ಬೆಂಗಳೂರು ದಕ್ಷಿಣ ಜಿಲ್ಲೆ (ರಾಮನಗರ) ನ್ಯಾಯಾಲಯ ನೇಮಕಾತಿ-2026

ಬೆಂಗಳೂರು ದಕ್ಷಿಣ ಜಿಲ್ಲೆ (ರಾಮನಗರ) ಪ್ರಧಾನ ಜಿಲ್ಲಾ & ಸತ್ರ ನ್ಯಾಯಾಲಯ ಘಟಕದ ಅಧೀನದಲ್ಲಿ ಬರುವ ನ್ಯಾಯಾಲಯಗಳಲ್ಲಿ ಖಾಲಿ ಇರುವ ಬೆರಳಚ್ಚುಗಾರರು, ಬೆರಳಚ್ಚು-ನಕಲುಗಾರರು, ಆದೇಶ ಜಾರಿಕಾರರು ಮತ್ತು ಜವಾನ ಹುದ್ದೆಗಳ ನೇರ-ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿ, ಆನಲೈನ ಮುಖಾಂತರ ಅರ್ಜಿ ಆಹ್ವಾನಿಸಲಾಗಿದೆ.ramanagar.dist.court.recruitment

ಹುದ್ದೆಗಳ ವಿವರ:-

  • ಒಟ್ಟು ಹುದ್ದೆಗಳು: 55
  • ಬೆರಳಚ್ಚುಗಾರರು (Typist): 10 ಹುದ್ದೆಗಳು
  • ಬೆರಳಚ್ಚು-ನಕಲುಗಾರರು (Typist-Copyist): 01 ಹುದ್ದೆಗಳು
  • ಆದೇಶ ಜಾರಿಕಾರರು (Process Server):-10  ಹುದ್ದೆಗಳು
  • ಜವಾನ (Peon) :- 34 ಹುದ್ದೆಗಳು (30 ಹೊಸ ಹುದ್ದೆಗಳು+04 ಬ್ಯಾಕಲಾಗ್)

ಪ್ರಮುಖ ದಿನಾಂಕಗಳು:-

  • ಅಧಿಸೂಚನೆಯನ್ನು ಪ್ರಕಟಿಸಿದ ದಿನಾಂಕ:24 ಜುಲೈ 2026
  • ಆನಲೈನ್ ಮುಖಾಂತರ  ಅರ್ಜಿ ಸಲ್ಲಿಕೆ ಆರಂಭ:- 30 ಜುಲೈ 2026
  • ಆನಲೈನ್ ಮುಖಾಂತರ  ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 31 ಅಗಸ್ಟ್ 2026
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ:- 01 ಸಪ್ಟೆಂಬರ್ 2026

ವಿಧ್ಯಾರ್ಹತೆ:-

 ಬೆರಳಚ್ಚುಗಾರರು:-

  • ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
  • ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ ಅಥವಾ ಕರ್ನಾಟಕ ಸೆಕೆಂಡರಿ ಪ್ರೌಢ ಶಿಕ್ಷಣ ಪರೀಕ್ಷೆಗಳ ಮಂಡಳಿ ವತಿಯಿಂದ ನಡೆಸುವ ಕನ್ನಡ ಹಾಗೂ ಆಂಗ್ಲ ಬೆರಳಚ್ಚು ಪ್ರೌಢದರ್ಜೆ ಅಥವಾ ತತ್ಸಮಾನ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಬೇಕು.
  • ಕಛೇರಿ ಕಾರ್ಯ ಕಲಾಪಗಳಿಗೆ ಸಂಬಂಧಿಸಿದಂತೆ ಕಂಪ್ಯೂಟರ್ ಬಳಕೆ ಜ್ಞಾನ ಅವಶ್ಯಕವಾಗಿರುತ್ತದೆ.

ಅಥವಾ

  • ಕರ್ನಾಟಕ ತಾಂತ್ರಿಕ ಪರೀಕ್ಷಾ ಮಂಡಳಿಯು ನಡೆಸುವ ಸೆಕ್ರೇಟೇರಿಯಲ್ ಪ್ರಾಕ್ಟೀಸ್ ಪಠ್ಯಕ್ರಮದ ಡಿಪ್ಲೋಮಾ ಪದವಿಯೊಂದಿಗೆ ಕನ್ನಡ ಮತ್ತು ಆಂಗ್ಲ ಭಾಷೆಗಳ ಬೆರಳಚ್ಚು ಪ್ರೌಢ ದರ್ಜೆ ವಿಷಯಗಳನ್ನು ಐಚ್ಛಿಕ ವಿಷಯವಾಗಿ ಅಭ್ಯಾಸಿಸಿ ಉತ್ತೀರ್ಣರಾಗಿರಬೇಕು.

