ಕರ್ನಾಟಕ ಲೋಕಾಯುಕ್ತ ನೇಮಕಾತಿ-2026

ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಗ್ರೂಪ್-‘ಸಿ’ ವೃಂದದ ಉಳಿಕೆ ಮೂಲ ಹಾಗೂ ಕಲ್ಯಾಣ ಕರ್ನಾಟಕ ವೃಂದದಲ್ಲಿ ಖಾಲಿ ಇರುವ ಕ್ಲರ್ಕ್-ಕಂ-ಟೈಪಿಸ್ಟ್ ಹುದ್ದೆಗಳನ್ನು ನೇರ ನೇಮಕಾತಿ ಮುಖಾಂತರ ಭರ್ತಿ ಮಾಡಲು ಆನಲೈನ ಮುಖಾಂತರ ಅರ್ಜಿ ಆಹ್ವಾನಿಸಲಾಗಿದೆ.

karnataka.lokayukta.recruitment.2026

ಹುದ್ದೆಗಳ ವಿವರ:-

  • ಅಧಿಸೂಚನೆ ಸಂಖ್ಯೆ: ಕೇಲೋ/ನಿಬಂಧಿ-3/01/ನೇನೇ/ನಿಯತಿ/2026-27 (ಆರ್‌ಪಿಎಸ್)
    ದಿನಾಂಕ: 14/07/2026
  • ಒಟ್ಟು ಹುದ್ದೆಗಳು: 26 (ಉಳಿಕೆ ಮೂಲ ವೃಂದ-25, ಕಲ್ಯಾಣ ಕರ್ನಾಟಕ-01)
  • ಹುದ್ದೆಯ ಹೆಸರು:- ಕ್ಲರ್ಕ್-ಕಂ-ಟೈಪಿಸ್ಟ್

ವಿಧ್ಯಾರ್ಹತೆ:-

  • ದ್ವಿತೀಯ ಪಿ.ಯು.ಸಿ (12ನೇ ತರಗತಿ) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
  • ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಕನ್ನಡ ಮತ್ತು ಆಂಗ್ಲ ಹಿರಿಯ ದರ್ಜೆ ಬೆರಳಚ್ಚು ಪರೀಕ್ಷೆ ಉತ್ತೀರ್ಣ ಅಥವಾ ತತ್ಸಮಾನ.

ತತ್ಸಮಾನ ವಿಧ್ಯಾರ್ಹತೆ:-

  • ತಾಂತ್ರಿಕ ಶಿಕ್ಷಣ ಪರೀಕ್ಷಾ ಮಂಡಳಿಯ ಕಮರ್ಷಿಯಲ್ ಪ್ರಾಕ್ಟೀಸ್‌ನ ಬೆರಳಚ್ಚು ವಿಷಯಗಳ ತೇರ್ಗಡೆಯ ಬಗ್ಗೆ ಸರ್ಕಾರದ ಆದೇಶ ಸಂಖ್ಯೆ: ಇಡಿ 174 ಟಿಪಿಇ 2005, ಬೆಂಗಳೂರು, ದಿನಾಂಕ: 09ನೇ ನವೆಂಬರ್ 2006 ರನ್ವಯ ಪರಿಗಣಿಸಲಾಗುತ್ತದೆ.
  • ಕ್ಲರ್ಕ್-ಕಂ-ಟೈಪಿಸ್ಟ್ ಹುದ್ದೆಯ ತತ್ಸಮಾನ ವಿದ್ಯಾರ್ಹತೆಯನ್ನು ಸರ್ಕಾರದ ಪತ್ರೋಲೆ ಸಂಖ್ಯೆ: ಸಿಇಸುಇ 81 ಸೇವನ 2017, ದಿನಾಂಕ: 27/02/2018 ರಲ್ಲಿ ತಿಳಿಸಿರುವಂತೆ ಪರಿಗಣಿಸಲಾಗುತ್ತದೆ.

