ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಭೂಮಾಪಕರ ಹುದ್ದೆಗಳ ನೇಮಕಾತಿ-2026

ಕರ್ನಾಟಕ ರಾಜ್ಯ ಸರ್ಕಾರವು ಉದ್ಯೋಗ ಆಕಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿಯನ್ನು ನೀಡಿದ್ದು, ಭೂಮಾಪನ ಕಂದಾಯ ವ್ಯವಸ್ಥೆ & ಭೂದಾಖಲೆಗಳ ಇಲಾಖೆಯ ಉಳಿಕೆ ಮೂಲ ವೃಂದದಲ್ಲಿ ಖಾಲಿ ಇರುವ ಒಟ್ಟು 560 ಭೂಮಾಪಕರ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮುಖಾಂತರ ಆನಲೈನ ಮೂಲಕ ಅರ್ಜಿಯನ್ನು ಆಹ್ವಾನಿಸಿದೆ.

Land.Surveyorಹುದ್ದೆಗಳ ವಿವರ:-

  • ಒಟ್ಟು ಹುದ್ದೆಗಳು:- 560
  • ಹುದ್ದೆಯ ಹೆಸರು:- ಭೂಮಾಪಕರು

ವೇತನ ಶ್ರೇಣಿ:-

  • 37500-900-39300-1000-43300-1125-47800-1250-52800-1375-58300-1500-64300-1650-74200-1900-76100 & ಇತರೆ ಭತ್ಯೆಗಳು

ಶೈಕ್ಷಣಿಕ ವಿದ್ಯಾರ್ಹತೆ:-

  • ಕಾನೂನಿನಡಿಯಲ್ಲಿ ಸ್ಥಾಪಿತವಾದ ವಿಶ್ವವಿದ್ಯಾಲಯದಿಂದ ಇಂಜಿನಿಯರಿಂಗ್‌ನಲ್ಲಿ ಅಥವಾ ತಂತ್ರಜ್ಞಾನದಲ್ಲಿ ಯಾವುದೇ ಪದವಿ ಹೊಂದಿರಬೇಕು; ಅಥವಾ ಯಾವುದೇ ಇಂಜಿನಿಯರಿಂಗ್ ಅಥವಾ ತಂತ್ರಜ್ಞಾನದಲ್ಲಿ .ಎಂ... ಪದವಿ ಹೊಂದಿರಬೇಕು.

ಅಥವಾ

  • ಕಾನೂನಿನಡಿಯಲ್ಲಿ ಸ್ಥಾಪಿತವಾದ ವಿಶ್ವವಿದ್ಯಾಲಯದಿಂದ ಗಣಿತ/ ಭೌತಶಾಸ್ತ್ರ /ಕಂಪ್ಯೂಟರ್ ಸೈನ್ಸ್ /ಮಾಹಿತಿ ತಂತ್ರಜ್ಞಾನ /ಇನ್‌ಸ್ಟ್ರುಮೆಂಟೇಶನ್/ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ /ಕೃಷಿ /ಬಿ.ಎಸ್‌.ಸಿ. ಪದವಿ ಹೊಂದಿರತಕ್ಕದ್ದು.

ಅಥವಾ

  • ಎ.ಐ.ಸಿ.ಟಿ.ಇ. (AICTE) ಮಾನ್ಯತೆ ಪಡೆದ ಅಧಿಕೃತ ಸಂಸ್ಥೆಯಿಂದ ಇಂಜಿನಿಯರಿಂಗ್ ಅಥವಾ ತಂತ್ರಜ್ಞಾನದ ಯಾವುದೇ ವಿಭಾಗದಲ್ಲಿ ಡಿಪ್ಲೊಮಾ ಪಡೆದಿರಬೇಕು.

ವಯೋಮಿತಿ:-

ಕರ್ನಾಟಕ ನಾಗರಿಕ ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮಗಳು, 1977 ರಲ್ಲಿ ನಿರ್ದಿಷ್ಟಪಡಿಸಿರುವಂತೆ ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು ಕನಿಷ್ಠ 18 ವರ್ಷ ಪೂರೈಸಿರಬೇಕು. ಹಾಗೂ ಸರ್ಕಾರದ ಆದೇಶ ಸಂಖ್ಯೆ ಸಿಆಸುಇ 262 ಸೇನೆನಿ 2025, ದಿನಾಂಕ 29-01-2026 ರಂತೆ ಒಂದು ಬಾರಿಗೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆ ವಯೋಮಿತಿ ಸಡಿಲಿಕೆಯನ್ನು ನೀಡಿದ ಪ್ರಯುಕ್ತ, ಅದನ್ನು ವಯೋಮಿತಿಯಲ್ಲಿ ಅಳವಡಿಸಿಕೊಂಡ ನಂತರ ಅಭ್ಯರ್ಥಿಗಳು ಈ ಕೆಳಗೆ ತೋರಿಸಿರುವಂತೆ ಗರಿಷ್ಠ ಮಯೋಮಿತಿಯನ್ನು ಮೀರಿರಬಾರದು.