ಬೆರಳಚ್ಚು-ನಕಲುಗಾರರು:-

  • ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
  • ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ ಅಥವಾ ಕರ್ನಾಟಕ ಸೆಕೆಂಡರಿ ಪ್ರೌಢ ಶಿಕ್ಷಣ ಪರೀಕ್ಷೆಗಳ ಮಂಡಳಿ ವತಿಯಿಂದ ನಡೆಸುವ ಕನ್ನಡ ಹಾಗೂ ಆಂಗ್ಲ ಬೆರಳಚ್ಚು ಕಿರಿಯದರ್ಜೆ ಅಥವಾ ತತ್ಸಮಾನ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಬೇಕು.
  • ಕಛೇರಿ ಕಾರ್ಯ ಕಲಾಪಗಳಿಗೆ ಸಂಬಂಧಿಸಿದಂತೆ ಕಂಪ್ಯೂಟರ್ ಬಳಕೆ ಜ್ಞಾನ ಅವಶ್ಯಕವಾಗಿರುತ್ತದೆ.

ಅಥವಾ

  • ಕರ್ನಾಟಕ ತಾಂತ್ರಿಕ ಪರೀಕ್ಷಾ ಮಂಡಳಿಯು ನಡೆಸುವ ಸೆಕ್ರೇಟೇರಿಯಲ್ ಪ್ರಾಕ್ಟೀಸ್ ಪಠ್ಯಕ್ರಮದ ಡಿಪ್ಲೋಮಾ ಪದವಿಯೊಂದಿಗೆ ಕನ್ನಡ ಮತ್ತು ಆಂಗ್ಲ ಭಾಷೆಗಳ ಬೆರಳಚ್ಚು ಕಿರಿಯ ದರ್ಜೆ ವಿಷಯಗಳನ್ನು ಐಚ್ಛಿಕ ವಿಷಯವಾಗಿ ಅಭ್ಯಾಸಿಸಿ ಉತ್ತೀರ್ಣರಾಗಿರಬೇಕು.

ಆದೇಶ ಜಾರಿಕಾರರು:-

  • ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
  • ಡ್ರೈವಿಂಗ್ ಲೈಸೆನ್ಸ್ ಹೊಂದಿರುವುವರಿಗೆ ಆದ್ಯತೆ ನೀಡಲಾಗುವುದು.
  • ಅಭ್ಯರ್ಥಿಗೆ ಕನ್ನಡ ಓದಲು ಹಾಗೂ ಬರೆಯಲು ಬರಬೇಕು

ಜವಾನ:-

  • ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
  • ಅಭ್ಯರ್ಥಿಗೆ ಕನ್ನಡ ಓದಲು ಹಾಗೂ ಬರೆಯಲು ಬರಬೇಕು

 ವಯೋಮಿತಿ (Age Limit):-

ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದಂದು 18 ವರ್ಷ ಪೂರೈಸಿರಬೇಕು ಮತ್ತು ಗರಿಷ್ಟ ವಯಸ್ಸು ಈ ಕೆಳಕಂಡಂತೆ ಇರಬೇಕು

  • ಸಾಮಾನ್ಯ ವರ್ಗ- 40 ವರ್ಷ ಮೀರಿರಬಾರದು.
  • ಹಿಂದುಳಿದ ವರ್ಗಗಳು (2A, 2B, 3A, 3B):- 43 ವರ್ಷ ಮೀರಿರಬಾರದು
  • ಪ್ರವರ್ಗ-1/Sc /St:- 45 ವರ್ಷ ಮೀರಿರಬಾರದು
  • ವಿಧವೆಯರಿಗೆ, ಮಾಜಿ ಸೈನಿಕರಿಗೆ, ಅಂಗವಿಕಲರಿಗೆ ಹಾಗೂ ಸರ್ಕಾರಿ ಸೇವೆಯಲ್ಲಿರುವವರಿಗೆ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ (ಇದರ ಬಗ್ಗೆ ಸಡಿಲಿಕೆ ಕೋರಿದ್ದಲ್ಲಿ ಪ್ರಮಾಣ ಪತ್ರ ಸಲ್ಲಿಸಬೇಕು).
  • ದಿನಾಂಕ: 29.01.2026 ರ ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 262 ಸೇನೆನಿ 2025 ಬೆಂಗಳೂರು ಹಾಗೂ ಗೌರವಾನ್ವಿತ ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು ಇವರ ಪತ್ರ ಸಂಖ್ಯೆ: ಡಿಜೆಎ/400/2021, ದಿನಾಂಕ:24.02.2026 ರ ಅನ್ವಯ ಎಲ್ಲಾ ಪ್ರವರ್ಗದ ಅಭ್ಯರ್ಥಿಗಳಿಗೆ ನಿಗದಿಪಡಿಸಿರುವ ವಯೋಮಿತಿಯಲ್ಲಿ 5 ವರ್ಷ ಸಡಿಲಿಕೆ ಇರುತ್ತದೆ

ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಅರ್ಜಿ ಶುಲ್ಕ:-

  • ಸಾಮಾನ್ಯ ವರ್ಗ :- 200/-
  • ಹಿಂದುಳಿದ ವರ್ಗಗಳು (2A, 2B, 3A, 3B):- 100/-
  • ಪ್ರವರ್ಗ-1/Sc /St/Pwd:- ಶುಲ್ಕ ವಿನಾಯಿತಿ ಇರುತ್ತದೆ.

