ಕರ್ನಾಟಕ ರಾಜ್ಯ ಪೋಲಿಸ್ ಇಲಾಖೆ ನೇಮಕಾತಿ ಅಧಿಸೂಚನೆ-2026

ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಹುಡುಕುತ್ತಿರುವ ರಾಜ್ಯದ ಯುವಕರಿಗೆ ಕರ್ನಾಟಕ ಸರ್ಕಾರವು ಭರ್ಜರಿ ಸಿಹಿ ಸುದ್ದಿಯನ್ನು ನೀಡಿದೆ. ಕಲ್ಯಾಣ ಕರ್ನಾಟಕ (Kalyan Karnataka) & ಮಿಕ್ಕುಳಿದ ವೃಂದದಲ್ಲಿ (Residual Parent Cadre) ಖಾಲಿ ಇರುವ ಒಟ್ಟು 1600 ಸಶಸ್ತ್ರ ಪೊಲೀಸ್ ಕಾನ್ಸಟೇಬಲ್ (ಸಿಎಆರ್/ಡಿಎಆರ್ – CAR/DAR) ಪುರುಷ ಹುದ್ದೆಗಳ ನೇರ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿ ಆನಲೈನ್ ಮುಖಾಂತರ ಅರ್ಜಿಯನ್ನು ಆಹ್ವಾನಿಸಿದೆ.Armed.police.constable

ಹುದ್ದೆಗಳ ವಿವರ:-

  • ಒಟ್ಟು ಹುದ್ದೆಗಳು:- 1600 (1421- ಉಳಿಕೆ ಮೂಲವೃಂದ, 179-ಕಲ್ಯಾಣ ಕರ್ನಾಟಕ)
  • ಹುದ್ದೆಯ ಹೆಸರು:- ಸಶಸ್ತ್ರ ಪೊಲೀಸ್ ಕಾನ್ಸಟೇಬಲ್ (ಸಿಎಆರ್/ಡಿಎಆರ್ – CAR/DAR)
  • ಒಟ್ಟು 1600 ಹುದ್ದೆಗಳಿಗೆ ಆನಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿದೆ ಅದರಲ್ಲಿ 1421 ಹುದ್ದೆಗಳನ್ನು ಉಳಿಕೆ ಮೂಲವೃಂದಕ್ಕೆ ಹಾಗೂ 179 ಹುದ್ದೆಗಳನ್ನು ಕಲ್ಯಾಣ ಕರ್ನಾಟಕ ವೃಂದಕ್ಕೆ ಹಂಚಿಕೆ ಮಾಡಿ, ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿರುತ್ತಾರೆ.

ಪ್ರಮುಖ ದಿನಾಂಕಗಳು:-

  • ಅಧಿಸೂಚನೆ ಬಿಡುಗಡೆ ಮಾಡಿದ ದಿನಾಂಕ: 19 ಜೂನ್ 2026
  • ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭಿಸಿದ ದಿನಾಂಕ: 22 ಜೂನ್ 2026
  • ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22 ಜುಲೈ 2026
  • ಆನ್‌ಲೈನ್ ಮುಖಾಂತರ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 24 ಜುಲೈ 2026

ವೇತನ ಶ್ರೇಣಿ:-

  • 37500-900-39300-1000-43300-1125-47800-1250-52800-1375-58300-1500-64300-1650-74200-1900-76100 & ಇತರೆ ಭತ್ಯೆಗಳು

ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ:

