ಕರ್ನಾಟಕ ಉಚ್ಛ ನ್ಯಾಯಾಲಯ ನೇರ ನೇಮಕಾತಿ ಅಧಿಸೂಚನೆ-2026

ಕರ್ನಾಟಕ ಉಚ್ಚ ನ್ಯಾಯಾಲಯವು ಕಲ್ಯಾಣ ಕರ್ನಾಟಕ ಹಾಗೂ ಉಳಿಕೆ ಮೂಲವೃಂದದಲ್ಲಿ ಖಾಲಿ ಇರುವ ಗ್ರೂಪ್-ಡಿ ಹುದ್ದೆಗಳ ನೇರ ನೇಮಕಾತಿಗಾಗಿ ಪರಿಷ್ಕೃತ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿ, ಪುನಃ ಆನಲೈನ್ ಮುಖಾಂತರ ಅರ್ಜಿಯನ್ನು ಆಹ್ವಾನಿಸಿದೆ. ನೇಮಕಾತಿ ಸಂಪೂರ್ಣ ವಿವರ  ಈ ಕೆಳಗಿನಂತೆ ಇರುತ್ತದೆ.alt.img.jpg

ಹುದ್ದೆಗಳ ವಿವರ:-

  • ಒಟ್ಟು ಹುದ್ದೆಗಳು:- 106 (98- ಉಳಿಕೆ ಮೂಲವೃಂದ, 8-ಕಲ್ಯಾಣ ಕರ್ನಾಟಕ)
  • ಗ್ರೂಪ್-ಡಿ (ಜವಾನ/ ಕಾವಲುಗಾರ/ ಸ್ವೀಪರ್ / ಹೌಸ್‌ಕೀಪಿಂಗ್)-90
  • ಲಿಫ್ಟ ಅಟೆಂಡರ್-05
  • ಸಹಾಯಕ ಬೈಂಡರ್-01
  • ದರ್ಜಿ-01
  • ಧೋಬಿ-01
  • ಗ್ರೂಪ್-ಡಿ (ಜವಾನ/ಸ್ವೀಪರ್/ಹೌಸ್‌ಕೀಪಿಂಗ್-08 ಕಲ್ಯಾಣ ಕರ್ನಾಟಕ ವೃಂದ)

ಪ್ರಮುಖ ದಿನಾಂಕಗಳು:-

  • ಪರಿಷ್ಕೃತ ಅಧಿಸೂಚನೆ ಬಿಡುಗಡೆ ಮಾಡಿದ ದಿನಾಂಕ: 2 ಜುಲೈ 2026
  • ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 31, 2026 (ರಾತ್ರಿ 11:59 ರವರೆಗೆ)

ಖಾಲಿ ಇರುವ ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ:-

  • ಒಟ್ಟು 106 ಹುದ್ದೆಗಳಿಗೆ ಆನಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿದೆ ಅದರಲ್ಲಿ 98 ಹುದ್ದೆಗಳನ್ನು ಉಳಿಕೆ ಮೂಲವೃಂದಕ್ಕೆ ಹಾಗೂ 08 ಹುದ್ದೆಗಳನ್ನು ಕಲ್ಯಾಣ ಕರ್ನಾಟಕ ವೃಂದಕ್ಕೆ ಹಂಚಿಕೆ ಮಾಡಿ, ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿರುತ್ತಾರೆ.
  • ಜವಾನ/ಕಾವಲುಗಾರ/ಸ್ವೀಪರ್/ಹೌಸ್‌ಕೀಪಿಂಗ್:- 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು
  • ಲಿಫ್ಟ ಅಟೆಂಡರ್:-10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಲಿಫ್ಟ ಮೆಕ್ಯಾನಿಸಂನಲ್ಲಿ ಅನುಭವ ಹೊಂದಿರಬೇಕು
  • ಸಹಾಯಕ ಬೈಂಡರ್:– 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಬೈಂಡಿಂಗ್ ಕೆಲಸದಲ್ಲಿ 2 ವರ್ಷಗಳ ಅನುಭವ ಹೊಂದಿರಬೇಕು
  • ದರ್ಜಿ:- 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ದರ್ಜಿ ಕೆಲಸದಲ್ಲಿ 3 ವರ್ಷಗಳ ಅನುಭವ ಹೊಂದಿರಬೇಕು
  • ಧೋಬಿ:- 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಧೋಬಿ  ಕೆಲಸದಲ್ಲಿ ಅನುಭವ ಹೊಂದಿರಬೇಕು

ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ವಯೋಮಿತಿ:-

  • ಸಾಮಾನ್ಯ ಅಭ್ಯರ್ಥಿಗಳು-18 ರಿಂದ 40 ವರ್ಷಗಳು
  • ಹಿಂದುಳಿದ ವರ್ಗಗಳು (2ಎ,2ಬಿ,3ಎ,3ಬಿ)- 18 ರಿಂದ 43 ವರ್ಷಗಳು
  • ಪ್ರವರ್ಗ-1/ಎಸ್.ಸ್ಸಿ/ಎಸ್.ಟಿ- 18 ರಿಂದ 45 ವರ್ಷಗಳು

ವೇತನ ಶ್ರೇಣಿ:-

  • ಜವಾನ/ಕಾವಲುಗಾರ/ಸ್ವೀಪರ್/ಹೌಸ್‌ಕೀಪಿಂಗ್/ಸಹಾಯಕ ಬೈಂಡರ್/ಧೋಬಿ-ರೂ.19,900 ರಿಂದ 63,200 (Level-2)
  • ಲಿಫ್ಟ ಅಟೆಂಡರ್/ದರ್ಜಿ-ರೂ.21,700 ರಿಂದ 69,100 (Level-3)

ನೇಮಕಾತಿ ವಿಧಾನ:-

ಅಭ್ಯರ್ಥಿಗಳ ಆಯ್ಕೆಯನ್ನು ಈ ಕೆಳಗಿನ ನಿಯಮಗಳ ಅನುಸಾರ ಮಾಡಲಾಗುತ್ತದೆ–

  • ಎ) ಕಾಲಕಾಲಕ್ಕೆ ತಿದ್ದುಪಡಿ ಮಾಡಲಾದ ಕರ್ನಾಟಕ ಉಚ್ಚ ನ್ಯಾಯಾಲಯದ (ಸೇವಾ ಮತ್ತು ನೇಮಕಾತಿ ಷರತ್ತುಗಳು) ನಿಯಮಗಳು, 1973,
  • ಬಿ) ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977,
  • ಸಿ) ಕರ್ನಾಟಕ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರೆ ಹಿಂದುಳಿದ ವರ್ಗಗಳು (ನೇಮಕಾತಿ ಮೀಸಲಾತಿ ಇತ್ಯಾದಿ) ಕಾಯಿದೆ, 1990,
  • ಡಿ) ಕರ್ನಾಟಕ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರೆ ಹಿಂದುಳಿದ ವರ್ಗಗಳು (ನೇಮಕಾತಿ ಮೀಸಲಾತಿ ಇತ್ಯಾದಿ) ನಿಯಮಗಳು, 1992.
  • ಇ) ಈ ಕೆಳಗಿನ ಸರ್ಕಾರದ ಸುತ್ತೋಲೆಗಳು / ಅಧಿಸೂಚನೆಗಳ ಪ್ರಕಾರ:-
ಕ್ರ ಸಂಸರ್ಕಾರದ ಅಧಿಸೂಚನೆ/ಸುತ್ತೋಲೆದಿನಾಂಕವಿವರ
1.ಸಿಆಸುಇ 262 ಸೆನೆನಿ 202529.01.2026ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆಯನ್ನು ನೀಡುವ ಬಗ್ಗೆ (ಒಂದು ಬಾರಿಯ ಕ್ರಮವಾಗಿ)
2.ಸಿಆಸುಇ 08 ಸೆನೆನಿ 200113.02.2001ಅಭ್ಯರ್ಥಿಯು ಗ್ರಾಮೀಣಮೀಸಲಾತಿ ಸೌಲಭ್ಯ ಕೋರುವ ಬಗ್ಗೆ.
3.ಸಿಆಸುಇ 71 ಸೆನೆನಿ 200124.10.2002ಅಭ್ಯರ್ಥಿಯು ಕನ್ನಡ ಮಾಧ್ಯಮ ಮೀಸಲಾತಿ ಸೌಲಭ್ಯ ಕೋರುವ ಬಗ್ಗೆ.
4.ಸಿಆಸುಇ 23 ಸೆನೆನಿ 199923.11.2000ಅಭ್ಯರ್ಥಿಯು ಯೋಜನಾ ನೀರಾಶ್ರಿತ ಮೀಸಲಾತಿ ಸೌಲಭ್ಯ ಕೋರುವ ಬಗ್ಗೆ.
5.ಸಿಆಸುಇ 19 ಸೆನೆನಿ 202012.10.2020ಸೇವಾನಿರತ ಅಭ್ಯರ್ಥಿಯ ನಿರಕ್ಷೇಪಣಾ ಪ್ರಮಾಣಪತ್ರದ ಬಗ್ಗೆ

