ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ ಅಧಿಸೂಚನೆ-2026

ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಸರ್ಕಾರವು ಭರ್ಜರಿ ಸಿಹಿ ಸುದ್ದಿಯನ್ನು ನೀಡಿದ್ದು, ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 774 ಅರಣ್ಯ ವೀಕ್ಷಕರ (ಡಿ-ಗ್ರೂಪ್) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿ, ಆನಲೈನ್ ಮುಖಾಂತರ ಅರ್ಜಿಯನ್ನು ಆಹ್ವಾನಿಸಿದೆ.karnataka.forest.department

ಹುದ್ದೆಗಳ ವಿವರ:-

  • ಒಟ್ಟು ಹುದ್ದೆಗಳು:– 774
  • ಹುದ್ದೆಯ ಹೆಸರು:- ಅರಣ್ಯ ವೀಕ್ಷಕರು (ಡಿ-ಗ್ರೂಪ್)

ವೃತ್ತವಾರು ಹುದ್ದೆಗಳ ವಿವರ:-

  • ಶಿವಮೊಗ್ಗ-44
  • ಬೆಂಗಳೂರು-82
  • ಚಾಮರಾಜನಗರ-159
  • ಬಳ್ಳಾರಿ-64
  • ಮೈಸೂರು-121
  • ಬೆಳಗಾವಿ-42
  • ಕಲಬರಗಿ-06
  • ಚಿಕ್ಕಮಗಳೂರು-60
  • ಹಾಸನ-31
  • ಮಂಗಳೂರು-54
  • ಧಾರವಾಡ-12
  • ಕೊಡಗು-32
  • ಕೆನರಾ-67

ಪ್ರಮುಖ ದಿನಾಂಕಗಳು:-

  • ಅಧಿಸೂಚನೆ ಬಿಡುಗಡೆ ಮಾಡಿದ ದಿನಾಂಕ: 20 ಜುಲೈ 2026
  • ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭಿಸಿದ ದಿನಾಂಕ: 01 ಅಗಸ್ಟ್ 2026
  • ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 ಅಗಸ್ಟ್ 2026
  • ಆನ್‌ಲೈನ್ ಮುಖಾಂತರ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ:02 ಸಪ್ಟೆಂಬರ್ 2026

ವೇತನ ಶ್ರೇಣಿ:-

  • 29600-725-32500-800-35700-900-39300-1000-43300-1125-47800-1250-52800

ಶೈಕ್ಷಣಿಕ ವಿದ್ಯಾರ್ಹತೆ:-

  • 10ನೇ ತರಗತಿ ಪಾಸ ಅಥವಾ ತತ್ಸಮಾನ ವಿದ್ಯಾರ್ಹತೆ

ತತ್ಸಮಾನ ವಿದ್ಯಾರ್ಹತೆ:-

  1. ಸರ್ಕಾರದ ಸುತ್ತೋಲೆ/ಆದೇಶ ಸಂ:ಸಿಆಸುಇ 81ಸೇವನೆ 2017, ದಿನಾಂಕ:27.02.2018 ರಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಎಸ್.ಎಸ್.ಎಲ್.ಸಿ ವಿದ್ಯಾರ್ಹತೆಯ ತತ್ಸಮಾನ ವಿದ್ಯಾರ್ಹತೆಯ ವಿವರಗಳು ಈ ಕೆಳಗಿನಂತೆ ಇರುತ್ತವೆ.
  • ಸಿ.ಬಿ.ಎಸ್.ಇ & ಐ.ಎಸ್.ಸಿ ಮಂಡಳಿಯು ನಡೆಸುವ 10ನೇ ತರಗತಿ ಪರೀಕ್ಷೆ ಅಥವಾ
  • ಇತರೆ ರಾಜ್ಯ ಸರ್ಕಾರದ ಪರೀಕ್ಷಾ ಮಂಡಳಿಗಳು ನಡೆಸುವ 10ನೇ ತರಗತಿ ಪರೀಕ್ಷೆ ಅಥವಾ
  • ನ್ಯಾಷನಲ್ ಇನ್ಸಿಸ್ಟಿಟೂಟ್ ಆಫ್ ಓಪನ್ ಸ್ಕೂಲಿಂಗ್ (ಎನ್.ಐ.ಒ.ಎಸ್) ವತಿಯಿಂದ ನಡೆಸುವ ಪ್ರೌಢ ಶಿಕ್ಷಣ ಕೋರ್ಸ ಅಥವಾ
  • ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಪ್ರೌಢ ಶಿಕ್ಷಣ ಮಟ್ಟದ ಕೋರ್ಸ
  1. ಮೇಲೆ ನಮೂದಿಸಿರುವ ವಿದ್ಯಾರ್ಹತೆಯನ್ನು ಹೊಂದದೇ ಇರುವ ಅಥವಾ ಇತರೇ ಕಾರಣಗಳಿಂದ ಅನರ್ಹರಿರುವ ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಅರ್ಜಿ ಸಲ್ಲಿಸಿ, ಯಾವುದೇ ಕಾರಣದಿಂದ ಭಾಗವಹಿಸಿದಲ್ಲಿ, ನಂತರ ನಿಗದಿಪಡಿಸಲಾದ ವಿದ್ಯಾರ್ಹತೆ ಅಂಕಪಟ್ಟಿ ಹೊಂದಿರುವುದಿಲ್ಲವೆಂದು ಅಥವಾ ಇತರೇ ಕಾರಣಗಳಿಂದ ಅನರ್ಹರಿರುವುದು ಆಯ್ಕೆ ಪ್ರಾಧಿಕಾರ/ ನೇಮಕಾತಿ ಪ್ರಾಧಿಕಾರಕ್ಕೆ ಕಂಡುಬಂದಲ್ಲಿ, ಅಂತಹ ಅಭ್ಯರ್ಥಿಗಳ ಅಭ್ಯರ್ಥಿತನವನ್ನು ಯಾವುದೇ ಹಂತದಲ್ಲಾದರೂ ರದ್ದುಪಡಿಸಲಾಗುವುದು ಹಾಗೂ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದೇನೆ ಎಂಬ ಕಾರಣಕ್ಕಾಗಿ ಅಭ್ಯರ್ಥಿಯು ಯಾವುದೇ ಹಕ್ಕನ್ನು ಹೊಂದಿರುವುದಿಲ್ಲ. ಈ ಕುರಿತು ಆಯ್ಕೆ ಪ್ರಾಧಿಕಾರಿ/ ನೇಮಕಾತಿ ಪ್ರಾಧಿಕಾರ ತೆಗೆದುಕೊಳ್ಳುವ ನಿರ್ಣಯವೇ ಅಂತಿಮವಾಗಿರುತ್ತದೆ.
  2. ಅರ್ಜಿಸಲ್ಲಿಸಲುನಿಗದಿಪಡಿಸಿದಕೊನೆಯದಿನಾಂಕದಂದುನಿಗದಿತವಿದ್ಯಾರ್ಹತೆಯಪರೀಕ್ಷೆಬರೆದುಫಲಿತಾಂಶಕ್ಕಾಗಿಕಾಯುತ್ತಿರುವಅಭ್ಯರ್ಥಿಗಳುಹಾಗೂನಿಗದಿತವಿದ್ಯಾರ್ಹತೆಯಅಂಕಪಟ್ಟಿಹೊಂದಿಲ್ಲದೇಇರುವಅಭ್ಯರ್ಥಿಗಳುಅರ್ಜಿಗಳನ್ನುಸಲ್ಲಿಸಲುಅರ್ಹರಾಗಿರುವುದಿಲ್ಲ. ಮೇಲಿನವಿದ್ಯಾರ್ಹತೆಯನ್ನುಹೊರತುಪಡಿಸಿಬೇರೆಯಾವವಿದ್ಯಾರ್ಹತೆಯನ್ನು ಪರಿಗಣಿಸಲಾಗುವುದಿಲ್ಲ.
  3. ಸ್ಥಳೀಯ ಅರಣ್ಯ ಬುಡಕಟ್ಟು ಪರಿಶಿಷ್ಟ ಪಂಗಡ ಪ್ರವರ್ಗದಡಿ ಮೀಸಲಾತಿ ಕೋರುವ ಅಭ್ಯರ್ಥಿಗಳು ಆನ್‌ಲೈನ್ (Online) (ಎಲೆಕ್ಟ್ರಾನಿಕ್ ಮಾರ್ಗ) ಅರ್ಜಿ ಸಲ್ಲಿಸುವ ವೇಳೆ ಪರಿಶಿಷ್ಟ ಜಾತಿಸ್ಥಳೀಯ ಅರಣ್ಯ ಬುಡಕಟ್ಟು ಪರಿಶಿಷ್ಟ ಪಂಗಡ ಮೀಸಲಾತಿ ಅಂಕಣವನ್ನು ಎಚ್ಚರಿಕೆ ವಹಿಸಿ ಭರ್ತಿ ಮಾಡುವುದು. ತಪ್ಪಿದಲ್ಲಿ, ಬಗ್ಗೆ ಅಭ್ಯರ್ಥಿಗಳೇ ಜವಾಬ್ದಾರರಾಗಿರುತ್ತಾರೆ