ಶೈಕ್ಷಣಿಕ ವಿದ್ಯಾರ್ಹತೆ:-

  • ಪಿ.ಯು.ಸಿ ಅಥವಾ ತತ್ಸಮಾನ ವಿದ್ಯಾರ್ಹತೆ

ತತ್ಸಮಾನ ವಿದ್ಯಾರ್ಹತೆ:-

  • ಸಿ.ಬಿ.ಎಸ್.ಇ & ಐ.ಎಸ್.ಸಿ ಮಂಡಳಿಯು ನಡೆಸುವ 12ನೇ ತರಗತಿ ಪರೀಕ್ಷೆ
  • ಇತರೆ ರಾಜ್ಯ ಸರ್ಕಾರದ ಪರೀಕ್ಷಾ ಮಂಡಳಿಗಳು ನಡೆಸುವ 12ನೇ ತರಗತಿ ಪರೀಕ್ಷೆ
  • ನ್ಯಾಷನಲ್ ಇನ್ಸಿಸ್ಟಿಟೂಟ್ ಆಫ್ ಓಪನ್ ಸ್ಕೂಲಿಂಗ್ (ಎನ್.ಐ.ಒ.ಎಸ್) ವತಿಯಿಂದ ನಡೆಸುವ ಉನ್ನತ ಪ್ರೌಢ ಶಿಕ್ಷಣ ಕೋರ್ಸ/ಎಚ್.ಎಸ್.ಸಿ
  • ಎರಡು ವರ್ಷಗಳ ಐ.ಟಿ.ಐ ಕೋರ್ಸ ಪಡೆದ ಅಭ್ಯರ್ಥಿಗಳು ಎನ್.ಐ.ಒ.ಎಸ್ ವತಿಯಿಂದ ನಡೆಸುವ ಒಂದು ಭಾಷಾ ಕೋರ್ಸ ಮತ್ತು ಒಂದು ಶೈಕ್ಷಣಿಕ ವಿಷಯದಲ್ಲಿ (ದೂರಕಲಿಕೆ ಮಾದರಿಯಲ್ಲಿ) ಅಥವಾ ಪದವಿಪೂರ್ವ ಮಂಡಳಿಯು ನಡೆಸುವ ಪರೀಕ್ಷೆಯಲ್ಲಿ ಒಂದು ಭಾಷೆ ಮತ್ತು ಒಂದು ವಿಷಯದಲ್ಲಿ ತೇರ್ಗಡೆಯಾಗಿದ್ದಲ್ಲಿ ಮಾತ್ರ ಪಿ.ಯು.ಸಿ ಗೆ ತತ್ಸಮಾನ ವಿದ್ಯಾರ್ಹತೆ ಎಂದು ಪರಿಗಣನೆ.

ವಯೋಮಿತಿ:-

ಅರ್ಜಿಗಳನ್ನು ಸ್ವೀಕರಿಸಲು ನಿಗಧಿಪಡಿಸಿದ ಕೋನೆಯ ದಿನಾಂಕದಂದು ಕನಿಷ್ಠ 18 ವರ್ಷಗಳನ್ನು ಪೂರೈಸಿರಬೇಕು

ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ:ಸಿಆಸುಇ 262 ಸೇನೆನಿ 2025 ದಿನಾಂಕ:29.01.2026 ರಲ್ಲಿ ನಿರ್ದೇಶಿಸಿರುವಂತೆ ಒಂದು ಬಾರಿಗೆ ಅನ್ವಯವಾಗಿವಂತೆ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

  • ಸಾಮಾನ್ಯ ಅಭ್ಯರ್ಥಿಗಳು-18 ರಿಂದ 33 ವರ್ಷಗಳು
  • ಎಸ್.ಸ್ಸಿ/ಎಸ್.ಟಿ/ ಪ್ರವರ್ಗ-1,2ಎ,2ಬಿ,3ಎ,3ಬಿ- 18 ರಿಂದ 35 ವರ್ಷಗಳು
  • ಕರ್ನಾಟಕ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಅಭ್ಯರ್ಥಿಗಳಿಗೆ-18 ರಿಂದ 38 ವರ್ಷಗಳು

      ಉದ್ಯೋಗದ ಸ್ಥಳ:-

      • ಕರ್ನಾಟಕದಾದ್ಯಂತ

      ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಅರ್ಜಿ ಶುಲ್ಕ:-

      • ಸಾಮಾನ್ಯ ವರ್ಗ & ಇತರೆ ಹಿಂದುಳಿದ ವರ್ಗಗಳು (2A, 2B, 3A, 3B):- 750/-
      • ಪ್ರವರ್ಗ-1/Sc /St/Ex-Army:- 500/-

      ದೇಹದಾರ್ಢ್ಯತೆ ಪರೀಕ್ಷೆಯ ವಿವರ (Physical Standards)

      ಆಯ್ಕೆ ಪ್ರಕ್ರಿಯೆ (Selection Process) :-ಆಯ್ಕೆಯು ಪ್ರಮುಖವಾಗಿ ಮೂರು ಹಂತಗಳಲ್ಲಿ ನಡೆಯುತ್ತದೆ

