ಕರ್ನಾಟಕ ಉಚ್ಛ ನ್ಯಾಯಾಲಯ ನೇಮಕಾತಿ

ಕರ್ನಾಟಕ ಉಚ್ಚ ನ್ಯಾಯಾಲಯವು ಕಲ್ಯಾಣ ಕರ್ನಾಟಕ ಹಾಗೂ ಉಳಿಕೆ ಮೂಲವೃಂದದಲ್ಲಿ ಖಾಲಿ ಇರುವ ಅಸಿಸ್ಟೆಂಟ್ ಕೋರ್ಟ ಸೆಕ್ರೆಟರಿ ಹುದ್ದೆಗಳ ನೇಮಕಾತಿಗಾಗಿ ಪರಿಷ್ಕೃತ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿ,  ಪುನಃ ಆನಲೈನ್ ಮುಖಾಂತರ ಅರ್ಜಿಯನ್ನು ಆಹ್ವಾನಿಸಿದೆ. ನೇಮಕಾತಿ ಸಂಪೂರ್ಣ ವಿವರ  ಈ ಕೆಳಗಿನಂತೆ ಇರುತ್ತದೆ.Showing Assistant Court Secretary information

ಹುದ್ದೆಗಳ ವಿವರ:-

  • ಹುದ್ದೆಯ ಹೆಸರು :- ಅಸಿಸ್ಟೆಂಟ್ ಕೋರ್ಟ ಸೆಕ್ರೆಟರಿ
  • ಒಟ್ಟು ಹುದ್ದೆಗಳು:- 85 (79- ಉಳಿಕೆ ಮೂಲವೃಂದ, 12-ಕಲ್ಯಾಣ ಕರ್ನಾಟಕ)

ಪ್ರಮುಖ ದಿನಾಂಕಗಳು:-

  • ಪರಿಷ್ಕೃತ ಅಧಿಸೂಚನೆ ಬಿಡುಗಡೆ ಮಾಡಿದ ದಿನಾಂಕ: 1 ಜುಲೈ 2026
  • ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 30, 2026 (ರಾತ್ರಿ 11:59 ರವರೆಗೆ)

ಖಾಲಿ ಇರುವ ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ:-

ಒಟ್ಟು 85 ಹುದ್ದೆಗಳಿಗೆ ಆನಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿದೆ ಅದರಲ್ಲಿ 73 ಹುದ್ದೆಗಳನ್ನು ಉಳಿಕೆ ಮೂಲವೃಂದಕ್ಕೆ ಹಾಗೂ 12 ಹುದ್ದೆಗಳನ್ನು ಕಲ್ಯಾಣ ಕರ್ನಾಟಕ ವೃಂದಕ್ಕೆ ಹಂಚಿಕೆ ಮಾಡಿ, ಅಧಿಕೃತ ಅಧಿಸೂಚನೆಯನ್ನು ಬಿಡುಗಡೆಗೊಳಿಸಿರುತ್ತಾರೆ.