ವೇತನ ಶ್ರೇಣಿ:-

  • ಬೆರಳಚ್ಚುಗಾರರು, ಬೆರಳಚ್ಚು-ನಕಲುಗಾರರು ::-34100-800-35700-900-39300-1000-43300-1125-47800-1250- 52800-1375-58300-1500-64300-1650-67600 ಹಾಗೂ ಇತರೆ ಲಭ್ಯವಿರುವ ಭತ್ಯೆಗಳು
  • ಆದೇಶ ಜಾರಿಕಾರರು :-31775-725-32500-800-35700-900-39300-1000-43300-1125-47800-1250-52800-1375-58300-1500-61300  ಹಾಗೂ ಇತರೆ ಲಭ್ಯವಿರುವ ಭತ್ಯೆಗಳು
  • ಜವಾನ :- 27000-650-29600-725-32500-800-35700-900-39300-1000-43300-1125-46675 ಹಾಗೂ ಇತರೆ ಲಭ್ಯವಿರುವ ಭತ್ಯೆಗಳು

ಆಯ್ಕೆ ವಿಧಾನ:-

  • ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮ ಹಾಗೂ ಅಧೀನ ನ್ಯಾಯಾಲಯಗಳು (ಮಿನಿಸ್ಟೀರಿಯಲ್ ಮತ್ತು ಇತರೆ ಹುದ್ದೆಗಳು ನೇಮಕಾತಿ) ನಿಯಮ 1982 ಮತ್ತು ಅಧೀನ ನ್ಯಾಯಾಲಯಗಳು (ಮಿನಿಸ್ಟೀರಿಯಲ್ ಮತ್ತು ಇತರೆ ಹುದ್ದೆಗಳು ನೇಮಕಾತಿ) (ತಿದ್ದುಪಡಿ) ನಿಯಮಗಳು 2007 ಮತ್ತು 2021ರ ಅನ್ವಯ ನೇರ ನೇಮಕಾತಿಯ ಮೂಲಕ ಆಯ್ಕೆ ಮಾಡಲಾಗುತ್ತದೆ.

ಬೆರಳಚ್ಚುಗಾರರು:-

  • 15 ನಿಮಿಷಗಳ ಉಕ್ತಲೇಖನವನ್ನು ಬೆರಳಚ್ಚುಪಡಿಸುವ ಅರ್ಹತಾ ಪರೀಕ್ಷೆಯನ್ನು ನಡೆಸಲಾಗುತ್ತದೆ (ಗರಿಷ್ಠ 100 ಅಂಕಗಳ ಪರೀಕ್ಷೆಯಲ್ಲಿ ಕನಿಷ್ಠ 50 ಅಂಕಗಳನ್ನು ಪಡೆಯಬೇಕಾಗಿರುತ್ತದೆ)
  • ಬೆರಳಚ್ಚುಗಾರರ ಹುದ್ದೆಗೆ 1:5 ಅನುಪಾತದಲ್ಲಿ ನಿಗದಿಪಡಿಸಿದ ವಿದ್ಯಾರ್ಹತೆಗೆ ಅನುಗುಣವಾಗಿ ಅತೀ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಯ್ಕೆ ಮಾಡಲಾಗುತ್ತದೆ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಸಂದರ್ಶನಕ್ಕೆ ಹಾಜರಾಗಬೇಕಾಗುತ್ತದೆ.

ಬೆರಳಚ್ಚು-ನಕಲುಗಾರರು:-

  • 15 ನಿಮಿಷಗಳ ಉಕ್ತಲೇಖನವನ್ನು ಬೆರಳಚ್ಚುಪಡಿಸುವ ಅರ್ಹತಾ ಪರೀಕ್ಷೆಯನ್ನು ನಡೆಸಲಾಗುತ್ತದೆ (ಗರಿಷ್ಠ 100 ಅಂಕಗಳ ಪರೀಕ್ಷೆಯಲ್ಲಿ ಕನಿಷ್ಠ 50 ಅಂಕಗಳನ್ನು ಪಡೆಯಬೇಕಾಗಿರುತ್ತದೆ)
  • ಬೆರಳಚ್ಚು-ನಕಲುಗಾರರ ಹುದ್ದೆಗೆ 1:5 ಅನುಪಾತದಲ್ಲಿ ನಿಗದಿಪಡಿಸಿದ ವಿದ್ಯಾರ್ಹತೆಗೆ ಅನುಗುಣವಾಗಿ ಅತೀ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಯ್ಕೆ ಮಾಡಲಾಗುವುದು ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಸಂದರ್ಶನಕ್ಕೆ ಹಾಜರಾಗಬೇಕಾಗುತ್ತದೆ.

ಕರ್ನಾಟಕ ಅಧೀನ ನ್ಯಾಯಾಲಯಗಳು (ಮಿನಿಸ್ಟೀರಿಯಲ್ ಮತ್ತು ಇತರೆ ಹುದ್ದೆಗಳು ನೇಮಕಾತಿ) (ತಿದ್ದುಪಡಿ) ನಿಯಮಗಳು 2007ಅನ್ವಯ ನೇರ ನೇಮಕಾತಿಯ ಮೂಲಕ ಆಯ್ಕೆ ಮಾಡಲಾಗುವುದು.

