ ವಿಷಯಕ್ಕಾಗಿ 25 ಅಂಕಗಳು ಹಾಗೂ ಬ್ಯಾಂಕಿನ ಕಾರ್ಯ ಚಟುವಟಿಕೆಗಳು ಮತ್ತು ವಸ್ತುನಿಷ್ಠ ವಿಷಯಗಳಿಗೆ 25 ಅಂಕಗಳು ಒಳಗೊಂಡಿರುತ್ತವೆ.
  • ಸಿಪಾಯಿ ಮತ್ತು ಗನ್ ಮ್ಯಾನ್ ಹುದ್ದೆಗಳಿಗೆ ಸಂಬಂಧಿಸಿದಂತೆ ಒಟ್ಟು 100 ಅಂಕಗಳಿಗೆ ಲಿಖಿತ ಪರೀಕ್ಷೆಯನ್ನು ಏರ್ಪಡಿಸಲಾಗುವುದು. ಕನ್ನಡ ಭಾಷೆಗೆ 50 ಅಂಕಗಳು ಮತ್ತು ಸಾಮಾನ್ಯ ಜ್ಞಾನಕ್ಕಾಗಿ 50 ಅಂಕಗಳಿಗೆ ಪ್ರತ್ಯೇಕವಾಗಿ ಲಿಖಿತ ಪರೀಕ್ಷೆಯನ್ನು ನಡೆಸಲಾಗುವುದು.
  • ಕರ್ನಾಟಕ ರಾಜ್ಯ, ಸಹಕಾರ ಸಂಘಗಳ ನಿಬಂಧಕರ ಸುತ್ತೋಲೆಯಲ್ಲಿನ ಅವಕಾಶದಂತೆ ಬಾಹ್ಯ ಮೂಲ ಸಂಸ್ಥೆಯಿಂದ ಲಿಖಿತ ಪರೀಕ್ಷೆ ಮತ್ತು ಮೌಲ್ಯಮಾಪನ ನಡೆಸಲಾಗುವುದು.
  • ಅಭ್ಯರ್ಥಿಗಳು ಲಿಖಿತ ಪರೀಕ್ಷೆಯಲ್ಲಿ (Written Examination) ಗಳಿಸಿದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು 1:5 ರ ಅನುಪಾತದಲ್ಲಿ ಮೌಖಿಕ ಸಂದರ್ಶನಕ್ಕೆ ಕರೆಯಲಾಗುವುದು. ಮೌಖಿಕ ಸಂದರ್ಶನಕ್ಕೆ ಗರಿಷ್ಠ 15 ಅಂಕಗಳನ್ನು ನಿಗದಿಪಡಿಸಲಾಗಿದೆ. ಅಭ್ಯರ್ಥಿಯು ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಶೇ.85ಕ್ಕೆ ಇಳಿಸಿ ಹಾಗೆ ಪ್ರಾಪ್ತವಾಗುವ ಅಂಕಗಳಿಗೆ ಮೌಖಿಕ ಸಂದರ್ಶನದಲ್ಲಿ(Interview)ಗಳಿಸುವ ಅಂಕಗಳನ್ನು ಒಟ್ಟುಗೂಡಿಸಿ ಅಂತಿಮ ಮೆರಿಟ್ ಪಟ್ಟಿಯನ್ನು ತಯಾರಿಸಿ ಮೆರಿಟ್ ಹಾಗೂ ಅನ್ವಯವಾಗುವ ಮೀಸಲಾತಿ ನೀತಿಯನ್ನು ಅನುಸರಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
  • ಲಿಖಿತ ಪರೀಕ್ಷೆಯ ಪ್ರವೇಶ ಪತ್ರ, ದಿನಾಂಕ ಹಾಗೂ ಪರೀಕ್ಷೆಯ ಕಾಲಾವಧಿಯನ್ನು, ಅರ್ಹ ಅಭ್ಯರ್ಥಿಗಳಿಗೆ ಬ್ಯಾಂಕಿನ ವೆಬ್‌ಸೈಟ್‌ನಲ್ಲಿ ತಿಳಿಸಲಾಗುವುದು.
  • ಸದರಿ ಮಾಹಿತಿಯನ್ನು ಬ್ಯಾಂಕಿನ ಜಾಲತಾಣ (WEBSITE) www.belagavidccb.bank.in ಮೂಲಕ ತಿಳಿದುಕೊಳ್ಳುವುದು ಹಾಗೂ ಡೌನ್‌ಲೋಡ್ ಮಾಡಿಕೊಂಡು ಹಾಜರಾಗುವುದು ಅಭ್ಯರ್ಥಿಗಳ ಜವಾಬ್ದಾರಿಯಾಗಿರುತ್ತದೆ.

ಪ್ರಮುಖ ದಿನಾಂಕಗಳು:-

  • ಅಧಿಸೂಚನೆ ಬಿಡುಗಡೆ ಮಾಡಿದ ದಿನಾಂಕ: 23 ಜುಲೈ 2026
  • ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭಿಸಿದ ದಿನಾಂಕ: 27 ಜುಲೈ 2026
  • ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27 ಅಗಸ್ಟ್ 2026
  • ಆನ್‌ಲೈನ್ ಮುಖಾಂತರ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 27 ಅಗಸ್ಟ್ 2026

ಡಿ.ಸಿ.ಸಿ ಬ್ಯಾಂಕ ಬೆಳಗಾವಿ ನೇಮಕಾತಿಯ ಅಧಿಸೂಚನೆಗಾಗಿ ಇಲ್ಲಿ ಕ್ಲೀಕ ಮಾಡಿhttps://virtualofficeerp.com/bgccb2026/uploads/files/notification/1wk7yj.pdf

ಡಿ.ಸಿ.ಸಿ ಬ್ಯಾಂಕ ಬೆಳಗಾವಿ ನೇಮಕಾತಿಗೆ ಆನಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಇಲ್ಲಿ ಕ್ಲೀಕ ಮಾಡಿhttps://virtualofficeerp.com/bgccb2026/instruction

Leave a Comment

Your email address will not be published. Required fields are marked *

Scroll to Top