ಉತ್ತರ ಕನ್ನಡ, ಕಾರವಾರ ಪ್ರಧಾನ ಜಿಲ್ಲಾ & ಸತ್ರ ನ್ಯಾಯಾಲಯ ಘಟಕದ ಅಧೀನದಲ್ಲಿ ಬರುವ ನ್ಯಾಯಾಲಯಗಳಲ್ಲಿ ಖಾಲಿ ಇರುವ ಆದೇಶ ಜಾರಿಕಾರರು ಮತ್ತು ಜವಾನ ಹುದ್ದೆಗಳ ನೇರ-ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿ, ಆನಲೈನ ಮುಖಾಂತರ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ:-
- ಒಟ್ಟು ಹುದ್ದೆಗಳು: 78
- ಆದೇಶ ಜಾರಿಕಾರರು (Process Sercer):-13 ಹುದ್ದೆಗಳು
- ಜವಾನ (Peon) :- 65 ಹುದ್ದೆಗಳು
ಪ್ರಮುಖ ದಿನಾಂಕಗಳು:-
- ಅಧಿಸೂಚನೆಯನ್ನು ಹೊರಡಿಸಿದ ದಿನಾಂಕ:05 ಅಗಸ್ಟ್ 2026
- ಆನಲೈನ್ ಮುಖಾಂತರ ಅರ್ಜಿ ಸಲ್ಲಿಕೆ ಆರಂಭ:- 17 ಅಗಸ್ಟ್ 2026
- ಆನಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 16 ಸಪ್ಟೆಂಬರ್ 2026
- ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ:- 17 ಸಪ್ಟೆಂಬರ್ 2026
ವಿಧ್ಯಾರ್ಹತೆ:-
ಆದೇಶ ಜಾರಿಕಾರರು:
- ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
- ಭಾರಿ/ಹಗುರ ಡ್ರೈವಿಂಗ್ ಲೈಸೆನ್ಸ್ ಹೊಂದಿರುವುವರಿಗೆ ಆದ್ಯತೆ ನೀಡಲಾಗುತ್ತದೆ.
- ಅಭ್ಯರ್ಥಿಗೆ ಕನ್ನಡ ಓದಲು ಹಾಗೂ ಬರೆಯಲು ಬರಬೇಕು
ಜವಾನ:
- ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
- ಅಭ್ಯರ್ಥಿಗೆ ಕನ್ನಡ ಓದಲು ಹಾಗೂ ಬರೆಯಲು ಬರಬೇಕು
ವಯೋಮಿತಿ (Age Limit)
ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದಂದು 18 ವರ್ಷ ಪೂರೈಸಿರಬೇಕು ಮತ್ತು ಗರಿಷ್ಟ ವಯಸ್ಸು ಈ ಕೆಳಕಂಡಂತೆ ಇರಬೇಕು
- ಸಾಮಾನ್ಯ ವರ್ಗ- 40 ವರ್ಷ ಮೀರಿರಬಾರದು.
- ಹಿಂದುಳಿದ ವರ್ಗಗಳು (2A, 2B, 3A, 3B):- 43 ವರ್ಷ ಮೀರಿರಬಾರದು
- ಪ್ರವರ್ಗ-1/Sc /St:- 45 ವರ್ಷ ಮೀರಿರಬಾರದು
ಕೆ.ಸಿ.ಎಸ್. (ಸಾಮಾನ್ಯ ನೇಮಕಾತಿ) ನಿಯಮಗಳು, 1977 ನಿಯಮ 6(2) ನೇ ನಿಯಮದ ಅನುಸಾರ, ಈ ಕೆಳಗಿನ ಸಂದರ್ಭಗಳಲ್ಲಿ ಸದರಿ ನಿಯಮಗಳಲ್ಲಿ ನಿಗದಿಪಿಡಿಸಿರುವ ಗರಿಷ್ಟ ವಯೋಮಿತಿಯನ್ನು ಈ ಕೆಳಗೆ ತಿಳಿಸಿರುವಷ್ಟರ ಮಟ್ಟಿಗೆ ಸಡಿಲಿಕೆ ಮಾಡಲಾಗುತ್ತದೆ.