ಉದ್ಯೋಗದ ಸ್ಥಳ:-

  • ಕರ್ನಾಟಕದಾದ್ಯಂತ

ಪ್ರಮುಖ ದಿನಾಂಕಗಳು:-

  • ಅಧಿಸೂಚನೆ ಬಿಡುಗಡೆ ಮಾಡಿದ ದಿನಾಂಕ: 14 ಜುಲೈ 2026
  • ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭಿಸಿದ ದಿನಾಂಕ: 17 ಜುಲೈ 2026
  • ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17 ಅಗಸ್ಟ್ 2026 (ಮಧ್ಯರಾತ್ರಿ 11.59 ಗಂಟೆಯವರೆಗೆ)
  • ಆನ್‌ಲೈನ್ ಮುಖಾಂತರ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 18 ಅಗಸ್ಟ್ 2026 (ಮಧ್ಯರಾತ್ರಿ 11.59 ಗಂಟೆಯವರೆಗೆ

ವಯೋಮಿತಿ (Age Limit)

  1. ಆನಲೈನ ಮುಖಾಂತರ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು ಕನಿಷ್ಠ 18 ವರ್ಷ ಪೂರೈಸಿರಬೇಕು.
  2. ಸರ್ಕಾರದ ಆದೇಶ ಸಂಖ್ಯೆ ಸಿಆಸುಇ 262 ಸೇನೆನಿ 2025, ದಿನಾಂಕ:-29-01-2026 ರಲ್ಲಿ ಆದೇಶಿಸಿರುವಂತೆ ಒಂದು ಬಾರಿಗೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆ ವಯೋಮಿತಿ ಸಡಿಲಿಕೆಯನ್ನು ನೀಡಿದ ಪ್ರಯುಕ್ತ, ಈ ಕೆಳಗಿನಂತೆ  ಗರಿಷ್ಠ ಮಯೋಮಿತಿಯನ್ನು ನಿಗಧಿಪಡಿಸಿರುತ್ತಾರೆ.
  • ಸಾಮಾನ್ಯ ಅಭ್ಯರ್ಥಿಗಳು-18 ರಿಂದ 40 ವರ್ಷಗಳು
  • ಪ್ರವರ್ಗ 2ಎ,2ಬಿ,3ಎ,3ಬಿ- 18 ರಿಂದ 43 ವರ್ಷಗಳು
  • ಎಸ್.ಸ್ಸಿ/ಎಸ್.ಟಿ/ ಪ್ರವರ್ಗ-18 ರಿಂದ 45 ವರ್ಷಗಳು

ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಅರ್ಜಿ ಶುಲ್ಕ:-

  • ಸಾಮಾನ್ಯ ವರ್ಗ, ಹಿಂದುಳಿದ ವರ್ಗಗಳು (2A, 2B, 3A, 3B) :-250/-
  • ಪ್ರವರ್ಗ-1/Sc /St/Pwd:- ಶುಲ್ಕ ವಿನಾಯಿತಿ ಇರುತ್ತದೆ.

ವೇತನ ಶ್ರೇಣಿ:-

  • 34100-800-35700-900-39300-1000-43300-1125-47800-1250-52800-1375-58300-1500-64300-1650-6760