ವಯೋಮಿತಿ:-

ಕರ್ನಾಟಕ ನಾಗರೀಕ ಸೇವೆಗಳ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ನಿಯಮ 6ರಲ್ಲಿ ಒಳಗೊಂಡಿರುವ ಯಾವುದೇ ವಿಷಯದ ಹೊರತಾಗಿಯೂ ಅಭ್ಯರ್ಥಿಗಳು ಅಧಿಸೂಚನೆ ಹೊರಡಿಸಿದ ದಿನಾಂಕಕ್ಕೆ ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು ಹಾಗೂ ಅಧಿಸೂಚನೆ ಪ್ರಾರಂಭಿಕ ದಿನಾಂಕಕ್ಕೆ ಈ ಕೆಳಕಂಡತೆ ಗರಿಷ್ಠ ವಯೋಮಿತಿ ಒಳಗೆ ಇರಬೇಕು.

ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 262 ಸೇನೆನಿ 2025, ದಿನಾಂಕ:29.01.2026 ರನ್ವಯ ಈ ಆದೇಶದ ದಿನಾಂಕದ ನಂತರ ಮುಂದಿನ ದಿನಾಂಕ:31.12.2027ರವರೆಗೆ ನೇರ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿ ಹೊರಡಿಸುವ ಅಧಿಸೂಚನೆಗಳನ್ವಯ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಈ ಕೆಳಕಂಡಂತೆ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿಯ ಕ್ರಮವಾಗಿ (as a one-time measure) 5 ವರ್ಷಗಳ ಸಡಿಲಿಕೆಯನ್ನು ನೀಡಲಾಗಿರುತ್ತದೆ.

ಕ್ರ ಸಂಪ್ರವರ್ಗಗರಿಷ್ಠ ವಯೋಮಿತಿ ವಿವರ
1.ಸಾಮಾನ್ಯ ಅಭ್ಯರ್ಥಿ30 ವರ್ಷ
2.ಪ್ರವರ್ಗ 2A, 2B, 3A, 3B ಹಿಂದುಳಿದ ಪ್ರವರ್ಗಗಳು32 ವರ್ಷ
3.ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-133 ವರ್ಷ
4.ಮಾಜಿ ಸೈನಿಕರಿಗೆಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿ ನಿಯಮಾನುಸಾರ ನಿವೃತ್ತಿ/ಡಿಮೊಬಿಲೈಸೇಷನ್ (Demobilisation) ಅಥವಾ ರಿಟ್ರೆಂಚ್‌ಮೆಂಟ್ (Retrenchment) ಹೊಂದಿದ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಅವರು ಯಾವ ಪ್ರವರ್ಗಕ್ಕೆ ಸೇರುತ್ತಾರೆಯೋ ಈ ಮೇಲಿನ ಪ್ರವರ್ಗಕ್ಕೆ ನಿಗದಿಪಡಿಸಿದ ಗರಿಷ್ಠ ವಯೋಮಿತಿಗೆ ಅವರು ಎಷ್ಟು ವರ್ಷ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿರುವರೋ ಅಷ್ಟು ವರ್ಷಗಳಿಗೆ ಮೂರು (3) ವರ್ಷ ಸೇರಿಸಿದರೆ ಎಷ್ಟು ವರ್ಷಗಳಾಗುವುದೋ ಅಷ್ಟು ವರ್ಷಗಳ ಸಡಿಲಿಕೆ ಇರುತ್ತದೆ.