- ಅಭ್ಯರ್ಥಿಯು ರಾಜ್ಯ ಅಧಿನಿಯಮ ಅಥವಾ ಕೇಂದ್ರ ಅಧಿನಿಯಮದ ಮೇರೆಗೆ ಸ್ಥಾಪಿತವಾದ ಅಥವಾ ರಾಜ್ಯ ಅಥವಾ ಕೇಂದ್ರ ಅಧಿನಿಯಮದಡಿಯಲ್ಲಿ ಸರ್ಕಾರದ ಮೂಲಕ ಸ್ಥಾಪಿತವಾದ ಮತ್ತು ಸರ್ಕಾರದ ಅಧೀನದಲ್ಲಿ ಅಥವಾ ನಿಯಂತ್ರಣದಲ್ಲಿ ಇರುವ ಸರ್ಕಾರಿ ಅಥವಾ ಸ್ಥಳೀಯ ಪ್ರಾಧಿಕಾರ ಅಥವಾ ನಿಗಮದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಕ್ಷದಲ್ಲಿ ಅಥವಾ ಯಾವುದೇ ಹುದ್ದೆಯನ್ನು ಹೊಂದಿದ್ದಲ್ಲಿ ಅವರು ಸಲ್ಲಿಸಿರುವ ಅವಧಿ ಅಥವಾ 10 ವರ್ಷ ಇವುಗಳಲ್ಲಿ ಯಾವುದು ಕಡಿಮೆಯೋ ಅಷ್ಟು ವರ್ಷಗಳ ವಯೋಮಿತಿ ಸಡಿಲಿಕೆಗೆ ಅರ್ಹರಾಗಿರುತ್ತಾರೆ.
- ಮಾಜಿ ಸೈನಿಕರಿಗೆ, ಕೇಂದ್ರ ಸಶಸ್ತ್ರ ಪಡೆಯಲ್ಲಿ ಅವರು ಸೇವೆ ಸಲ್ಲಿಸಿದ ಅವಧಿಯ ವರ್ಷಗಳ ಜೊತೆಗೆ 03 ವರ್ಷಗಳು ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.
- ಅಭ್ಯರ್ಥಿಯು ದೈಹಿಕ ಅಂಗವಿಕಲತೆ ಹೊಂದಿರುವ ಸಂದರ್ಭದಲ್ಲಿ 10 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.
- ಅಭ್ಯರ್ಥಿಯು ವಿಧವೆಯಾಗಿರುವ ಸಂದರ್ಭದಲ್ಲಿ 10 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ
ಸೂಚನೆ 1. ಕನಿಷ್ಟ ಮತ್ತು ಗರಿಷ್ಟ ವಯೋಮಿತಿಯು ಆನಲೈನನಲ್ಲಿ ಅರ್ಜಿ ಸಲ್ಲಿಸಬೇಕಾದ ಕೊನೆಯ ದಿನಾಂಕವನ್ನು ಆಧರಿಸಿರುತ್ತದೆ.
ಸೂಚನೆ 2. ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಗರಿಷ್ಟ ವಯೋಮಿತಿಯನ್ನು ಸರ್ಕಾರಿ ಆದೇಶ ಸಂಖ್ಯೆ ಸಿಆಸುಇ 262 ಸೇನೆನಿ 2025 ದಿನಾಂಕ 29.01.2026 ದಲ್ಲಿ ಆದೇಶಿಸಿರುವಂತೆ ಗರಿಷ್ಟ ವಯೋಮಿತಿಗೆ 05 ವರ್ಷಗಳ ಸಡಿಲಿಕೆಯನ್ನು ಸೇರಿಸಲಾಗಿರುತ್ತದೆ. ವಯೋಮಿತಿ ಸಡಿಲಿಕೆಯು ಈ ಒಂದು ಭಾರಿಗೆ ಮಾತ್ರ ಅನ್ವಯವಾಗವಾಗುತ್ತದೆ.
ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಅರ್ಜಿ ಶುಲ್ಕ:-
- ಸಾಮಾನ್ಯ ವರ್ಗ :- 300/-
- ಹಿಂದುಳಿದ ವರ್ಗಗಳು (2A, 2B, 3A, 3B):- 150/-
- ಪ್ರವರ್ಗ-1/Sc /St/Pwd:- ಶುಲ್ಕ ವಿನಾಯಿತಿ ಇರುತ್ತದೆ.
ಅರ್ಜಿ ಶುಲ್ಕ ಪಾವತಿಸುವ ವಿಧಾನ:-
- ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿದ ನಂತರ ಅರ್ಜಿಯಲ್ಲಿ ಸೂಚಿಸಿದಂತಹ ಸ್ಟೇ ಟ್ ಬ್ಯಾಂಕ್ ಆಫ್ ಇಂಡಿಯಾ ಕಲೆಕ್ಟ್ ಪೇಜ್ ನಲ್ಲಿ ನೆಟ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್/ಡೆಬಿಟ್ ಕಾರ್ಡ್ /ಕ್ರೆಡಿಟ್ ಕಾರ್ಡ್ ಮೂಲಕ ಆನ್ ಲೈನ್ ಶುಲ್ಕ ಸಂದಾಯ ಮಾಡಬೇಕಾಗುತ್ತದೆ.
- ಅರ್ಜಿ ಶುಲ್ಕವನ್ನು ” ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಉತ್ತರಕತ್ತ ನ್ನಡ, ಕಾರವಾರ ಇವರ ಹೆಸರಿಗೆ ಮಾತ್ರ ಪಾವತಿಸಬೇಕು ಹಾಗೂ ಬೇರೆ ಯಾವುದೇ ಹೆಸರಿನಲ್ಲಿ ಪಾವತಿಸಿದ ಶುಲ್ಕವನ್ನು ಅರ್ಜಿಗೆ ಪರಿಗಣಿಸಲಾಗುವುದಿಲ್ಲ ಹಾಗೂ ಅಂತಹ ಅರ್ಜಿಯು ತಿರಸ್ಕಾರಗೊಳ್ಳುತ್ತದೆ.
- ಆನಲೈನ ಶುಲ್ಕ ಸಂದಾಯ ಹೊರತುಪಡಿಸಿ ಇನ್ನೂ ಯಾವುದೇ ರೀತಿಯ ಅಂದರೆ ಡಿಮ್ಯಾಂಡ್ ಡ್ರಾಪ್ಟ್/ಪೋಸ್ಟಲ್ ಆರ್ಡರ್/ಮನಿ ಆರ್ಡರ್/ಚೆಕ್/ನಗದು ಹಾಗೂ ಇನ್ನಿತರ ಯಾವುದೇ ನಮೂನೆಗಳಲ್ಲಿ ಶುಲ್ಕವನ್ನು ಸ್ವೀಕರಿಸಲು ಅವಕಾಶವಿರುವುದಿಲ್ಲ.
- ಒಮ್ಮೆ ಪಾವತಿ ಮಾಡಿದ ಶುಲ್ಕವನ್ನು ಯಾವುದೇ ಕಾರಣಕ್ಕೂ/ಸಂದರ್ಭದಲ್ಲೂ ಹಿಂತಿರುಗಿಸಲು ಆಗುವುದಿಲ್ಲ.
- ನಿಗದಿತ ಶುಲ್ಕ ಪಾವತಿಸದ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ.
