ಕರ್ನಾಟಕ ಉಚ್ಚ ನ್ಯಾಯಾಲಯವು ಕಲ್ಯಾಣ ಕರ್ನಾಟಕ ಹಾಗೂ ಉಳಿಕೆ ಮೂಲವೃಂದದಲ್ಲಿ ಖಾಲಿ ಇರುವ ಅಸಿಸ್ಟೆಂಟ್ ಕೋರ್ಟ ಸೆಕ್ರೆಟರಿ ಹುದ್ದೆಗಳ ನೇಮಕಾತಿಗಾಗಿ ಪರಿಷ್ಕೃತ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿ, ಪುನಃ ಆನಲೈನ್ ಮುಖಾಂತರ ಅರ್ಜಿಯನ್ನು ಆಹ್ವಾನಿಸಿದೆ. ನೇಮಕಾತಿ ಸಂಪೂರ್ಣ ವಿವರ ಈ ಕೆಳಗಿನಂತೆ ಇರುತ್ತದೆ.
ಹುದ್ದೆಗಳ ವಿವರ:-
- ಹುದ್ದೆಯ ಹೆಸರು :- ಅಸಿಸ್ಟೆಂಟ್ ಕೋರ್ಟ ಸೆಕ್ರೆಟರಿ
- ಒಟ್ಟು ಹುದ್ದೆಗಳು:- 85 (79- ಉಳಿಕೆ ಮೂಲವೃಂದ, 12-ಕಲ್ಯಾಣ ಕರ್ನಾಟಕ)
ಪ್ರಮುಖ ದಿನಾಂಕಗಳು:-
- ಪರಿಷ್ಕೃತ ಅಧಿಸೂಚನೆ ಬಿಡುಗಡೆ ಮಾಡಿದ ದಿನಾಂಕ: 1 ಜುಲೈ 2026
- ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 30, 2026 (ರಾತ್ರಿ 11:59 ರವರೆಗೆ)
ಖಾಲಿ ಇರುವ ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ:-
ಒಟ್ಟು 85 ಹುದ್ದೆಗಳಿಗೆ ಆನಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿದೆ ಅದರಲ್ಲಿ 73 ಹುದ್ದೆಗಳನ್ನು ಉಳಿಕೆ ಮೂಲವೃಂದಕ್ಕೆ ಹಾಗೂ 12 ಹುದ್ದೆಗಳನ್ನು ಕಲ್ಯಾಣ ಕರ್ನಾಟಕ ವೃಂದಕ್ಕೆ ಹಂಚಿಕೆ ಮಾಡಿ, ಅಧಿಕೃತ ಅಧಿಸೂಚನೆಯನ್ನು ಬಿಡುಗಡೆಗೊಳಿಸಿರುತ್ತಾರೆ.
- ಅಭ್ಯರ್ಥಿಗಳು ಯಾವುದೇ ಮಾನ್ಯತೆ ಹೊಂದಿರುವ ವಿಶ್ವವಿದ್ಯಾಲಯದಿಂದ ವಿಜ್ಞಾನ/ ಕಲೆ/ವಾಣಿಜ್ಯ/ವ್ಯವಹಾರ ನಿರ್ವಹಣೆ(Business Management)/ಕಂಪ್ಯೂಟರ್ ಅಪ್ಲೀಕೇಶನ್ಸ/ವ್ಯವಹಾರ ಆಡಳಿತ (Business Administration) ಅಥವಾ ಇತರೆ ಯಾವುದೇ ಮಾನ್ಯತೆ ಹೊಂದಿರುವ ವಿಶ್ವವಿದ್ಯಾಲಯದಿಂದ ತತ್ಸಮಾನ ಪರೀಕ್ಷೆಯಲ್ಲಿ ಪಾಸಾಗಿರಬೇಕು ಮತ್ತು
- ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅಥವಾ ಇತರೆ ಮಾನ್ಯತೆ ಹೊಂದಿರುವ ಮಂಡಳಿಯು ನಡೆಸುವ ಆಂಗ್ಲ ಶೀಘ್ರಲಿಪಿ ಪ್ರೌಢ ದರ್ಜೆ ಅಥವಾ ಆಂಗ್ಲ ಶೀಘ್ರಲಿಪಿ ಪ್ರೋಫಿಶಿಯನ್ಸಿ ಮತ್ತು ಬೆರಳಚ್ಚು ಪ್ರೌಢ ದರ್ಜೆ ಪರೀಕ್ಷೆಯಲ್ಲಿ ಪಾಸಾಗಿರಬೇಕು ಅಥವಾ