ಅರಣ್ಯ ಪ್ರೇರಕರಿಗೆ ವಯೋಮಿತಿ:- ಅಧಿಸೂಚನೆ ದಿನಾಂಕಕ್ಕೆ ಅರಣ್ಯ ಇಲಾಖೆಯಲ್ಲಿ ನಿರಂತರ ಕನಿಷ್ಠ 5 ವರ್ಷಗಳ ಕಾಲ ಅರಣ್ಯ ಪ್ರೇರಕರಾಗಿ ಸೇವೆಯನ್ನು ಪೂರೈಸಿದ್ದು, ಪ್ರಸ್ತುತ ಅರಣ್ಯ ಪ್ರೇರಕರಾಗಿ ಸೇವೆಯಲ್ಲಿ ಇದ್ದು, ನಿಶ್ಚಿತ ಗೌರವಧನವನ್ನು ಪಡೆಯುತ್ತಿರುವ ಅರಣ್ಯ ಪ್ರೇರಕರಿಗೆ ಮಾತ್ರ ಈ ಕೆಳಗಿನ ಗರಿಷ್ಠ ವಯೋಮಿತಿ ಅನ್ವಯವಾಗುವುದು.

ಕ್ರ ಸಂಪ್ರವರ್ಗಗರಿಷ್ಠ ವಯೋಮಿತಿ ವಿವರ
1.ಸಾಮಾನ್ಯ ಅಭ್ಯರ್ಥಿ40 ವರ್ಷ
2.ಪ್ರವರ್ಗ 2A, 2B, 3A, 3B ಹಿಂದುಳಿದ ಪ್ರವರ್ಗಗಳು42 ವರ್ಷ
3.ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-143 ವರ್ಷ

ಉದ್ಯೋಗದ ಸ್ಥಳ:-

  • ಕರ್ನಾಟಕದಾದ್ಯಂತ

ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಅರ್ಜಿ ಶುಲ್ಕ:-

  • ಸಾಮಾನ್ಯ ವರ್ಗ & ಪ್ರವರ್ಗ 2A, 2B, 3A, 3B:-200/-(ಪುರುಷ)  (ಮಹಿಳಾ/ತೃತೀಯ ಲಿಂಗಿ-100/-)
  • ಪ್ರವರ್ಗ-1/Sc /St:-100/-(ಪುರುಷ)  (ಮಹಿಳಾ/ತೃತೀಯ ಲಿಂಗಿ-50/-)

ನೇಮಕಾತಿ/ಆಯ್ಕೆ ವಿಧಾನ:-

ಆನ್‌ಲೈನ್ (Online) (ಎಲೆಕ್ಟ್ರಾನಿಕ್ ಮಾರ್ಗ)ನಲ್ಲಿ ಸ್ವೀಕೃತವಾದ ಅರ್ಜಿಗಳಲ್ಲಿ ಅಭ್ಯರ್ಥಿಗಳು ಭರ್ತಿ ಮಾಡಿರುವ ಮಾಹಿತಿ/ವಿವರಗಳ ಆಧಾರದನ್ವಯ ಆಯ್ಕೆ ಪ್ರಾಧಿಕಾರವು ಅಭ್ಯರ್ಥಿಗಳು ಎಸ್‌.ಎಸ್‌.ಎಲ್‌.ಸಿ. ಅಥವಾ ಎಸ್‌.ಎಸ್‌.ಎಲ್‌.ಸಿ. ವಿದ್ಯಾರ್ಹತೆಯ ತತ್ಸಮಾನ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ 1:20 (ಹುದ್ದೆ:ಅಭ್ಯರ್ಥಿ) ಅನುಪಾತದಲ್ಲಿ ಶಾರೀರಿಕ ಮಾನದಂಡಗಳ ಪರೀಕ್ಷೆ [Physical Standard Test], ದೈಹಿಕ ತಾಳ್ವಿಕೆ ಪರೀಕ್ಷೆ [Physical Endurance Test] ಮತ್ತು ದೈಹಿಕ ಕಾರ್ಯ ಸಾಮರ್ಥ್ಯ [Physical Efficiency Test] ಪರೀಕ್ಷೆಗಾಗಿ ಅಭ್ಯರ್ಥಿಗಳ ವೃತ್ತ ಮಟ್ಟದ ಅರ್ಹತಾ ಪಟ್ಟಿಯನ್ನು ಸಿದ್ಧಪಡಿಸಿ, ಪರೀಕ್ಷೆಗಳ ಕುರಿತು ದಿನಾಂಕವನ್ನು ಕಾಲಕಾಲಕ್ಕೆ ಕರ್ನಾಟಕ ಅರಣ್ಯ ಇಲಾಖೆಯ ಅಧಿಕೃತ ಜಾಲತಾಣ: https://aranya.gov.in ನಲ್ಲಿ ಮುಖ ಪುಟದ ಕೆಳಭಾಗದಲ್ಲಿ ನೇಮಕಾತಿ” ಶೀರ್ಷಿಕೆಯ ಮೂಲಕ ಪ್ರಕಟಪಡಿಸುತ್ತಾರೆ. ಕುರಿತು ಅರಣ್ಯ ಇಲಾಖೆಯ ವತಿಯಿಂದ ಅಭ್ಯರ್ಥಿಗಳೊಂದಿಗೆ ಯಾವುದೇ ಪತ್ರ ವ್ಯವಹಾರ ನಡೆಸಲಾಗುವುದಿಲ್ಲ.

ಶಾರೀರಿಕ ಮಾನದಂಡಗಳ ಪರೀಕ್ಷೆ [Physical Standard Test]:-

ಪುರುಷ ಅಭ್ಯರ್ಥಿಗಳು:

ದೇಹದಾರ್ಢ್ಯತೆಇತರೆ ಪ್ರವರ್ಗಗಳ ಎಲ್ಲಾ ಅಭ್ಯರ್ಥಿಗಳುಪರಿಶಿಷ್ಟ ಪಂಗಡ ಅರಣ್ಯ ಬುಡಕಟ್ಟು ಪ್ರದೇಶದಲ್ಲಿರುವ ಅಭ್ಯರ್ಥಿಗಳಿಗೆ
ಎತ್ತರಕನಿಷ್ಠ 163 ಸೆ.ಮೀ.ಕನಿಷ್ಠ 152 ಸೆ.ಮೀ.
ಎದೆ ಸುತ್ತಳತೆಸಾಮಾನ್ಯ ಸ್ಥಿತಿಯಲ್ಲಿ ಕನಿಷ್ಠ 79 ಸೆ.ಮೀ.ಸಾಮಾನ್ಯ ಸ್ಥಿತಿಯಲ್ಲಿ ಕನಿಷ್ಠ 74 ಸೆ.ಮೀ.
ಎದೆ ಕನಿಷ್ಠ ಹಿಗ್ಗುವಿಕೆ5 ಸೆ.ಮೀ.5 ಸೆ.ಮೀ.