- ಶುಲ್ಕ ಪಾವತಿಯಾಗಿರುವ ಬಗ್ಗೆ ಎಸ್.ಬಿ.ಐ. ಬ್ಯಾಂಕಿನೊಡನೆ ಮಾತ್ರ ಪರಿಶೀಲಿಸಿ ಖಚಿತ ಪಡಿಸಿಕೊಳ್ಳತಕ್ಕದ್ದು. ಶುಲ್ಕ ಪಾವತಿಸುವ ಪ್ರಕ್ರಿಯೆಯಲ್ಲಿ ಉಂಟಾಗುವ ವೈಪಲ್ಯಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಉತ್ತರಕತ್ತ ನ್ನಡ, ಕಾರವಾರ ಕಛೇರಿಯು ಜವಾಬ್ದಾರಿಯಾಗಿರುವುದಿಲ್ಲ.
ವೇತನ ಶ್ರೇಣಿ:-
- ಆದೇಶ ಜಾರಿಕಾರರು :-31775-725-32500-800-35700-900-39300-1000-43300-1125-47800-1250-52800-1375-58300-1500-61300 ಹಾಗೂ ಇತರೆ ಲಭ್ಯವಿರುವ ಭತ್ಯೆಗಳು
- ಜವಾನ :- 27000-650-29600-725-32500-800-35700-900-39300-1000-43300-1125-46675 ಹಾಗೂ ಇತರೆ ಲಭ್ಯವಿರುವ ಭತ್ಯೆಗಳು
ನೇಮಕಾತಿ ವಿಧಾನ:-
- ಕರ್ನಾಟಕ ಅಧೀನ ನ್ಯಾಯಾಲಯಗಳ (ಲಿಪಿಕ ಮತ್ತು ಇತರ ಹುದ್ದೆಗಳು) (ನೇಮಕಾತಿ) ನಿಯಮಗಳು 1982 ಹಾಗೂ ತಿದ್ದುಪಡಿ ನಿಯಮಗಳು 2007 ಮತ್ತು 2001
- ಸಂದರ್ಶನದಲ್ಲಿ ಪಡೆಯುವ ಅಂಕಗಳ ಆಧಾರದ ಮೇಲೆ ನೇಮಕಾತಿ ಮಾಡಲಾಗುತ್ತದೆ.
ಆದೇಶ ಜಾರಿಕಾರರು:-
- ಆದೇಶ ಜಾರಿಕಾರರ ಹುದ್ದೆಗೆ ಎಸ್.ಎಸ್.ಎಲ್.ಸಿ.ಯಲ್ಲಿ ಗಳಿಸಿರುವ ಒಟ್ಟು ಶೇಕಡಾವಾರು ಅಂಕಗಳ ಆಧಾರದ ಮೇಲೆ ಒಂದು ಹುದ್ದೆಗೆ 25 ಅಭ್ಯರ್ಥಿಗಳಂತೆ (1:25ರ ಅನುಪಾತದಲ್ಲಿ) ಅತಿ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳನ್ನು ಪ್ರಕಟಿಸಿರುವ ಹುದ್ದೆಗಳಿಗೆ ಅನುಗುಣವಾಗಿ ಸಂದರ್ಶನಕ್ಕೆ ಕರೆಯಲಾಗುತ್ತದೆ ಮತ್ತು ಸಂದರ್ಶನದಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ (ಸಂದರ್ಶನವು 10 ಅಂಕಗಳನ್ನು ಒಳಗೊಂಡಿರುತ್ತದೆ.)
- ಸಂದರ್ಶನಕ್ಕೆ ಕರೆಯಲಾಗುವ ಅಭ್ಯರ್ಥಿಗೆ ಕನ್ನಡದಲ್ಲಿ ಓದುವ ಹಾಗೂ ಬರೆಯುವ ಬಗ್ಗೆ ಪ್ರವೀಣತೆ ಮತ್ತು ಸಾಮಾನ್ಯ ಜ್ಞಾನದ ತಿಳುವಳಿಕೆಯ ಬಗ್ಗೆ ಪರೀಕ್ಷಿಸಲಾಗುತ್ತದೆ.
