ಚಿಕ್ಕಮಗಳೂರು ಪ್ರಧಾನ ಜಿಲ್ಲಾ & ಸತ್ರ ನ್ಯಾಯಾಲಯ ಘಟಕದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ ಶೀಘ್ರಲಿಪಿಗಾರರು ಗ್ರೇಡ್-III, ಬೆರಳಚ್ಚುಗಾರರು & ಬೆರಳಚ್ಚು-ನಕಲುಗಾರರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಹುದ್ದೆಗಳ ವಿವರ:-
- ಒಟ್ಟು ಹುದ್ದೆಗಳು: 12
- ಶೀಘ್ರಲಿಪಿಗಾರರು ಗ್ರೇಡ್-III (Stenographer Grade-III): 05 ಹುದ್ದೆಗಳು
- ಬೆರಳಚ್ಚುಗಾರರು (Typist): 06 ಹುದ್ದೆಗಳು
- ಬೆರಳಚ್ಚು-ನಕಲುಗಾರರು (Typist-Copyist): 01 ಹುದ್ದೆಗಳು
ವಿಧ್ಯಾರ್ಹತೆ:-
ಶೀಘ್ರಲಿಪಿಗಾರರು ಗ್ರೇಡ್-III:
- ದ್ವಿತೀಯ ಪಿ.ಯು.ಸಿ (12ನೇ ತರಗತಿ) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
- ಸಾರ್ವಜನಿಕ ಶಿಕ್ಷಣ ಇಲಾಖೆಯು ನಡೆಸುವ ಕನ್ನಡ & ಆಂಗ್ಲ ಬೆರಳಚ್ಚು ಪ್ರೌಢದರ್ಜೆ ಪರೀಕ್ಷೆ (Senior Grade) ಶೀಘ್ರಲಿಪಿ ಹಾಗೂ ಕನ್ನಡ & ಆಂಗ್ಲ ಬೆರಳಚ್ಚು ಪ್ರೌಢದರ್ಜೆ ಪರೀಕ್ಷೆ (Senior Grade) ಅಥವಾ ಡಿಪ್ಲೋಮಾ ಇನ್ ಕಮರ್ಷಿಯಲ್ ಪ್ರಾಕ್ಟೀಸ್ ಅಥವಾ ತತ್ಸಮಾನ ಪರೀಕ್ಷೆಗಳಲ್ಲಿ ಪಾಸಾಗಿರಬೇಕು.
ಬೆರಳಚ್ಚುಗಾರರು:
- ದ್ವಿತೀಯ ಪಿ.ಯು.ಸಿ (12ನೇ ತರಗತಿ) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
- ಸಾರ್ವಜನಿಕ ಶಿಕ್ಷಣ ಇಲಾಖೆಯು ನಡೆಸುವ ಕನ್ನಡ & ಆಂಗ್ಲ ಬೆರಳಚ್ಚು ಪ್ರೌಢದರ್ಜೆ ಪರೀಕ್ಷೆ (Senior Grade) ಡಿಪ್ಲೋಮಾ ಇನ್ ಕಮರ್ಷಿಯಲ್ ಪ್ರಾಕ್ಟೀಸ್ ಅಥವಾ ತತ್ಸಮಾನ ಪರೀಕ್ಷೆಗಳಲ್ಲಿ ಪಾಸಾಗಿರಬೇಕು.
ಬೆರಳಚ್ಚು-ನಕಲುಗಾರರು:
- ದ್ವಿತೀಯ ಪಿ.ಯು.ಸಿ (12ನೇ ತರಗತಿ) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
- ಸಾರ್ವಜನಿಕ ಶಿಕ್ಷಣ ಇಲಾಖೆಯು ನಡೆಸುವ ಕನ್ನಡ & ಆಂಗ್ಲ ಬೆರಳಚ್ಚು ಕಿರಿಯ ದರ್ಜೆ ಪರೀಕ್ಷೆ (Junior Grade) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಾಸಾಗಿರಬೇಕು.
ವಯೋಮಿತಿ (Age Limit):-
ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದಂದು 18 ವರ್ಷ ಪೂರೈಸಿರಬೇಕು ಮತ್ತು ಗರಿಷ್ಟ ವಯಸ್ಸು ಈ ಕೆಳಕಂಡಂತೆ ಇರಬೇಕು
- ಸಾಮಾನ್ಯ ವರ್ಗ-ಸಾಮಾನ್ಯ ವರ್ಗದ ಅಭ್ಯರ್ಥಿಗಳು 40 ವರ್ಷ ಮೀರಿರಬಾರದು.