  • ಅಭ್ಯರ್ಥಿಗಳು ಯಾವುದೇ ಮಾನ್ಯತೆ ಹೊಂದಿರುವ ವಿಶ್ವವಿದ್ಯಾಲಯದಿಂದ ವಿಜ್ಞಾನ/ ಕಲೆ/ವಾಣಿಜ್ಯ/ವ್ಯವಹಾರ ನಿರ್ವಹಣೆ(Business Management)/ಕಂಪ್ಯೂಟರ್ ಅಪ್ಲೀಕೇಶನ್ಸ/ವ್ಯವಹಾರ ಆಡಳಿತ (Business Administration) ಅಥವಾ ಇತರೆ ಯಾವುದೇ ಮಾನ್ಯತೆ ಹೊಂದಿರುವ ವಿಶ್ವವಿದ್ಯಾಲಯದಿಂದ ತತ್ಸಮಾನ ಪರೀಕ್ಷೆಯಲ್ಲಿ ಪಾಸಾಗಿರಬೇಕು                                                                                                                                                                                                                                ಮತ್ತು
  • ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅಥವಾ ಇತರೆ ಮಾನ್ಯತೆ ಹೊಂದಿರುವ ಮಂಡಳಿಯು ನಡೆಸುವ ಆಂಗ್ಲ ಶೀಘ್ರಲಿಪಿ  ಪ್ರೌಢ ದರ್ಜೆ ಅಥವಾ ಆಂಗ್ಲ ಶೀಘ್ರಲಿಪಿ ಪ್ರೋಫಿಶಿಯನ್ಸಿ ಮತ್ತು ಬೆರಳಚ್ಚು ಪ್ರೌಢ ದರ್ಜೆ ಪರೀಕ್ಷೆಯಲ್ಲಿ ಪಾಸಾಗಿರಬೇಕು                                                                                                                    ಅಥವಾ
  • ತಾಂತ್ರಿಕ ಪರೀಕ್ಷಾ ಮಂಡಳಿಯು (ತಾಂತ್ರಿಕ ಶಿಕ್ಷಣ ಇಲಾಖೆ) ಅಥವಾ ಇತರೆ ಯಾವುದೇ ಮಾನ್ಯತೆ ಹೊಂದಿರುವ ತಾಂತ್ರಿಕ ಮಂಡಳಿಯು ನಡೆಸುವ ಆಂಗ್ಲ ಕಮರ್ಷಿಯಲ್ ಪ್ರಾಕ್ಟೀಸ್/ಸೆಕ್ರೇಟರಿಯಲ್ ಪ್ರಾಕ್ಟೀಸ್ ಡಿಪ್ಲೋಮಾ ಪರೀಕ್ಷೆಯಲ್ಲಿ ಪಾಸಾಗಿರಬೇಕು                                                                                                                                                                    ಮತ್ತು
  • ಕಂಪ್ಯೂಟರ್ ನಿರ್ವಹಣಾ ಜ್ಞಾನ ಹೊಂದಿರಬೇಕು (ಕಂಪ್ಯೂಟರ್ ನಿರ್ವಹಣಾ ಜ್ಞಾನ ಎಂದರೆ ಕನಿಷ್ಠ ಮೂರು ತಿಂಗಳ ಕಂಪ್ಯೂಟರ್ ಬೇಸಿಕ್ಸ ಕೋರ್ಸಿನ ಪ್ರಮಾಣಪತ್ರವನ್ನು ಕಂಪ್ಯೂಟರ್ ಶಿಕ್ಷಣ ನೀಡುವ ಸಂಸ್ಥೆಯಿಂದ ಹೊಂದಿರಬೇಕು)

ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ವಯೋಮಿತಿ:-

  • ಸಾಮಾನ್ಯ ಅಭ್ಯರ್ಥಿಗಳು-18 ರಿಂದ 40 ವರ್ಷಗಳು
  • ಹಿಂದುಳಿದ ವರ್ಗಗಳು (2ಎ,2ಬಿ.3ಎ.3ಬಿ)- 18 ರಿಂದ 43 ವರ್ಷಗಳು
  • ಪ್ರವರ್ಗ-1/ಎಸ್.ಸ್ಸಿ/ಎಸ್.ಟಿ- 18 ರಿಂದ 45 ವರ್ಷಗಳು