ಜವಾನರು:-
- ಜವಾನರ ಹುದ್ದೆಗೆ ಎಸ್.ಎಸ್.ಎಲ್.ಸಿ.ಯಲ್ಲಿ ಗಳಿಸಿರುವ ಒಟ್ಟು ಶೇಕಡಾವಾರು ಅಂಕಗಳ ಆಧಾರದ ಮೇಲೆ ಒಂದು ಹುದ್ದೆಗೆ 10 ಅಭ್ಯರ್ಥಿಗಳಂತೆ (1:10ರ ಅನುಪಾತದಲ್ಲಿ) ಅತಿ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳನ್ನು ಪ್ರಕಟಿಸಿರುವ ಹುದ್ದೆಗಳಿಗೆ ಅನುಗುಣವಾಗಿ ಸಂದರ್ಶನಕ್ಕೆ ಕರೆಯಲಾಗುತ್ತದೆ ಮತ್ತು ಸಂದರ್ಶನದಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. (ಸಂದರ್ಶನವು 10 ಅಂಕಗಳನ್ನು ಒಳಗೊಂಡಿರುತ್ತದೆ.)
ಪರಿವೀಕ್ಷಣಾ ಅವಧಿ:-
- ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕ ಸೇವಾ ನಿಯಮ (ಪ್ರೊಬೇಷನ್ ನಿಯಮಗಳು 1977ರ ಪ್ರಕಾರ 2 ವರ್ಷಗಳ ಕಾಲ ಪ್ರೊಬೇಷನರಿ ಅವಧಿಯಲ್ಲಿರುತ್ತಾರೆ. ಈ ಅವಧಿಯಲ್ಲಿ ಅಭ್ಯರ್ಥಿಗಳು ಹುದ್ದೆಗೆ ನಿಗದಿಪಡಿಸಿದ ಇಲಾಖಾ ಪರೀಕ್ಷೆಗಳಲ್ಲಿ ಮತ್ತು ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು.
ಪಿಂಚಣಿ ಸೌಲಭ್ಯ:-
- ಸರ್ಕಾರದ ಆದೇಶ ಸಂಖ್ಯೆ: ಎಫ್.ಡಿ (ಎಸ್.ಪಿ.ಎಲ್)/04/ಪಿಇಟಿ/05, ದಿನಾಂಕ: 31.03.2006 ರಂತೆ ಪಿಂಚಣಿ ಸೌಲಭ್ಯ ಅನ್ವಯವಾಗುತ್ತದೆ.
ದಾಖಲೆಗಳ ಪರಿಶೀಲನೆ:-
- ಶೈಕ್ಷಣಿಕ ವಿದ್ಯಾರ್ಹತೆ – ಅಭ್ಯರ್ಥಿಯು ಎಸ್.ಎಸ್.ಎಲ್.ಸಿ ಮೂಲ ಅಂಕಪಟ್ಟಿ ಅಥವಾ ತತ್ಸಮಾನ ವಿದ್ಯಾರ್ಹತೆಯ ಮೂಲ ಅಂಕಪಟ್ಟಿಯನ್ನು ದಾಖಲೆಗಳ ಪರಿಶೀಲನೆ ಸಮಯದಲ್ಲಿ ನೇಮಕಾತಿ ಪ್ರಾಧಿಕಾರದ ಮುಂದೆ ಕಡ್ಡಾಯವಾಗಿ ಹಾಜರುಪಡಿಸಬೇಕು.
- ಜನ್ಮ ದಿನಾಂಕ – ಅಭ್ಯರ್ಥಿಯು ಎಸ್.ಎಸ್.ಎಲ್.ಸಿ ಮೂಲ ಅಂಕಪಟ್ಟಿಅಥವಾ ಮೂಲ ಜನನ ಪ್ರಮಾಣ ಪತ್ರವನ್ನು ದಾಖಲೆಗಳ ಪರಿಶೀಲನೆ ಸಮಯದಲ್ಲಿ ನೇಮಕಾತಿ ಪ್ರಾಧಿಕಾರದ ಮುದೆ ಹಾಜರುಪಡಿಸಬೇಕು.