- ಹಿಂದುಳಿದ ವರ್ಗಗಳು (2A, 2B, 3A, 3B):-ಅಭರ್ಥಿಗಳು 43 ವರ್ಷ ಮೀರಿರಬಾರದು
- ಪ್ರವರ್ಗ-1/Sc /St:-ಅಭರ್ಥಿಗಳು 45 ವರ್ಷ ಮೀರಿರಬಾರದು
ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಅರ್ಜಿ ಶುಲ್ಕ:-
ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿದ ನಂತರ ಅರ್ಜಿಯಲ್ಲಿ ಸೂಚಿಸಿದಂತಹ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಲೆಕ್ಟ್ ಪೇಜ್ ನಲ್ಲಿ ನೆಟ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ / ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್/ಯು.ಪಿ.ಐ ಮೂಲಕ ಆನ್ ಲೈನ್ ಶುಲ್ಕ ಸಂದಾಯ ಮಾಡಬಹುದಾಗಿದೆ.
- ಸಾಮಾನ್ಯ ವರ್ಗ:- 300/-
- ಹಿಂದುಳಿದ ವರ್ಗಗಳು (2A, 2B, 3A, 3B):- 150/-
- ಪ್ರವರ್ಗ-1/Sc /St/Pwd:- ಶುಲ್ಕ ವಿನಾಯಿತಿ ಇರುತ್ತದೆ.
ವೇತನ ಶ್ರೇಣಿ:-
- ಶೀಘ್ರಲಿಪಿಗಾರರು ಗ್ರೇಡ್-III::- 44425-83700
- ಬೆರಳಚ್ಚುಗಾರರು :- 34100-67600
- ಬೆರಳಚ್ಚು-ನಕಲುಗಾರರು:- 34100-67600
ಪರಿವೀಕ್ಷಣಾ ಅವಧಿ:-
- ಶೀಘ್ರಲಿಪಿಗಾರರು ಗ್ರೇಡ್-III:- ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕ ಸಿವಿಲ್ ಸೇವಾ ನಿಯಮ (ಪರಿವೀಕ್ಷಣೆ ನಿಯಮಗಳು) 1977 ರ ಪ್ರಕಾರ ಎರಡು ವರ್ಷಗಳ ಅವಧಿಗೆ ಅಥವಾ ಅಗತ್ಯವಿದ್ದರೆ ವಿಸ್ತರಿಸಬಹುದಾದ ಅವಧಿಗೆ ಪರಿವೀಕ್ಷಣಾರ್ಥಿಗಳಾಗಿರುತ್ತಾರೆ. ಹಾಗೂ ಸದರಿ ಅವಧಿಯಲ್ಲಿ ತಮ್ಮ ಹುದ್ದೆಗಳಿಗೆ ನಿಗಧಿಪಡಿಸಿರುವ ಇಲಾಖಾ ಪರೀಕ್ಷೆಗಳಲ್ಲಿ ಹಾಗೂ ಕನ್ನಡ ಭಾಷಾ ಪರೀಕ್ಷೆಯಲ್ಲಿ& ನಿಯಮದ ಪ್ರಕಾರ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ (ಸಿ.ಎಲ್.ಟಿ) ಉತ್ತೀರ್ಣರಾಗಬೇಕು.