  • ಸಾಮಾನ್ಯ ಅಭ್ಯರ್ಥಿಗಳು-18 ರಿಂದ 40 ವರ್ಷಗಳು
  • ಪ್ರವರ್ಗ 2ಎ,2ಬಿ,3ಎ,3ಬಿ- 18 ರಿಂದ 43 ವರ್ಷಗಳು
  • ಎಸ್.ಸ್ಸಿ/ಎಸ್.ಟಿ/ ಪ್ರವರ್ಗ-18 ರಿಂದ 45 ವರ್ಷಗಳು

ಉದ್ಯೋಗದ ಸ್ಥಳ:-

  • ಕರ್ನಾಟಕದಾದ್ಯಂತ

ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಅರ್ಜಿ ಶುಲ್ಕ:-

  • ಸಾಮಾನ್ಯ ವರ್ಗ & ಇತರೆ ಹಿಂದುಳಿದ ವರ್ಗಗಳು (2A, 2B, 3A, 3B):- 750/-
  • ಪ್ರವರ್ಗ-1/Sc /St/Ex-Army/ತೃತೀಯ ಲಿಂಗಿಗಳಿಗೆ:- 500/-
  • ವಿಶೇಷ ಚೇತನ ಅಭ್ಯರ್ಥಿಗಳಿಗೆ:- 250/-

ಪ್ರಮುಖ ದಿನಾಂಕಗಳು:-

  • ಅಧಿಸೂಚನೆ ಬಿಡುಗಡೆ ಮಾಡಿದ ದಿನಾಂಕ: 10 ಜುಲೈ 2026
  • ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭಿಸಿದ ದಿನಾಂಕ: 11 ಜುಲೈ 2026
  • ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07 ಅಗಸ್ಟ್ 2026
  • ಆನ್‌ಲೈನ್ ಮುಖಾಂತರ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 10 ಅಗಸ್ಟ್ 2026

ಖಾಯಂಪೂರ್ವ ಅವಧಿ:-

  • ನೇರ ನೇಮಕಾತಿ ಮೂಲಕ ಆಯ್ಕೆಗೊಂಡ ಅಭ್ಯರ್ಥಿಗಳು 2 ವರ್ಷ ಖಾಯಂಪೂರ್ವ ಅವಧಿಯಲ್ಲಿರುತ್ತಾರೆ. (ಈ ಅವಧಿಯಲ್ಲಿ “ಕಡ್ಡಾಯ ತರಬೇತಿ” ಪರೀಕ್ಷೆಯಲ್ಲಿ ಎಲ್ಲಾ ಭೂಮಾಪಕರೂ ಇಲಾಖೆಯ ಭೂಮಾಪನಾ ತರಬೇತಿ ಸಂಸ್ಥೆಯಲ್ಲಿ ಆರು ತಿಂಗಳ ಅವಧಿಗೆ ವೃತ್ತಿ ಬುನಾದಿ ಭೂಮಾಪನ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಬೇಕು ಮತ್ತು ಸಂಸ್ಥೆಯ ನಡೆಸುವ ಸೈದ್ಧಾಂತಿಕ ಪರೀಕ್ಷೆಯಲ್ಲಿ 35% ಮತ್ತು ಪ್ರಾಯೋಗಿಕ ಪರೀಕ್ಷೆಯಲ್ಲಿ 40% ಅಂಕಗಳೊಂದಿಗೆ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಆದಾಗ್ಯೂ, ವಿಫಲರಾದ ಭೂಮಾಪಕರಿಗೆ ಖಾಯಂ ಪೂರ್ವಾವಧಿಯೊಳಗೆ ಪರೀಕ್ಷೆಗೆ ಹಾಜರಾಗಲು & ಉತ್ತೀರ್ಣರಾಗಲು ಮತ್ತೊಮ್ಮೆ ಅವಕಾಶವನ್ನು ನೀಡಿ, ನೌಕರರು ತರಬೇತಿಯಲ್ಲಿ ಉತ್ತೀರ್ಣರಾಗಲು ವಿಫಲವಾದರೆ, ಆ ನೌಕರರುಗಳ ಖಾಯಂ ಪೂರ್ವಾವಧಿಯನ್ನು “ಯಶಸ್ವಿ” ಎಂದು ಘೋಷಿಸಲಾಗುವುದಿಲ್ಲ ಮತ್ತು ವಿಫಲ ನೌಕರರಿಗೆ ಸಂಬಂಧಿಸಿದಂತೆ ಕರ್ನಾಟಕ ನಾಗರಿಕ ಸೇವೆಗಳು (ಪ್ರೊಬೇಷನರಿ ನಿಯಮಗಳು), 1977 ರ ನಿಯಮಗಳು ಅನ್ವಯಿಸಲಾಗುತ್ತವೆ. ತರಬೇತಿಯಲ್ಲಿ ಅನುತ್ತೀರ್ಣರಾದ ನೌಕರರನ್ನು ಸೇವೆಯಿಂದ ತೆಗೆದುಹಾಕಲಾಗುತ್ತದೆ.)