ವೇತನ ಶ್ರೇಣಿ:-

  • ಅಸಿಸ್ಟಂಟ್ ಕೋರ್ಟ ಸೆಕ್ರೆಟರಿ-ರೂ.44,900 ರಿಂದ 1,42,400 (Level-7) ಇತರೆ ಭತ್ಯೆಗಳೊಂದಿಗೆ

ನೇಮಕಾತಿ ವಿಧಾನ:-

ಅಭ್ಯರ್ಥಿಗಳ ಆಯ್ಕೆಯನ್ನು ಈ ಕೆಳಗಿನ ನಿಯಮಗಳ ಅನುಸಾರ ಮಾಡಲಾಗುತ್ತದೆ–

  • ಕಾಲಕಾಲಕ್ಕೆ ತಿದ್ದುಪಡಿ ಮಾಡಲಾದ ಕರ್ನಾಟಕ ಉಚ್ಚ ನ್ಯಾಯಾಲಯದ (ಸೇವಾ ಮತ್ತು ನೇಮಕಾತಿ ಷರತ್ತುಗಳು) ನಿಯಮಗಳು, 1973,
  • ಕಾಲಕಾಲಕ್ಕೆ ತಿದ್ದುಪಡಿ ಮಾಡಲಾದ ಕರ್ನಾಟಕ ಉಚ್ಚ ನ್ಯಾಯಾಲಯದ (ಸೇವಾ ಮತ್ತು ನೇಮಕಾತಿ ಷರತ್ತುಗಳು) ನಿಯಮಗಳು, 1984,
  • ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977,
  • ಕರ್ನಾಟಕ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರೆ ಹಿಂದುಳಿದ ವರ್ಗಗಳು (ನೇಮಕಾತಿ ಮೀಸಲಾತಿ ಇತ್ಯಾದಿ) ಕಾಯಿದೆ, 1990,
  • ಕರ್ನಾಟಕ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರೆ ಹಿಂದುಳಿದ ವರ್ಗಗಳು (ನೇಮಕಾತಿ ಮೀಸಲಾತಿ ಇತ್ಯಾದಿ) ನಿಯಮಗಳು, 1992.
  • ಈ ಕೆಳಗಿನ ಸರ್ಕಾರದ ಸುತ್ತೋಲೆಗಳು / ಅಧಿಸೂಚನೆಗಳ ಪ್ರಕಾರ:-

ಕ್ರ ಸಂ

ಸರ್ಕಾರದ ಅಧಿಸೂಚನೆ/ಸುತ್ತೋಲೆ

ದಿನಾಂಕ

ವಿವರ

1.

ಸಿಆಸುಇ 262 ಸೆನೆನಿ 2025

29.01.2026

ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆಯನ್ನು ನೀಡುವ ಬಗ್ಗೆ (ಒಂದು ಬಾರಿಯ ಕ್ರಮವಾಗಿ)

2.

ಸಿಆಸುಇ 08 ಸೆನೆನಿ 2001

13.02.2001

ಅಭ್ಯರ್ಥಿಯು ಗ್ರಾಮೀಣಮೀಸಲಾತಿ ಸೌಲಭ್ಯ ಕೋರುವ ಬಗ್ಗೆ.

3.

ಸಿಆಸುಇ 71 ಸೆನೆನಿ 2001

24.10.2002

ಅಭ್ಯರ್ಥಿಯು ಕನ್ನಡ ಮಾಧ್ಯಮ ಮೀಸಲಾತಿ ಸೌಲಭ್ಯ ಕೋರುವ ಬಗ್ಗೆ.

4.

ಸಿಆಸುಇ 23 ಸೆನೆನಿ 1999

23.11.2000

ಅಭ್ಯರ್ಥಿಯು ಯೋಜನಾ ನೀರಾಶ್ರಿತ ಮೀಸಲಾತಿ ಸೌಲಭ್ಯ ಕೋರುವ ಬಗ್ಗೆ.

5.

ಸಿಆಸುಇ 19 ಸೆನೆನಿ 2020

12.10.2020

ಸೇವಾನಿರತ ಅಭ್ಯರ್ಥಿಯ ನಿರಕ್ಷೇಪಣಾ ಪ್ರಮಾಣಪತ್ರದ ಬಗ್ಗೆ

ಉದ್ಯೋಗದ ಸ್ಥಳ:-

  • ಕರ್ನಾಟಕ (ಬೆಂಗಳೂರು/ಧಾರವಾಡ/ಕಲಬುರ್ಗಿ)

ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಅರ್ಜಿ ಶುಲ್ಕ:-

  • ಸಾಮಾನ್ಯ ವರ್ಗ:- 500/-
  • ಹಿಂದುಳಿದ ವರ್ಗಗಳು (2A, 2B, 3A, 3B):- 500/
  • ಪ್ರವರ್ಗ-1/Sc /St/Pwd:- 250/-

ಪರಿವೀಕ್ಷಣಾ ಅವಧಿ:-

  • ಆಯ್ಕೆಯಾದ ಅಭ್ಯರ್ಥಿಗಳು ಎರಡು ವರ್ಷಗಳ ಅವಧಿಗೆ ಅಥವಾ ಅಗತ್ಯವಿದ್ದರೆ ವಿಸ್ತರಿಸಬಹುದಾದ ಅವಧಿಗೆ ಪರಿವೀಕ್ಷಣಾರ್ಥಿಗಳಾಗಿರುತ್ತಾರೆ.