- ಮಿಸಲಾತಿ ಕೋರಲು ಚಾಲ್ತಿಯಲ್ಲಿರುವ ಮೂಲ ಪ್ರಮಾಣಪತ್ರಗಳನ್ನು ಅಭ್ಯರ್ಥಿಯು ದಾಖಲೆಗಳ ಪರಿಶೀಲನೆ ಸಮಯದಲ್ಲಿ ನೇಮಕಾತಿ ಪ್ರಾಧಿಕಾರದ ಮುದೆ ಹಾಜರುಪಡಿಸಬೇಕು.
- ಗುರುತಿನ ಪುರಾವೆ:-ಅಭ್ಯರ್ಥಿಯು ದಾಖಲೆಗಳ ಪರಿಶೀಲನೆ ಸಮಯದಲ್ಲಿ ಗುರುತಿನ ಪುರಾವೆಯಾಗಿ ಮೂಲ ಆಧಾರ್ ಕಾರ್ಡ, ಚುನಾವಣಾ ಗುರುತಿನ ಚೀಟಿ ಇತರೆ ದಾಖಲೆಗಳನ್ನು ನೇಮಕಾತಿ ಪ್ರಾಧಿಕಾರದ ಮುದೆ ಹಾಜರುಪಡಿಸಬೇಕು.
ಅರ್ಜಿ ಸಲ್ಲಿಸುವ ವಿಧಾನ:-
- ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಉತ್ತರಕತ್ತ ನ್ನಡ, ಕಾರವಾರ ಕಚೇರಿಯ ಅಧಿಕೃತ ಜಾಲತಾಣವಾದ https:// uttarakannada dcourts gov in notice category recruitments/ ಅಥವಾ https:// uttarakannada.dcourts.gov.in/online-recruitment/ ನಲ್ಲಿ ನೀಡಲಾದ ಲಿಂಕ್ ಮೂಲಕ ಆನಲೈನನಲ್ಲಿ ದಿನಾಂಕಃ17.08.2026 ರಿಂದ ದಿನಾಂಕಃ 16.09.2026 ರ ರಾತ್ರಿ 11.59 ರವರೆಗೆ ಮಾತ್ರ ಸಲ್ಲಿಸಬಹುದಾಗಿದೆ.
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಪೂರ್ವ ಗಮನಿಸಬೇಕಾದ ಸೂಚನೆಗಳು:-
- ಆನಲೈನ ಮೂಲಕ ಅರ್ಜಿಯನ್ನು ಸಲ್ಲಿಸುವ ಮೊದಲು ಆನಲೈನ ಪೋರ್ಟಲ್ ನಲ್ಲಿ ನೀಡಿರುವ ಎಲ್ಲಾ ಸೂಚನೆಗಳನ್ನು ಕಡ್ಡಾಯವಾಗಿ ಓದಿಕೊಂಡು ಅನುಸರಿಸಬೇಕು. ಅಪೂರ್ಣ ಪ್ರಮಾಣದ ಅರ್ಜಿಗಳನ್ನು ಯಾವುದೇ ಪತ್ರ ವ್ಯವಹಾರಕ್ಕೆ ಅವಕಾಶ ನೀಡದೇ ತಿರಸ್ಕರಿಸಲಾಗುತ್ತದೆ.
- ಅಭ್ಯರ್ಥಿಯು ಸರಿಯಾದ ಇ-ಮೇಲ್ ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ಅರ್ಜಿಯಲ್ಲಿ ನಮೂದಿಸಬೇಕು. ಅಭ್ಯರ್ಥಿಯು ಒಂದು ವೇಳೆ ತಪ್ಪಾದ ಇ-ಮೇಲ್ ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸಿದಲ್ಲಿ ಯಾವುದೇ ತಿದ್ದುಪಡಿಗೆ ಅವಕಾಶವಿರುವುದಿಲ್ಲ.