ಉದ್ಯೋಗದ ಸ್ಥಳ:-

  • ಕರ್ನಾಟಕ (ಬೆಂಗಳೂರು/ಧಾರವಾಡ/ಕಲಬುರ್ಗಿ)

ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಅರ್ಜಿ ಶುಲ್ಕ:-

  1. ಸಾಮಾನ್ಯ ವರ್ಗ:- 200/-
  2. ಹಿಂದುಳಿದ ವರ್ಗಗಳು (2A, 2B, 3A, 3B):- 200/
  3. ಪ್ರವರ್ಗ-1/Sc /St/Pwd:- 100/-

ಪರಿವೀಕ್ಷಣಾ ಅವಧಿ:-

  • ಆಯ್ಕೆಯಾದ ಅಭ್ಯರ್ಥಿಗಳು ಎರಡು ವರ್ಷಗಳ ಅವಧಿಗೆ ಅಥವಾ ಅಗತ್ಯವಿದ್ದರೆ ವಿಸ್ತರಿಸಬಹುದಾದ ಅವಧಿಗೆ ಪರಿವೀಕ್ಷಣಾರ್ಥಿಗಳಾಗಿರುತ್ತಾರೆ.

ಆಯ್ಕೆ ವಿಧಾನ:-

  • ಅಭ್ಯರ್ಥಿಗಳು ಅರ್ಹತಾ ಪರೀಕ್ಷೆಯಲ್ಲಿ ಪಡೆದ ಒಟ್ಟು ಅಂಕಗಳ ಶೇಕಡವಾರು ಆಧಾರದ ಮೇಲೆ ಹಾಗೂ ಮಹಿಳಾ ಮೀಸಲಾತಿ, ಗ್ರಾಮೀಣ ಅಭ್ಯರ್ಥಿ, ಮಾಜಿ ಸೈನಿಕ ಮತ್ತು ಇತರರು ಒಳಗೊಂಡಂತೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದಂತೆ ಕಾನೂನಿನ ಪ್ರಕಾರ ಸರ್ಕಾರ ಹೊರಡಿಸಿದ ಆದೇಶಗಳನ್ನು ಗಣನೆಗೆ ತೆಗೆದುಕೊಂ ಡು ಸಂದರ್ಶನಕ್ಕೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಅರ್ಹತೆಯ ಆಧಾರದ ಮೇಲೆ ಸಿದ್ದಪಡಿಸುತ್ತಾರೆ.
  • ಸಂದರ್ಶನಕ್ಕೆ ಕರೆಯಲ್ಪಡುವ ಅಭ್ಯರ್ಥಿಗಳ ಸಂಖ್ಯೆಯು ಅಧಿಸೂಚಿಸಲಾದ ಖಾಲಿ ಹುದ್ದೆಗಳ ಪ್ರತಿಯೊಂದು ವರ್ಗದಲ್ಲಿನ ಅರ್ಹತೆಯ ಕ್ರಮದಲ್ಲಿ ಅಧಿಸೂಚಿಸಲಾದ ಒಟ್ಟು ಖಾಲಿ ಹುದ್ದೆಗಳ 10 (ಹತ್ತು) ಪಟ್ಟು ಸಂಖ್ಯೆಗೆ ಸಮನಾಗಿರುವಂತೆ ಕರೆಯುತ್ತಾರೆ.
  • ಸಹಾಯಕ ಬೈಂಡರ್ ಹುದ್ದೆಗೆ:-ಸಂದರ್ಶನಕ್ಕೆ ಕರೆಯಲ್ಪಡುವ ಅಭ್ಯರ್ಥಿಗಳ ಸಂಖ್ಯೆಯು ಅಧಿಸೂಚಿಸಲಾದ ಖಾಲಿ ಹುದ್ದೆಗಳ ಪ್ರತಿಯೊಂದು ವರ್ಗದಲ್ಲಿನ ಅರ್ಹತೆಯ ಕ್ರಮದಲ್ಲಿ ಅಧಿಸೂಚಿಸಲಾದ ಒಟ್ಟು ಖಾಲಿ ಹುದ್ದೆಗಳ 05 (ಐದು) ಪಟ್ಟು ಸಂಖ್ಯೆಗೆ ಸಮನಾಗಿರುವಂತೆ ಕರೆಯುತ್ತಾರೆ.