ನೇಮಕಾತಿ ಪ್ರಕ್ರಿಯೆ:-

  • ಕರ್ನಾಟಕ ಲೋಕಾಯುಕ್ತ (ವೃಂದ, ನೇಮಕಾತಿ ಮತ್ತು ಸಿಬ್ಭಂದಿ ಹಾಗೂ ಅಧಿಕಾರಿಗಳ ಸೇವಾ ಷರತ್ತು) (ತಿದ್ದುಪಡಿ) ನಿಯಮಗಳು, 2005ರ ಅನುಬಂಧ-‘ಎ’ರಲ್ಲಿ ತಿಳಿಸಿರುವಂತೆ ಕ್ಲರ್ಕ್-ಕಂ-ಟೈಪಿಸ್ಟ್ ಹುದ್ದೆಗೆ ನಿಗದಿಪಡಿಸಲಾದ ವಿದ್ಯಾರ್ಹತೆಯಲ್ಲಿ ಪಡೆದ ಅಂಕಗಳು ಮತ್ತು ಮೀಸಲಾತಿ ಆಧಾರದ ಮೇರೆಗೆ ಶ್ರೇಯಾಂಕಪಟ್ಟಿಯಿರುವ ಅಭ್ಯರ್ಥಿಗಳ 1:10 ಅನುಪಾತದಲ್ಲಿ ಅರ್ಹತಾ ಪಟ್ಟಿಯನ್ನು ತಯಾರಿಸಿ, ಸದರಿ ಪಟ್ಟಿಯಲ್ಲಿ ಇರುವ ಅಭ್ಯರ್ಥಿಗಳಿಗೆ ಈ ಕೆಳಗಿನಂತೆ ಅರ್ಹತಾ ಪರೀಕ್ಷೆ ನಡೆಸಲಾಗುತ್ತದೆ. ಸದರಿ ಅರ್ಹತಾ ಪರೀಕ್ಷೆಗೆ ನಿಗದಿಪಡಿಸಲಾದ ಗರಿಷ್ಠ 20 ಅಂಕಗಳಿಗೆ, ಅಭ್ಯರ್ಥಿಯ ಕನಿಷ್ಠ ಶೇ.50 ರಷ್ಟು ಅಂಕಗಳನ್ನು ಪಡೆದರೆ ಮಾತ್ರ ಆಯ್ಕೆ ಪಟ್ಟಿಗೆ ಪರಿಗಣಿಸಲಾಗುವುದು.
  • ಅರ್ಹತಾ ಪರೀಕ್ಷೆಯನ್ನು ಗುಣಕಯುಕ್ತವಾದ ಮೂಲಕ ಕೈಗೊಳ್ಳಲಾಗುವುದು.
  • ಈ ಅಧಿಸೂಚನೆಗೆ ಶೀಘ್ರಲಿಪಿಗಾರರು ಮತ್ತು ಬೆರಳಚ್ಚುಗಾರರ ಹುದ್ದೆಗಳಿಗೆ ನೇಮಕಾತಿ ನಿಯಮಗಳು, 1983 ಅನ್ವಯಿಸುವುದಿಲ್ಲ.

ಅರ್ಹತಾ ಷರತ್ತುಗಳು:-

  • ಅಭ್ಯರ್ಥಿಯು ಭಾರತೀಯ ನಾಗರೀಕನಾಗಿರತಕ್ಕದ್ದು.
  • ಆಧಾರ್ ಕಾರ್ಡ್‌ನನ್ನು ಹೊಂದಿರುವುದು.
  • ಒಬ್ಬ ಜೀವಂತ ವ್ಯಕ್ತಿಗಿಂತ ಹೆಚ್ಚು ಮಂದಿ ಪತ್ನಿಯರನ್ನು ಹೊಂದಿರುವ ಪುರುಷ ಅಭ್ಯರ್ಥಿ ಮತ್ತು ಈಗಾಗಲೇ ಇನ್ನೊಬ್ಬ ಹೊಂದತಿಯಿರುವ ವ್ಯಕ್ತಿಯನ್ನು ಮದುವೆಯಾಗಿರುವ ಮಹಿಳಾ ಅಭ್ಯರ್ಥಿಯು ಸರ್ಕಾರದಿಂದ ಪೂರ್ವಾನುಮತಿ ಪಡೆಯದೆ ನೇಮಕಾತಿಗೆ ಅರ್ಹರಾಗುವುದಿಲ್ಲ.
  • ಅಭ್ಯರ್ಥಿಯ ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಂತರಾಗಿರಬೇಕು ಮತ್ತು ಅವರ ನೇಮಕಾತಿಯ ಕರ್ತವ್ಯಗಳನ್ನು ದಕ್ಷ ನಿರ್ವಹಣೆಗೆ ಆತಂಕವನ್ನುಂಟು ಮಾಡುವ ಸಂಭವವಿರುವ ಯಾವುದೇ ದೈಹಿಕ ನ್ಯೂನತೆಯಿಂದ ಮುಕ್ತರಾಗಿರಬೇಕು.
  • ದೈಹಿಕವಾಗಿ ಅನರ್ಹರಾಗಿದ್ದಾರೆಂಬುದಾಗಿ ವೈದ್ಯಕೀಯ ಮಂಡಳಿಯ ವರದಿಯ ಮೇಲೆ ಅನರ್ಹರೆಂಬುದಾಗಿ ತೀರ್ಮಾನಿಸುವ ಪೂರ್ಣ ವಿವೇಚನೆಯನ್ನು ನೇಮಕಾತಿ ಪ್ರಾಧಿಕಾರ ಕಾಯ್ದಿರಿಸಿಕೊಂಡಿದೆ ಮತ್ತು ನೇಮಕಾತಿ ಪ್ರಾಧಿಕಾರದ ವಿವೇಚನೆಯ ಯಾವುದೇ ವಿಧಾನದಲ್ಲೂ ಈ ನಿಯಮಗಳು ಮೂಲತಃ ಸೀಮಿತವಾಗಿರುವುದಿಲ್ಲ.