      ತರಬೇತಿ:-

      •  ನೇಮಕಾತಿ ಹೊಂದಿದ ಅಭ್ಯರ್ಥಿಗಳು ಡಿಜಿ ಮತ್ತು ಐಜಿಪಿ ರವರು ಕಾಲ-ಕಾಲಕ್ಕೆ ನಿರ್ದಿಷ್ಟ ಪಡಿಸಿದ ಪೊಲೀಸ್ ತರಬೇತಿ ಶಾಲೆಗಳಲ್ಲಿ ನಿಗಧಿಪಡಿಸಲಾದ ಬುನಾದಿ ತರಬೇತಿಯನ್ನು ಕಡ್ಡಾಯವಾಗಿ ಪಡೆಯಬೇಕು ಮತ್ತು ತರಬೇತಿಯಲ್ಲಿ ನಿಗಧಿಪಡಿಸಿದ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು, ಅನುತ್ತೀರ್ಣರಾದ ಅಭ್ಯರ್ಥಿಗಳನ್ನು ಸೇವೆಯಿಂದ ವಜಾ ಮಾಡಲಾಗುತ್ತದೆ.

      ಖಾಯಂಪೂರ್ವ ಅವಧಿ:-

      • ನೇರ ನೇಮಕಾತಿ ಮೂಲಕ ಆಯ್ಕೆಗೊಂಡ ಅಭ್ಯರ್ಥಿಗಳು 2 ವರ್ಷ 6 ತಿಂಗಳು ಖಾಯಂಪೂರ್ವ ಅವಧಿಯಲ್ಲಿರುತ್ತಾರೆ.

      ಪಿಂಚಣಿ ಸೌಲಭ್ಯ:-

      • ಸರ್ಕಾರದ ಆದೇಶ ಸಂಖ್ಯೆ:ಎಫ್.ಡಿ (ಎಸ್.ಪಿ.ಎಲ್) 04 ಪಿಇಟಿ 2005, ದಿನಾಂಕ:31.03.2006 ರನ್ವಯ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್.ಪಿ.ಎಸ್) ಸೌಲಭ್ಯ ಅನ್ವಯವಾಗುವುದು.

      ಲಿಖಿತ ಪರೀಕ್ಷಾ ವಿಧಾನ:-

      • ಸಶಸ್ತ್ರ ಪೊಲೀಸ್ ಕಾನ್ಸಟೇಬಲ್ ಹುದ್ದೆಗೆ ಲಿಖಿತ ಪರೀಕ್ಷೆಯನ್ನು ಆಫಲೈನ್ –ಒಎಂಆರ್ ಮಾದರಿ (Offline-OMR Type) ಯಲ್ಲಿ ನಡೆಸಲಾಗುತ್ತದೆ. ಮತ್ತು ಲಿಖಿತ ಪರೀಕ್ಷೆಯನ್ನು ರಾಜ್ಯದ ಆಯ್ದ ಜಿಲ್ಲಾಕೇಂದ್ರಗಳಲ್ಲಿ ನಡೆಸಲಾಗುತ್ತದೆ & (ಆಡಳಿತಾತ್ಮಕ ಉದ್ದೇಶದಿಂದ ಜಿಲ್ಲಾ ಪರೀಕ್ಷಾ ಕೇಂದ್ರಗಳು ಬದಲಾವಣೆಯ ಷರತ್ತಿಗೆ ಒಳಪಟ್ಟಿರುತ್ತವೆ)

      ನೇಮಕಾತಿ ವಿಧಾನ:-

      • ಲಿಖಿತ ಹಾಗೂ ದೇಹದಾರ್ಡ್ಯತೆ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಗೆ ವೈದ್ಯಕೀಯ ಮಂಡಳಿಯು ವೈದ್ಯಕೀಯ ಪರೀಕ್ಷೆಯನ್ನು ನಡೆಸಿ, ನೀಡುವ ವರದಿಗಳನ್ನು ಆಧರಿಸಿ ಆಯ್ಕೆ ಪ್ರಾಧಿಕಾರವು ಹುದ್ದೆಗಳಿಗೆ ಅನುಸಾರ ಆಯ್ಕೆ ಪಟ್ಟಿಯನ್ನು ತಯಾರಿಸಿ ನೇಮಕಾತಿ ಪ್ರಾಧಿಕಾರಕ್ಕೆ ಕಳುಹಿಸಿ ಮತ್ತು ಸದರಿ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ, ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳು ಆಯ್ಕೆಯೆ ಎಲ್ಲಾ ರೀತಿಯಿಂದಲೂ ಆರ್ಹತೆಯನ್ನು ಹೊಂದಿರುವ ಬಗ್ಗೆ ನೇಮಕಾತಿ ಪ್ರಾಧಿಕಾರವು ದೃಡಪಡಿಸಿಕೊಂಡ ನಂತರ ಖಾಲಿ ಹುದ್ದೆಗಳ ಅನುಸಾರ ನೇಮಕಾತಿಯನ್ನು ಮಾಡಲಾಗುತ್ತದೆ.