ಆಯ್ಕೆ ವಿಧಾನ:-

  • ಶೀಘ್ರಲಿಪಿ ಪರೀಕ್ಷೆಗೆ ಅಭ್ಯರ್ಥಿಗಳ ಪಟ್ಟಿ:- ಎಲ್ಲಾ ಅರ್ಹ & ಅಂಗೀಕರಿಸಿದ ಅರ್ಜಿಗಳ ಅಭ್ಯರ್ಥಿಗಳನ್ನು ಶೀಘ್ರಲಿಪಿ ಪರೀಕ್ಷೆಗೆ ಕರೆಯುತ್ತಾರೆ.
  • ಅಸಿಸ್ಟಂಟ್ ಕೋರ್ಟ ಸೆಕ್ರೆಟರಿ ಹುದ್ದೆಗೆ ಆಯ್ಕೆಯನ್ನು ಶೀಘ್ರಲಿಪಿ & ಸಂದರ್ಶನ ಸಾಮರ್ಥ್ಯದ ಆಧಾರದ ಮೇಲೆ ಈ ಕೆಳಕೆ ತೋರಿಸಿದಂತೆ ಆಯ್ಕೆ ಮಾಡುತ್ತಾರೆ.

ಕ್ರ ಸಂ

ವಿವರಗಳು

ಗರಿಷ್ಠ ಅಂಕಗಳು

ಕನಿಷ್ಠ ಅಂಕಗಳು

1.

ಶೀಘ್ರಲಿಪಿ ಪರೀಕ್ಷೆ

100

60

2.

ಸಂದರ್ಶನ

20

10

ಒಟ್ಟು

120 ಅಂಕಗಳು

70 ಅಂಕಗಳು

  • ಶೀಘ್ರಲಿಪಿ ಪರೀಕ್ಷೆಯನ್ನು ನಡೆಸುವ ವಿಧಾನ:- 600 ಪದಗಳನ್ನು ಹೊಂದಿರುವ ಕಂಡಿಕೆಯನ್ನು ನಿಮಿಷಕ್ಕೆ 05 ನಿಮಿಷಗಳ ಕಾಲ ಉಕ್ತಲೇಖನ (Dictation) ನೀಡಲಾಗುತ್ತದೆ & ಅಭ್ಯರ್ಥಿಗಳು  ಉಕ್ತಲೇಖನ (Dictation) ನೀಡಿದ ಕಂಡಿಕೆಯನ್ನು ಕಂಪ್ಯೂಟರನಲ್ಲಿ 45 ನಿಮಿಷಗಳಲ್ಲಿ ಲಿಪ್ಯಂತರ/ಅನುವಾದ (Transcribe) ಮಾಡಬೇಕಾಗುತ್ತದೆ.
  • ಸಂದರ್ಶನ:- ಶೀಘ್ರಲಿಪಿ ಪರೀಕ್ಷೆಯಲ್ಲಿ ಯಶಸ್ವಿಯಾದ ಅಭ್ಯರ್ಥಿಗಳನ್ನು ಅರ್ಹತೆಯ ಕ್ರಮದಲ್ಲಿ ಸಂದರ್ಶನಕ್ಕೆ ಕರೆಯುತ್ತಾರೆ ಮತ್ತು ಸಾಧ್ಯವಾದಷ್ಟು ಮಟ್ಟಿಗೆ, ಪ್ರತಿಯೊಂದು ವಿಬಾಗದಲ್ಲಿ ಖಾಲಿ ಹುದ್ದೆಗಳ ಸಂಖ್ಯೆಯ ಐದು ಪಟ್ಟು ಅಭ್ಯರ್ಥಿಗಳನ್ನು ದರ್ಶನಕ್ಕೆ ಸೂಚಿಸುತ್ತಾರೆ.