- ತಾಂತ್ರಿಕ ಪರೀಕ್ಷಾ ಮಂಡಳಿಯು (ತಾಂತ್ರಿಕ ಶಿಕ್ಷಣ ಇಲಾಖೆ) ಅಥವಾ ಇತರೆ ಯಾವುದೇ ಮಾನ್ಯತೆ ಹೊಂದಿರುವ ತಾಂತ್ರಿಕ ಮಂಡಳಿಯು ನಡೆಸುವ ಆಂಗ್ಲ ಕಮರ್ಷಿಯಲ್ ಪ್ರಾಕ್ಟೀಸ್/ಸೆಕ್ರೇಟರಿಯಲ್ ಪ್ರಾಕ್ಟೀಸ್ ಡಿಪ್ಲೋಮಾ ಪರೀಕ್ಷೆಯಲ್ಲಿ ಪಾಸಾಗಿರಬೇಕು ಮತ್ತು
- ಕಂಪ್ಯೂಟರ್ ನಿರ್ವಹಣಾ ಜ್ಞಾನ ಹೊಂದಿರಬೇಕು (ಕಂಪ್ಯೂಟರ್ ನಿರ್ವಹಣಾ ಜ್ಞಾನ ಎಂದರೆ ಕನಿಷ್ಠ ಮೂರು ತಿಂಗಳ ಕಂಪ್ಯೂಟರ್ ಬೇಸಿಕ್ಸ ಕೋರ್ಸಿನ ಪ್ರಮಾಣಪತ್ರವನ್ನು ಕಂಪ್ಯೂಟರ್ ಶಿಕ್ಷಣ ನೀಡುವ ಸಂಸ್ಥೆಯಿಂದ ಹೊಂದಿರಬೇಕು)
ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ವಯೋಮಿತಿ:-
- ಸಾಮಾನ್ಯ ಅಭ್ಯರ್ಥಿಗಳು-18 ರಿಂದ 40 ವರ್ಷಗಳು
- ಹಿಂದುಳಿದ ವರ್ಗಗಳು (2ಎ,2ಬಿ.3ಎ.3ಬಿ)- 18 ರಿಂದ 43 ವರ್ಷಗಳು
- ಪ್ರವರ್ಗ-1/ಎಸ್.ಸ್ಸಿ/ಎಸ್.ಟಿ- 18 ರಿಂದ 45 ವರ್ಷಗಳು
ವೇತನ ಶ್ರೇಣಿ:-
- ಅಸಿಸ್ಟಂಟ್ ಕೋರ್ಟ ಸೆಕ್ರೆಟರಿ-ರೂ.44,900 ರಿಂದ 1,42,400 (Level-7) ಇತರೆ ಭತ್ಯೆಗಳೊಂದಿಗೆ
ನೇಮಕಾತಿ ವಿಧಾನ:-
ಅಭ್ಯರ್ಥಿಗಳ ಆಯ್ಕೆಯನ್ನು ಈ ಕೆಳಗಿನ ನಿಯಮಗಳ ಅನುಸಾರ ಮಾಡಲಾಗುತ್ತದೆ–
- ಕಾಲಕಾಲಕ್ಕೆ ತಿದ್ದುಪಡಿ ಮಾಡಲಾದ ಕರ್ನಾಟಕ ಉಚ್ಚ ನ್ಯಾಯಾಲಯದ (ಸೇವಾ ಮತ್ತು ನೇಮಕಾತಿ ಷರತ್ತುಗಳು) ನಿಯಮಗಳು, 1973,
- ಕಾಲಕಾಲಕ್ಕೆ ತಿದ್ದುಪಡಿ ಮಾಡಲಾದ ಕರ್ನಾಟಕ ಉಚ್ಚ ನ್ಯಾಯಾಲಯದ (ಸೇವಾ ಮತ್ತು ನೇಮಕಾತಿ ಷರತ್ತುಗಳು) ನಿಯಮಗಳು, 1984,
- ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977,
- ಕರ್ನಾಟಕ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರೆ ಹಿಂದುಳಿದ ವರ್ಗಗಳು (ನೇಮಕಾತಿ ಮೀಸಲಾತಿ ಇತ್ಯಾದಿ) ಕಾಯಿದೆ, 1990,
- ಕರ್ನಾಟಕ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರೆ ಹಿಂದುಳಿದ ವರ್ಗಗಳು (ನೇಮಕಾತಿ ಮೀಸಲಾತಿ ಇತ್ಯಾದಿ) ನಿಯಮಗಳು, 1992.