ದಾಖಲೆಗಳ ಪರಿಶೀಲನೆ:-

  • ಶೈಕ್ಷಣಿಕ ವಿದ್ಯಾರ್ಹತೆ:- ಅಭ್ಯರ್ಥಿಯು ಎಸ್.ಎಸ್.ಎಲ್.ಸಿ ಮೂಲ ಅಂಕಪಟ್ಟಿ ಅಥವಾ ತತ್ಸಮಾನ ವಿದ್ಯಾರ್ಹತೆಯ ಮೂಲ ಅಂಕಪಟ್ಟಿಯನ್ನು ದಾಖಲೆಗಳ ಪರಿಶೀಲನೆ ಸಮಯದಲ್ಲಿ ಪ್ರಾಧಿಕಾರದ ಮುಂದೆ ಹಾಜರುಪಡಿಸಬೇಕು.
  • ಜನ್ಮ ದಿನಾಂಕಃ ಅಭ್ಯರ್ಥಿಯು ಎಸ್.ಎಸ್.ಎಲ್.ಸಿ ಮೂಲ ಅಂಕಪಟ್ಟಿ ಅಥವಾ ಮೂಲ ಜನನ ಪ್ರಮಾಣ ಪತ್ರವನ್ನು ದಾಖಲೆಗಳ ಪರಿಶೀಲನೆ ಸಮಯದಲ್ಲಿ ಪ್ರಾಧಿಕಾರದ ಮುದೆ ಹಾಜರುಪಡಿಸಬೇಕು.
  • ಜಾತಿ ಪ್ರಮಾಣ ಪತ್ರ:- ಅಭ್ಯರ್ಥಿಯು ದಾಖಲೆಗಳ ಪರಿಶೀಲನೆ ಸಮಯದಲ್ಲಿ ಜಾತಿ ಪ್ರಮಾಣ ಪತ್ರವನ್ನು  ಪ್ರಾಧಿಕಾರದ ಮುಂದೆ ಹಾಜರುಪಡಿಸಬೇಕು.
  • ಮೀಸಲಾತಿ ಕೋರಲು ಮಾನ್ಯವಿರುವ ಮೂಲ ಪ್ರಮಾಣ ಪತ್ರಗಳು:- ಅಭ್ಯರ್ಥಿಯು ದಾಖಲೆಗಳ ಪರಿಶೀಲನೆ ಸಮಯದಲ್ಲಿ ಪ್ರಾಧಿಕಾರದ ಮುಂದೆ ಹಾಜರುಪಡಿಸಬೇಕು.
  • ಗುರುತಿನ ಪುರಾವೆ:- ಅಭ್ಯರ್ಥಿಯು ದಾಖಲೆಗಳ ಪರಿಶೀಲನೆ ಸಮಯದಲ್ಲಿ ಗುರುತಿನ ಪುರಾವೆಯಾಗಿ ಮೂಲ ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಇತರೆ ದಾಖಲೆಗಳನ್ನು ಪ್ರಾಧಿಕಾರದ ಮುಂದೆ ಹಾಜರುಪಡಿಸಬೇಕು. ಪ್ರಾಧಿಕಾರವು ನಿರ್ದೇಶಿಸಿದಾಗ ಸಂಬಂಧಪಟ್ಟ ದಾಖಲೆಗಳನ್ನು ಅಭ್ಯರ್ಥಿಗಳು ಹಾಜರುಪಡಿಸಬೇಕು.
  • ಮೂರು ನಡತೆ ಪ್ರಮಾಣ ಪತ್ರ:-ಅಭ್ಯರ್ಥಿಯು 10 ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆ ವ್ಯಾಸಂಗ ಮಾಡಿದ ಸಂಸ್ಥೆಯ ಮುಖ್ಯಸ್ಥರಿಂದ ವಿದ್ಯಾಭ್ಯಾಸದ ವಿವರಗಳೊಂದಿಗೆ ಪಡೆದ ಒಂದು ಪ್ರಮಾಣ ಪತ್ರ & ಸಂಬಂಧಿಕರಲ್ಲದ ಆದರೆ ಅಭ್ಯರ್ಥಿಯೊಂದಿಗೆ ಚೆನ್ನಾಗಿ ಪರಿಚಿತರಾಗಿರುವ ಇಬ್ಬರು ಗೌರವಾನ್ವಿತ ವ್ಯಕ್ತಿಗಳಿಂದ ಪಡೆದ ಎರಡು ಪ್ರಮಾಣ ಪತ್ರಗಳು.

