ಬೆಂಗಳೂರು ನಗರ ಸಿವಿಲ್ ನ್ಯಾಯಾಲಯ ನೇಮಕಾತಿ 2026

ಬೆಂಗಳೂರು ನಗರ ಸಿವಿಲ್ ನ್ಯಾಯಾಲಯ ಘಟಕದಲ್ಲಿಉಳಿಕೆ ಮೂಲ ವೃಂದದಡಿಯಲ್ಲಿ ಖಾಲಿ ಇರುವ ವಾಹನ ಚಾಲಕ ಹಾಗೂ ಜವಾನ ಹುದ್ದೆಗಳಿಗೆ  ನೇರ ನೇಮಕಾತಿಗಾಗಿ ಅರ್ಜಿ ಆಹ್ವಾನ.Bangalore Copy 1 E1782715654920 1024x613

ಹುದ್ದೆಗಳ ವಿವರ:-

  • ಒಟ್ಟು ಹುದ್ದೆಗಳು: 88
  • ವಾಹನ ಚಾಲಕ (Driver): 07 ಹುದ್ದೆಗಳು
  • ಜವಾನ (Peon): 81 ಹುದ್ದೆಗಳು

ಶೈಕ್ಷಣಿಕ ಅರ್ಹತೆ

ವಾಹನ ಚಾಲಕ:

  • ಎಸ್‌ಎಸ್‌ಎಲ್‌ಸಿ (10ನೇ ತರಗತಿ) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
  • ಚಾಲ್ತಿಯಲ್ಲಿರುವ ಭಾರಿ ಮೋಟಾರು ವಾಹನ (HMV) ಚಾಲನಾ ಪರವಾನಗಿ ಹೊಂದಿರಬೇಕು.

ಜವಾನ:

  • ಎಸ್‌ಎಸ್‌ಎಲ್‌ಸಿ (10ನೇ ತರಗತಿ) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
  • ಕನ್ನಡ ಓದಲು ಹಾಗೂ ಬರೆಯಲು ತಿಳಿದಿರಬೇಕು.

ವಯೋಮಿತಿ (Age Limit)

ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದಂದು 18 ವರ್ಷ ಪೂರೈಸಿರಬೇಕು ಮತ್ತು ಗರಿಷ್ಟ ವಯಸ್ಸು ಈ ಕೆಳಕಂಡಂತೆ ಇರಬೇಕು