- ಈ ಕೆಳಗಿನ ಸರ್ಕಾರದ ಸುತ್ತೋಲೆಗಳು / ಅಧಿಸೂಚನೆಗಳ ಪ್ರಕಾರ:-
ಕ್ರ ಸಂ | ಸರ್ಕಾರದ ಅಧಿಸೂಚನೆ/ಸುತ್ತೋಲೆ | ದಿನಾಂಕ | ವಿವರ |
1. | ಸಿಆಸುಇ 262 ಸೆನೆನಿ 2025 | 29.01.2026 | ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆಯನ್ನು ನೀಡುವ ಬಗ್ಗೆ (ಒಂದು ಬಾರಿಯ ಕ್ರಮವಾಗಿ) |
2. | ಸಿಆಸುಇ 08 ಸೆನೆನಿ 2001 | 13.02.2001 | ಅಭ್ಯರ್ಥಿಯು ಗ್ರಾಮೀಣಮೀಸಲಾತಿ ಸೌಲಭ್ಯ ಕೋರುವ ಬಗ್ಗೆ. |
3. | ಸಿಆಸುಇ 71 ಸೆನೆನಿ 2001 | 24.10.2002 | ಅಭ್ಯರ್ಥಿಯು ಕನ್ನಡ ಮಾಧ್ಯಮ ಮೀಸಲಾತಿ ಸೌಲಭ್ಯ ಕೋರುವ ಬಗ್ಗೆ. |
4. | ಸಿಆಸುಇ 23 ಸೆನೆನಿ 1999 | 23.11.2000 | ಅಭ್ಯರ್ಥಿಯು ಯೋಜನಾ ನೀರಾಶ್ರಿತ ಮೀಸಲಾತಿ ಸೌಲಭ್ಯ ಕೋರುವ ಬಗ್ಗೆ. |
5. | ಸಿಆಸುಇ 19 ಸೆನೆನಿ 2020 | 12.10.2020 | ಸೇವಾನಿರತ ಅಭ್ಯರ್ಥಿಯ ನಿರಕ್ಷೇಪಣಾ ಪ್ರಮಾಣಪತ್ರದ ಬಗ್ಗೆ |
ಉದ್ಯೋಗದ ಸ್ಥಳ:-
- ಕರ್ನಾಟಕ (ಬೆಂಗಳೂರು/ಧಾರವಾಡ/ಕಲಬುರ್ಗಿ)
ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಅರ್ಜಿ ಶುಲ್ಕ:-
- ಸಾಮಾನ್ಯ ವರ್ಗ:- 500/-
- ಹಿಂದುಳಿದ ವರ್ಗಗಳು (2A, 2B, 3A, 3B):- 500/
- ಪ್ರವರ್ಗ-1/Sc /St/Pwd:- 250/-
ಪರಿವೀಕ್ಷಣಾ ಅವಧಿ:-
- ಆಯ್ಕೆಯಾದ ಅಭ್ಯರ್ಥಿಗಳು ಎರಡು ವರ್ಷಗಳ ಅವಧಿಗೆ ಅಥವಾ ಅಗತ್ಯವಿದ್ದರೆ ವಿಸ್ತರಿಸಬಹುದಾದ ಅವಧಿಗೆ ಪರಿವೀಕ್ಷಣಾರ್ಥಿಗಳಾಗಿರುತ್ತಾರೆ.