ಆದೇಶ ಜಾರಿಕಾರರು:-

  • ಆದೇಶ ಜಾರಿಕಾರರ ಹುದ್ದೆಗೆ ಎಸ್.ಎಸ್.ಎಲ್.ಸಿ.ಯಲ್ಲಿ ಗಳಿಸಿರುವ ಒಟ್ಟು ಶೇಕಡಾವಾರು ಅಂಕಗಳ ಆಧಾರದ ಮೇಲೆ ಒಂದು ಹುದ್ದೆಗೆ 25 ಅಭ್ಯರ್ಥಿಗಳಂತೆ (1:25ರ ಅನುಪಾತದಲ್ಲಿ) ಅತಿ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳನ್ನು ಪ್ರಕಟಿಸಿರುವ ಹುದ್ದೆಗಳಿಗೆ ಅನುಗುಣವಾಗಿ ಸಂದರ್ಶನಕ್ಕೆ ಕರೆಯಲಾಗುತ್ತದೆ ಮತ್ತು ಸಂದರ್ಶನದಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ (ಸಂದರ್ಶನವು 10 ಅಂಕಗಳನ್ನು ಒಳಗೊಂಡಿರುತ್ತದೆ.)
  • ಸಂದರ್ಶನಕ್ಕೆ ಕರೆಯಲಾಗುವ ಅಭ್ಯರ್ಥಿಗೆ ಕನ್ನಡದಲ್ಲಿ ಓದುವ ಹಾಗೂ ಬರೆಯುವ ಬಗ್ಗೆ ಪ್ರವೀಣತೆ ಮತ್ತು ಸಾಮಾನ್ಯ ಜ್ಞಾನದ ತಿಳುವಳಿಕೆಯ ಬಗ್ಗೆ ಪರೀಕ್ಷಿಸಲಾಗುತ್ತದೆ.

ಜವಾನರು:-

  • ಜವಾನರ ಹುದ್ದೆಗೆ ಎಸ್.ಎಸ್.ಎಲ್.ಸಿ.ಯಲ್ಲಿ ಗಳಿಸಿರುವ ಒಟ್ಟು ಶೇಕಡಾವಾರು ಅಂಕಗಳ ಆಧಾರದ ಮೇಲೆ ಒಂದು ಹುದ್ದೆಗೆ 10 ಅಭ್ಯರ್ಥಿಗಳಂತೆ (1:10ರ ಅನುಪಾತದಲ್ಲಿ) ಅತಿ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳನ್ನು ಪ್ರಕಟಿಸಿರುವ ಹುದ್ದೆಗಳಿಗೆ ಅನುಗುಣವಾಗಿ ಸಂದರ್ಶನಕ್ಕೆ ಕರೆಯಲಾಗುತ್ತದೆ ಮತ್ತು ಸಂದರ್ಶನದಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. (ಸಂದರ್ಶನವು 10 ಅಂಕಗಳನ್ನು ಒಳಗೊಂಡಿರುತ್ತದೆ.)

ಪರಿವೀಕ್ಷಣಾ ಅವಧಿ:-

  • ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕ ಸೇವಾ ನಿಯಮ (ಪ್ರೊಬೇಷನ್ ನಿಯಮಗಳು 1977ರ ಪ್ರಕಾರ 2 ವರ್ಷಗಳ ಕಾಲ ಪ್ರೊಬೇಷನರಿ ಅವಧಿಯಲ್ಲಿರುತ್ತಾರೆ. ಈ ಅವಧಿಯಲ್ಲಿ ಅಭ್ಯರ್ಥಿಗಳು ಹುದ್ದೆಗೆ ನಿಗದಿಪಡಿಸಿದ ಇಲಾಖಾ ಪರೀಕ್ಷೆಗಳಲ್ಲಿ ಮತ್ತು ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು.

ಪಿಂಚಣಿ ಸೌಲಭ್ಯ:-

  • ಸರ್ಕಾರದ ಆದೇಶ ಸಂಖ್ಯೆ: ಎಫ್.ಡಿ (ಎಸ್.ಪಿ.ಎಲ್)/04/ಪಿಇಟಿ/05, ದಿನಾಂಕ: 31.03.2006 ರಂತೆ ಪಿಂಚಣಿ ಸೌಲಭ್ಯ ಅನ್ವಯವಾಗುತ್ತದೆ.

ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮುಂಚೆ ಗಮನಿಸಬೇಕಾದ ಸೂಚನೆಗಳು:-

  • ಅಭ್ಯರ್ಥಿಗಳು ಅರ್ಜಿಯನ್ನು ON-LINE ಮೂಲಕ ಸಲ್ಲಿಸುವ ಮೊದಲು ಅಧಿಸೂಚನೆಯಲ್ಲಿ ಕೊಟ್ಟಿರುವ ಎಲ್ಲಾ ಸೂಚನೆಗಳನ್ನು ಗಮನಿಟ್ಟು ಓದಿಕೊಳ್ಳಬೇಕು ಮತ್ತು ತಪ್ಪಾಗದಂತೆ ನೋಡಿಕೊಳ್ಳುವುದು, ಸರಿಯಾದ ಮಾಹಿತಿ ನೀಡದೆ ಇರುವ ಮತ್ತು ಅಪೂರ್ಣ ಮಾಹಿತಿಯುಳ್ಳ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ.
  • ಅಭ್ಯರ್ಥಿಯ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸುವುದು ಹಾಗೂ ಇ-ಮೇಲ್ ಐಡಿಯನ್ನು ಹೊಂದಿದ್ದಲ್ಲಿ ನಮೂದಿಸುವುದು. ಒಂದು ವೇಳೆ SMS ಅಥವಾ ಇ-ಮೇಲ್ ಮೂಲಕ ಮಾಹಿತಿಯು ತಮ್ಮ ಸಂದೇಶ ತಲುಪಿದಲ್ಲಿ ನೇಮಕಾತಿ ಪ್ರಾಧಿಕಾರ ಹೊಣೆಯಾಗಿರುವುದಿಲ್ಲ
  • ಅಭ್ಯರ್ಥಿಯ ಭಾವಚಿತ್ರ ಮತ್ತು ಸಹಿಯನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಲು ಈ ಕೆಳಕಂಡ ನಿರ್ದೇಶನಗಳನ್ನು ಪಾಲಿಸತಕ್ಕದ್ದು. ಅ) ಬಣ್ಣದ ಭಾವಚಿತ್ರವು ಇತ್ತೀಚಿನದಾಗಿದ್ದು, ಆಕೃತಿಯಲ್ಲಿ 5 cm ಉದ್ದ x 3.6 cm ಅಗಲವಿರುವುದಾಗಿರಬೇಕು ಮತ್ತು 50kb ಅಳತೆಯದ್ದಾಗಿರಬೇಕು ಹಾಗೂ ಅದು .jpg ನಮೂನೆಯಲ್ಲಿ ಇರಬೇಕು. ಭಾವಚಿತ್ರದ ಹಿಂಬದಿಯು ಬಿಳಿಬಣ್ಣದ್ದಾಗಿರಬೇಕು.  ಆ) ಭಾವಚಿತ್ರವನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಬೇಕು (ಯಾವುದೇ ಕಾರಣಕ್ಕೂ ಭಾವಚಿತ್ರದ ಮೇಲೆ ಸಹಿ ಮಾಡಬಾರದು).ಇ) ಅಭ್ಯರ್ಥಿಯ ಕಪ್ಪು ಬಾಲ್‌ಪಾಯಿಂಟ್ ಪೆನ್ನಿನಲ್ಲಿ ಬಿಳಿ ಹಾಳೆಯ ಮೇಲೆ ಸಹಿ ಮಾಡಿ (2.5 cm ಉದ್ದ × 7.5 cm ಅಗಲವಿರುವುದಾಗಿರಬೇಕು ಮತ್ತು 25kb ಅಳತೆಯದ್ದಾಗಿರಬೇಕು ಹಾಗೂ ಅದು .jpg ನಮೂನೆಯಲ್ಲಿ ಇರಬೇಕು) ಅಪ್‌ಲೋಡ್ ಮಾಡಬೇಕು.
  • ಅಭ್ಯರ್ಥಿಯು ON-LINE ಅರ್ಜಿಯಲ್ಲಿ ಕೋರಲಾದ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ ನಿಗದಿತ ಶುಲ್ಕ ಪಾವತಿಸಲು ಅರ್ಜಿಯಲ್ಲಿ ತಿಳಿಸಿರುವಂತೆ ಕ್ರಮ ಕೈಗೊಳ್ಳುವುದು. ತದನಂತರ ಅರ್ಜಿಯನ್ನು ಹಾಗೂ ಶುಲ್ಕವನ್ನು ತುಂಬಿದ ಪ್ರತಿಯನ್ನು download ಮಾಡಿಕೊಂಡು ನೇಮಕಾತಿ ಪ್ರಕ್ರಿಯೆ ಮುಗಿಯುವವರೆಗೂ ತಮ್ಮ ಹತ್ತಿರ ಇಟ್ಟುಕೊಳ್ಳಬೇಕು ಹಾಗೂ ಅರ್ಹತಾ ಪರೀಕ್ಷೆಯ ಸಮಯದಲ್ಲಿ ಹಾಜರುಪಡಿಸಬೇಕು
  • ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದವರೆಗೂ ವಿಳಂಭ ಮಾಡದೇ ಮುಂಚಿತ ಅರ್ಜಿಗಳನ್ನು ಸಲ್ಲಿಸತಕ್ಕದ್ದು. ಒಮ್ಮೆ ಶುಲ್ಕವನ್ನು ಪಾವತಿಸಿದ ನಂತರ ಅದನ್ನು ಯಾವುದೇ ಸಂದರ್ಭದಲ್ಲಿ ಹಿಂದಿರುಗಿಸಲಾಗುವುದಿಲ್ಲ.
