ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯ ನೇಮಕಾತಿ-2026

ಚಿಕ್ಕಮಗಳೂರು ಪ್ರಧಾನ ಜಿಲ್ಲಾ & ಸತ್ರ  ನ್ಯಾಯಾಲಯ  ಘಟಕದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ  ಆದೇಶ ಜಾರಿಕಾರರು & ಜವಾನ  ಹುದ್ದೆಗಳಿಗೆ  ಆನಲೈನ್ ಮುಖಾಂತರ ಅರ್ಜಿ ಆಹ್ವಾನ.

ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯ ನೇಮಕಾತಿ 2026 ಜವಾನ ಮತ್ತು ಆದೇಶ ಜಾರಿಕಾರರ ಹುದ್ದೆಗಳ ಅಧಿಸೂಚನೆ

ಹುದ್ದೆಗಳ ವಿವರ:-

  • ಒಟ್ಟು ಹುದ್ದೆಗಳು: 49
  • ಆದೇಶ ಜಾರಿಕಾರರು (Process Server): 02 ಹುದ್ದೆಗಳು
  • ಜವಾನ (Peon): 47 ಹುದ್ದೆಗಳು

ಉದ್ಯೋಗದ ಸ್ಥಳ:-

  • ಚಿಕ್ಕಮಗಳೂರು ಜಿಲ್ಲೆಯಾದ್ಯಂತ

ವಿಧ್ಯಾರ್ಹತೆ:-

ಆದೇಶ ಜಾರಿಕಾರರು:

    • ಎಸ್‌ಎಸ್‌ಎಲ್‌ಸಿ (10ನೇ ತರಗತಿ) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
    • ಚಾಲ್ತಿಯಲ್ಲಿರುವ ವಾಹನ ಚಾಲನಾ ಪರವಾನಗಿ (Driving License) ಹೊಂದಿರಬೇಕು

ಜವಾನ:

  • ಎಸ್‌ಎಸ್‌ಎಲ್‌ಸಿ (10ನೇ ತರಗತಿ) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
  • ಕನ್ನಡ ಓದಲು ಹಾಗೂ ಬರೆಯಲು ತಿಳಿದಿರಬೇಕು.

ತತ್ಸಮಾನ ವಿದ್ಯಾರ್ಹತೆ ಎಂದರೆ:-

  • ಕರ್ನಾಟಕ ಸರ್ಕಾರದ ಸುತ್ತೋಲೆ ಸಂ:ಡಿಪಿಎಆರ್ 81 ಎಸ್.ಸಿ.ಆರ್ 2017 ದಿನಾಂಕ:27.02.2018 ರಲ್ಲಿ ನಿಗಧಿಪಡಿಸಲಾಗಿರುವ ವಿದ್ಯಾರ್ಹತೆ/ಕೋರ್ಸಗಳು
  • 10 ನೇ ತರಗತಿಯ ಅಂಕಗಳು ಶ್ರೇಣಿಯಲ್ಲಿ ಅಥವಾ ಗ್ರೇಡ್ (Grade) ನಲ್ಲಿದ್ದರೆ ಅದನ್ನು ಅಂಕಗಳಾಗಿ ಪರಿವರ್ತಿಸಿ ಗರಿಷ್ಠ ಅಂಕಗಳು & ಪಡೆದ ಅಂಕಗಳನ್ನು ನಮೂದಿಸಿದ ಅಂಕಪಟ್ಟಿಯನ್ನು ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಕೊನೆಯ ದಿನಾಂಕದೊಳಗೆ ಸಕ್ಷಮ ಪ್ರಾಧಿಕಾರದಿಂದ ಪಡೆದುಕೊಂಡಿರತಕ್ಕದ್ದು.

ವಯೋಮಿತಿ (Age Limit):-

ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದಂದು 18 ವರ್ಷ ಪೂರೈಸಿರಬೇಕು ಮತ್ತು ಗರಿಷ್ಟ ವಯಸ್ಸು ಈ ಕೆಳಕಂಡಂತೆ ಇರಬೇಕು

  • ಸಾಮಾನ್ಯ ವರ್ಗ-ಸಾಮಾನ್ಯ ವರ್ಗದ ಅಭ್ಯರ್ಥಿಗಳು 40 ವರ್ಷ ಮೀರಿರಬಾರದು.
  • ಹಿಂದುಳಿದ ವರ್ಗಗಳು (2A, 2B, 3A, 3B):-ಅಭರ್ಥಿಗಳು 43 ವರ್ಷ ಮೀರಿರಬಾರದು
  • ಪ್ರವರ್ಗ-1/Sc /St:-ಅಭರ್ಥಿಗಳು 45 ವರ್ಷ ಮೀರಿರಬಾರದು