ಆಯ್ಕೆ ವಿಧಾನ:-
- ಶೀಘ್ರಲಿಪಿ ಪರೀಕ್ಷೆಗೆ ಅಭ್ಯರ್ಥಿಗಳ ಪಟ್ಟಿ:- ಎಲ್ಲಾ ಅರ್ಹ & ಅಂಗೀಕರಿಸಿದ ಅರ್ಜಿಗಳ ಅಭ್ಯರ್ಥಿಗಳನ್ನು ಶೀಘ್ರಲಿಪಿ ಪರೀಕ್ಷೆಗೆ ಕರೆಯುತ್ತಾರೆ.
- ಅಸಿಸ್ಟಂಟ್ ಕೋರ್ಟ ಸೆಕ್ರೆಟರಿ ಹುದ್ದೆಗೆ ಆಯ್ಕೆಯನ್ನು ಶೀಘ್ರಲಿಪಿ & ಸಂದರ್ಶನ ಸಾಮರ್ಥ್ಯದ ಆಧಾರದ ಮೇಲೆ ಈ ಕೆಳಕೆ ತೋರಿಸಿದಂತೆ ಆಯ್ಕೆ ಮಾಡುತ್ತಾರೆ.
ಕ್ರ ಸಂ | ವಿವರಗಳು | ಗರಿಷ್ಠ ಅಂಕಗಳು | ಕನಿಷ್ಠ ಅಂಕಗಳು |
1. | ಶೀಘ್ರಲಿಪಿ ಪರೀಕ್ಷೆ | 100 | 60 |
2. | ಸಂದರ್ಶನ | 20 | 10 |
ಒಟ್ಟು | 120 ಅಂಕಗಳು | 70 ಅಂಕಗಳು | |
- ಶೀಘ್ರಲಿಪಿ ಪರೀಕ್ಷೆಯನ್ನು ನಡೆಸುವ ವಿಧಾನ:- 600 ಪದಗಳನ್ನು ಹೊಂದಿರುವ ಕಂಡಿಕೆಯನ್ನು ನಿಮಿಷಕ್ಕೆ 05 ನಿಮಿಷಗಳ ಕಾಲ ಉಕ್ತಲೇಖನ (Dictation) ನೀಡಲಾಗುತ್ತದೆ & ಅಭ್ಯರ್ಥಿಗಳು ಉಕ್ತಲೇಖನ (Dictation) ನೀಡಿದ ಕಂಡಿಕೆಯನ್ನು ಕಂಪ್ಯೂಟರನಲ್ಲಿ 45 ನಿಮಿಷಗಳಲ್ಲಿ ಲಿಪ್ಯಂತರ/ಅನುವಾದ (Transcribe) ಮಾಡಬೇಕಾಗುತ್ತದೆ.
- ಸಂದರ್ಶನ:- ಶೀಘ್ರಲಿಪಿ ಪರೀಕ್ಷೆಯಲ್ಲಿ ಯಶಸ್ವಿಯಾದ ಅಭ್ಯರ್ಥಿಗಳನ್ನು ಅರ್ಹತೆಯ ಕ್ರಮದಲ್ಲಿ ಸಂದರ್ಶನಕ್ಕೆ ಕರೆಯುತ್ತಾರೆ ಮತ್ತು ಸಾಧ್ಯವಾದಷ್ಟು ಮಟ್ಟಿಗೆ, ಪ್ರತಿಯೊಂದು ವಿಬಾಗದಲ್ಲಿ ಖಾಲಿ ಹುದ್ದೆಗಳ ಸಂಖ್ಯೆಯ ಐದು ಪಟ್ಟು ಅಭ್ಯರ್ಥಿಗಳನ್ನು ದರ್ಶನಕ್ಕೆ ಸೂಚಿಸುತ್ತಾರೆ.