  • ಸಾಮಾನ್ಯ ವರ್ಗ-ಸಾಮಾನ್ಯ ವರ್ಗದ ಅಭ್ಯರ್ಥಿಗಳು 40 ವರ್ಷ ಮೀರಿರಬಾರದು.
  • ಹಿಂದುಳಿದ ವರ್ಗಗಳು (2A, 2B, 3A, 3B):-ಅಭರ್ಥಿಗಳು 43 ವರ್ಷ ಮೀರಿರಬಾರದು
  • ಪ್ರವರ್ಗ-1/Sc /St:-ಅಭರ್ಥಿಗಳು 45 ವರ್ಷ ಮೀರಿರಬಾರದು
  • ಕೆ.ಸಿ.ಎಸ್ (ಸಾಮಾನ್ಯ ನೇಮಕಾತಿ) ನಿಯಮಗಳು, 1977 ನಿಯಮ 6(2) ನೇ ನಿಯಮದ ಅನುಸಾರ. ಈ ಕೆಳಗಿನ ಸಂದರ್ಭಗಳಲ್ಲಿ ಸದರಿ ನಿಯಮಗಳಲ್ಲಿ ನಿಗದಿಪಡಿಸಿರುವ ಗರಿಷ್ಟ ವಯೋಮಿತಿಯನ್ನು ಕೆಳಗೆ ತಿಳಿಸಿರುವಷ್ಟರ ಮಟ್ಟಿಗೆ ಸಡಿಲಿಕೆ ಮಾಡಲಾಗುವುದು.(1) ಅಭ್ಯರ್ಥಿಯು ರಾಜ್ಯ ಅಧಿನಿಯಮ ಅಥವಾ ಕೇಂದ್ರ ಅಧಿನಿಯಮದ ಮೇರೆಗೆ ಸ್ಥಾಪಿತವಾದ ಅಥವಾ ರಾಜ್ಯ ಅಥವಾ ಕೇಂದ್ರ ಅಧಿನಿಯಮದಡಿಯಲ್ಲಿ ಸರ್ಕಾರದ ಮೂಲಕ ಸ್ಥಾಪಿತವಾದ ಮತ್ತು ಸರ್ಕಾರದ ಅಧೀನದಲ್ಲಿ ಅಥವಾ ನಿಯಂತ್ರಣದಲ್ಲಿ ಇರುವ ಸರ್ಕಾರಿ ಅಥವಾ ಸ್ಥಳೀಯ ಪ್ರಾಧಿಕಾರ ಅಥವಾ ನಿಗಮದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಕ್ಷದಲ್ಲಿ ಅಥವಾ ಯಾವುದೇ ಹುದ್ದೆಯನ್ನು ಹೊಂದಿದ್ದಲ್ಲಿ ಹಾಗೆ ಸಲ್ಲಿಸಿರುವ ಅವಧಿ ಅಥವಾ 10 ರಷ್ಟುಇವುಗಳಲ್ಲಿ ಯಾವುದು ಕಡಿಮೆಯೋ ಅಷ್ಟು ರ‍್ಷಗಳ ವಯೋಮಿತಿ ಸಡಿಲಿಕೆಗೆ ಅರ್ಹರಾಗಿರುತ್ತಾರೆ.(2). ಮಾಜಿ ಸೈನಿಕರಿಗೆ, ಕೇಂದ್ರ ಸಶಸ್ತ್ರ ಪಡೆಯಲ್ಲಿ ಅವರು ಸೇವೆ ಸಲ್ಲಿಸಿದ ಅವಧಿಯ ವರ್ಷಗಳ ಜೊತೆಗೆ ವರ್ಷಗಳು ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.(3). ಅಭ್ಯರ್ಥಿಯು ದೈಹಿಕ ಅಂಗವಿಕಲತೆ ಹೊಂದಿರುವ ಸಂದರ್ಭಗಳಲ್ಲಿ 10 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.(4). ಅಭ್ಯರ್ಥಿಯು ವಿಧವೆಯಾಗಿರುವ ಸಂದರ್ಭಗಳಲ್ಲಿ 10 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.
  • ಸೂಚನೆ 1: ಕನಿಷ್ಟ ಮತ್ತು ಗರಿಷ್ಟ ವಯೋಮಿತಿಯು ಆನಲೈನನಲ್ಲಿ ಅರ್ಜಿ ಸಲ್ಲಿಸಬೇಕಾದ ಕೊನೆಯ ದಿನಾಂಕವನ್ನು ಆಧರಿಸಿರುತ್ತದೆ.
  • ಸೂಚನೆ 2: ಅರ್ಜಿ ಸಲ್ಲಿಸಲು ನಿಗದಿ ಪಡಿಸಿರುವ ಗರಿಷ್ಟ ವಯೋಮಿತಿಯನ್ನು ಸರ್ಕಾರಿ ಆದೇಶ ಸಂಖ್ಯೆ ಸಿಆಸುಇ | 262 ಸೇನೆನಿ 2025 ದಿನಾಂಕ 29.01.2026 ದಲ್ಲಿ ಆದೇಶಿಸಿರುವಂತೆ ಗರಿಷ್ಟ ವಯೋಮಿತಿಗೆ 05 ವರ್ಷಗಳ ಸಡಿಲಿಕೆಯನ್ನು ಸೇರಿಸಲಾಗಿರುತ್ತದೆ. ವಯೋಮಿತಿ ಸಡಿಲಿಕೆಯು ಈ ಒಂದು ಭಾರಿಗೆ ಮಾತ್ರ ಅನ್ವಯಿಸುತ್ತದೆ.

ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಅರ್ಜಿ ಶುಲ್ಕ:-

  • ಸಾಮಾನ್ಯ ವರ್ಗ:- 300/-
  • ಹಿಂದುಳಿದ ವರ್ಗಗಳು (2A, 2B, 3A, 3B):- 150/-
  • ಪ್ರವರ್ಗ-1/Sc /St/Pwd:- ಶುಲ್ಕ ವಿನಾಯಿತಿ ಇರುತ್ತದೆ.

ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿದ ನಂತರ ಅರ್ಜಿಯಲ್ಲಿ ಸೂಚಿಸಿದಂತಹ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಲೆಕ್ಟ್ ಪೇಜ್ ನಲ್ಲಿ ನೆಟ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ / ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್ ಮೂಲಕ ಆನ್ ಲೈನ್ ಶುಲ್ಕ ಸಂದಾಯ ಮಾಡಬಹುದಾಗಿದೆ.

ವೇತನ ಶ್ರೇಣಿ:-

  • ವಾಹನ ಚಾಲಕ :- 34100-800-35700-900-39300-1000-43300-1125-47800-1250-52800-1375-58300-1500-64300-1650-67600
  • ಜವಾನ:- 27000-650-29600-725-32500-800-35700-900-39300-1000-43300-1125-46675

ಸೇವಾ ಪರಿವೀಕ್ಷಣಾ ಅವಧಿ:-

  • ಅಭ್ಯರ್ಥಿಯು ನೇಮಕಗೊಂಡ ಪಕ್ಷದಲ್ಲಿ ಪ್ರಾರಂಭಿಕವಾಗಿ ಎರಡು ವರ್ಷಗಳ ಅವಧಿಗೆ ಅಥವಾ ಅಗತ್ಯವಿದ್ದರೆ ವಿಸ್ತರಿಸಬಹುದಾದ ಅವಧಿಗೆ ಪರಿವೀಕ್ಷಣಾರ್ಥಿಗಳಾಗಿರುತ್ತಾರೆ.

ಸಂದರ್ಶನ ವಿಧಾನ:-

ವಾಹನ ಚಾಲಕ

  • ಚಾಲಕರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭರ್ಥಿಗಳು, 50 ಅಂಕಗಳ ಅರ್ಹತಾ ಪರೀಕ್ಷೆಗೆ ಹಾಜಾರಾಗಬೇಕು, ಹಾಗೂ ಅರ್ಹತಾ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಒಂದು ಹುದ್ದೆಗೆ 1:25 ಅನುಪಾತದಂತೆ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯುತ್ತಾರೆ, ಸಂದರ್ಶನಕ್ಕೆ ಒಟ್ಟು 10 ಅಂಕಗಳನ್ನು ನಿಗದಿಪಡಿಸಲಾಗಿದೆ.

ಜವಾನ:-

  • ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪಡೆದ ಅಂಕಗಳ ಶೇಕಡಾ ಆಧಾರದ ಮೇಲೆ ಒಂದು ಹುದ್ದೆಗೆ 1:10 ಅನುಪಾತದಂತೆ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ. ಸಂದರ್ಶನಕ್ಕೆ ಒಟ್ಟು 10 ಅಂಕಗಳನ್ನು ನಿಗದಿಪಡಿಸಲಾಗಿದೆ.

ಆಯ್ಕೆ ವಿಧಾನ :-

  • ಕರ್ನಾಟಕ ಅಧೀನ ನ್ಯಾಯಾಲಯಗಳ (ಲಿಪಿಕ ಮತ್ತು ಇತರ ಹುದ್ದೆಗಳು) (ನೇಮಕಾತಿ) ನಿಯಮಗಳು, 1982  ಹಾಗೂ ತಿದ್ದುಪಡಿ ನಿಯಮಗಳು 2007 ಮತ್ತು 2021 ರನ್ವಯ ಸಂದರ್ಶನದಲ್ಲಿ ಪಡೆಯುವ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡುತ್ತಾರೆ.