ದಾಖಲೆಗಳ ಪರಿಶೀಲನೆ:-

  • ಶೈಕ್ಷಣಿಕ ದಾಖಲೆ:- ಅಭ್ಯರ್ಥಿಯು ಎಸ್.ಎಸ್.ಎಲ್.ಸಿ ಮೂಲ ಅಂಕಪಟ್ಟಿ ಅಥವಾ ತತ್ಸಮಾನ ವಿದ್ಯಾರ್ಹತೆಯ ಮೂಲ ಅಂಕಪಟ್ಟಿಯನ್ನು ದಾಖಲೆಗಳ ಪರಿಶೀಲನೆ ಸಮಯದಲ್ಲಿ ಪ್ರಾಧಿಕಾರದ ಮುಂದೆ ಹಾಜರುಪಡಿಸಬೇಕು.
  • ವಿದ್ಯಾರ್ಹತೆ:-ವಿಜ್ಞಾನ/ಕಲೆ/ವಾಣಿಜ್ಯ/ವ್ಯವಹಾರ ನಿರ್ವಹಣೆ(Business Management)/ಕಂಪ್ಯೂಟರ್ ಅಪ್ಲೀಕೇಶನ್ಸ/ವ್ಯವಹಾರ ಆಡಳಿತ (Business Administration) ವಿಷಯಗಳಲ್ಲಿ ಪಡೆದ ಪದವಿ ಅಥವಾ ತತ್ಸಮಾನ ಪರೀಕ್ಷೆಯ ಸೆಮಿಸ್ಟರ್ 1 ರಿಂದ 6 ಸೆಮಿಸ್ಟರ್ಸ ಅಥವಾ 1 ರಿಂದ 3 ವರ್ಷಗಳ ಅಂಕಪಟ್ಟಿಗಳ ಜೊತೆಗೆ  ಪಾಸಿಂಗ್/ಕನ್ವೋಕೇಶನ್ ಪ್ರಮಾಣಪತ್ರಗಳನ್ನು ದಾಖಲೆಗಳ ಪರಿಶೀಲನೆ ಸಮಯದಲ್ಲಿ ಪ್ರಾಧಿಕಾರದ ಮುಂದೆ ಹಾಜರುಪಡಿಸಬೇಕು.
  • ಪಾಸಿಂಗ್/ಕನ್ವೋಕೇಶನ್ ಪ್ರಮಾಣಪತ್ರಗಳೊಂದಿಗೆ ಡಿಪ್ಲೋಮಾದಲ್ಲಿ ಕಮರ್ಷೀಯಲ್ ಪ್ರಾಕ್ಟೀಸ್/ಸೆಕ್ರೆಟರಿಯಲ್ ಪ್ರಾಕ್ಟೀಸ್ ಅಂಕಪಟ್ಟಿಗಳು ಅದರಲ್ಲಿ ಸೆಮಿಸ್ಟರಗಳು ಆದಲ್ಲಿ 1 ರಿಂದ 6 ಸೆಮಿಸ್ಟರ್ಸ ಅಥವಾ 1 ರಿಂದ 3 ವರ್ಷಗಳ ಅಂಕಪಟ್ಟಿಗಳನ್ನು ದಾಖಲೆಗಳ ಪರಿಶೀಲನೆ ಸಮಯದಲ್ಲಿ ಪ್ರಾಧಿಕಾರದ ಮುಂದೆ ಹಾಜರುಪಡಿಸಬೇಕು.