ದಾಖಲೆಗಳ ಪರಿಶೀಲನೆ:-
- ಶೈಕ್ಷಣಿಕ ದಾಖಲೆ:- ಅಭ್ಯರ್ಥಿಯು ಎಸ್.ಎಸ್.ಎಲ್.ಸಿ ಮೂಲ ಅಂಕಪಟ್ಟಿ ಅಥವಾ ತತ್ಸಮಾನ ವಿದ್ಯಾರ್ಹತೆಯ ಮೂಲ ಅಂಕಪಟ್ಟಿಯನ್ನು ದಾಖಲೆಗಳ ಪರಿಶೀಲನೆ ಸಮಯದಲ್ಲಿ ಪ್ರಾಧಿಕಾರದ ಮುಂದೆ ಹಾಜರುಪಡಿಸಬೇಕು.
- ವಿದ್ಯಾರ್ಹತೆ:-ವಿಜ್ಞಾನ/ಕಲೆ/ವಾಣಿಜ್ಯ/ವ್ಯವಹಾರ ನಿರ್ವಹಣೆ(Business Management)/ಕಂಪ್ಯೂಟರ್ ಅಪ್ಲೀಕೇಶನ್ಸ/ವ್ಯವಹಾರ ಆಡಳಿತ (Business Administration) ವಿಷಯಗಳಲ್ಲಿ ಪಡೆದ ಪದವಿ ಅಥವಾ ತತ್ಸಮಾನ ಪರೀಕ್ಷೆಯ ಸೆಮಿಸ್ಟರ್ 1 ರಿಂದ 6 ಸೆಮಿಸ್ಟರ್ಸ ಅಥವಾ 1 ರಿಂದ 3 ವರ್ಷಗಳ ಅಂಕಪಟ್ಟಿಗಳ ಜೊತೆಗೆ ಪಾಸಿಂಗ್/ಕನ್ವೋಕೇಶನ್ ಪ್ರಮಾಣಪತ್ರಗಳನ್ನು ದಾಖಲೆಗಳ ಪರಿಶೀಲನೆ ಸಮಯದಲ್ಲಿ ಪ್ರಾಧಿಕಾರದ ಮುಂದೆ ಹಾಜರುಪಡಿಸಬೇಕು.
- ಪಾಸಿಂಗ್/ಕನ್ವೋಕೇಶನ್ ಪ್ರಮಾಣಪತ್ರಗಳೊಂದಿಗೆ ಡಿಪ್ಲೋಮಾದಲ್ಲಿ ಕಮರ್ಷೀಯಲ್ ಪ್ರಾಕ್ಟೀಸ್/ಸೆಕ್ರೆಟರಿಯಲ್ ಪ್ರಾಕ್ಟೀಸ್ ಅಂಕಪಟ್ಟಿಗಳು ಅದರಲ್ಲಿ ಸೆಮಿಸ್ಟರಗಳು ಆದಲ್ಲಿ 1 ರಿಂದ 6 ಸೆಮಿಸ್ಟರ್ಸ ಅಥವಾ 1 ರಿಂದ 3 ವರ್ಷಗಳ ಅಂಕಪಟ್ಟಿಗಳನ್ನು ದಾಖಲೆಗಳ ಪರಿಶೀಲನೆ ಸಮಯದಲ್ಲಿ ಪ್ರಾಧಿಕಾರದ ಮುಂದೆ ಹಾಜರುಪಡಿಸಬೇಕು.