ಅಭ್ಯರ್ಥಿಗಳಿಗೆ ವಿಶೇಷ ಸೂಚನೆಗಳು:-

  • ಅರ್ಜಿ ಸಲ್ಲಿಸುವಾಗ ಕೊನೆ ಕ್ಷಣದಲ್ಲಿ ಒತ್ತಡವನ್ನು ತಪ್ಪಿಸಲು, ಅಭ್ಯರ್ಥಿಗಳು ಸಾಕಷ್ಟು ಮುಂಚಿತವಾಗಿಯೇ ಅರ್ಜಿ ಸಲ್ಲಿಸುವುದು ಸೂಕ್ತ. ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ವೆಬ್‌ಸೈಟ್ (ಜಾಲತಾಣ) ದಿನಾಂಕ: 17/08/2026 ರಾತ್ರಿ 11:59 ಗಂಟೆಯೊಳಗೆ ಸಲ್ಲಿಸಿದ ಅರ್ಜಿಗಳನ್ನು ಮಾತ್ರ ಅಂಗೀಕರಿಸುತ್ತದೆ.
  • ಅರ್ಜಿಯಲ್ಲಿ ಸಂಪರ್ಕದ ಉದ್ದೇಶಕ್ಕೆ ಸಂಬಂಧಿಸಿದಂತೆ ಕೊಟ್ಟಿರುವ ಸೂಕ್ತ ಕಾಲಂಗಳನ್ನು ತುಂಬುವಾಗ ಸಂವಹನಕ್ಕಾಗಿ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐ.ಡಿ. ಅನ್ನು ಸರಿಯಾಗಿ ನಮೂದಿಸತಕ್ಕದ್ದು. ಸರಿಯಾದ ಮಾಹಿತಿ ಒದಗಿಸದೇ ಮೊಬೈಲ್ ಸಂಖ್ಯೆ/ಇ-ಮೇಲ್ ಸಂದೇಶ ಬರದಿದ್ದಲ್ಲಿ ನೇಮಕಾತಿ ಪ್ರಾಧಿಕಾರ ಹೊಣೆಯಾಗುವುದಿಲ್ಲ
  • ಅಭ್ಯರ್ಥಿ ವಿವರ ಅಪೂರ್ಣವಾಗಿರುವ, ಫೋಟೋ ಮತ್ತು ಸಹಿ ಅಪ್-ಲೋಡ್ ಮಾಡದೇ ಇರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
  • ಪ್ರಸ್ತುತ ಹುದ್ದೆಗೆ ನಿಗದಿಪಡಿಸಿರುವ ವಿದ್ಯಾರ್ಹತೆಯಾದ ಪದವಿ ಪೂರ್ವ ಶಿಕ್ಷಣ ಪರೀಕ್ಷೆ ಉತ್ತೀರ್ಣ ಅಥವಾ ತತ್ಸಮಾನ ವಿದ್ಯಾರ್ಹತೆ ಅಂಕಪಟ್ಟಿ, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಕನ್ನಡ ಮತ್ತು ಆಂಗ್ಲ ಕಿರಿಯ ದರ್ಜೆ ಬೆರಳಚ್ಚು ಪರೀಕ್ಷೆ ಉತ್ತೀರ್ಣ ಅಥವಾ ತತ್ಸಮಾನ ವಿದ್ಯಾರ್ಹತೆ ಅಂಕಪಟ್ಟಿಗಳನ್ನು ಅಪ್-ಲೋಡ್ ಮಾಡದೇ ಇರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
  • ಅಭ್ಯರ್ಥಿಯು ತಮ್ಮ ಮಾಹಿತಿಗಾಗಿ ಭರ್ತಿಮಾಡಿ ಸಲ್ಲಿಸಿದ ಅರ್ಜಿಯ ಒಂದು ಫೋಟೋ ಪ್ರತಿಯನ್ನು ನೇಮಕಾತಿ ಪ್ರಕ್ರಿಯೆಯು ಪೂರ್ಣಗೊಳ್ಳುವ ವರೆಗೆ ಕಡ್ಡಾಯವಾಗಿ ತಮ್ಮೊಂದಿಗೆ ಇಟ್ಟುಕೊಳ್ಳಲು ಸೂಚಿಸಿದೆ.
  • ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಕೋರುವ ವಿವಿಧ ಮೀಸಲಾತಿಗೆ ಸಂಬಂಧಪಟ್ಟಂತೆ ಅಗತ್ಯ ದಾಖಲೆ/ಪ್ರಮಾಣ ಪತ್ರಗಳನ್ನು ಸೂಕ್ತ ಪ್ರಾಧಿಕಾರದಿಂದ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದೊಳಗಾಗಿ ಅಥವಾ ಅಭ್ಯರ್ಥಿಯು ಅರ್ಜಿ ಸಲ್ಲಿಸುವ ದಿನಾಂಕದೊಳಗಾಗಿ ಪಡೆದಿಟ್ಟುಕೊಂಡಿರಬೇಕು ಹಾಗೂ ಚಾಲ್ತಿಯಲ್ಲಿರಬೇಕು. ಸದರಿ ದಾಖಲೆಗಳನ್ನು ಬೆರಳಚ್ಚು ಪರೀಕ್ಷೆಗೆ ಹಾಜರಾದಾಗ ಪರಿಶೀಲನೆಗಾಗಿ ಸಲ್ಲಿಸುವುದು. ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ ನಂತರ ಪಡೆದ ಪ್ರಮಾಣ ಪತ್ರಗಳನ್ನು ಪರಿಗಣಿಸಲಾಗುವುದಿಲ್ಲ.
  • ಅಭ್ಯರ್ಥಿಗಳು ಜಾತಿ ಮೀಸಲಾತಿ / ಗ್ರಾಮೀಣ ಮೀಸಲಾತಿ/ ಕನ್ನಡ ಮಾಧ್ಯಮ ಮೀಸಲಾತಿ/ ಎದ್ದು ಕಾಣುವ ಅಂಗವೈಕಲ್ಯ ಅಭ್ಯರ್ಥಿ ಮೀಸಲಾತಿ ಕೋರಿದ್ದಲ್ಲಿ, ಈ ಸಂಸ್ಥೆಯ ಜಾಲತಾಣದಲ್ಲಿ (ವೆಬ್‌ಸೈಟ್) ಪ್ರಕಟಿಸಿರುವ ನಿಗದಿತ ನಮೂನೆಗಳಲ್ಲಿ ಪ್ರಮಾಣ ಪತ್ರಗಳನ್ನು ಪಡೆದಿಟ್ಟುಕೊಂಡಿರತಕ್ಕದ್ದು.
  • ನೇಮಕಾತಿಯು ತಾತ್ಕಾಲಿಕವಾಗಿದ್ದು, ಆಯ್ಕೆಯಾಗಿ ನೇಮಕಗೊಂಡ ಅಭ್ಯರ್ಥಿಗಳು 2 ವರ್ಷಗಳ ಅವಧಿಗೆ ಅಥವಾ ಅಗತ್ಯವಿದ್ದರೆ ವಿಸ್ತರಿಸಬಹುದಾದ ಅವಧಿಗೆ ಪರಿವೀಕ್ಷಣಾರ್ಥಿಗಳಾಗಿರುತ್ತಾರೆ.
  • ಆಯ್ಕೆಯಾದ ಅಭ್ಯರ್ಥಿಗಳನ್ನು ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಯಾವುದೇ ಶಾಖಾ ಕಚೇರಿಗಳಿಗೆ ಕೂಡ ನೇಮಕ/ವರ್ಗಾವಣೆ ಮಾಡಬಹುದಾಗಿದೆ.
  • ಅಧಿಸೂಚನೆಯ ಪ್ರಕಾರ ನೇಮಕಗೊಂಡವರು ಸರ್ಕಾರದ ಆದೇಶ ಸಂಖ್ಯೆ:ಎಫ್.ಡಿ(ಸ್ಪೆಷಲ್) 04 ಪಿಎನ್ ಇ 2005, ದಿನಾಂಕ:31-6-2006ರಲ್ಲಿ ತಿಳಿಸಿದಂತೆ ಕಾಂಟ್ರಿಬ್ಯೂಟರಿ ಪಿಂಚಣಿ ಸ್ಕೀಂಗೆ ವಂತಿಗೆ ನೀಡಬೇಕಾಗುತ್ತದೆ.
  • ಕೆ.ಸಿ.ಎಸ್. (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ಪ್ರಕಾರ ಅಥವಾ ಇನ್ನಾವುದೇ ನಿಯಮಗಳ ಪ್ರಕಾರ ಅಭ್ಯರ್ಥಿಯು ಅನರ್ಹರಾಗಿದ್ದಲ್ಲಿ ನೇಮಕಾತಿಗೆ ಅರ್ಹರಾಗುವುದಿಲ್ಲ.