  • ಬೆಂಗಳೂರು ದಕ್ಷಿಣ ಜಿಲ್ಲಾ (ರಾಮನಗರ) ನ್ಯಾಯಾಲಯದ ಅಧಿಕೃತ ವೆಬ್‌ಸೈಟ್ https://ramanagara.dcourts.gov.in/online-recruitment/ ನಲ್ಲಿ ಅರ್ಜಿಯನ್ನು ಆನ್‌ಲೈನ್ ಮೂಲಕ ನೋಂದಾಯಿಸಲು/ಸಲ್ಲಿಸಲು ದಿನಾಂಕ: 31.08.2026 ರಾತ್ರಿ59 ರವರೆಗೆ ಅವಕಾಶವಿರುತ್ತದೆ. & ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಲು ದಿನಾಂಕ: 01.09.2026 ರಾತ್ರಿ 11.59 ಕಡೆಯ ದಿನಾಂಕವಾಗಿರುತ್ತದೆ.
  • ಅರ್ಹ ಅಭ್ಯರ್ಥಿಗಳಿಗೆ SMS ಹಾಗೂ ಇ-ಮೇಲ್ ಮುಖಾಂತರ ಮಾಹಿತಿ ನೀಡಲಾಗುತ್ತದೆ ಸಂದರ್ಶನಕ್ಕೆ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ನ್ಯಾಯಾಲಯದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ. ಸದರಿ ಪಟ್ಟಿಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು.
  • ಅಭ್ಯರ್ಥಿಗಳು ತಮ್ಮ ಅರ್ಜಿ ಜೊತೆಗೆ ಈ ಕೆಳಕಂಡ ದಾಖಲೆಗಳನ್ನು ದಾಖಲೆಯ ಪರಿಶೀಲನೆಯ ಸಮಯದಲ್ಲಿ ನ್ಯಾಯಾಲಯದ ಮುಂದೆ ಹಾಜರುಪಡಿಸತಕ್ಕದ್ದು:- ಅ) ಹುದ್ದೆಗೆ ನಿಗದಿಪಡಿಸಿದ ಶುಲ್ಕವನ್ನು ಪಾವತಿಸಿದ ಬಗ್ಗೆ ರಸೀದಿ. ಆ) ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ನಮೂನೆ-ಡಿ ನಲ್ಲಿ, ಪ್ರವರ್ಗ-1ರ ಅಭ್ಯರ್ಥಿಗಳು ನಮೂನೆ-ಇ ನಲ್ಲಿ ಮತ್ತು 2ಎ, 2ಬಿ, 3ಎ ಮತ್ತು 3ಬಿ ಗೆ ಸೇರಿದ ಅಭ್ಯರ್ಥಿಗಳು ನಮೂನೆ-ಎಫ್ ನಲ್ಲಿ ಸಂಬಂಧಿಸಿದ ತಹಶೀಲ್ದಾರರಿಂದ ಪಡೆದ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳು. ಇ) ಗ್ರಾಮೀಣ ಮೀಸಲಾತಿ ಪ್ರಮಾಣ ಪತ್ರ ನಮೂನೆ-1 ಮತ್ತು 2ರಲ್ಲಿ (ಮೀಸಲಾತಿ ಕೋರಿದ್ದಲ್ಲಿ). ಈ) ಮಾಜಿ ಸೈನಿಕ ಅಭ್ಯರ್ಥಿಗಳು ಹುದ್ದೆಗೆ ಅರ್ಜಿ ಸಲ್ಲಿಸಲು ಹಾಗೂ ವಯೋಮಿತಿ ರಿಯಾಯಿತಿ ಕೋರಲು ಸೈನಿಕ ಸೇವೆಯಿಂದ ಬಿಡುಗಡೆಯಾದ/ವಿಮುಕ್ತಿ ಹೊಂದಿದ ಬಗ್ಗೆಗಿನ ಪ್ರಮಾಣ ಪತ್ರ. ಉ) ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದಿಂದ 6 ತಿಂಗಳ ಒಳಗೆ ಪಡೆದ ಇಬ್ಬರು ಗೌರವಾನ್ವಿತ ವ್ಯಕ್ತಿಗಳು ನೀಡಿರುವ ನಡತೆ ಪ್ರಮಾಣ ಪತ್ರ ಹಾಗೂ ಶಾಲಾ ನಡತೆ ಪ್ರಮಾಣ ಪತ್ರಗಳು. ಊ) ನಿರೀಕ್ಷಣಾ ಪತ್ರ (ಸರ್ಕಾರಿ ಸೇವೆಯಲ್ಲಿರುವ ಅಭ್ಯರ್ಥಿಗಳಿಗೆ).
  • ಗ್ರಾಮೀಣ, ಅಂಗವಿಕಲ, ಕನ್ನಡದ ಮಾಧ್ಯಮ, ಮಾಜಿ ಸೈನಿಕ ಅಭ್ಯರ್ಥಿಗಳ ಅಡಿಯಲ್ಲಿ ಮೀಸಲಾತಿಯನ್ನು ಕೋರಿರುವ ಅಭ್ಯರ್ಥಿಗಳು ಸಕ್ಷಮ ಪ್ರಾಧಿಕಾರಗಳು ನೀಡಿದ ಪ್ರಮಾಣ ಪತ್ರಗಳನ್ನು ಹೊಂದಿರಬೇಕು. ಗ್ರಾಮೀಣ ಪ್ರವರ್ಗದ ಅಡಿಯಲ್ಲಿ ಮೀಸಲಾತಿಯನ್ನು ಕೋರುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಕೆನೆಪದರ ಪ್ರಮಾಣ ಪತ್ರವನ್ನು (Creamy Layer Certificate) ಸಲ್ಲಿಸತಕ್ಕದ್ದು.
  • ಮೇಲ್ಕಂಡ ದಾಖಲೆಗಳು ನಿಗದಿತ ನಮೂನೆಗಳಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕಕ್ಕೆ ಮೊದಲು ಪಡೆದ ದಾಖಲೆಗಳಾಗಿರಬೇಕು ಹಾಗೂ ಸದರಿ ದಾಖಲೆಗಳ ಮೂಲ ದಾಖಲೆಗಳನ್ನು ಪರಿಶೀಲನೆ ಸಮಯದಲ್ಲಿ ಹಾಜರುಪಡಿಸಬೇಕು. ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದ ನಂತರ ಪಡೆದ ದಾಖಲೆಗಳನ್ನು ಪರಿಗಣಿಸಲಾಗುವುದಿಲ್ಲ.
