ಚಿಕ್ಕಮಗಳೂರು ಪ್ರಧಾನ ಜಿಲ್ಲಾ & ಸತ್ರ ನ್ಯಾಯಾಲಯ ಘಟಕದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ ಆದೇಶ ಜಾರಿಕಾರರು & ಜವಾನ ಹುದ್ದೆಗಳಿಗೆ ಆನಲೈನ್ ಮುಖಾಂತರ ಅರ್ಜಿ ಆಹ್ವಾನ.
ಹುದ್ದೆಗಳ ವಿವರ:-
- ಒಟ್ಟು ಹುದ್ದೆಗಳು: 49
- ಆದೇಶ ಜಾರಿಕಾರರು (Process Server): 02 ಹುದ್ದೆಗಳು
- ಜವಾನ (Peon): 47 ಹುದ್ದೆಗಳು
ಉದ್ಯೋಗದ ಸ್ಥಳ:-
- ಚಿಕ್ಕಮಗಳೂರು ಜಿಲ್ಲೆಯಾದ್ಯಂತ
ವಿಧ್ಯಾರ್ಹತೆ:-
ಆದೇಶ ಜಾರಿಕಾರರು:
- ಎಸ್ಎಸ್ಎಲ್ಸಿ (10ನೇ ತರಗತಿ) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
- ಚಾಲ್ತಿಯಲ್ಲಿರುವ ವಾಹನ ಚಾಲನಾ ಪರವಾನಗಿ (Driving License) ಹೊಂದಿರಬೇಕು
ಜವಾನ:
- ಎಸ್ಎಸ್ಎಲ್ಸಿ (10ನೇ ತರಗತಿ) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
- ಕನ್ನಡ ಓದಲು ಹಾಗೂ ಬರೆಯಲು ತಿಳಿದಿರಬೇಕು.
ತತ್ಸಮಾನ ವಿದ್ಯಾರ್ಹತೆ ಎಂದರೆ:-
- ಕರ್ನಾಟಕ ಸರ್ಕಾರದ ಸುತ್ತೋಲೆ ಸಂ:ಡಿಪಿಎಆರ್ 81 ಎಸ್.ಸಿ.ಆರ್ 2017 ದಿನಾಂಕ:27.02.2018 ರಲ್ಲಿ ನಿಗಧಿಪಡಿಸಲಾಗಿರುವ ವಿದ್ಯಾರ್ಹತೆ/ಕೋರ್ಸಗಳು
- 10 ನೇ ತರಗತಿಯ ಅಂಕಗಳು ಶ್ರೇಣಿಯಲ್ಲಿ ಅಥವಾ ಗ್ರೇಡ್ (Grade) ನಲ್ಲಿದ್ದರೆ ಅದನ್ನು ಅಂಕಗಳಾಗಿ ಪರಿವರ್ತಿಸಿ ಗರಿಷ್ಠ ಅಂಕಗಳು & ಪಡೆದ ಅಂಕಗಳನ್ನು ನಮೂದಿಸಿದ ಅಂಕಪಟ್ಟಿಯನ್ನು ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಕೊನೆಯ ದಿನಾಂಕದೊಳಗೆ ಸಕ್ಷಮ ಪ್ರಾಧಿಕಾರದಿಂದ ಪಡೆದುಕೊಂಡಿರತಕ್ಕದ್ದು.
ವಯೋಮಿತಿ (Age Limit):-
ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದಂದು 18 ವರ್ಷ ಪೂರೈಸಿರಬೇಕು ಮತ್ತು ಗರಿಷ್ಟ ವಯಸ್ಸು ಈ ಕೆಳಕಂಡಂತೆ ಇರಬೇಕು
- ಸಾಮಾನ್ಯ ವರ್ಗ-ಸಾಮಾನ್ಯ ವರ್ಗದ ಅಭ್ಯರ್ಥಿಗಳು 40 ವರ್ಷ ಮೀರಿರಬಾರದು.