- ನೇಮಕಾತಿ ಪ್ರಾಧಿಕಾರದಿಂದ ನೀಡುವ ಸೂಚನೆ / ಯಾವುದೇ ಮಾಹಿತಿಯನ್ನು ಅಭ್ಯರ್ಥಿಗಳು ಆನಲೈನ ಅರ್ಜಿಯಲ್ಲಿ ನಮೂದಿಸಿರುವ ಇ-ಮೇಲ್ ವಿಳಾಸ ಹಾಗೂ ಮೊಬೈಲ್ ಸಂಖ್ಯೆಗೆ ಕಲೂಹಿಸಲಾಗುತ್ತದೆ. ಒಂದು ವೇಳೆ ಅಭ್ಯರ್ಥಿಗಳಿಗೆ ಇಮೇಲ್ ಅಥವಾ ಸಂದೇಶ ತಲುಪದೇ ಇದ್ದಲ್ಲಿ ನ್ಯಾಯಾಲಯ ನೇಮಕಾತಿ ಪ್ರಾಧಿಕಾರವು ಹೊಣೆಯಾಗಿರುವುದಿಲ್ಲ.
- ಅಭ್ಯರ್ಥಿಯು ಆನ್ಲೈನ್ ಅರ್ಜಿಯನ್ನು ಸಲ್ಲಿಸುವ ಹಂತದಲ್ಲಿ ಅಗತ್ಯಪಡಿಸಿರುವ ದಾಖಲೆಗಳನ್ನು /ಪ್ರಮಾಣ ಪತ್ರಗಳತ್ರ ನ್ನು ಕಡ್ಡಾಯವಾಗಿ ಅಪ್ಲೋಡ್ ಮಾಡಬೇಕು.
- ಅರ್ಹತಾ ಪರೀಕ್ಷೆಗೆ / ಮೌಖಿಕ ಸಂದರ್ಶನಕ್ಕೆ ಉತ್ತರ ಕನ್ನಡ (ಕಾರವಾರ) ಜಿಲ್ಲಾ ನ್ಯಾಯಾಲಯ ಕಛೇರಿಯು ನಿಗದಿಪಡಿಸುವ ಜಾಗಕ್ಕೆ ಅಭ್ಯರ್ಥಿಗಳು ತಮ್ಮ ಸ್ವಂ ತ ಖರ್ಚಿನಲ್ಲಿ ಹಾಜರಾಗಬೇಕಾಗುತ್ತದೆ.
- ಅಭ್ಯರ್ಥಿಗಳು ಆಯ್ಕೆ ಪ್ರಕ್ರಿಯೆಯ ಸಂದರ್ಭದಲ್ಲಿ ಸಿಬ್ಬಂದಿ ಅಥವಾ ಸಿಬ್ಬಂದಿಯೇತರ ಮೂಲಗಳ ಮೂಲಕ ಯಾವುದೇ ರೀತಿಯ ಬಾಹ್ಯ ಬೆಂಬಲವನ್ನು ಪಡೆಯುವ ಪ್ರಯತ್ನ ಮಾಡಿದಲ್ಲಿ, ಅಂತಹ ಅಭ್ಯರ್ಥಿಗಳ ನೇಮಕಾತಿಯನ್ನು / ಅಭ್ಯರ್ಥಿಕೆಯನ್ನು ಅನರ್ಹಗೊಳಿಸಲಾಗುತ್ತದೆ.