- ಬೆರಳಚ್ಚುಗಾರರು:- ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕ ಸಿವಿಲ್ ಸೇವಾ ನಿಯಮ (ಪರಿವೀಕ್ಷಣೆ ನಿಯಮಗಳು) 1977 ರ ಪ್ರಕಾರ ಎರಡು ವರ್ಷಗಳ ಅವಧಿಗೆ ಅಥವಾ ಅಗತ್ಯವಿದ್ದರೆ ವಿಸ್ತರಿಸಬಹುದಾದ ಅವಧಿಗೆ ಪರಿವೀಕ್ಷಣಾರ್ಥಿಗಳಾಗಿರುತ್ತಾರೆ. ಹಾಗೂ ಸದರಿ ಅವಧಿಯಲ್ಲಿ ತಮ್ಮ ಹುದ್ದೆಗಳಿಗೆ ನಿಗಧಿಪಡಿಸಿರುವ ಇಲಾಖಾ ಪರೀಕ್ಷೆಗಳಲ್ಲಿ ಹಾಗೂ ಕನ್ನಡ ಭಾಷಾ ಪರೀಕ್ಷೆಯಲ್ಲಿ& ನಿಯಮದ ಪ್ರಕಾರ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ (ಸಿ.ಎಲ್.ಟಿ) ಉತ್ತೀರ್ಣರಾಗಬೇಕು
- ಬೆರಳಚ್ಚು-ನಕಲುಗಾರರು:- ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕ ಸಿವಿಲ್ ಸೇವಾ ನಿಯಮ (ಪರಿವೀಕ್ಷಣೆ ನಿಯಮಗಳು) 1977 ರ ಪ್ರಕಾರ ಎರಡು ವರ್ಷಗಳ ಅವಧಿಗೆ ಅಥವಾ ಅಗತ್ಯವಿದ್ದರೆ ವಿಸ್ತರಿಸಬಹುದಾದ ಅವಧಿಗೆ ಪರಿವೀಕ್ಷಣಾರ್ಥಿಗಳಾಗಿರುತ್ತಾರೆ. ಹಾಗೂ ಸದರಿ ಅವಧಿಯಲ್ಲಿ ತಮ್ಮ ಹುದ್ದೆಗಳಿಗೆ ನಿಗಧಿಪಡಿಸಿರುವ ಇಲಾಖಾ ಪರೀಕ್ಷೆಗಳಲ್ಲಿ ಹಾಗೂ ಕನ್ನಡ ಭಾಷಾ ಪರೀಕ್ಷೆಯಲ್ಲಿ& ನಿಯಮದ ಪ್ರಕಾರ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ (ಸಿ.ಎಲ್.ಟಿ) ಉತ್ತೀರ್ಣರಾಗಬೇಕು
ಆಯ್ಕೆ ವಿಧಾನ :-
ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮ 1977 ಹಾಗೂ ಅಧೀನ ನ್ಯಾಯಾಲಯಗಳ (ಲಿಪಿಕ ಮತ್ತು ಇತರ ಹುದ್ದೆಗಳು) (ನೇಮಕಾತಿ) ನಿಯಮಗಳು, 1982 ಹಾಗೂ ತಿದ್ದುಪಡಿ ನಿಯಮಗಳು 2007 ಮತ್ತು 2021 ರನ್ವಯ ನೇರ ನೇಮಕಾತಿ ಮೂಲಕ ಆಯ್ಕೆ.
- ಶೀಘ್ರಲಿಪಿಗಾರರು ಗ್ರೇಡ್-III:-ಅರ್ಹತಾ ಪರೀಕ್ಷೆಯಲ್ಲಿ ಗಳಿಸಿರುವ ಒಟ್ಟು ಶೇಕಡಾವಾರು ಅಂಕಗಳು & 1 ಕ್ಕೆ 120 ಪದಗಳ ವೇಗದಲ್ಲಿ 5 ನಿಮಿಷಗಳ ಕಾಲ ಉಕ್ತಲೇಖನವನ್ನು ತೆಗೆದುಕೊಂಡು ಉಕ್ತಲೇಖನವನ್ನು 45 ನಿಮಿಷಗಳಲ್ಲಿ ಕಂಪ್ಯೂಟರನಲ್ಲಿ ಅನುಲಿಪಿ ಮಾಡುವ ಕೌಶಲ್ಯ ಪರೀಕ್ಷೆಯಲ್ಲಿ ಗಳಿಸುವ ಅಂಕಗಳು & ಸಂದರ್ಶನದಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ಆಯ್ಕೆ, 1 ಹುದ್ದೆಗೆ 5 ಅಭ್ಯರ್ಥಿಗಳಂತೆ (1:5 ಅನುಪಾತದಲ್ಲಿ) ಅತಿ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯುವರು. (ಕೌಶಲ್ಯ ಪರೀಕ್ಷೆಯು ಗರಿಷ್ಠ 100 ಅಂಕಗಳನ್ನು ಒಳಗೊಂಡಿದ್ದು, ಅದರಲ್ಲಿ ಅರ್ಹರಾಗಲು ಕನಿಷ್ಠ 50 ಅಂಕಗಳನ್ನು ಪಡೆಯಬೇಕು & ಸಂದರ್ಶನವು 5 ಅಂಕಗಳನ್ನು ಒಳಗೊಂಡಿರುತ್ತದೆ)