ಮಹಿಳಾ ಅಭ್ಯರ್ಥಿಗಳು:

ಎತ್ತರಕನಿಷ್ಠ 150 ಸೆ.ಮೀ.ಕನಿಷ್ಠ 145 ಸೆ.ಮೀ.
ಕನಿಷ್ಠ ತೂಕ:40 ಕೆ.ಜಿ.38 ಕೆ.ಜಿ.

ಕೆಳಕಂಡ ದೈಹಿಕ ನ್ಯೂನ್ಯತೆ [Physical Defects] ಗಳನ್ನು ಹೊಂದಿರುವ ಅಭ್ಯರ್ಥಿಗಳು ಆಯ್ಕೆಗೆ ಅನರ್ಹರಾಗಿರುತ್ತಾರೆ:-

  • ತಾಗು ಮಂಡಿಗಳು (Knock-knees);
  • ಬಾಗಿದ ಕಾಲುಗಳು (Bow legs);
  • ಚಪ್ಪಟೆ ಪಾದ (Flat feet);
  • ನರ ಊತವಿರುವವರು (Varicose veins);
  • ಮಾತನಾಡಲು ಮತ್ತು ಕೇಳುವ ಸಾಮರ್ಥ್ಯದಲ್ಲಿ ತೊಡಕು (Impediment in speech and hearing);
  • ಪುರುಷ ಅಭ್ಯರ್ಥಿಗಳಿಗೆ ಅಂಡವಾಯು (Hydrocele in men);
  • ದೃಷ್ಟಿ / ವರ್ಣಾಂಧತೆ / ಇರುಳು ಕುರುಡು (Vision / Colour blindness / Night blindness)

ದೃಷ್ಟಿ ಸಾಮರ್ಥ್ಯ [Eye vision]:-  

  • ಅಭ್ಯರ್ಥಿಗಳು ಈ ಕೆಳಗೆ ನಿಗದಿಪಡಿಸಿರುವ ದೃಷ್ಟಿ ಸಾಮರ್ಥ್ಯವನ್ನು ಕನ್ನಡಕ ಸಹಿತ ಅಥವಾ ಕನ್ನಡಕ ರಹಿತ ಕಡ್ಡಾಯವಾಗಿ ಹೊಂದಿರಬೇಕು ಹಾಗೂ ದೃಷ್ಟಿ ಸಾಮರ್ಥ್ಯ ಕುರಿತು ಈ ಕೆಳಕಂಡ ಪರೀಕ್ಷೆಗಳನ್ನು ನಡೆಸಲಾಗುವುದು.
ದೂರ ದೃಷ್ಟಿ (Distant vision)ಸಮೀಪ ದೃಷ್ಟಿ (Near vision)
ದೋಷರಹಿತ ಕಣ್ಣು (Better eye)ಅಥವಾದೋಷಪೂರಿತ ಕಣ್ಣು (Worse eye)ದೋಷರಹಿತ ಕಣ್ಣು (Better eye)ಅಥವಾದೋಷಪೂರಿತ ಕಣ್ಣು (Worse eye)
6/6 ಮೀಟರ್ಅಥವಾ6/9 ಮೀಟರ್0/6 ಮೀಟರ್ಅಥವಾ0/8 ಮೀಟರ್

ಕಣ್ಣಿನ ಬಣ್ಣ ದೃಷ್ಟಿ ಪರೀಕ್ಷೆಯು ಅತ್ಯಗತ್ಯವಾಗಿರುತ್ತದೆ.

ಈ ಕೆಳಗಿನ ಕೋಷ್ಟಕದಲ್ಲಿ ನಮೂದಿಸಿದಂತೆ ಲ್ಯಾನಟರ್ನ್ನಲ್ಲಿನ ದ್ಯುತಿರಂಧ್ರದ ಗಾತ್ರವನ್ನು ಅವಲಂಬಿಸಿ ಬಣ್ಣದ ಗ್ರಹಿಕೆಯನ್ನು ಉನ್ನತ ಮತ್ತು ಕಡಿಮೆ ದರ್ಜೆಗೆ ವರ್ಗೀಕರಿಸಬೇಕು.

ವಿವರಗಳುಉನ್ನತ ದರ್ಜೆಯ ಬಣ್ಣ ಗ್ರಹಿಕೆಕಡಿಮೆ ದರ್ಜೆಯ ಬಣ್ಣ ಗ್ರಹಿಕೆ
ದೀಪ ಮತ್ತು ಅಭ್ಯರ್ಥಿಯ ನಡುವಿನ ಅಂತರ16 ಅಡಿ16 ಅಡಿ
ದ್ಯುತಿರಂಧ್ರದ ಗಾತ್ರ1.3 ಮಿ.ಮೀ1.3 ಮಿ.ಮೀ
ಮಾನ್ಯತೆ ಸಮಯ5 ಸೆಕೆಂಡುಗಳು5 ಸೆಕೆಂಡುಗಳು
  • ಕಡಿಮೆ ದರ್ಜೆಯ ಬಣ್ಣ ದೃಷ್ಟಿಯನ್ನು ಪರ್ಯಾಪ್ತವೆಂದು (sufficient) ಪರಿಗಣಿಸಲಾಗುತ್ತದೆ.
  • ಪ್ರತಿ ಕಣ್ಣು ಸಂಪೂರ್ಣ ದೃಷ್ಟಿ ಹೊಂದಿರಬೇಕು. ವರ್ಣಾಂಧತೆ, ಮೆಲ್ಲೆಗಣ್ಣು ಅಥವಾ ಯಾವುದೇ ಕಣ್ಣಿನ ಅಥವಾ ರೆಪ್ಪೆಯ ವಿಕೃತ ಸ್ಥಿತಿಯನ್ನು ಅನರ್ಹತೆ ಎಂದು ಪರಿಗಣಿಸಲಾಗುವುದು.