  • ಅಭ್ಯರ್ಥಿಯ ಆದೇಶ ಜಾರಿಕಾರರು ಅಥವಾ ಸೇವಕರ ಹುದ್ದೆಗೆ ಆನ್‌ಲೈನ್ ಅರ್ಜಿಯನ್ನು ಸಲ್ಲಿಸುವ ಸಂದರ್ಭದಲ್ಲಿ ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ನಡೆಸುವ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಅಥವಾ ತತ್ಸಮಾನ ಪರೀಕ್ಷೆಯ ಅಂಕಪಟ್ಟಿಯನ್ನು ಸ್ಕ್ಯಾನ್ ಮಾಡಿ ಪಿಡಿಎಫ್ ನಮೂನೆಯಲ್ಲಿ ತತ್ಕ್ಷಣ ಅಪ್‌ಲೋಡ್ ಮಾಡಬೇಕು ಹಾಗೂ ಅಪ್‌ಲೋಡ್ ಮಾಡಿದ ಪ್ರತಿಯು ಸ್ಪಷ್ಟವಾಗಿರಬೇಕು
  • ಆನ್‌ಲೈನ್ ಹೊರತುಪಡಿಸಿ ಇತರ ಯಾವುದೇ ವಿಧಾನದಲ್ಲಿ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
  • ಅಭ್ಯರ್ಥಿಯು ನಕಲಿ ಅಭ್ಯರ್ಥಿಯಾಗಿರುವುದು ಅಥವಾ ಯಾವುದೇ ಮೋಸ, ದುರ್ನಡತೆ ಅಥವಾ ತಿದ್ದಲಾದ ದಾಖಲೆಗಳನ್ನು ಸಲ್ಲಿಸಿರುವುದು ಅಥವಾ ತಪ್ಪು ಅಥವಾ ಅಪೂರ್ಣ ಮಾಹಿತಿ ನೀಡಿರುವುದು ಅಥವಾ ವಾಸ್ತವಿಕ ಮಾಹಿತಿಯನ್ನು ಮರೆಮಾಚಿರುವುದು ಅಥವಾ ನೇಮಕಾತಿ ಉದ್ದೇಶಗಳಿಗೆ ನಿಗದಿಪಡಿಸಿದ ಪರಿಶೀಲನಾ ಪ್ರಕ್ರಿಯೆಗಳ ಸಂದರ್ಭದಲ್ಲಿ ಅನುಚಿತ ಮಾರ್ಗವನ್ನು ಅನುಸರಿಸಿರುವುದು ಅಥವಾ ಅನುಸರಿಸಲು ಪ್ರಯತ್ನಿಸಿರುವುದು ಅಥವಾ ಅವರ ನೇಮಕಾತಿಗೆ ಸಂಬಂಧಿಸಿದ ಯಾವುದೇ ಇತರ ಅಕ್ರಮ ಮತ್ತು ಅನುಚಿತ ಮಾರ್ಗವನ್ನು ಅವಲಂಬಿಸಿರುವುದು ಕಂಡುಬಂದಲ್ಲಿ ಅವನು/ಅವಳು ಸ್ವತಃ ಕ್ರಿಮಿನಲ್ ವ್ಯವಹರಣೆಗಳಿಗೆ ಮತ್ತು ಶಿಸ್ತು ಕ್ರಮಕ್ಕೆ ಒಳಪಡುವುದಲ್ಲದೆ, ಹುದ್ದೆಯ ಆಯ್ಕೆಯಿಂದ ಅಭ್ಯರ್ಥಿತ್ವವನ್ನು ರದ್ದುಪಡಿಸಲಾಗುತ್ತದೆ.
  • ಅನುಲಿಪಿ ಅರ್ಹತಾ ಪರೀಕ್ಷೆಯನ್ನು ಮಾನ್ಯ ಉಚ್ಛ ನ್ಯಾಯಾಲಯದ ತಂತ್ರಾಂಶದ ಮೂಲಕ ಕಂಪ್ಯೂಟರ್‌ನಲ್ಲಿ ನಡೆಸಲಾಗುತ್ತದೆ ಮತ್ತು ಕನ್ನಡ ಅನುಲಿಪಿ ಅರ್ಹತಾ ಪರೀಕ್ಷೆಯನ್ನು ಜಿಲ್ಲಾ ನ್ಯಾಯಾಲಯದ ವೆಬ್‌ಸೈಟ್‌ನಲ್ಲಿ ನೀಡಲಾಗಿರುವ ಕನ್ನಡ ಕೀ ಬೋರ್ಡ್ ಲೇಔಟ್ ಪ್ರಕಾರ ನಡೆಸಲಾಗುತ್ತದೆ.
  • ಅಭ್ಯರ್ಥಿಗಳು ತಮ್ಮ ಅಂಕಗಳು ಶ್ರೇಣಿಯಲ್ಲಿದ್ದರೆ ಅಥವಾ ಸಿಜಿವಿಪಿ ಆಗಿದ್ದರೆ ಅದನ್ನು ಅಂಕಗಳಾಗಿ ಪರಿವರ್ತಿಸಿ ಗರಿಷ್ಠ ಅಂಕಗಳು, ಪಡೆದ ಅಂಕಗಳು ಮತ್ತು ಒಟ್ಟು ಶೇಕಡಾವಾರುಗಳನ್ನು ಕಡ್ಡಾಯವಾಗಿ ನಿಗದಿತ ಕಾಲಂನಲ್ಲಿ ನಮೂದಿಸಬೇಕು.
ಆನಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
  • 10 ನೇ ತರಗತಿ ಅಂಕಪಟ್ಟಿ
  • ವಿಧ್ಯಾರ್ಹತೆ ಪ್ರಮಾಣ ಪತ್ರಗಳು (ಹುದ್ದೆಗೆ ಅನುಗುಣವಾಗಿ)
  • ಜಾತಿ & ಆದಾಯ ಪ್ರಮಾಣ ಪತ್ರ
  • ಮೀಸಲಾತಿ ಪ್ರಮಾಣ ಪತ್ರಗಳು (ಕನ್ನಡ/ಗ್ರಾಮೀಣ/ಮುಳುಗಡೆ)
  • ಅಂಗವೀಕಲ್ ಪ್ರಮಾಣ ಪತ್ರ (ಅಂಗವೀಕಲ ಅಭ್ಯರ್ಥಿಗಳಿಗೆ ಮಾತ್ರ)
  • ಮೊಬೈಲ್ ಸಂಖ್ಯೆ & ಮೇಲ್ ಐಡಿ
  • ಇತ್ತೀಚಿನ White Background ಭಾವಚಿತ್ರ & ಸಹಿ