ಅಭ್ಯರ್ಥಿಗಳಿಗೆ ವಿಶೇಷ ಸೂಚನೆಗಳು:-

  • ಅಭ್ಯರ್ಥಿಗಳು ಕರ್ನಾಟಕ ಉಚ್ಛ ನ್ಯಾಯಾಲಯದ ಹಿಂದಿನ ಅಧಿಸೂಚನೆ ಸಂಖ್ಯೆ HCRB 8/2025 (Group-D-RPC & HCRB 9/2025 (Group-D-KKR) ದಿನಾಂಕ 22ನೇ ಏಪ್ರಿಲ್ 2026  ಅನುಸಾರ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಿರುವ ಎಲ್ಲಾ ಅಭ್ಯರ್ಥಿಗಳು ಮತ್ತೊಮ್ಮೆ ಹೊಸದಾಗಿ ಅರ್ಜಿಯನ್ನು ಸಲ್ಲಿಸುವ ಮತ್ತು ಶುಲ್ಕವನ್ನು ಪಾವತಿಸುವ ಅವಶ್ಯಕತೆಯಿರುವುದಿಲ್ಲ.
  • ಪರಿಶಿಷ್ಟ ಜಾತಿಯಡಿಯಲ್ಲಿ ಮೀಸಲಾತಿಯನ್ನು ಕೋರಿದ ಅಭ್ಯರ್ಥಿಗಳು ಕಡ್ಡಾಯವಾಗಿ ಒಳಮೀಸಲಾತಿಯ (ಪ್ರವರ್ಗ – ಎ, ಬಿ ಮತ್ತು ಸಿ) ಮಾಹಿತಿಯನ್ನು ಒದಗಿಸಬೇಕು ಮತ್ತು ಜಾತಿ ಪ್ರಮಾಣಪತ್ರವನ್ನು ಕರ್ನಾಟಕ ಉಚ್ಛ ನ್ಯಾಯಾಲಯದ ಅಂತರ್ಜಾಲದಲ್ಲಿ ಕಡ್ಡಾಯವಾಗಿ ಅಪಲೋಡ ಮಾಡಬೇಕು.
  • ಎಲ್ಲಾ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ/10ನೇ ತರಗತಿ ಹೊರತುಪಡಿಸಿ ಹೆಚ್ಚುವರಿ ವಿದ್ಯಾಭ್ಯಾಸ ಹೊಂದಿದಲ್ಲಿ ಸಂಬಂಧಪಟ್ಟ ವಿವರಗಳನ್ನು ಒದಗಿಸಬೇಕು ಮತ್ತು ವಿದ್ಯಾರ್ಹತೆಗೆ ಸಂಭಂದಪಟ್ಟ ದಾಖಲಾತಿಗಳನ್ನು ಕರ್ನಾಟಕ ಉಚ್ಛ ನ್ಯಾಯಾಲಯದ ಅಂತರ್ಜಾಲದಲ್ಲಿ ಕಡ್ಡಾಯವಾಗಿ ಅಪಲೋಡ ಮಾಡಬೇಕು.
  • ಎಸ್.ಎಸ್.ಎಲ್.ಸಿ/10ನೇ ತರಗತಿ ಹೊರತುಪಡಿಸಿ ಹೆಚ್ಚುವರಿ ವಿದ್ಯಾಭ್ಯಾಸ ಹೊಂದಿದ ಅಭ್ಯರ್ಥಿಗಳು ಸಂಬಂಧಪಟ್ಟ ವಿದ್ಯಾರ್ಹತೆಯ ವಿವರಗಳನ್ನು ಮರೆಮಾಚಿದಲ್ಲಿ, ಅಭ್ಯರ್ಥಿಯನ್ನು ದಂಡಕ್ಕೆ ಗುರಿಪಡಿಸಲಾಗುವುದು ಎಂದು ಕರ್ನಾಟಕ ಉಚ್ಛ ನ್ಯಾಯಾಲಯವು ಪ್ರಕಟಿಸಿದ ಅಧಿಸೂಚನೆಯಲ್ಲಿ ಅಭ್ಯರ್ಥಿಗಳಿಗೆ ಸೂಚಿಸಿರುತ್ತದೆ.
  • ಅಭ್ಯರ್ಥಿಗಳು ಮೇಲೆ ಕೇಳಿದಂತಹ ಮಾಹಿತಿಯನ್ನು ಒದಗಿಸದೇ ಇದ್ದ ಪಕ್ಷದಲ್ಲಿ ಅಂತಹ ಅರ್ಜಿಗಳನ್ನು ಮುಂದಿನ ಪ್ರಕ್ರಿಯೆಗಳಿಗೆ ಪರಿಗಣಿಸಲು ಆಗುವುದಿಲ್ಲ.