- ಬೆರಳಚ್ಚುಗಾರರು:-ಅರ್ಹತಾ ಪರೀಕ್ಷೆಯಲ್ಲಿ ಗಳಿಸಿರುವ ಒಟ್ಟು ಶೇಕಡಾವಾರು ಅಂಕಗಳು 15 ನಿಮಿಷಗಳ ಕಾಲ ಉಕ್ತಲೇಖನದಲ್ಲಿ ಕೋಡುವ ವಿಷಯವನ್ನು ಕಂಪ್ಯೂಟರನಲ್ಲಿ ಬೆರಳಚ್ಚು ಮಾಡುವ ಅರ್ಹತಾ (ಕೌಶಲ್ಯ) ಪರೀಕ್ಷೆಯಲ್ಲಿ ಗಳಿಸುವ ಅಂಕಗಳು & ಸಂದರ್ಶನದಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ಆಯ್ಕೆ, 1 ಹುದ್ದೆಗೆ 5 ಅಭ್ಯರ್ಥಿಗಳಂತೆ (1:5 ಅನುಪಾತದಲ್ಲಿ) ಅತಿ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯುವರು. (ಅರ್ಹತಾ ಪರೀಕ್ಷೆಯು ಗರಿಷ್ಠ 100 ಅಂಕಗಳನ್ನು ಒಳಗೊಂಡಿದ್ದು, ಅದರಲ್ಲಿ ಅರ್ಹರಾಗಲು ಕನಿಷ್ಠ 50 ಅಂಕಗಳನ್ನು ಪಡೆಯಬೇಕು & ಸಂದರ್ಶನವು 5 ಅಂಕಗಳನ್ನು ಒಳಗೊಂಡಿರುತ್ತದೆ)
- ಬೆರಳಚ್ಚು-ನಕಲುಗಾರರು:- ಅರ್ಹತಾ ಪರೀಕ್ಷೆಯಲ್ಲಿ ಗಳಿಸಿರುವ ಒಟ್ಟು ಶೇಕಡಾವಾರು ಅಂಕಗಳು 15 ನಿಮಿಷಗಳ ಕಾಲ ಉಕ್ತಲೇಖನದಲ್ಲಿ ಕೋಡುವ ವಿಷಯವನ್ನು ಕಂಪ್ಯೂಟರನಲ್ಲಿ ಬೆರಳಚ್ಚು ಮಾಡುವ ಅರ್ಹತಾ (ಕೌಶಲ್ಯ) ಪರೀಕ್ಷೆಯಲ್ಲಿ ಗಳಿಸುವ ಅಂಕಗಳು & ಸಂದರ್ಶನದಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ಆಯ್ಕೆ, 1 ಹುದ್ದೆಗೆ 5 ಅಭ್ಯರ್ಥಿಗಳಂತೆ (1:5 ಅನುಪಾತದಲ್ಲಿ) ಅತಿ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯುವರು. (ಅರ್ಹತಾ ಪರೀಕ್ಷೆಯು ಗರಿಷ್ಠ 100 ಅಂಕಗಳನ್ನು ಒಳಗೊಂಡಿದ್ದು, ಅದರಲ್ಲಿ ಅರ್ಹರಾಗಲು ಕನಿಷ್ಠ 50 ಅಂಕಗಳನ್ನು ಪಡೆಯಬೇಕು & ಸಂದರ್ಶನವು 5 ಅಂಕಗಳನ್ನು ಒಳಗೊಂಡಿರುತ್ತದೆ)
ದಾಖಲೆಗಳ ಪರಿಶೀಲನೆ:-
- ಶೈಕ್ಷಣಿಕ ವಿದ್ಯಾರ್ಹತೆ:- ಅಭ್ಯರ್ಥಿಯು ಎಸ್.ಎಸ್.ಎಲ್.ಸಿ ಮೂಲ ಅಂಕಪಟ್ಟಿ ಹುದ್ದೆಗಳಿಗೆ ಅನುಗುಣವಾಗಿ ವಿದ್ಯಾರ್ಹತೆಯ ಮೂಲ ಅಂಕಪಟ್ಟಿಗಳನ್ನು ದಾಖಲೆಗಳ ಪರಿಶೀಲನೆ ಸಮಯದಲ್ಲಿ ಪ್ರಾಧಿಕಾರದ ಮುಂದೆ ಹಾಜರುಪಡಿಸಬೇಕು.
- ಜನ್ಮ ದಿನಾಂಕಃ– ಅಭ್ಯರ್ಥಿಯು ಎಸ್.ಎಸ್.ಎಲ್.ಸಿ ಮೂಲ ಅಂಕಪಟ್ಟಿ ಅಥವಾ ಮೂಲ ಜನನ ಪ್ರಮಾಣ ಪತ್ರವನ್ನು ದಾಖಲೆಗಳ ಪರಿಶೀಲನೆ ಸಮಯದಲ್ಲಿ ಪ್ರಾಧಿಕಾರದ ಮುದೆ ಹಾಜರುಪಡಿಸಬೇಕು.