- ಆಂಗ್ಲ ಶೀಘ್ರಲಿಪಿ ಪ್ರೌಢ ದರ್ಜೆ ಅಥವಾ ಆಂಗ್ಲ ಶೀಘ್ರಲಿಪಿ ಪ್ರೋಫಿಶಿಯನ್ಸಿ ಮತ್ತು ಬೆರಳಚ್ಚು ಪ್ರೌಢ ದರ್ಜೆ ಪ್ರಮಾಣ ಪತ್ರವನ್ನು ದಾಖಲೆಗಳ ಪರಿಶೀಲನೆ ಸಮಯದಲ್ಲಿ ಪ್ರಾಧಿಕಾರದ ಮುಂದೆ ಹಾಜರುಪಡಿಸಬೇಕು.
- ಆಂಗ್ಲ ಬೆರಳಚ್ಚು ಪ್ರೌಢ ದರ್ಜೆ ಪರೀಕ್ಷೆಯ ಪ್ರಮಾಣ ಪತ್ರವನ್ನು ದಾಖಲೆಗಳ ಪರಿಶೀಲನೆ ಸಮಯದಲ್ಲಿ ಪ್ರಾಧಿಕಾರದ ಮುಂದೆ ಹಾಜರುಪಡಿಸಬೇಕು.
- ಜಾತಿ & ಆದಾಯ ಪ್ರಮಾಣ ಪತ್ರ:- ಅಭ್ಯರ್ಥಿಯು ದಾಖಲೆಗಳ ಪರಿಶೀಲನೆ ಸಮಯದಲ್ಲಿ ಜಾತಿ ಪ್ರಮಾಣ ಪತ್ರವನ್ನು ಪ್ರಾಧಿಕಾರದ ಮುಂದೆ ಹಾಜರುಪಡಿಸಬೇಕು.
- ಮೀಸಲಾತಿ ಕೋರಲು ಮಾನ್ಯವಿರುವ ಮೂಲ ಪ್ರಮಾಣ ಪತ್ರಗಳು:- ಅಭ್ಯರ್ಥಿಯು ದಾಖಲೆಗಳ ಪರಿಶೀಲನೆ ಸಮಯದಲ್ಲಿ ಪ್ರಾಧಿಕಾರದ ಮುಂದೆ ಹಾಜರುಪಡಿಸಬೇಕು.
- ಗುರುತಿನ ಪುರಾವೆ:- ಅಭ್ಯರ್ಥಿಯು ದಾಖಲೆಗಳ ಪರಿಶೀಲನೆ ಸಮಯದಲ್ಲಿ ಗುರುತಿನ ಪುರಾವೆಯಾಗಿ ಮೂಲ ಆಧಾರ್ ಕಾರ್ಡ್/ಚುನಾವಣಾ ಗುರುತಿನ ಚೀಟಿ/ಇತರೆ ದಾಖಲೆಗಳನ್ನು ಪ್ರಾಧಿಕಾರದ ಮುಂದೆ ಹಾಜರುಪಡಿಸಬೇಕು. ಪ್ರಾಧಿಕಾರವು ನಿರ್ದೇಶಿಸಿದಾಗ ಸಂಬಂಧಪಟ್ಟ ದಾಖಲೆಗಳನ್ನು ಅಭ್ಯರ್ಥಿಗಳು ಹಾಜರುಪಡಿಸಬೇಕು.
ಈ ಹಿಂದೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ವಿಶೇಷ ಸೂಚನೆಗಳು:-
- ಅಭ್ಯರ್ಥಿಗಳು ಕರ್ನಾಟಕ ಉಚ್ಛ ನ್ಯಾಯಾಲಯದ ಹಿಂದಿನ ಅಧಿಸೂಚನೆ ಸಂಖ್ಯೆಗಳಾದ HCRB/ACS-1/ 2026 (RPC) & HCRB/ACS-2/ 2026 (KKR) ದಿನಾಂಕ 16 ನೇ ಮಾರ್ಚ 2026 ಅನುಸಾರ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಿರುವ ಎಲ್ಲಾ ಅಭ್ಯರ್ಥಿಗಳು ಮತ್ತೊಮ್ಮೆ ಹೊಸದಾಗಿ ಅರ್ಜಿಯನ್ನು ಸಲ್ಲಿಸುವ ಮತ್ತು ಶುಲ್ಕವನ್ನು ಪಾವತಿಸುವ ಅವಶ್ಯಕತೆಯಿರುವುದಿಲ್ಲ.