- ದಾಖಲೆಗಳ ಪರಿಶೀಲನೆಯ ಸಂದರ್ಭದಲ್ಲಿ ಅಭ್ಯರ್ಥಿಯು ಅರ್ಜಿಯಲ್ಲಿ ಒದಗಿಸಿರುವ ಮಾಹಿತಿಯು ಸುಳ್ಳೆಂದು ಕಂಡುಬಂದಲ್ಲಿ ಆತನ/ಆಕೆಯ ಅಭ್ಯರ್ಥಿತನವು ರದ್ದಾಗುತ್ತದೆ, ಮತ್ತು ಅವರ ವಿರುದ್ದ ತಪ್ಪು ಮಾಹಿತಿ ಒದಗಿಸಿರುವುದಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ ಮೊಕದ್ದಮೆಯನ್ನು ಜರುಗಿಸಲಾಗುತ್ತದೆ.
- ಅಭ್ಯರ್ಥಿಯು ನಿಗದಿಪಡಿಸಿರುವ ಶುಲ್ಕವನ್ನು ಪಾವತಿ ಮಾಡಿದ ರಶೀದಿಯನ್ನು ತಪ್ಪದೇ ಕಡ್ಡಾಯವಾಗಿ ಅಪ್ ಲೋಡ್ ಮಾಡಬೇಕು.
- ಅಭ್ಯರ್ಥಿಯು ಒಂದಕ್ಕಿಂತ ಹೆಚ್ಚು ಆನಲೈನ್ ಅರ್ಜಿಗಳನ್ನು ಸಲ್ಲಿಸಿದ್ದಲ್ಲಿ ಅಭ್ಯರ್ಥಿಯು ಕೋನೆಯದಾಗಿ ಸಲ್ಲಿಸಿದ ಅರ್ಜಿಯನ್ನು ಮಾತ್ರ ಪರಿಗಣಿಸಲಾಗುತ್ತದೆ ಎಂಬುದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು, ಕೊನೆಯ ಅರ್ಜಿಯನ್ನು ಬಿಟ್ಟು ಬೇರೆ ಯಾವುದೇ ಅರ್ಜಿ ಪರಿಗಣಿಸಲು, ಸಲ್ಲಿಸುವ ಕೋರಿಕೆಗಳನ್ನು ಪರಿಗಣಿಸಲಾಗುವುದಿಲ್ಲ.
ಆನಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
- 10 ನೇ ತರಗತಿ ಅಂಕಪಟ್ಟಿ
- ಚಾಲನಾ ಪರವಾಣಗಿ ಪ್ರಮಾಣ ಪತ್ರ (ಆದೇಶ ಜಾರಿಕಾರರ ಹುದ್ದೆಗೆ ಮಾತ್ರ)
- ಜಾತಿ & ಆದಾಯ ಪ್ರಮಾಣ ಪತ್ರ
- ಮೀಸಲಾತಿ ಪ್ರಮಾಣ ಪತ್ರಗಳು (ಕನ್ನಡ/ಗ್ರಾಮೀಣ/ಮುಳುಗಡೆ)
- ಅಂಗವೀಕಲ್ ಪ್ರಮಾಣ ಪತ್ರ (ಅಂಗವೀಕಲ ಅಭ್ಯರ್ಥಿಗಳಿಗೆ ಮಾತ್ರ)
- ಮೊಬೈಲ್ ಸಂಖ್ಯೆ & ಇ–ಮೇಲ್ ಐಡಿ
- ಇತ್ತೀಚಿನ White Background ಭಾವಚಿತ್ರ & ಸಹಿ
ಆದೇಶ ಜಾರಿಕಾರರು & ಜವಾನ ಹುದ್ದೆಗಳ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ ಮಾಡಿhttps://cdnbbsr.s3waas.gov.in/s3ec01e5522f7ac7cd76f19b396595c9c2/uploads/2026/08/2026080623.pdf
ಆದೇಶ ಜಾರಿಕಾರರು ಹುದ್ದೆಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ ಮಾಡಿ https://uttarakannada.dcourts.gov.in/notice-category/recruitments/
ಜವಾನ ಹುದ್ದೆಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ ಮಾಡಿ https://uttarakannada.dcourts.gov.in/notice-category/recruitments/