- ಹಿಂದುಳಿದ ವರ್ಗಗಳು (2A, 2B, 3A, 3B):-ಅಭರ್ಥಿಗಳು 43 ವರ್ಷ ಮೀರಿರಬಾರದು
- ಪ್ರವರ್ಗ-1/Sc /St:-ಅಭರ್ಥಿಗಳು 45 ವರ್ಷ ಮೀರಿರಬಾರದು
ವಯೋಮಿತಿ ವಿವರ (Age Limit Details)
- ಸರ್ಕಾರಿ ಸೇವೆಯಲ್ಲಿರುವವರಿಗೆ,ವಿಧವೆಯರಿಗೆ,ಮಾಜಿ ಸೈನಿಕರಿಗೆ (Armed forces of the union Navy, Army, Air force) ಹಾಗೂ ಅಂಗವಿಕಲರಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ.
- ಸರ್ಕಾರದ ಆದೇಶ ಸಂಖ್ಯೆ: ಸಿಅಸುಇ 262 ಸೆನೆನಿ 2025, ದಿನಾಂಕ:29.01.2026 ರನ್ವಯ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಸಂಭಂದಿಸಿದಂತೆ ಅರ್ಜಿ ಸಲ್ಲಿಸಲು ನಿಗಧಿಪಡಿಸಿಸುವ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿಗೆ (As a one time Measure) 5 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.
ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಅರ್ಜಿ ಶುಲ್ಕ:-
- ಸಾಮಾನ್ಯ ವರ್ಗ:- 300/-
- ಹಿಂದುಳಿದ ವರ್ಗಗಳು (2A, 2B, 3A, 3B):- 150/
- ಪ್ರವರ್ಗ-1/Sc /St/Pwd:- ಶುಲ್ಕ ವಿನಾಯಿತಿ ಇರುತ್ತದೆ.
ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿದ ನಂತರ ಅರ್ಜಿಯಲ್ಲಿ ಸೂಚಿಸಿದಂತಹ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಲೆಕ್ಟ್ ಪೇಜ್ ನಲ್ಲಿ ನೆಟ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ / ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್/ಯು.ಪಿ.ಐ ಮೂಲಕ ಆನ್ ಲೈನ್ ಶುಲ್ಕ ಸಂದಾಯ ಮಾಡಬಹುದಾಗಿದೆ.
ವೇತನ ಶ್ರೇಣಿ:-
- ಆದೇಶ ಜಾರಿಕಾರರು ಹುದ್ದೆ :- 31775-725-32500-800-35700-900-39300-1000-43300-1125-47800-1250-52800-1375-58300-1500-61300 & ಇತರೆ ಭತ್ಯೆಗಳು
- ಜವಾನ :- 27000-650-29600-725-32500-800-35700-900-39300-1000-43300-1125-46675 & ಇತರೆ ಭತ್ಯೆಗಳು
ಪರಿವೀಕ್ಷಣಾ ಅವಧಿ:-
- ಆದೇಶ ಜಾರಿಕಾರರು:- ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕ ಸಿವಿಲ್ ಸೇವಾ ನಿಯಮ (ಪರಿವೀಕ್ಷಣೆ ನಿಯಮಗಳು) 1977 ರ ಪ್ರಕಾರ ಎರಡು ವರ್ಷಗಳ ಅವಧಿಗೆ ಅಥವಾ ಅಗತ್ಯವಿದ್ದರೆ ವಿಸ್ತರಿಸಬಹುದಾದ ಅವಧಿಗೆ ಪರಿವೀಕ್ಷಣಾರ್ಥಿಗಳಾಗಿರುತ್ತಾರೆ. ಹಾಗೂ ಸದರಿ ಅವಧಿಯಲ್ಲಿ ತಮ್ಮ ಹುದ್ದೆಗಳಿಗೆ ನಿಗಧಿಪಡಿಸಿರುವ ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು.
- ಜವಾನ:- ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕ ಸಿವಿಲ್ ಸೇವಾ ನಿಯಮ (ಪರಿವೀಕ್ಷಣೆ ನಿಯಮಗಳು) 1977 ರ ಪ್ರಕಾರ ಎರಡು ವರ್ಷಗಳ ಅವಧಿಗೆ ಅಥವಾ ಅಗತ್ಯವಿದ್ದರೆ ವಿಸ್ತರಿಸಬಹುದಾದ ಅವಧಿಗೆ ಪರಿವೀಕ್ಷಣಾರ್ಥಿಗಳಾಗಿರುತ್ತಾರೆ.