      ಪ್ರಶ್ನೆಪತ್ರಿಕೆ & ಪಠ್ಯಕ್ರಮ:-

      • ಲಿಖಿತ ಪರೀಕ್ಷೆಯು ಸಾಮಾನ್ಯಜ್ಞಾನ, ವಿಜ್ಞಾನ,ಭೂಗೋಳ,ಇತಿಹಾಸ,ಭಾರತದ ಸಂವಿಧಾನ,ರಾಷ್ಟ್ರೀಯ ಸ್ವಾತಂತ್ರ್ಯ ಚಳುವಳಿ, ಮಾನಸಿಕ ಸಾಮರ್ಥ ಮತ್ತು ನೈತಿಕ ಶಿಕ್ಷಣ ಒಳಗೊಂಡ ಸಾಮಾನ್ಯ ಅಧ್ಯಯನ
      • ಪ್ರಶ್ನೆಪತ್ರಿಕೆಯು ಒಟ್ಟು 100 ಪ್ರಶ್ನೆಗಳನ್ನು ಹಾಗೂ 100 ಅಂಕಗಳನ್ನು ಒಳಗೊಂಡಿದ್ದು ಸದರಿ ಪ್ರಶ್ನೆಗಳಿಗೆ 1 ½ (90 ನಿಮಿಷಗಳಲ್ಲಿ) ಉತ್ತರಿಸಲಾಗುತ್ತದೆ.

      ಲಿಖಿತ ಪರೀಕ್ಷಾ ವೇಳಾಪಟ್ಟಿ & ದಿನಾಂಕ:-

      • ಲಿಖಿತ ಪರೀಕ್ಷೆಯನ್ನು ದಿನಾಂಕ:06-09-2026 ರಂದು ಬೆಳಿಗ್ಗೆ 10.30 ರಿಂದ 12.00 ರವರೆಗೆ (ಉಳಿಕೆ ವೃಂದ)  ಮಧ್ಯಾಹ್ನ 2.30 ರಿಂದ 4.00 ರವರೆಗೆ (ಕಲ್ಯಾಣ ಕರ್ನಾಟಕ) ನಡೆಸಲಾಗುತ್ತದೆ.