ಶ್ರವಣ ಪರೀಕ್ಷೆ [Hearing Test]:- ಅಭ್ಯರ್ಥಿಗಳ ಶ್ರವಣ ಪರೀಕ್ಷೆಯನ್ನು ಪರೀಕ್ಷಿಸಲು ಈ ಕೆಳಕಂಡ ಪರೀಕ್ಷೆಗಳನ್ನು ನಡೆಸುವರು

  • ರಿನ್ನರ್ ಪರೀಕ್ಷೆ (Rinner’s Test);
  • ವೆಬ್ಬರ್ ಪರೀಕ್ಷೆ (Webber’s Test);
  • ತಲೆತಿರುಗುವಿಕೆಗಾಗಿ ಪರೀಕ್ಷೆ (Tests for Vertigo)

ಮೇಲಿನ ಪರೀಕ್ಷೆಗಳಲ್ಲಿ ಯಾವುದಾದರೂ ಶ್ರವಣ ದೋಷ ಇದೆ ಎಂದು ಕಂಡುಬಂದಲ್ಲಿ ಅಂತಹ ಅಭ್ಯರ್ಥಿಗಳು ಆಯ್ಕೆಗೆ ಅನರ್ಹರಾಗುತ್ತಾರೆ.

ವಿಶೇಷ ಸೂಚನೆ:-

  • ಅರ್ಹ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆಗಳನ್ನು ಆಯ್ಕೆ ಪ್ರಾಧಿಕಾರದ ಮೇಲ್ವಿಚಾರಣೆಯಲ್ಲಿ ನಡೆಸಲಾಗುವುದು.
  • ಅಭ್ಯರ್ಥಿಯನ್ನು ವೈದ್ಯಕೀಯ ಪರೀಕ್ಷೆಯಲ್ಲಿ ವೈದ್ಯಕೀಯವಾಗಿ ಅನರ್ಹಗೊಳಿಸಿದರೆ, ಅಭ್ಯರ್ಥಿಯು ವೈದ್ಯಕೀಯ ಪರೀಕ್ಷೆಯ ಕುರಿತು ಅನರ್ಹಗೊಳಿಸಿದ ದಿನಾಂಕದಿಂದ ಗರಿಷ್ಠ 07 ದಿವಸದೊಳಗೆ ಆಯ್ಕೆ ಪ್ರಾಧಿಕಾರದ ಮುಂದೆ ಮೇಲ್ಮನವಿ ಸಲ್ಲಿಸಬಹುದಾಗಿರುತ್ತದೆ. ಆಯ್ಕೆ ಪ್ರಾಧಿಕಾರವು ಅಭ್ಯರ್ಥಿಯ ಮೇಲ್ಮನವಿಯ ಕುರಿತು ವೈದ್ಯಕೀಯ ಮಂಡಳಿಯ ಮುಂದೆ ಅಭ್ಯರ್ಥಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುವುದು. ಈ ಮೇಲ್ಮನವಿಯ ಕುರಿತು ವೈದ್ಯಕೀಯ ಮಂಡಳಿಯು ನೀಡುವ ವೈದ್ಯಕೀಯ ವರದಿಯೇ ಅಂತಿಮವಾಗಿರುತ್ತದೆ.

ದೈಹಿಕ ತಾಳ್ವಿಕೆ ಪರೀಕ್ಷೆ [Physical Endurance Test]:-

ಪುರುಷ ಅಭ್ಯರ್ಥಿಗಳು1600 ಮೀಟರ್ ಓಟ07 ನಿಮಿಷಗಳ ಅವಧಿಯಲ್ಲಿ ಪೂರ್ಣಗೊಳಿಸಬೇಕು.
ಮಹಿಳಾ ಅಭ್ಯರ್ಥಿಗಳು ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳು1000 ಮೀಟರ್ ಓಟ06 ನಿಮಿಷಗಳ ಅವಧಿಯಲ್ಲಿ ಪೂರ್ಣಗೊಳಿಸಬೇಕು.
ವಿಶೇಷ ಸೂಚನೆ:ದೈಹಿಕ ತಾಳ್ವಿಕೆ ಪರೀಕ್ಷೆಯಲ್ಲಿ ಅನರ್ಹರಾದ ಅಭ್ಯರ್ಥಿಗಳನ್ನು ಮುಂದಿನ ಆಯ್ಕೆ ಪ್ರಕ್ರಿಯೆಯಿಂದ ಕೈಬಿಡಲಾಗುವುದು. ದೈಹಿಕ ತಾಳ್ವಿಕೆ ಪರೀಕ್ಷೆಯಲ್ಲಿ ಅರ್ಹರಾಗುವ ಅಭ್ಯರ್ಥಿಗಳನ್ನು ಮಾತ್ರ ಮುಂದಿನ ಹಂತದ ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಪರಿಗಣಿಸುತ್ತಾರೆ.

ದೈಹಿಕ ಸಾಮರ್ಥ್ಯ ಪರೀಕ್ಷೆ [Physical Efficiency Test]:-

ಕ್ರ. ಸಂ.ಕ್ರೀಡಾ ಚಟುವಟಿಕೆಅರ್ಹತಾ ಸಮಯ / ದೂರ [Qualifying time/ distance]
ಪುರುಷ ಅಭ್ಯರ್ಥಿಗಳುಮಹಿಳಾ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳು
1.100 ಮೀಟರ್ ಓಟ15 ಸೆಕೆಂಡುಗಳು18.5 ಸೆಕೆಂಡುಗಳು
2.ಎತ್ತರ ಜಿಗಿತ (High Jump)1.20 ಮೀಟರ್0.90 ಮೀಟರ್
3.ಉದ್ದ ಜಿಗಿತ (Long Jump)3.80 ಮೀಟರ್2.50 ಮೀಟರ್
4.ಶಾಟ್‌ಪುಟ್ (Shotput) ಪುರುಷ: 16 ಎಲ್.ಬಿ.

ಮಹಿಳೆ: 8 ಎಲ್.ಬಿ.