ದಾಖಲೆಗಳ ಪರಿಶೀಲನೆ

  • ಶೈಕ್ಷಣಿಕ ವಿದ್ಯಾರ್ಹತೆ:- ಅಭ್ಯರ್ಥಿಯು ಎಸ್.ಎಸ್.ಎಲ್.ಸಿ ಮೂಲ ಅಂಕಪಟ್ಟಿ ಅಥವಾ ತತ್ಸಮಾನ ವಿದ್ಯಾರ್ಹತೆಯ ಮೂಲ ಅಂಕಪಟ್ಟಿಯನ್ನು ದಾಖಲೆಗಳ ಪರಿಶೀಲನೆ ಸಮಯದಲ್ಲಿ ಪ್ರಾಧಿಕಾರದ ಮುಂದೆ ಹಾಜರುಪಡಿಸಬೇಕು.
  • ಜನ್ಮ ದಿನಾಂಕಃ- ಅಭ್ಯರ್ಥಿಯು ಎಸ್.ಎಸ್.ಎಲ್.ಸಿ ಮೂಲ ಅಂಕಪಟ್ಟಿ ಅಥವಾ ಮೂಲ ಜನನ ಪ್ರಮಾಣ ಪತ್ರವನ್ನು ದಾಖಲೆಗಳ ಪರಿಶೀಲನೆ ಸಮಯದಲ್ಲಿ ಪ್ರಾಧಿಕಾರದ ಮುದೆ ಹಾಜರುಪಡಿಸಬೇಕು.
  • ಮೀಸಲಾತಿ ಕೋರುವ ಮಾನ್ಯವಿರುವ ಮೂಲ ಪ್ರಮಾಣ ಪತ್ರಗಳು:- ಅಭ್ಯರ್ಥಿಯು ದಾಖಲೆಗಳ ಪರಿಶೀಲನೆ ಸಮಯದಲ್ಲಿ ಪ್ರಾಧಿಕಾರದ ಮುಂದೆ ಹಾಜರುಪಡಿಸಬೇಕು.
  • ಗುರುತಿನ ಪುರಾವೆ:- ಅಭ್ಯರ್ಥಿಯು ದಾಖಲೆಗಳ ಪರಿಶೀಲನೆ ಸಮಯದಲ್ಲಿ ಗುರುತಿನ ಪುರಾವೆಯಾಗಿ ಮೂಲ ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಇತರೆ ದಾಖಲೆಗಳನ್ನು ಪ್ರಾಧಿಕಾರದ ಮುಂದೆ ಹಾಜರುಪಡಿಸಬೇಕು. ಪ್ರಾಧಿಕಾರವು ನಿರ್ದೇಶಿಸಿದಾಗ ಸಂಬಂಧಪಟ್ಟ ದಾಖಲೆಗಳನ್ನು ಅಭ್ಯರ್ಥಿಗಳು ಹಾಜರುಪಡಿಸಬೇಕು.