  • ಆಂಗ್ಲ ಶೀಘ್ರಲಿಪಿ ಪ್ರೌಢ ದರ್ಜೆ ಅಥವಾ ಆಂಗ್ಲ ಶೀಘ್ರಲಿಪಿ ಪ್ರೋಫಿಶಿಯನ್ಸಿ ಮತ್ತು ಬೆರಳಚ್ಚು ಪ್ರೌಢ ದರ್ಜೆ ಪ್ರಮಾಣ ಪತ್ರವನ್ನು ದಾಖಲೆಗಳ ಪರಿಶೀಲನೆ ಸಮಯದಲ್ಲಿ ಪ್ರಾಧಿಕಾರದ ಮುಂದೆ ಹಾಜರುಪಡಿಸಬೇಕು.
  • ಆಂಗ್ಲ ಬೆರಳಚ್ಚು ಪ್ರೌಢ ದರ್ಜೆ ಪರೀಕ್ಷೆಯ ಪ್ರಮಾಣ ಪತ್ರವನ್ನು ದಾಖಲೆಗಳ ಪರಿಶೀಲನೆ ಸಮಯದಲ್ಲಿ ಪ್ರಾಧಿಕಾರದ ಮುಂದೆ ಹಾಜರುಪಡಿಸಬೇಕು.
  • ಜಾತಿ & ಆದಾಯ ಪ್ರಮಾಣ ಪತ್ರ:- ಅಭ್ಯರ್ಥಿಯು ದಾಖಲೆಗಳ ಪರಿಶೀಲನೆ ಸಮಯದಲ್ಲಿ ಜಾತಿ ಪ್ರಮಾಣ ಪತ್ರವನ್ನು  ಪ್ರಾಧಿಕಾರದ ಮುಂದೆ ಹಾಜರುಪಡಿಸಬೇಕು.
  • ಮೀಸಲಾತಿ ಕೋರಲು ಮಾನ್ಯವಿರುವ ಮೂಲ ಪ್ರಮಾಣ ಪತ್ರಗಳು:- ಅಭ್ಯರ್ಥಿಯು ದಾಖಲೆಗಳ ಪರಿಶೀಲನೆ ಸಮಯದಲ್ಲಿ ಪ್ರಾಧಿಕಾರದ ಮುಂದೆ ಹಾಜರುಪಡಿಸಬೇಕು.
  • ಗುರುತಿನ ಪುರಾವೆ:- ಅಭ್ಯರ್ಥಿಯು ದಾಖಲೆಗಳ ಪರಿಶೀಲನೆ ಸಮಯದಲ್ಲಿ ಗುರುತಿನ ಪುರಾವೆಯಾಗಿ ಮೂಲ ಆಧಾರ್ ಕಾರ್ಡ್/ಚುನಾವಣಾ ಗುರುತಿನ ಚೀಟಿ/ಇತರೆ ದಾಖಲೆಗಳನ್ನು ಪ್ರಾಧಿಕಾರದ ಮುಂದೆ ಹಾಜರುಪಡಿಸಬೇಕು. ಪ್ರಾಧಿಕಾರವು ನಿರ್ದೇಶಿಸಿದಾಗ ಸಂಬಂಧಪಟ್ಟ ದಾಖಲೆಗಳನ್ನು ಅಭ್ಯರ್ಥಿಗಳು ಹಾಜರುಪಡಿಸಬೇಕು.