  • ಅಭ್ಯರ್ಥಿಯು ತನ್ನ ಜನ್ಮ ದಿನಾಂಕವನ್ನು ನಮೂದಿಸಿರುವ ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯ ಪ್ರಮಾಣ ಪತ್ರವನ್ನು ಪರಿಶೀಲನೆ ಸಮಯದಲ್ಲಿ ಹಾಜರುಪಡಿಸತಕ್ಕದ್ದು.
  • ಅಭ್ಯರ್ಥಿಯು ಸ್ವಯಂ ದೃಢೀಕೃತ ಛಾಯಾಪ್ರತಿಗಳ (ದೃಢೀಕೃತ ಜೆರಾಕ್ಸ್ ಪ್ರತಿಗಳ) ಗುಚ್ಛದೊಂದಿಗೆ ಎಲ್ಲಾ ಮೂಲ ಅರ್ಹತಾ ಪತ್ರಗಳನ್ನು ಅಂದರೆ ಎಸ್.ಎಸ್.ಎಲ್.ಸಿ. ಅಂಕಪಟ್ಟಿ/10ನೇ ತರಗತಿ, ಪದವಿ ಪೂರ್ವ ಶಿಕ್ಷಣದ ಅಂಕಪಟ್ಟಿ, ಬೆರಳಚ್ಚು ಪರೀಕ್ಷೆಗಳ ಅಂಕಪಟ್ಟಿಗಳು, ಜಾತಿ ಪ್ರಮಾಣ ಪತ್ರಗಳು ಯಾವುದೇ ಮೀಸಲಾತಿ ಕ್ಲೇಮ್ ಮಾಡಿರುವ ಪ್ರಮಾಣ ಪತ್ರಗಳು ಮತ್ತು ಮೂರು ನಡತೆ ಪ್ರಮಾಣ ಪತ್ರಗಳನ್ನು (ಒಂದು ನಡತೆ ಪ್ರಮಾಣ ಪತ್ರವನ್ನು ಅಂತಿಮವಾಗಿ ವ್ಯಾಸಂಗ ಮಾಡಿದ ಶಿಕ್ಷಣ ಸಂಸ್ಥೆಯಿಂದಲೂ, ಇನ್ನೆರಡು ನಡತೆ ಪ್ರಮಾಣ ಪತ್ರಗಳನ್ನು ಅಭ್ಯರ್ಥಿಯ ಸಂಬಂಧಿಕರಲ್ಲದ ಗೌರವಾನ್ವಿತ ವ್ಯಕ್ತಿಗಳಿಂದಲೂ ಪಡೆದು) ಪರಿಶೀಲನೆಗಾಗಿ ಹಾಜರಾಗುವಾಗ ಹಾಜರುಪಡಿಸತಕ್ಕದ್ದು.
  • ಕ್ಲರ್ಕ್-ಕಂ-ಟೈಪಿಸ್ಟ್ ಹುದ್ದೆಗೆ 1:10 ಅನುಪಾತದಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಅರ್ಹತಾ ಪರೀಕ್ಷೆಯನ್ನು ಈ ಸಂಸ್ಥೆಯ ಕೇಂದ್ರ ಕಚೇರಿ ಬೆಂಗಳೂರಿನಲ್ಲಿ ನಡೆಸಲಾಗುವುದು. ಅಭ್ಯರ್ಥಿಗಳು ಅರ್ಹತಾ ಪರೀಕ್ಷೆಗೆ ಸಮಯಕ್ಕೆ ಸರಿಯಾಗಿ ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗತಕ್ಕದ್ದು.
  • ಅರ್ಹತಾ ಪರೀಕ್ಷೆಗೆ ಆಯ್ಕೆಯಾದ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಅಧಿಕೃತ ವೆಬ್‌ಸೈಟ್ (ಜಾಲತಾಣ) ನಲ್ಲಿ ಪ್ರಕಟಿಸಲಾಗುವುದು. ಅರ್ಹ ಅಭ್ಯರ್ಥಿಗಳ ಮೊಬೈಲ್‌ಗೆ ಸಂದೇಶ ಅಥವಾ ಇ-ಮೇಲ್ ಮೂಲಕ ಮಾಹಿತಿಯನ್ನು ನೀಡಲಾಗುವುದು. ಅರ್ಹತಾ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಕರೆ ಪತ್ರವನ್ನು ಡೌನ್‌ಲೋಡ್ ಮಾಡಿಕೊಂಡು ಅರ್ಹತಾ ಪರೀಕ್ಷೆ ದಿನ ಹಾಜರುಪಡಿಸತಕ್ಕದ್ದು.