ಆನಲೈನ್ ಮುಖಾಂತರ ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ವೇಳಾಪಟ್ಟಿ:-

  • ಆನಲೈನ್ ಮುಖಾಂತರ   ಅರ್ಜಿ ಸಲ್ಲಿಕೆ ಆರಂಭ:- 03 ಜುಲೈ 2026
  • ಆನಲೈನ್ ಮುಖಾಂತರ   ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 31 ಜುಲೈ 2026
  • ಅರ್ಜಿಶುಲ್ಕ ಪಾವತಿಸಲು ಕೊನೆಯ ದಿನಾಂಕ:- 31 ಜುಲೈ 2026 (ರಾತ್ರಿ 11.59 ರವರೆಗೆ)

ಆನಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-

  • 10 ನೇ ತರಗತಿ ಅಂಕಪಟ್ಟಿ
  • ವಿದ್ಯಾರ್ಹತೆ ಪ್ರಮಾಣ ಪತ್ರಗಳು (ಅನ್ವಯಿಸಿದಲ್ಲಿ ಮಾತ್ರ)
  • ಜಾತಿ ಪ್ರಮಾಣ ಪತ್ರ
  • ಮೀಸಲಾತಿ ಪ್ರಮಾಣ ಪತ್ರಗಳು (ಕನ್ನಡ/ಗ್ರಾಮೀಣ/ಮುಳುಗಡೆ)
  • ಅಂಗವೀಕಲ್ ಪ್ರಮಾಣ ಪತ್ರ (ಅಂಗವೀಕಲ ಅಭ್ಯರ್ಥಿಗಳಿಗೆ ಮಾತ್ರ)
  • ಮೊಬೈಲ್ ಸಂಖ್ಯೆ & ಮೇಲ್ ಐಡಿ
  • ಇತ್ತೀಚಿನ White Background ಭಾವಚಿತ್ರ & ಸಹಿ

For Notification Click Here :- https://judiciary.karnataka.gov.in/common_folder/notification//Group%20-%20D%20Revised%20notification%20dt02072026.pdf

For Online Application Click Here :- https://judiciary.karnataka.gov.in/recsubnotify.php?p=1242&stateNM=

Leave a Comment

Your email address will not be published. Required fields are marked *

Scroll to Top