- ಪರಿಶಿಷ್ಟ ಜಾತಿಯಡಿಯಲ್ಲಿ ಮೀಸಲಾತಿಯನ್ನು ಕೋರಿದ ಅಭ್ಯರ್ಥಿಗಳು ಕಡ್ಡಾಯವಾಗಿ ಒಳಮೀಸಲಾತಿಯ (ಪ್ರವರ್ಗ – ಎ, ಬಿ ಮತ್ತು ಸಿ) ಮಾಹಿತಿಯನ್ನು ಒದಗಿಸಬೇಕು ಮತ್ತು ಜಾತಿ ಪ್ರಮಾಣಪತ್ರವನ್ನು ಕರ್ನಾಟಕ ಉಚ್ಛ ನ್ಯಾಯಾಲಯದ ಅಂತರ್ಜಾಲದಲ್ಲಿ (https://judiciary.karnataka.gov.in) ಕಡ್ಡಾಯವಾಗಿ ಅಪಲೋಡ ಮಾಡಬೇಕು.
ಆನಲೈನ್ ಮುಖಾಂತರ ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ವೇಳಾಪಟ್ಟಿ:-
- ಆನಲೈನ್ಮುಖಾಂತರ ಅರ್ಜಿ ಸಲ್ಲಿಕೆ ಆರಂಭ:- 01 ಜುಲೈ 2026
- ಆನಲೈನ್ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 30 ಜುಲೈ 2026
- ಅರ್ಜಿಶುಲ್ಕ ಪಾವತಿಸಲು ಕೊನೆಯ ದಿನಾಂಕ:- 30 ಜುಲೈ 2026 (ರಾತ್ರಿ 11.59 ರವರೆಗೆ)
ಆನಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
- 10 ನೇ ತರಗತಿ ಅಂಕಪಟ್ಟಿ
- ಪದವಿ ವಿದ್ಯಾರ್ಹತೆ ಪ್ರಮಾಣ ಪತ್ರಗಳು
- ಪದವಿಯ ಪಾಸಿಂಗ್ಗ/ಘಟಿಕೋತ್ಸವ ಪ್ರಮಾಣ ಪತ್ರ
- ಅಸಿಸ್ಟಂಟ್ ಕೋರ್ಟ ಸೆಕ್ರೆಟರಿ ಹುದ್ದೆಗೆ ನಿಗಧಿಪಡಿಸಿದ ವಿದ್ಯಾರ್ಹತೆಯ ಪ್ರಮಾಣ ಪತ್ರಗಳು
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಮೀಸಲಾತಿ ಪ್ರಮಾಣ ಪತ್ರಗಳು (ಕನ್ನಡ/ಗ್ರಾಮೀಣ/ಮುಳುಗಡೆ)
- ಅಂಗವೀಕಲ್ ಪ್ರಮಾಣ ಪತ್ರ (ಅಂಗವೀಕಲ ಅಭ್ಯರ್ಥಿಗಳಿಗೆ ಮಾತ್ರ)
- ಮೊಬೈಲ್ ಸಂಖ್ಯೆ & ಇ–ಮೇಲ್ ಐಡಿ
- ಇತ್ತೀಚಿನ White Background ಭಾವಚಿತ್ರ & ಕಪ್ಪು ಬಣ್ಣದ ಸಹಿ
For Notification Click Here :- https://judiciary.karnataka.gov.in/common_folder/notification//NOTIFICATION%20DATED%2016.03.2026-1.pdf
For Online Application (RPC) Click Here :- https://judiciary.karnataka.gov.in/recruitment/hck/asr/home.php
For Online Application (KKR) Click Here :- https://judiciary.karnataka.gov.in/recruitment/hck/ask/home.php