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಸಾಮಾನ್ಯಸೂಚನೆಗಳು:-

    • ಅಭ್ಯರ್ಥಿಯು ಆನಲೈನ ಮೂಲಕ ಅರ್ಜಿಯನ್ನು ಸಲ್ಲಿಸುವ ಬಯಸಿದ್ದಲ್ಲಿ ಆನ್ ಲೈನ್ ಪೋರ್ಟಲನಲ್ಲಿ ನೀಡಿರುವ ಎಲ್ಲಾ ಸೂಚನೆಗಳನ್ನು ಕಡ್ಡಾಯವಾಗಿ ಓದಿಕೊಂಡು ಅನುಸರಿಸಬೇಕು. ಅಪೂರ್ಣ ಪ್ರಮಾಣದ ಅರ್ಜಿಗಳನ್ನು ಯಾವುದೇ ಪತ್ರವ್ಯವಹಾರಕ್ಕೂ ಅವಕಾಶವಿಲ್ಲದೆ ತಿರಸ್ಕರಿಸಲಾಗುತ್ತದೆ.
    • ಅಭ್ಯರ್ಥಿಯು ಆನಲೈನ ಮೂಲಕ ಅರ್ಜಿಯನ್ನು ಸಲ್ಲಿಸುವ ಸಂಧರ್ಭದಲ್ಲಿ ಸರಿಯಾದ ಇ-ಮೇಲ್ ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು. ತಪ್ಪಾದ ಇ-ಮೇಲ್ ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸಿದಲ್ಲಿ ಅರ್ಜಿಯನ್ನು ತಿದ್ದುಪಡಿ ಮಾಡಲು ಅವಕಾಶವಿರುವುದಿಲ್ಲ.
    • ನೇಮಕಾತಿ ಪ್ರಾಧಿಕಾರದಿಂದ ನೀಡುವ ಸೂಚನೆಗಳನ್ನು/ಯಾವುದೇ ಮಾಹಿತಿಯನ್ನು ಅಭ್ಯರ್ಥಿಗಳು ಆನ್ ಲೈನ್ ಅರ್ಜಿಯಲ್ಲಿ ನಮೂದಿಸಿರುವ ಇ-ಮೇಲ್ ವಿಳಾಸ ಹಾಗೂ ಮೊಬೈಲ್ ಸಂಖ್ಯೆಗೆ ತಿಳಿಸಲಾಗುವುದು. ಒಂದುವೇಳೆ ಅಭ್ಯರ್ಥಿಗಳಿಗೆ ಇ-ಮೇಲ್ ಅಥವಾ ಸಂದೇಶ ತಲುಪದೆ ಇದ್ದಲ್ಲಿ ನೇಮಕಾತಿ ಪ್ರಾಧಿಕಾರವು ಹೊಣೆಯಾಗುವುದಿಲ್ಲ.
    • ಅಭ್ಯರ್ಥಿಯು ಆನ್‌ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸುವ ಹಂತದಲ್ಲಿ ಅಗತ್ಯಪಡಿಸಿರುವ ದಾಖಲೆಗಳನ್ನು ಪ್ರಮಾಣ ಪತ್ರಗಳನ್ನು ಅಪ್‌ಲೋಡ್ ಮಾಡಬೇಕು
    • ಅರ್ಹತಾ ಪರೀಕ್ಷೆಗೆ/ಮೌಖಿಕ ಸಂದರ್ಶನಕ್ಕೆ ನೇಮಕಾತಿ ಪ್ರಾಧಿಕಾರವು ನಿಗದಿಪಡಿಸುವ ಜಾಗಕ್ಕೆ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗಬೇಕು.
    • ಅಭ್ಯರ್ಥಿಗಳು ಅಭ್ಯರ್ಥಿಕೆಯ ಸಂದರ್ಭ‍ದಲ್ಲಿ ಸಿಬ್ಬಂದಿ ಅಥವಾ ಸಿಬ್ಬಂದಿಯೇತರ ಮೂಲಗಳ ಮೂಲಕ ಯಾವುದೇ ರೀತಿಯ ಬಾಹ್ಯ ಬೆಂಬಲವನ್ನು ಪಡೆಯುವ ಪ್ರಯತ್ನ ಮಾಡಿದಲ್ಲಿ ಅಂತಹ ಅಭ್ಯರ್ಥಿಗಳ ನೇಮಕಾತಿಯನ್ನು/ಅಭ್ಯರ್ಥಿಕೆಯನ್ನು ಅನರ್ಹಗೊಳಿಸಲಾಗುವುದು.
    • ದಾಖಲೆಗಳ ಪರಿಶೀಲನೆಯ ಸಂದರ್ಭ‍ದಲ್ಲಿ ಅಭ್ಯರ್ಥಿಯು ಅರ್ಜಿಯಲ್ಲಿ ಒದಗಿಸಿರುವ ಮಾಹಿತಿಯು ಸುಳ್ಳೆಂದು ಕಂಡುಬಂದಲ್ಲಿ ಆತನ/ಆಕೆಯ ಅಭ್ಯರ್ಥಿಕೆಯು ರದ್ದಾಗುತ್ತದೆ ಮತ್ತು ಅವರ ವಿರುದ್ಧ ತಪ್ಪು ಮಾಹಿತಿ ಒದಗಿಸಿರುವುದಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ ವ್ಯವಹರಣೆಯನ್ನು ಜರುಗಿಸುವರು.
    • ಅಭ್ಯರ್ಥಿಗಳು ನಿಗದಿಪಡಿಸಿರುವ ಶುಲ್ಕವನ್ನು ಪಾವತಿ ಮಾಡಿದ ರಶೀದಿಯನ್ನು ಕಡ್ಡಾಯವಾಗಿ ಆನಲೈನನಲ್ಲಿ ಅಪ್ ಲೋಡ್ ಮಾಡಬೇಕು
    • ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದ್ದಲ್ಲಿ, ಅಭ್ಯರ್ಥಿಯು ಕಡೆಯದಾಗಿ ಸಲ್ಲಿಸಿದ ಅರ್ಜಿ‍ಯನ್ನು ಮಾತ್ರ ಪರಿಗಣಿಸಲಾಗುವುದು ಎಂಬ ಅಂಶಗಳನ್ನು ಗಮನದಲ್ಲಿ ಇಟ್ಟ್ಟುಕೊಳ್ಳಬೇಕು ಕೊನೆಯ ಅರ್ಜಿಯನ್ನು ಬಿಟ್ಟು ಬೇರೆ ಯಾವುದೇ ಅರ್ಜಿಯನ್ನು ಪರಿಗಣಿಸಲು, ಸಲ್ಲಿಸುವ ಕೋರಿಕೆಗಳನ್ನು ಪರಿಗಣಿಸುವುದಿಲ್ಲ.