ವಯೋಮಿತಿ ವಿವರ (Age Limit Details)

  • ಸರ್ಕಾರಿ ಸೇವೆಯಲ್ಲಿರುವವರಿಗೆ,ವಿಧವೆಯರಿಗೆ,ಮಾಜಿ ಸೈನಿಕರಿಗೆ (Armed forces   of   the   union   Navy,   Army,   Air force) ಹಾಗೂ ಅಂಗವಿಕಲರಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ.
  • ಸರ್ಕಾರದ ಆದೇಶ ಸಂಖ್ಯೆ: ಸಿಅಸುಇ 262 ಸೆನೆನಿ 2025, ದಿನಾಂಕ:29.01.2026 ರನ್ವಯ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಸಂಭಂದಿಸಿದಂತೆ ಅರ್ಜಿ ಸಲ್ಲಿಸಲು ನಿಗಧಿಪಡಿಸಿಸುವ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿಗೆ (As   a   one   time   Measure) 5 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.

ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಅರ್ಜಿ ಶುಲ್ಕ:-

  • ಸಾಮಾನ್ಯ ವರ್ಗ:- 300/-
  • ಹಿಂದುಳಿದ ವರ್ಗಗಳು (2A, 2B, 3A, 3B):- 150/
  • ಪ್ರವರ್ಗ-1/Sc /St/Pwd:- ಶುಲ್ಕ ವಿನಾಯಿತಿ ಇರುತ್ತದೆ.

ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿದ ನಂತರ ಅರ್ಜಿಯಲ್ಲಿ ಸೂಚಿಸಿದಂತಹ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಲೆಕ್ಟ್ ಪೇಜ್ ನಲ್ಲಿ ನೆಟ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ / ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್/ಯು.ಪಿ.ಐ ಮೂಲಕ ಆನ್ ಲೈನ್ ಶುಲ್ಕ ಸಂದಾಯ ಮಾಡಬಹುದಾಗಿದೆ.

ವೇತನ ಶ್ರೇಣಿ:-

  • ಆದೇಶ ಜಾರಿಕಾರರು ಹುದ್ದೆ :- 31775-725-32500-800-35700-900-39300-1000-43300-1125-47800-1250-52800-1375-58300-1500-61300 & ಇತರೆ ಭತ್ಯೆಗಳು
  • ಜವಾನ :- 27000-650-29600-725-32500-800-35700-900-39300-1000-43300-1125-46675  & ಇತರೆ ಭತ್ಯೆಗಳು

ಪರಿವೀಕ್ಷಣಾ ಅವಧಿ:-

  • ಆದೇಶ ಜಾರಿಕಾರರು:- ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕ ಸಿವಿಲ್ ಸೇವಾ ನಿಯಮ (ಪರಿವೀಕ್ಷಣೆ ನಿಯಮಗಳು) 1977 ರ ಪ್ರಕಾರ ಎರಡು ವರ್ಷಗಳ ಅವಧಿಗೆ ಅಥವಾ ಅಗತ್ಯವಿದ್ದರೆ ವಿಸ್ತರಿಸಬಹುದಾದ ಅವಧಿಗೆ ಪರಿವೀಕ್ಷಣಾರ್ಥಿಗಳಾಗಿರುತ್ತಾರೆ. ಹಾಗೂ ಸದರಿ ಅವಧಿಯಲ್ಲಿ ತಮ್ಮ ಹುದ್ದೆಗಳಿಗೆ ನಿಗಧಿಪಡಿಸಿರುವ ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು.
  • ಜವಾನ:- ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕ ಸಿವಿಲ್ ಸೇವಾ ನಿಯಮ (ಪರಿವೀಕ್ಷಣೆ ನಿಯಮಗಳು) 1977 ರ ಪ್ರಕಾರ ಎರಡು ವರ್ಷಗಳ ಅವಧಿಗೆ ಅಥವಾ ಅಗತ್ಯವಿದ್ದರೆ ವಿಸ್ತರಿಸಬಹುದಾದ ಅವಧಿಗೆ ಪರಿವೀಕ್ಷಣಾರ್ಥಿಗಳಾಗಿರುತ್ತಾರೆ.