ಈ ಹಿಂದೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ವಿಶೇಷ ಸೂಚನೆಗಳು:-

  • ಅಭ್ಯರ್ಥಿಗಳು ಕರ್ನಾಟಕ ಉಚ್ಛ ನ್ಯಾಯಾಲಯದ ಹಿಂದಿನ ಅಧಿಸೂಚನೆ ಸಂಖ್ಯೆಗಳಾದ HCRB/ACS-1/ 2026 (RPC) & HCRB/ACS-2/ 2026  (KKR)  ದಿನಾಂಕ 16 ನೇ ಮಾರ್ಚ 2026  ಅನುಸಾರ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಿರುವ ಎಲ್ಲಾ ಅಭ್ಯರ್ಥಿಗಳು ಮತ್ತೊಮ್ಮೆ ಹೊಸದಾಗಿ ಅರ್ಜಿಯನ್ನು ಸಲ್ಲಿಸುವ ಮತ್ತು ಶುಲ್ಕವನ್ನು ಪಾವತಿಸುವ ಅವಶ್ಯಕತೆಯಿರುವುದಿಲ್ಲ.
  • ಪರಿಶಿಷ್ಟ ಜಾತಿಯಡಿಯಲ್ಲಿ ಮೀಸಲಾತಿಯನ್ನು ಕೋರಿದ ಅಭ್ಯರ್ಥಿಗಳು ಕಡ್ಡಾಯವಾಗಿ ಒಳಮೀಸಲಾತಿಯ (ಪ್ರವರ್ಗ – ಎ, ಬಿ ಮತ್ತು ಸಿ) ಮಾಹಿತಿಯನ್ನು ಒದಗಿಸಬೇಕು ಮತ್ತು ಜಾತಿ ಪ್ರಮಾಣಪತ್ರವನ್ನು ಕರ್ನಾಟಕ ಉಚ್ಛ ನ್ಯಾಯಾಲಯದ ಅಂತರ್ಜಾಲದಲ್ಲಿ (https://judiciary.karnataka.gov.in) ಕಡ್ಡಾಯವಾಗಿ ಅಪಲೋಡ ಮಾಡಬೇಕು.

ಆನಲೈನ್ ಮುಖಾಂತರ ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ವೇಳಾಪಟ್ಟಿ:-

  • ಆನಲೈನ್ಮುಖಾಂತರ  ಅರ್ಜಿ ಸಲ್ಲಿಕೆ ಆರಂಭ:- 01 ಜುಲೈ 2026
  • ಆನಲೈನ್ಮುಖಾಂತರ  ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 30 ಜುಲೈ 2026
  • ಅರ್ಜಿಶುಲ್ಕ ಪಾವತಿಸಲು ಕೊನೆಯ ದಿನಾಂಕ:- 30 ಜುಲೈ 2026 (ರಾತ್ರಿ 11.59 ರವರೆಗೆ)

ಆನಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-

  • 10 ನೇ ತರಗತಿ ಅಂಕಪಟ್ಟಿ
  • ಪದವಿ ವಿದ್ಯಾರ್ಹತೆ ಪ್ರಮಾಣ ಪತ್ರಗಳು
  • ಪದವಿಯ ಪಾಸಿಂಗ್ಗ/ಘಟಿಕೋತ್ಸವ ಪ್ರಮಾಣ ಪತ್ರ
  • ಅಸಿಸ್ಟಂಟ್ ಕೋರ್ಟ ಸೆಕ್ರೆಟರಿ ಹುದ್ದೆಗೆ ನಿಗಧಿಪಡಿಸಿದ ವಿದ್ಯಾರ್ಹತೆಯ ಪ್ರಮಾಣ ಪತ್ರಗಳು
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಮೀಸಲಾತಿ ಪ್ರಮಾಣ ಪತ್ರಗಳು (ಕನ್ನಡ/ಗ್ರಾಮೀಣ/ಮುಳುಗಡೆ)
  • ಅಂಗವೀಕಲ್ ಪ್ರಮಾಣ ಪತ್ರ (ಅಂಗವೀಕಲ ಅಭ್ಯರ್ಥಿಗಳಿಗೆ ಮಾತ್ರ)
  • ಮೊಬೈಲ್ ಸಂಖ್ಯೆ & ಮೇಲ್ ಐಡಿ
  • ಇತ್ತೀಚಿನ White Background ಭಾವಚಿತ್ರ & ಕಪ್ಪು ಬಣ್ಣದ ಸಹಿ

For Notification Click Here :- https://judiciary.karnataka.gov.in/common_folder/notification//NOTIFICATION%20DATED%2016.03.2026-1.pdf

For Online Application (RPC) Click Here :- https://judiciary.karnataka.gov.in/recruitment/hck/asr/home.php

For Online Application (KKR) Click Here :- https://judiciary.karnataka.gov.in/recruitment/hck/ask/home.php

Leave a Comment

Your email address will not be published. Required fields are marked *

Scroll to Top