- ಮೀಸಲಾತಿ ಕೋರುವ ಮಾನ್ಯವಿರುವ ಮೂಲ ಪ್ರಮಾಣ ಪತ್ರಗಳು:- ಅಭ್ಯರ್ಥಿಯು ದಾಖಲೆಗಳ ಪರಿಶೀಲನೆ ಸಮಯದಲ್ಲಿ ಪ್ರಾಧಿಕಾರದ ಮುಂದೆ ಹಾಜರುಪಡಿಸಬೇಕು.
- ಗುರುತಿನ ಪುರಾವೆ:- ಅಭ್ಯರ್ಥಿಯು ದಾಖಲೆಗಳ ಪರಿಶೀಲನೆ ಸಮಯದಲ್ಲಿ ಗುರುತಿನ ಪುರಾವೆಯಾಗಿ ಮೂಲ ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಇತರೆ ದಾಖಲೆಗಳನ್ನು ಪ್ರಾಧಿಕಾರದ ಮುಂದೆ ಹಾಜರುಪಡಿಸಬೇಕು. ಪ್ರಾಧಿಕಾರವು ನಿರ್ದೇಶಿಸಿದಾಗ ಸಂಬಂಧಪಟ್ಟ ದಾಖಲೆಗಳನ್ನು ಅಭ್ಯರ್ಥಿಗಳು ಹಾಜರುಪಡಿಸಬೇಕು.
ಆನಲೈನ್ ಮುಖಾಂತರ ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ವೇಳಾಪಟ್ಟಿ:-
- ಆನಲೈನ್ ಮುಖಾಂತರ ಅರ್ಜಿ ಸಲ್ಲಿಕೆ ಆರಂಭ:- 29 ಜೂನ್ 2026
- ಆನಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 28 ಜುಲೈ 2026
- ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ:- 28 ಜುಲೈ 2026
ಆನಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
- 10 ನೇ ತರಗತಿ ಅಂಕಪಟ್ಟಿ
- ವಿಧ್ಯಾರ್ಹತೆ ಪ್ರಮಾಣ ಪತ್ರಗಳು (ಹುದ್ದೆಗೆ ಅನುಗುಣವಾಗಿ)
- ಜಾತಿ ಪ್ರಮಾಣ ಪತ್ರ
- ಮೀಸಲಾತಿ ಪ್ರಮಾಣ ಪತ್ರಗಳು (ಕನ್ನಡ/ಗ್ರಾಮೀಣ/ಮುಳುಗಡೆ)
- ಅಂಗವೀಕಲ್ ಪ್ರಮಾಣ ಪತ್ರ (ಅಂಗವೀಕಲ ಅಭ್ಯರ್ಥಿಗಳಿಗೆ ಮಾತ್ರ)
- ಮೊಬೈಲ್ ಸಂಖ್ಯೆ & ಇ–ಮೇಲ್ ಐಡಿ
- ಇತ್ತೀಚಿನ White Background ಭಾವಚಿತ್ರ & ಸಹಿ
ಶೀಘ್ರಲಿಪಿಗಾರರು ಗ್ರೇಡ್-III ಹುದ್ದೆಯ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ ಮಾಡಿ https://cdnbbsr.s3waas.gov.in/s3ec027486cef2522ee03547cfb970a404/uploads/2026/06/2026062793.pdf
ಬೆರಳಚ್ಚುಗಾರರು ಹುದ್ದೆಯ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ ಮಾಡಿhttps://cdnbbsr.s3waas.gov.in/s3ec027486cef2522ee03547cfb970a404/uploads/2026/06/2026062717.pdf
ಬೆರಳಚ್ಚು-ನಕಲುಗಾರರು ಹುದ್ದೆಯ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ ಮಾಡಿ ನೇಮಕಾತಿ-2026https://cdnbbsr.s3waas.gov.in/s3ec027486cef2522ee03547cfb970a404/uploads/2026/06/2026062725.pdf
ಶೀಘ್ರಲಿಪಿಗಾರರು ಗ್ರೇಡ್-III ಹುದ್ದೆಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ ಮಾಡಿhttps://judiciary.karnataka.gov.in/recruitment/district/ckm/stg/home.php
ಬೆರಳಚ್ಚುಗಾರರು ಹುದ್ದೆಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ ಮಾಡಿhttps://judiciary.karnataka.gov.in/recruitment/district/ckm/typ/home.php
ಬೆರಳಚ್ಚು-ನಕಲುಗಾರರು ಹುದ್ದೆಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ ಮಾಡಿ https://judiciary.karnataka.gov.in/recruitment/district/ckm/tcp/home.php