ಪಿಂಚಣಿ ಸೌಲಭ್ಯ:-

  • ಸರ್ಕಾರದ ಆದೇಶ ಸಂಖ್ಯೆ:-ಎಫ್.ಡಿ (ಎಸ್.ಪಿ.ಎಲ್)/04ಪಿ/ಇ/ಟಿ/2005, ದಿನಾಂಕ:31.03.2006 ಮತ್ತು ಅದಕ್ಕೆ ಸಂಭಂದಿಸಿದ ಆದೇಶಗಳನುಸಾರ,
  • ಸರ್ಕಾರದ ಆದೇಶ ಸಂಖ್ಯೆ:-ಆಇ 34 ಪಿಇಎನ್ 2018 ಬೆಂಗಳೂರು ದಿನಾಂಕ:23.06.2018 ರಂತೆ ಮತ್ತು ಅದಕ್ಕೆ ಸಂಭಂದಿಸಿದ ಆದೇಶಗಳ ಅನ್ವಯ.

ಆಯ್ಕೆ ವಿಧಾನ :-

ಕರ್ನಾಟಕ ಅಧೀನ ನ್ಯಾಯಾಲಯಗಳ (ಲಿಪಿಕ ಮತ್ತು ಇತರ ಹುದ್ದೆಗಳು) (ನೇಮಕಾತಿ) ನಿಯಮಗಳು, 1982  ಹಾಗೂ ತಿದ್ದುಪಡಿ ನಿಯಮಗಳು 2007 ಮತ್ತು 2021 ರನ್ವಯ ನೇರ ನೇಮಕಾತಿ  ಮೂಲಕ ಆಯ್ಕೆ

  • ಆದೇಶ ಜಾರಿಕಾರರು :-ಅರ್ಹತಾ ಪರೀಕ್ಷೆಯಲ್ಲಿ ಗಳಿಸಿರುವ ಒಟ್ಟು ಶೇಕಡಾವಾರು ಅಂಕಗಳ ಆಧಾರದ ಮೇಲೆ 1 ಹುದ್ದೆಗೆ 25  ಅಭ್ಯರ್ಥಿಗಳಂತೆ (1:25 ಅನುಪಾತದಲ್ಲಿ) ಅತಿ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳನ್ನು ಪ್ರಕಟಿಸಿರುವ ಹುದ್ದೆಗಳಿಗೆ ಅನುಗುಣವಾಗಿ ಸಂದರ್ಶನವನ್ನು ಏರ್ಪಡಿಸಿ, ಸಂದರ್ಶನದಲ್ಲಿ ಗಳಿಸಿರುವ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡುವರು (ಸಂದರ್ಶನವು 10 ಅಂಕಗಳನ್ನು ಒಳಗೊಂಡಿರುತ್ತದೆ)
  • ಜವಾನ :-ಅರ್ಹತಾ ಪರೀಕ್ಷೆಯಲ್ಲಿ ಗಳಿಸಿರುವ ಒಟ್ಟು ಶೇಕಡಾವಾರು ಅಂಕಗಳ ಆಧಾರದ ಮೇಲೆ 1  ಹುದ್ದೆಗೆ 10 ಅಭ್ಯರ್ಥಿಗಳಂತೆ (1:10 ಅನುಪಾತದಲ್ಲಿ) ಅತಿ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳನ್ನು ಪ್ರಕಟಿಸಿರುವ ಹುದ್ದೆಗಳಿಗೆ ಅನುಗುಣವಾಗಿ ಸಂದರ್ಶನವನ್ನು ಏರ್ಪಡಿಸಿ, ಸಂದರ್ಶನದಲ್ಲಿ ಗಳಿಸಿರುವ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡುವರು (ಸಂದರ್ಶನವು 10 ಅಂಕಗಳನ್ನು ಒಳಗೊಂಡಿರುತ್ತದೆ)