ಬೆರಳಚ್ಚುಗಾರರ, ಬೆರಳಚ್ಚು-ನಕಲುಗಾರರು,ಆದೇಶ ಜಾರಿಕಾರರು & ಜವಾನ ಹುದ್ದೆಗಳ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ ಮಾಡಿhttps://cdnbbsr.s3waas.gov.in/s3ec01ffbd6cbb019a1413183c8d08f292/uploads/2026/07/2026072565.pdf

ಬೆರಳಚ್ಚುಗಾರರ  ಹುದ್ದೆಗೆ ಅರ್ಜಿ ಸಲ್ಲಿಸಲು  ಇಲ್ಲಿ ಕ್ಲಿಕ ಮಾಡಿhttps://judiciary.karnataka.gov.in/recruitment/district/rmn/typ/home.php

ಬೆರಳಚ್ಚು-ನಕಲುಗಾರರು ಹುದ್ದೆಗೆ ಅರ್ಜಿ ಸಲ್ಲಿಸಲು  ಇಲ್ಲಿ ಕ್ಲಿಕ ಮಾಡಿhttps://judiciary.karnataka.gov.in/recruitment/district/rmn/tcp/home.php

ಆದೇಶ ಜಾರಿಕಾರರು ಹುದ್ದೆಗೆ ಅರ್ಜಿ ಸಲ್ಲಿಸಲು  ಇಲ್ಲಿ ಕ್ಲಿಕ ಮಾಡಿhttps://judiciary.karnataka.gov.in/recruitment/district/rmn/prs/home.php

ಜವಾನ ಹುದ್ದೆಗೆ ಅರ್ಜಿ ಸಲ್ಲಿಸಲು  ಇಲ್ಲಿ ಕ್ಲಿಕ ಮಾಡಿhttps://judiciary.karnataka.gov.in/recruitment/district/rmn/gdp/home.php

Leave a Comment

Your email address will not be published. Required fields are marked *

Scroll to Top