ಆನಲೈನ್ ಮುಖಾಂತರ ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ವೇಳಾಪಟ್ಟಿ:-

  • ಆನಲೈನ್ ಮುಖಾಂತರ  ಅರ್ಜಿ ಸಲ್ಲಿಕೆ ಆರಂಭ:- 01-07-2026
  • ಆನಲೈನ್ ಮುಖಾಂತರ  ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 30-07-2026
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ:- 30-07-2026

ಆನಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-

  • 10 ನೇ ತರಗತಿ ಅಂಕಪಟ್ಟಿ
  • ಭಾರಿ ವಾಹನ ಚಾಲನಾ ಪ್ರಮಾಣ ಪತ್ರ (ವಾಹನ ಚಾಲಕ ಹುದ್ದೆಗೆ ಮಾತ್ರ)
  • ಜಾತಿ ಪ್ರಮಾಣ ಪತ್ರ
  • ಮೀಸಲಾತಿ ಪ್ರಮಾಣ ಪತ್ರಗಳು (ಕನ್ನಡ/ಗ್ರಾಮೀಣ/ಮುಳುಗಡೆ)
  • ಅಂಗವೀಕಲ್ ಪ್ರಮಾಣ ಪತ್ರ (ಅಂಗವೀಕಲ ಅಭ್ಯರ್ಥಿಗಳಿಗೆ ಮಾತ್ರ)
  • ಮೊಬೈಲ್ ಸಂಖ್ಯೆ & ಇ-ಮೇಲ್ ಐಡಿ
  • ಇತ್ತೀಚಿನ ಭಾವಚಿತ್ರ & ಸಹಿ

ಅಧಿಸೂಚನಗಾಗಿ ಇಲ್ಲಿ ಕ್ಲಿಕ ಮಾಡಿ:- https://cdnbbsr.s3waas.gov.in/s3ec01366f0bc7bd1d4bf414073cabbadf/uploads/2026/06/2026062748.pdf

ವಾಹನ ಚಾಲಕ ಹುದ್ದೆಗೆ ಆನಲೈನ ಮುಖಾಂತರ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ ಮಾಡಿhttps://judiciary.karnataka.gov.in/recruitment/district/ccc/drr/home.php

ಜವಾನ ಹುದ್ದೆಗೆ ಆನಲೈನ ಮುಖಾಂತರ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ ಮಾಡಿ https://judiciary.karnataka.gov.in/recruitment/district/ccc/gpr/home.php

 

Leave a Comment

Your email address will not be published. Required fields are marked *

Scroll to Top