ಪಿಂಚಣಿ ಸೌಲಭ್ಯ:-
- ಸರ್ಕಾರದ ಆದೇಶ ಸಂಖ್ಯೆ:-ಎಫ್.ಡಿ (ಎಸ್.ಪಿ.ಎಲ್)/04ಪಿ/ಇ/ಟಿ/2005, ದಿನಾಂಕ:31.03.2006 ಮತ್ತು ಅದಕ್ಕೆ ಸಂಭಂದಿಸಿದ ಆದೇಶಗಳನುಸಾರ,
- ಸರ್ಕಾರದ ಆದೇಶ ಸಂಖ್ಯೆ:-ಆಇ 34 ಪಿಇಎನ್ 2018 ಬೆಂಗಳೂರು ದಿನಾಂಕ:23.06.2018 ರಂತೆ ಮತ್ತು ಅದಕ್ಕೆ ಸಂಭಂದಿಸಿದ ಆದೇಶಗಳ ಅನ್ವಯ.
ಆಯ್ಕೆ ವಿಧಾನ :-
ಕರ್ನಾಟಕ ಅಧೀನ ನ್ಯಾಯಾಲಯಗಳ (ಲಿಪಿಕ ಮತ್ತು ಇತರ ಹುದ್ದೆಗಳು) (ನೇಮಕಾತಿ) ನಿಯಮಗಳು, 1982 ಹಾಗೂ ತಿದ್ದುಪಡಿ ನಿಯಮಗಳು 2007 ಮತ್ತು 2021 ರನ್ವಯ ನೇರ ನೇಮಕಾತಿ ಮೂಲಕ ಆಯ್ಕೆ
- ಆದೇಶ ಜಾರಿಕಾರರು :-ಅರ್ಹತಾ ಪರೀಕ್ಷೆಯಲ್ಲಿ ಗಳಿಸಿರುವ ಒಟ್ಟು ಶೇಕಡಾವಾರು ಅಂಕಗಳ ಆಧಾರದ ಮೇಲೆ 1 ಹುದ್ದೆಗೆ 25 ಅಭ್ಯರ್ಥಿಗಳಂತೆ (1:25 ಅನುಪಾತದಲ್ಲಿ) ಅತಿ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳನ್ನು ಪ್ರಕಟಿಸಿರುವ ಹುದ್ದೆಗಳಿಗೆ ಅನುಗುಣವಾಗಿ ಸಂದರ್ಶನವನ್ನು ಏರ್ಪಡಿಸಿ, ಸಂದರ್ಶನದಲ್ಲಿ ಗಳಿಸಿರುವ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡುವರು (ಸಂದರ್ಶನವು 10 ಅಂಕಗಳನ್ನು ಒಳಗೊಂಡಿರುತ್ತದೆ)
- ಜವಾನ :-ಅರ್ಹತಾ ಪರೀಕ್ಷೆಯಲ್ಲಿ ಗಳಿಸಿರುವ ಒಟ್ಟು ಶೇಕಡಾವಾರು ಅಂಕಗಳ ಆಧಾರದ ಮೇಲೆ 1 ಹುದ್ದೆಗೆ 10 ಅಭ್ಯರ್ಥಿಗಳಂತೆ (1:10 ಅನುಪಾತದಲ್ಲಿ) ಅತಿ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳನ್ನು ಪ್ರಕಟಿಸಿರುವ ಹುದ್ದೆಗಳಿಗೆ ಅನುಗುಣವಾಗಿ ಸಂದರ್ಶನವನ್ನು ಏರ್ಪಡಿಸಿ, ಸಂದರ್ಶನದಲ್ಲಿ ಗಳಿಸಿರುವ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡುವರು (ಸಂದರ್ಶನವು 10 ಅಂಕಗಳನ್ನು ಒಳಗೊಂಡಿರುತ್ತದೆ)
ದಾಖಲೆಗಳ ಪರಿಶೀಲನೆ:-
- ಶೈಕ್ಷಣಿಕ ವಿದ್ಯಾರ್ಹತೆ:- ಅಭ್ಯರ್ಥಿಯು ಎಸ್.ಎಸ್.ಎಲ್.ಸಿ ಮೂಲ ಅಂಕಪಟ್ಟಿ ಅಥವಾ ತತ್ಸಮಾನ ವಿದ್ಯಾರ್ಹತೆಯ ಮೂಲ ಅಂಕಪಟ್ಟಿಯನ್ನು ದಾಖಲೆಗಳ ಪರಿಶೀಲನೆ ಸಮಯದಲ್ಲಿ ಪ್ರಾಧಿಕಾರದ ಮುಂದೆ ಹಾಜರುಪಡಿಸಬೇಕು.