5.60 ಮೀಟರ್3.76 ಮೀಟರ್
5.800 ಮೀಟರ್ ಓಟ2 ನಿಮಿಷ 50 ಸೆಕೆಂಡುಗಳು
6.200 ಮೀಟರ್ ಓಟ40 ಸೆಕೆಂಡುಗಳು
ಸೂಚನೆ: ಅಭ್ಯರ್ಥಿಗಳು ಮುಂದಿನ ಆಯ್ಕೆ ಪ್ರಕ್ರಿಯೆಗೆ ಅರ್ಹತೆ ಹೊಂದಲು ಈ ಮೇಲಿನ ಐದು (5) ವಿವಿಧ ದೈಹಿಕ ಸಾಮರ್ಥ್ಯ ಪರೀಕ್ಷೆಗಳ ಪೈಕಿ ಕನಿಷ್ಠ ಮೂರು (3) ಪರೀಕ್ಷೆಗಳಲ್ಲಿ ಕಡ್ಡಾಯವಾಗಿ ತೇರ್ಗಡೆ ಹೊಂದತಕ್ಕದ್ದು. ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳನ್ನು ಮಾತ್ರ ಮುಂದಿನ ಆಯ್ಕೆ ಪ್ರಕ್ರಿಯೆಗೆ ಪರಿಗಣಿಸುತ್ತಾರೆ.

ಮೆರಿಟ್ ಪಟ್ಟಿ:

  • ದೈಹಿಕ ತಾಳ್ವಿಕೆ ಪರೀಕ್ಷೆ [Physical Endurance Test] ಮತ್ತು ದೈಹಿಕ ಸಾಮರ್ಥ್ಯ [Physical Efficiency Test] ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳ ವೃತ್ತ ಮಟ್ಟದ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಿ, ಸದರಿ ಪಟ್ಟಿಯಲ್ಲಿ ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಪಡೆದ ಒಟ್ಟು ಅಂಕಗಳು ಸಮಾನವಾಗಿದ್ದರೆ, ವಯಸ್ಸಿನಲ್ಲಿ ಹಿರಿಯರನ್ನು ಕಿರಿಯರಿಗಿಂತ ಮೇಲಕ್ಕೆ ಇರಿಸಲಾಗುತ್ತದೆ ಮತ್ತು ಅದರ ಪ್ರಕಾರ ಇಂಟರ್-ಸೆ (inter-se) ಮೆರಿಟ್ ನಿರ್ಧರಿಸಲಾಗುತ್ತದೆ.

 ತಾತ್ಕಾಲಿಕ ಆಯ್ಕೆ ಪಟ್ಟಿ:-

  • ದೈಹಿಕ ತಾಳ್ವಿಕೆ ಪರೀಕ್ಷೆ [Physical Endurance Test] ಮತ್ತು ದೈಹಿಕ ಸಾಮರ್ಥ್ಯ [Physical Efficiency Test] ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಮತ್ತು ಪ್ರಚಲಿತ ಚಾಲನೆಯಲ್ಲಿರುವ ವೃಂದ ಮತ್ತು ನೇಮಕಾತಿ ನಿಯಮ ಹಾಗೂ ಪ್ರವರ್ಗವಾರು ಮೀಸಲಾತಿ ನಿಯಮಗಳನುಸಾರ ಈ ಅಧಿಸೂಚನೆಯಲ್ಲಿ ಅಧಿಸೂಚಿಸಿರುವ ಪ್ರವರ್ಗವಾರು ಖಾಲಿ ಹುದ್ದೆಗಳಿಗೆ 1:1 (ಹುದ್ದೆ:ಅಭ್ಯರ್ಥಿ) ಅನುಪಾತದಲ್ಲಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಿ ಕರ್ನಾಟಕ ಅರಣ್ಯ ಇಲಾಖೆಯ ಅಧಿಕೃತ ಜಾಲತಾಣ https://aranya.gov.in/ ಮುಖ ಪುಟದ ಕೆಳಭಾಗದಲ್ಲಿ ಇರುವ ನೇಮಕಾತಿ” ಶೀರ್ಷಿಕೆಯಡಿ ಪ್ರಕಟಿಸಲಾಗುವುದು.

ಮೂಲ ದಾಖಲೆಗಳ ಪರಿಶೀಲನೆ:

  • ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿನ ಅಭ್ಯರ್ಥಿಗಳು ಆನ್‌ಲೈನ್ (Online) (ಎಲೆಕ್ಟ್ರಾನಿಕ್ ಮಾರ್ಗ) ಅರ್ಜಿಯಲ್ಲಿ ಭರ್ತಿ ಮಾಡಿರುವ ಮಾಹಿತಿ/ವಿವರಗಳ ಆಧಾರದನ್ವಯ ಮೂಲ ದಾಖಲೆ/ಪ್ರಮಾಣ ಪತ್ರಗಳ ಪರಿಶೀಲನೆಗೆ ಸೂಚಿತ ದಿನಾಂಕದಂದು ಹಾಜರಾಗಲು ಆಯ್ಕೆ ಪ್ರಾಧಿಕಾರದ ವತಿಯಿಂದ ಕರ್ನಾಟಕ ಅರಣ್ಯ ಇಲಾಖೆಯ ಅಧಿಕೃತ ಜಾಲತಾಣ https://aranya.gov.in/ ಮುಖ ಪುಟದ ಕೆಳಭಾಗದಲ್ಲಿ ಇರುವ ನೇಮಕಾತಿ” ಶೀರ್ಷಿಕೆಯಡಿ ತಿಳಿಸಲಾಗುವುದು. ಸದರಿ ಸೂಚಿತ ದಿನಾಂಕದಂದು ಮೂಲ ದಾಖಲೆ/ಪ್ರಮಾಣ ಪತ್ರಗಳ ಪರಿಶೀಲನೆಗೆ ಆಯ್ಕೆ ಪ್ರಾಧಿಕಾರಿಗಳ ಸಮ್ಮುಖ ಕಡ್ಡಾಯವಾಗಿ ಹಾಜರಾಗಬೇಕಾಗುತ್ತದೆ.
  • ಅಭ್ಯರ್ಥಿಗಳು ಆನ್‌ಲೈನ್ (Online) (ಎಲೆಕ್ಟ್ರಾನಿಕ್ ಮಾರ್ಗ) ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅಪ್‌ಲೋಡ್ ಮಾಡಿರುವ ಎಲ್ಲಾ ದಾಖಲೆ/ಪ್ರಮಾಣ ಪತ್ರಗಳನ್ನು ಮೂಲ ದಾಖಲಾತಿಗಳ ಪರಿಶೀಲನಾ ವೇಳೆ ಕಡ್ಡಾಯವಾಗಿ ಹಾಜರುಪಡಿಸತಕ್ಕದ್ದು. ಮೂಲ ದಾಖಲೆ/ಪ್ರಮಾಣ ಪತ್ರಗಪರಿಶೀಲನೆಯಲ್ಲಿ ಯಾವುದೇ ರೀತಿಯ ಗೊಂದಲ/ವ್ಯತಿರಿಕ್ತ ದಾಖಲೆ/ಪ್ರಮಾಣ ಪತ್ರಗಳನ್ನು ಸಲ್ಲಿಸಿದಲ್ಲಿ ಅಂತಹ ದಾಖಲೆ/ಪ್ರಮಾಣ ಪತ್ರಗಳನ್ನು ಪರಿಗಣಿಸಲಾಗುವುದಿಲ್ಲ ಹಾಗೂ ಅರ್ಜಿಯಲ್ಲಿ ನಮೂದಿಸಿರುವ ದಾಖಲಾತಿಗಳನ್ನು ನಿಗದಿತ ದಿನಾಂಕದಂದು ಸಲ್ಲಿಸಲು ವಿಫಲರಾದಲ್ಲಿ/ಗೈರು ಹಾಜರಾದಲ್ಲಿ ಅಂತಹ ಅಭ್ಯರ್ಥಿಯ ಅಭ್ಯರ್ಥಿತ್ವವನ್ನು ರದ್ದುಪಡಿಸಲಾಗುವುದು ಹಾಗೂ ಮುಂದಿನ ಆಯ್ಕೆ ಪ್ರಕ್ರಿಯೆಯಿಂದ ಕೈಬಿಡಲಾಗುವುದು.
  • ಅಭ್ಯರ್ಥಿಯು ಎಲ್ಲಾ ಸಂದರ್ಭದಲ್ಲಿಯೂ ಒಂದೇ ತರಹದ ದಾಖಲಾತಿಗಳನ್ನು ಸಲ್ಲಿಸತಕ್ಕದ್ದು, ಈ ಬಗ್ಗೆ ಅಭ್ಯರ್ಥಿಗಳು ಬಹಳ ಎಚ್ಚರಿಕೆ ವಹಿಸುವುದು.