  • ಅಭ್ಯರ್ಥಿಗಳು ಅಭ್ಯರ್ಥಿತನದ ಸಂದರ್ಭದಲ್ಲಿ ಸಿಬ್ಬಂದಿ ಅಥವಾ ಸಿಬ್ಬಂದಿಯೇತರ ಮೂಲಗಳ ಮೂಲಕ ಯಾವುದೇ ರೀತಿಯ ಬಾಹ್ಯ ಬೆಂಬಲ ಪಡೆಯುವ ಪ್ರಯತ್ನ ಮಾಡಿದ್ದಲ್ಲಿ ಅಂತಹ ಅಭ್ಯರ್ಥಿಗಳ ನೇಮಕಾತಿಯನ್ನು / ಅಭ್ಯರ್ಥಿತನವನ್ನು ಅನರ್ಹಗೊಳಿಸಲಾಗುವುದು.
  • ಕ್ಲರ್ಕ್-ಕಂ-ಟೈಪಿಸ್ಟ್ ನೇಮಕಾತಿಯು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ ರಿಟ್ ಅರ್ಜಿ ಸಂಖ್ಯೆ: 200448/2025, 17968/2025 ಮತ್ತು 3145/2023ಗಳ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ.
  • ಮೇಲ್ಕಂಡ ಹುದ್ದೆಗೆ ಸಂಬಂಧಿಸಿದಂತೆ ಆನ್-ಲೈನ್ ಅರ್ಜಿಯನ್ನು ಸಲ್ಲಿಸುವಾಗ ಅಭ್ಯರ್ಥಿಯು ಮೇಲೆ ಸೂಚಿಸಲಾದಂತಹ ತನ್ನ ವಿದ್ಯಾರ್ಹತೆ ಹಾಗೂ ಇತರೇ ಮಾನದಂಡಗಳನ್ನು ಪೂರ್ಣಗೊಳಿಸಲಾಗಿದೆಯೆಂದು ಹಾಗೂ ತಾನು ಒದಗಿಸಿರುವ ಎಲ್ಲಾ ವಿವರಗಳು ಎಲ್ಲಾ ಆಯಾಮಗಳಲ್ಲಿಯೂ ಸರಿಯಾಗಿವೆ ಎಂದು ಖಚಿತ ಪಡಿಸತಕ್ಕದ್ದು. ನೇಮಕಾತಿಯ ಯಾವುದೇ ಹಂತದಲ್ಲಿ, ಅಭ್ಯರ್ಥಿಯು ವಿದ್ಯಾರ್ಹತೆಯ ಮಾನದಂಡಗಳನ್ನು ಪೂರ್ಣಗೊಳಿಸಿಲ್ಲವೆಂದು ಅಥವಾ ಆತ/ಆಕೆ ಯಾವುದೇ ಪ್ರಮುಖ ವಾಸ್ತವಾಂಶಗಳನ್ನು ಮರೆಮಾಚಿರುತ್ತಾನೆ/ಳೆಂದು, ತಿರುಚಿರುತ್ತಾನೆ/ಳೆಂದು, ಮೊಟುಕುಗೊಳಿಸಿರುತ್ತಾನೆ/ಳೆಂದು ಕಂಡು ಬಂದ ಸಂದರ್ಭದಲ್ಲಿ ಆತನ/ಆಕೆಯ ಅಭ್ಯರ್ಥಿತನವನ್ನು ರದ್ದುಗೊಳಿಸಲಾಗುವುದು. ಈ ಯಾವುದೇ ನ್ಯೂನತೆಗಳು ನೇಮಕಾತಿಯ ನಂತರ ಕಂಡುಬಂದರೂ ಸಹ ಮತ್ತು ತಪ್ಪಾದ, ಅಪೂರ್ಣವಾದ ಅಥವಾ ಸರಿಯಿಲ್ಲದ ಮಾಹಿತಿಯನ್ನು ಒದಗಿಸುವುದು ಅನರ್ಹತೆಗೆ ಕಾರಣವಾಗುವುದು ಮಾತ್ರವಲ್ಲದೇ, ಅಂತಹ ಮಾಹಿತಿಯನ್ನು ಒದಗಿಸಿದ್ದಕ್ಕಾಗಿ ಕ್ರಿಮಿನಲ್ ಮೊಕದ್ದಮೆಗೆ ಹೊಣೆಗಾರನಾಗುತ್ತಾನೆ/ಳೆ.

ಆನಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-

  • 10 ನೇ ತರಗತಿ ಅಂಕಪಟ್ಟಿ
  • ಪಿ.ಯು.ಸಿ ಅಂಕಪಟ್ಟಿ
  • ವಿಧ್ಯಾರ್ಹತೆ ಪ್ರಮಾಣ ಪತ್ರ (ಹುದ್ದೆಗೆ ನಿಗಧಿಪಡಿಸಿದ )
  • ಜಾತಿ ಪ್ರಮಾಣ ಪತ್ರ
  • ಮೀಸಲಾತಿ ಪ್ರಮಾಣ ಪತ್ರಗಳು (ಕನ್ನಡ/ಗ್ರಾಮೀಣ/ಮುಳುಗಡೆ/ಇತರೆ)
  • ಅಂಗವೀಕಲ್ ಪ್ರಮಾಣ ಪತ್ರ (ಅಂಗವೀಕಲ ಅಭ್ಯರ್ಥಿಗಳಿಗೆ ಮಾತ್ರ)
  • ಮೊಬೈಲ್ ಸಂಖ್ಯೆ & ಇ-ಮೇಲ್ ಐಡಿ
  • ಇತ್ತೀಚಿನ White Background ಭಾವಚಿತ್ರ & ಕಪ್ಪು ಬಣ್ಣದ ಸಹಿ

ಕ್ಲರ್ಕ್-ಕಂ-ಟೈಪಿಸ್ಟ್ ಹುದ್ದೆಯ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ ಮಾಡಿhttps://lokayukta.karnataka.gov.in/pdf/notification/Gazettee-2026%20(26%20CCT%20posts).pdf

ಕ್ಲರ್ಕ್-ಕಂ-ಟೈಪಿಸ್ಟ್  ಹುದ್ದೆಗೆ ಅರ್ಜಿ ಸಲ್ಲಿಸಲು  ಇಲ್ಲಿ ಕ್ಲಿಕ ಮಾಡಿ https://lokayukta.karnataka.gov.in/recruitment.php

 

 

Leave a Comment

Your email address will not be published. Required fields are marked *

Scroll to Top