      ದಾಖಲೆಗಳ ಪರಿಶೀಲನೆ:-

      • ಶೈಕ್ಷಣಿಕ ವಿದ್ಯಾರ್ಹತೆ:- ಅಭ್ಯರ್ಥಿಯು ಎಸ್.ಎಸ್.ಎಲ್.ಸಿ & ಪಿ.ಯು,ಸಿ ಮೂಲ ಅಂಕಪಟ್ಟಿಗಳನ್ನು ಅಥವಾ ತತ್ಸಮಾನ ವಿದ್ಯಾರ್ಹತೆಯ ಮೂಲ ಅಂಕಪಟ್ಟಿಗಳನ್ನು ದಾಖಲೆಗಳ ಪರಿಶೀಲನೆ ಸಮಯದಲ್ಲಿ ಪ್ರಾಧಿಕಾರದ ಮುಂದೆ ಹಾಜರುಪಡಿಸಬೇಕು.
      • ಜನ್ಮ ದಿನಾಂಕಃ ಅಭ್ಯರ್ಥಿಯು ಎಸ್.ಎಸ್.ಎಲ್.ಸಿ ಮೂಲ ಅಂಕಪಟ್ಟಿ ಅಥವಾ ಮೂಲ ಜನನ ಪ್ರಮಾಣ ಪತ್ರವನ್ನು ದಾಖಲೆಗಳ ಪರಿಶೀಲನೆ ಸಮಯದಲ್ಲಿ ಪ್ರಾಧಿಕಾರದ ಮುದೆ ಹಾಜರುಪಡಿಸಬೇಕು.
      • ಜಾತಿ ಪ್ರಮಾಣ ಪತ್ರ:- ಅಭ್ಯರ್ಥಿಯು ದಾಖಲೆಗಳ ಪರಿಶೀಲನೆ ಸಮಯದಲ್ಲಿ ಜಾತಿ ಪ್ರಮಾಣ ಪತ್ರವನ್ನು  ಪ್ರಾಧಿಕಾರದ ಮುಂದೆ ಹಾಜರುಪಡಿಸಬೇಕು.
      • ಮೀಸಲಾತಿ ಕೋರಲು ಮಾನ್ಯವಿರುವ ಮೂಲ ಪ್ರಮಾಣ ಪತ್ರಗಳು:- ಅಭ್ಯರ್ಥಿಯು ದಾಖಲೆಗಳ ಪರಿಶೀಲನೆ ಸಮಯದಲ್ಲಿ ಪ್ರಾಧಿಕಾರದ ಮುಂದೆ ಹಾಜರುಪಡಿಸಬೇಕು.
      • ಗುರುತಿನ ಪುರಾವೆ:- ಅಭ್ಯರ್ಥಿಯು ದಾಖಲೆಗಳ ಪರಿಶೀಲನೆ ಸಮಯದಲ್ಲಿ ಗುರುತಿನ ಪುರಾವೆಯಾಗಿ ಮೂಲ ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಇತರೆ ದಾಖಲೆಗಳನ್ನು ಪ್ರಾಧಿಕಾರದ ಮುಂದೆ ಹಾಜರುಪಡಿಸಬೇಕು. ಪ್ರಾಧಿಕಾರವು ನಿರ್ದೇಶಿಸಿದಾಗ ಸಂಬಂಧಪಟ್ಟ ದಾಖಲೆಗಳನ್ನು ಅಭ್ಯರ್ಥಿಗಳು ಹಾಜರುಪಡಿಸಬೇಕು.

      ಆನಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-

      • 10 ನೇ ತರಗತಿ ಅಂಕಪಟ್ಟಿ
      • ಆಧಾರ ಕಾರ್ಡ
      • 12 ನೇ ತರಗತಿ ಅಂಕಪಟ್ಟಿ
      • ತತ್ಸಮಾನ ವಿದ್ಯಾರ್ಹತೆ ಪ್ರಮಾಣ ಪತ್ರಗಳು (ಅನ್ವಯಿಸಿದಲ್ಲಿ ಮಾತ್ರ)
      • ಜಾತಿ ಪ್ರಮಾಣ ಪತ್ರ
      • ಮೀಸಲಾತಿ ಪ್ರಮಾಣ ಪತ್ರಗಳು (ಕನ್ನಡ/ಗ್ರಾಮೀಣ/ಮುಳುಗಡೆ/ಇತರೆ)
      • ಮೊಬೈಲ್ ಸಂಖ್ಯೆ & ಮೇಲ್ ಐಡಿ
      • ಇತ್ತೀಚಿನ  ಭಾವಚಿತ್ರ & ಸಹಿ

      For Notification (RPC) Click Here :https://cetonline.karnataka.gov.in/keawebentry456/apcrpc/APC_RPC19062026kannada.pdf

      For Notification (Kalyan Karnataka) Click Here :https://cetonline.karnataka.gov.in/keawebentry456/apckk/APC_KK19062026kannada.pdf

      For Vacancy (RPC) Details Click Here :https://cetonline.karnataka.gov.in/keawebentry456/apcrpc/APC_CAR_DAR_RPC_1421kannada.pdf

      For Vacancy (Kalyan Karnataka) Details Click Here : https://cetonline.karnataka.gov.in/keawebentry456/apckk/APC_CAR_DAR_KK_179kannada.pdf

      For Online Application (RPC) Click Here :https://cetonline.karnataka.gov.in/KEACAR_DAR_2026/Account/Login

      For Online Application (Kalyan Karnataka) Click Here :https://cetonline.karnataka.gov.in/KEACAR_DAR_2026/Account/Login

       

      Leave a Comment

      Your email address will not be published. Required fields are marked *

      Scroll to Top