ಅಂತಿಮ ಆಯ್ಕೆ ಪಟ್ಟಿ:-

  • ವೃತ್ತಗಳ ಮಟ್ಟದಲ್ಲಿ ಅಧಿಸೂಚಿಸಲಾದ ಖಾಲಿ ಹುದ್ದೆಗಳ ಸಂಖ್ಯೆಗೆ ಸಮಾನವಾದ 1:1 (ಹುದ್ದೆ:ಅಭ್ಯರ್ಥಿ) ಅನುಪಾತದಲ್ಲಿ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿನ ಅಭ್ಯರ್ಥಿಗಳು ಮೂಲ ದಾಖಲೆಗಳ ಪರಿಶೀಲನೆಯಲ್ಲಿ ಹಾಗೂ ವೈದ್ಯಕೀಯ ಪರೀಕ್ಷೆಗಳಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯು ನಡೆಸುವ ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಮತ್ತು ಪ್ರಚಲಿತ ಚಾಲನೆಯಲ್ಲಿರುವ ವೃಂದ ಮತ್ತು ನೇಮಕಾತಿ ನಿಯಮ ಹಾಗೂ ಪ್ರವರ್ಗವಾರು ಮೀಸಲಾತಿ ನಿಯಮಗಳನುಸಾರ ಅಧಿಸೂಚನೆಯಲ್ಲಿ ಅಧಿಸೂಚಿಸಿರುವ ಪ್ರವರ್ಗವಾರು ಖಾಲಿ ಹುದ್ದೆಗಳಿಗೆ 1:1 (ಹುದ್ದೆ:ಅಭ್ಯರ್ಥಿ) ಅನುಪಾತದಲ್ಲಿ ಅಭ್ಯರ್ಥಿಗಳನ್ನು ಅರಣ್ಯ ವೀಕ್ಷಕ ವೃಂದದ ಹುದ್ದೆಗೆ ಅಂತಿಮವಾಗಿ ಆಯ್ಕೆ ಮಾಡಿ, ಅಂತಿಮ ಆಯ್ಕೆ ಪಟ್ಟಿಯನ್ನು ಕರ್ನಾಟಕ ಅರಣ್ಯ ಇಲಾಖೆಯ ಅಧಿಕೃತ ಜಾಲತಾಣ https://aranya.gov.in/ ಮುಖ ಪುಟದ ಕೆಳಭಾಗದಲ್ಲಿ ಇರುವ ನೇಮಕಾತಿ” ಶೀರ್ಷಿಕೆಯಡಿ ಪ್ರಕಟಿಸಲಾಗುತ್ತದೆ.
  1. ಕೆನರಾ ವೃತ್ತದ ಅಧಿಸೂಚನೆಗಾಗಿ ಇಲ್ಲಿ ಕ್ಲೀಕ ಮಾಡಿ:-https://aranya.gov.in/aranyacms/(S(nrsa44pybv3jhlaqz412wdzp))/downloads/latestNews/Notification_0001_compressed_21-07-2026_11.35.48.pdf
  2. ಕೊಡಗು ವೃತ್ತದ ಅಧಿಸೂಚನೆಗಾಗಿ ಇಲ್ಲಿ ಕ್ಲೀಕ ಮಾಡಿ:-https://aranya.gov.in/aranyacms/(S(nrsa44pybv3jhlaqz412wdzp))/downloads/latestNews/Forest%20Watcher%20Notification%202026_compressed_21-07-2026_10.33.51.pdf
  3. ಧಾರವಾಡ ವೃತ್ತದ ಅಧಿಸೂಚನೆಗಾಗಿ ಇಲ್ಲಿ ಕ್ಲೀಕ ಮಾಡಿ:-https://aranya.gov.in/aranyacms/(S(nrsa44pybv3jhlaqz412wdzp))/downloads/latestNews/Dharwad%20FW%202026-27_20-07-2026_10.18.17.pdf
  4. ಮಂಗಳೂರು ವೃತ್ತದ ಅಧಿಸೂಚನೆಗಾಗಿ ಇಲ್ಲಿ ಕ್ಲೀಕ ಮಾಡಿ:-https://aranya.gov.in/aranyacms/(S(nrsa44pybv3jhlaqz412wdzp))/downloads/latestNews/750%20FW%20Notification%20Mangalore%20Circle%20Final_20-07-2026_10.16.54.pdf
  5. ಹಾಸನ ವೃತ್ತದ ಅಧಿಸೂಚನೆಗಾಗಿ ಇಲ್ಲಿ ಕ್ಲೀಕ ಮಾಡಿ:-https://aranya.gov.in/aranyacms/(S(nrsa44pybv3jhlaqz412wdzp))/downloads/latestNews/HASSAN%20CIRCLE%20FOREST%20WATCHER_20-07-2026_10.15.26.pdf
  6. ಚಿಕ್ಕಮಗಳೂರು ವೃತ್ತದ ಅಧಿಸೂಚನೆಗಾಗಿ ಇಲ್ಲಿ ಕ್ಲೀಕ ಮಾಡಿ:-https://aranya.gov.in/aranyacms/(S(nrsa44pybv3jhlaqz412wdzp))/downloads/latestNews/CKM%20Circle%20Forest%20Watcher%202027_20-07-2026_10.13.19.pdf
  7. ಕಲಬುರಗಿ ವೃತ್ತದ ಅಧಿಸೂಚನೆಗಾಗಿ ಇಲ್ಲಿ ಕ್ಲೀಕ ಮಾಡಿ:-https://aranya.gov.in/aranyacms/(S(nrsa44pybv3jhlaqz412wdzp))/downloads/latestNews/KALBURGI%20FW_20-07-2026_10.11.26.pdf
  8. ಬೆಳಗಾವಿ ವೃತ್ತದ ಅಧಿಸೂಚನೆಗಾಗಿ ಇಲ್ಲಿ ಕ್ಲೀಕ ಮಾಡಿ:-https://aranya.gov.in/aranyacms/(S(nrsa44pybv3jhlaqz412wdzp))/downloads/latestNews/Forest%20Watcher%20Belagavi_20-07-2026_10.09.51.pdf
  9. ಮೈಸೂರು ವೃತ್ತದ ಅಧಿಸೂಚನೆಗಾಗಿ ಇಲ್ಲಿ ಕ್ಲೀಕ ಮಾಡಿ:-https://aranya.gov.in/aranyacms/(S(nrsa44pybv3jhlaqz412wdzp))/downloads/latestNews/750%20FW%20final%20notification%20Mysore%20circle_compressed_20-07-2026_04.58.34.pdf
  10. ಬಳ್ಳಾರಿ ವೃತ್ತದ ಅಧಿಸೂಚನೆಗಾಗಿ ಇಲ್ಲಿ ಕ್ಲೀಕ ಮಾಡಿ:-https://aranya.gov.in/aranyacms/(S(nrsa44pybv3jhlaqz412wdzp))/downloads/latestNews/2026-27%20Bellari%20Circle%20Forest%20watcher%20recruitment%20_compressed_20-07-2026_04.57.57.pdf
  11. ಚಾಮರಾಜನಗರ ವೃತ್ತದ ಅಧಿಸೂಚನೆಗಾಗಿ ಇಲ್ಲಿ ಕ್ಲೀಕ ಮಾಡಿ:-https://aranya.gov.in/aranyacms/(S(nrsa44pybv3jhlaqz412wdzp))/downloads/latestNews/FW%20notification%202026-27_0001_20-07-2026_03.46.33.pdf
  12. ಬೆಂಗಳೂರು ವೃತ್ತದ ಅಧಿಸೂಚನೆಗಾಗಿ ಇಲ್ಲಿ ಕ್ಲೀಕ ಮಾಡಿ:-https://aranya.gov.in/aranyacms/(S(nrsa44pybv3jhlaqz412wdzp))/downloads/latestNews/Bengaluru%20Circle%20Forest%20Watcher%20Recruitment%202026_20-07-2026_06.06.21.pdf
  13. ಶಿವಮೊಗ್ಗ ವೃತ್ತದ ಅಧಿಸೂಚನೆಗಾಗಿ ಇಲ್ಲಿ ಕ್ಲೀಕ ಮಾಡಿ:-https://aranya.gov.in/aranyacms/(S(nrsa44pybv3jhlaqz412wdzp))/downloads/latestNews/Shivamogga%20Circle%202026-27%20Forest%20Watcher%20Notification%2020.07.2026_0001_20-07-2026_06.05.23.pdf

ಆನಲೈನ ಮುಖಾಂತರ ಅರ್ಜಿ ಸಲ್ಲಿಸಲು ಇಲ್ಲಿ ಕ್ಲೀಕ ಮಾಡಿ:-https://aranya.gov.in/aranyacms/(S(nrsa44pybv3jhlaqz412wdzp))/Kannada/LatestNewsHomeKannada.aspx

ಆನಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-

  • 10 ನೇ ತರಗತಿ ಅಂಕಪಟ್ಟಿ
  • ಆಧಾರ ಕಾರ್ಡ
  • ತತ್ಸಮಾನ ವಿದ್ಯಾರ್ಹತೆ ಪ್ರಮಾಣ ಪತ್ರಗಳು (ಅನ್ವಯಿಸಿದಲ್ಲಿ ಮಾತ್ರ)
  • ಜಾತಿ ಪ್ರಮಾಣ ಪತ್ರ
  • ಮೀಸಲಾತಿ ಪ್ರಮಾಣ ಪತ್ರಗಳು (ಕನ್ನಡ/ಗ್ರಾಮೀಣ/ಮುಳುಗಡೆ/ಇತರೆ)
  • ಮೊಬೈಲ್ ಸಂಖ್ಯೆ & ಮೇಲ್ ಐಡಿ
  • ಇತ್ತೀಚಿನ  ಭಾವಚಿತ್ರ & ಸಹಿ

Leave a Comment

Your email address will not be published. Required fields are marked *

Scroll to Top