ದಾಖಲೆಗಳ ಪರಿಶೀಲನೆ:-

  • ಶೈಕ್ಷಣಿಕ ವಿದ್ಯಾರ್ಹತೆ:- ಅಭ್ಯರ್ಥಿಯು ಎಸ್.ಎಸ್.ಎಲ್.ಸಿ ಮೂಲ ಅಂಕಪಟ್ಟಿ ಅಥವಾ ತತ್ಸಮಾನ ವಿದ್ಯಾರ್ಹತೆಯ ಮೂಲ ಅಂಕಪಟ್ಟಿಯನ್ನು ದಾಖಲೆಗಳ ಪರಿಶೀಲನೆ ಸಮಯದಲ್ಲಿ ಪ್ರಾಧಿಕಾರದ ಮುಂದೆ ಹಾಜರುಪಡಿಸಬೇಕು.
  • ಜನ್ಮ ದಿನಾಂಕಃ ಅಭ್ಯರ್ಥಿಯು ಎಸ್.ಎಸ್.ಎಲ್.ಸಿ ಮೂಲ ಅಂಕಪಟ್ಟಿ ಅಥವಾ ಮೂಲ ಜನನ ಪ್ರಮಾಣ ಪತ್ರವನ್ನು ದಾಖಲೆಗಳ ಪರಿಶೀಲನೆ ಸಮಯದಲ್ಲಿ ಪ್ರಾಧಿಕಾರದ ಮುದೆ ಹಾಜರುಪಡಿಸಬೇಕು.
  • ಮೀಸಲಾತಿ ಕೋರುವ ಮಾನ್ಯವಿರುವ ಮೂಲ ಪ್ರಮಾಣ ಪತ್ರಗಳು:- ಅಭ್ಯರ್ಥಿಯು ದಾಖಲೆಗಳ ಪರಿಶೀಲನೆ ಸಮಯದಲ್ಲಿ ಪ್ರಾಧಿಕಾರದ ಮುಂದೆ ಹಾಜರುಪಡಿಸಬೇಕು.
  • ಗುರುತಿನ ಪುರಾವೆ:- ಅಭ್ಯರ್ಥಿಯು ದಾಖಲೆಗಳ ಪರಿಶೀಲನೆ ಸಮಯದಲ್ಲಿ ಗುರುತಿನ ಪುರಾವೆಯಾಗಿ ಮೂಲ ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಇತರೆ ದಾಖಲೆಗಳನ್ನು ಪ್ರಾಧಿಕಾರದ ಮುಂದೆ ಹಾಜರುಪಡಿಸಬೇಕು. ಪ್ರಾಧಿಕಾರವು ನಿರ್ದೇಶಿಸಿದಾಗ ಸಂಬಂಧಪಟ್ಟ ದಾಖಲೆಗಳನ್ನು ಅಭ್ಯರ್ಥಿಗಳು ಹಾಜರುಪಡಿಸಬೇಕು.

ಆನಲೈನ್ ಮುಖಾಂತರ ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ವೇಳಾಪಟ್ಟಿ:-

  • ಆನಲೈನ್ ಮುಖಾಂತರ  ಅರ್ಜಿ ಸಲ್ಲಿಕೆ ಆರಂಭ:- 29 ಜೂನ್ 2026
  • ಆನಲೈನ್ ಮುಖಾಂತರ  ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 28 ಜುಲೈ 2026
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ:- 28 ಜುಲೈ 2026

ಆನಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-

  • 10 ನೇ ತರಗತಿ ಅಂಕಪಟ್ಟಿ
  • ವಾಹನ ಚಾಲನಾ ಪ್ರಮಾಣ ಪತ್ರ (ಆದೇಶ ಜಾರಿಕಾರರು ಹುದ್ದೆಗೆ ಮಾತ್ರ)
  • ಜಾತಿ ಪ್ರಮಾಣ ಪತ್ರ
  • ಮೀಸಲಾತಿ ಪ್ರಮಾಣ ಪತ್ರಗಳು (ಕನ್ನಡ/ಗ್ರಾಮೀಣ/ಮುಳುಗಡೆ)
  • ಅಂಗವೀಕಲ್ ಪ್ರಮಾಣ ಪತ್ರ (ಅಂಗವೀಕಲ ಅಭ್ಯರ್ಥಿಗಳಿಗೆ ಮಾತ್ರ)
  • ಮೊಬೈಲ್ ಸಂಖ್ಯೆ & ಮೇಲ್ ಐಡಿ
  • ಇತ್ತೀಚಿನ White Background ಭಾವಚಿತ್ರ & ಸಹಿ
ಆದೇಶ ಜಾರಿಕಾರರು ಹುದ್ದೆಯ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ ಮಾಡಿ https://cdnbbsr.s3waas.gov.in/s3ec027486cef2522ee03547cfb970a404/uploads/2026/06/2026062739-1.pdf
ಜವಾನ ಹುದ್ದೆಯ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ ಮಾಡಿ https://cdnbbsr.s3waas.gov.in/s3ec027486cef2522ee03547cfb970a404/uploads/2026/06/2026062739.pdf
ಆದೇಶ ಜಾರಿಕಾರರು ಹುದ್ದೆಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ ಮಾಡಿ https://judiciary.karnataka.gov.in/recruitment/district/ckm/prs/home.php
ಜವಾನ ಹುದ್ದೆಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ ಮಾಡಿ  https://judiciary.karnataka.gov.in/recruitment/district/ckm/gdp/home.php

Leave a Comment

Your email address will not be published. Required fields are marked *

Scroll to Top