- ಜನ್ಮ ದಿನಾಂಕಃ– ಅಭ್ಯರ್ಥಿಯು ಎಸ್.ಎಸ್.ಎಲ್.ಸಿ ಮೂಲ ಅಂಕಪಟ್ಟಿ ಅಥವಾ ಮೂಲ ಜನನ ಪ್ರಮಾಣ ಪತ್ರವನ್ನು ದಾಖಲೆಗಳ ಪರಿಶೀಲನೆ ಸಮಯದಲ್ಲಿ ಪ್ರಾಧಿಕಾರದ ಮುದೆ ಹಾಜರುಪಡಿಸಬೇಕು.
- ಮೀಸಲಾತಿ ಕೋರುವ ಮಾನ್ಯವಿರುವ ಮೂಲ ಪ್ರಮಾಣ ಪತ್ರಗಳು:- ಅಭ್ಯರ್ಥಿಯು ದಾಖಲೆಗಳ ಪರಿಶೀಲನೆ ಸಮಯದಲ್ಲಿ ಪ್ರಾಧಿಕಾರದ ಮುಂದೆ ಹಾಜರುಪಡಿಸಬೇಕು.
- ಗುರುತಿನ ಪುರಾವೆ:- ಅಭ್ಯರ್ಥಿಯು ದಾಖಲೆಗಳ ಪರಿಶೀಲನೆ ಸಮಯದಲ್ಲಿ ಗುರುತಿನ ಪುರಾವೆಯಾಗಿ ಮೂಲ ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಇತರೆ ದಾಖಲೆಗಳನ್ನು ಪ್ರಾಧಿಕಾರದ ಮುಂದೆ ಹಾಜರುಪಡಿಸಬೇಕು. ಪ್ರಾಧಿಕಾರವು ನಿರ್ದೇಶಿಸಿದಾಗ ಸಂಬಂಧಪಟ್ಟ ದಾಖಲೆಗಳನ್ನು ಅಭ್ಯರ್ಥಿಗಳು ಹಾಜರುಪಡಿಸಬೇಕು.
ಆನಲೈನ್ ಮುಖಾಂತರ ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ವೇಳಾಪಟ್ಟಿ:-
- ಆನಲೈನ್ ಮುಖಾಂತರ ಅರ್ಜಿ ಸಲ್ಲಿಕೆ ಆರಂಭ:- 29 ಜೂನ್ 2026
- ಆನಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 28 ಜುಲೈ 2026
- ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ:- 28 ಜುಲೈ 2026
ಆನಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
- 10 ನೇ ತರಗತಿ ಅಂಕಪಟ್ಟಿ
- ವಾಹನ ಚಾಲನಾ ಪ್ರಮಾಣ ಪತ್ರ (ಆದೇಶ ಜಾರಿಕಾರರು ಹುದ್ದೆಗೆ ಮಾತ್ರ)
- ಜಾತಿ ಪ್ರಮಾಣ ಪತ್ರ
- ಮೀಸಲಾತಿ ಪ್ರಮಾಣ ಪತ್ರಗಳು (ಕನ್ನಡ/ಗ್ರಾಮೀಣ/ಮುಳುಗಡೆ)
- ಅಂಗವೀಕಲ್ ಪ್ರಮಾಣ ಪತ್ರ (ಅಂಗವೀಕಲ ಅಭ್ಯರ್ಥಿಗಳಿಗೆ ಮಾತ್ರ)
- ಮೊಬೈಲ್ ಸಂಖ್ಯೆ & ಇ–ಮೇಲ್ ಐಡಿ
- ಇತ್ತೀಚಿನ White Background ಭಾವಚಿತ್ರ & ಸಹಿ