ಪಿಂಚಣಿ/ಯೋಜನೆ ಸೌಲಭ್ಯ:-

  • ಸರ್ಕಾರದ ಆದೇಶ ಸಂಖ್ಯೆ:ಎಫ್.ಡಿ (ಎಸ್.ಪಿ.ಎಲ್) 04 ಪಿಇಟಿ 2005, ದಿನಾಂಕ:31.03.2006 ರನ್ವಯ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್.ಪಿ.ಎಸ್) ಸೌಲಭ್ಯ ಅನ್ವಯವಾಗುವುದು.

ಲಿಖಿತ ಪರೀಕ್ಷಾ ವಿಧಾನ:-

  • ಭೂಮಾಪಕ ಹುದ್ದೆಗೆ ಲಿಖಿತ ಪರೀಕ್ಷೆಯನ್ನು ಆಫಲೈನ್ –ಒಎಂಆರ್ ಮಾದರಿ (Offline-OMR Type) ಯಲ್ಲಿ ನಡೆಸಲಾಗುತ್ತದೆ.
  • ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಾಗುವ ಪರೀಕ್ಷಾ ಕೇಂದ್ರದ ವಿವರಗಳನ್ನು ನಂತರದಲ್ಲಿ ತಿಳಿಸುವರು.

ಪ್ರಶ್ನೆಪತ್ರಿಕೆ & ಪಠ್ಯಕ್ರಮ:-

  • ಲಿಖಿತ ಪರೀಕ್ಷೆಯು ಪತ್ರಿಕೆ-1 & ಪತ್ರಿಕೆ-2 ನ್ನು ಒಳಗೊಂಡಿದ್ದು, ಪತ್ರಿಕೆ-1 ಸಾಮಾನ್ಯ ಜ್ಞಾನ ಇದ್ದು, ಸದರಿ ಪತ್ರಿಕೆಯು 100 ಪ್ರಶ್ನೆ & 100 ಅಂಕಗಳನ್ನು ಒಳಗೊಂಡಿದ್ದು, ಸದರಿ ಪ್ರಶ್ನೆಗಳಿಗೆ 2 ಗಂಟೆಯ ಅವಧಿಯೊಳಗೆ ಉತ್ತರಗಳನ್ನು ನೀಡತಕ್ಕದ್ದು.
  • ಪತ್ರಿಕೆ-2 ನಿರ್ದಿಷ್ಟ ಪತ್ರಿಕೆಯಾಗಿದ್ದು, ಸದರಿ ಪತ್ರಿಕೆಯು 100 ಪ್ರಶ್ನೆ & 100 ಅಂಕಗಳನ್ನು ಒಳಗೊಂಡಿದ್ದು, ಸದರಿ ಪ್ರಶ್ನೆಗಳಿಗೆ 2 ಗಂಟೆಯ ಅವಧಿಯೊಳಗೆ ಉತ್ತರಗಳನ್ನು ನೀಡತಕ್ಕದ್ದು.

ವಿಶೇಷ ಸೂಚನೆ:- ಸ್ಫರ್ಧಾತ್ಮಕ ಪರೀಕ್ಷೆಯಲ್ಲಿ ಅಭ್ಯರ್ಥಿಯು ಕನಿಷ್ಠ ಶೇ.35 ರಷ್ಟು ಅಂಕಗಳನ್ನು ಪಡೆಯುವುದು ಕಡ್ಡಾಯವಾಗಿದ್ದು, ಕನಿಷ್ಠ ಅಂಕಗಳನ್ನು ಪಡೆಯದ ಅಭ್ಯರ್ಥಿಗಳು ಆಯ್ಕೆ ಪ್ರಕ್ಯಿಯೆಗೆ ಅನರ್ಹರಾಗುತ್ತಾರೆ.

ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ:-

  • ಅಭ್ಯರ್ಥಿಯು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅಥವಾ ರಾಜ್ಯ ಸರ್ಕಾರವು ಅದರ ಸಮಾನವೆಂದು ಘೋಷಿಸಿದ ಯಾವುದೇ ಪರೀಕ್ಷೆಯಲ್ಲಿ ಅಥವಾ ಎಸ್.ಎಸ್.ಎಲ್.ಸಿ.ಗಿಂತ ಉನ್ನತ ಮಟ್ಟದ ಪರೀಕ್ಷೆಗಳಲ್ಲಿ ಕನ್ನಡ ವಿಷಯವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಅಭ್ಯಾಸ ಮಾಡಿರುವ ಅಭ್ಯರ್ಥಿಗಳು ಇಂತಹ ಪರೀಕ್ಷೆಗಳನ್ನು ಪಾಸು ಮಾಡಿದ್ದರೆ ಅಥವಾ KPSC/KEA ಈ ಹಿಂದೆ ನಡೆಸಿದ ಕನ್ನಡ ಭಾಷೆಯ ಪರೀಕ್ಷೆಯಲ್ಲಿ (ಕಡ್ಡಾಯ ಕನ್ನಡ ಪರೀಕ್ಷೆ) ಉತ್ತೀರ್ಣರಾಗಿದ್ದರೆ, ಅಂತಹ ಅಭ್ಯರ್ಥಿಗಳು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯಿಂದ ವಿನಾಯಿತಿ ಹೊಂದುತ್ತಾರೆ.
  • ಇಲ್ಲವಾದಲ್ಲಿ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯು ಬಹು ಆಯ್ಕೆ ಮಾದರಿ ಪರೀಕ್ಷೆಯಾಗಿದ್ದು, ಗರಿಷ್ಠ 150 ಅಂಕಗಳನ್ನು ಒಳಗೊಂಡಿರುತ್ತದೆ ಮತ್ತು ಅಭ್ಯರ್ಥಿಗಳು ಇದರಲ್ಲಿ ಕನಿಷ್ಠ 50 ಅಂಕಗಳನ್ನು ಪಡೆದು ಪಾಸಾಗುವುದು ಕಡ್ಡಾಯ, ಸದರಿ ಪರೀಕ್ಷೆಗೆ ಗೈರು ಹಾಜರಾದ ಅಥವಾ ಕನಿಷ್ಠ 50 ಅಂಕಗಳನ್ನು ಗಳಿಸದ ಅಭ್ಯರ್ಥಿಗಳು ಆಯ್ಕೆ ಪ್ರಕ್ರಿಯೆಗೆ ಅನರ್ಹರಾಗುವರು.

ಲಿಖಿತ ಪರೀಕ್ಷಾ ವೇಳಾಪಟ್ಟಿ & ದಿನಾಂಕ:-

  • ಶನಿವಾರ ದಿನಾಂಕ:03-10-2026 ರಂದು ಮಧ್ಯಾಹ್ನ 3.00 ರಿಂದ 5.00 ರವರೆಗೆ ಪತ್ರಿಕೆ-2 (ನಿರ್ದಿಷ್ಟ ಪತ್ರಿಕೆ) ಮತ್ತು ರವಿವಾರ 04-10-2026 ರಂದು ಬೆಳಿಗ್ಗೆ 10.30 ರಿಂದ 12.30 ರವರೆಗೆ ಪತ್ರಿಕೆ-1 (ಸಾಮಾನ್ಯ ಜ್ಞಾನ) ನಡೆಸಲಾಗುತ್ತದೆ.

ಋಣಾತ್ಮಕ ಮೌಲ್ಯಮಾಪನ (Negative Valuation):-

  • ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆಪತ್ರಿಕೆಯು ವಸ್ತುನಿಷ್ಠ ಬಹು ಆಯ್ಕೆ ಮಾದರಿಯಲ್ಲಿದ್ದು, ಪ್ರಶ್ನೆ ಪತ್ರಿಕೆಗಳಲ್ಲಿನ ಪ್ರತಿಯೊಂದು ಪ್ರಶ್ನೆಗೂ 04 ಪರ್ಯಾಯ ಉತ್ತರಗಳಿದ್ದು, ಅಭ್ಯರ್ಥಿಯು ಯಾವುದಾದರೂ ಒಂದು ಸರಿ ಉತ್ತರವನ್ನು ಮಾತ್ರ ಆಯ್ಕೆ ಮಾಡಬೇಕು. ಪ್ರತಿ ತಪ್ಪು ಉತ್ತರಕ್ಕೆ ನಾಲ್ಕನೇ ಒಂದಂಶದಷ್ಟು 25 ಅಂಕಗಳನ್ನು ಕಳೆಯಲಾಗುವುದು.
  • ಒ.ಎಂ.ಆರ್ ಉತ್ತರ ಪತ್ರಿಕೆಯಲ್ಲಿ 5ನೇ ಆಯ್ಕೆ/ವೃತ್ತವನ್ನು ನೀಡಿದ್ದು, ಉತ್ತರಿಸದೇ ಇರುವ ಪ್ರಶ್ನೆಗಳಿಗೆ 5ನೇ ಆಯ್ಕೆ/ವೃತ್ತವನ್ನು ಶೇಡ ಮಾಡಲು ಕೋನೆಯ ಬೆಲ ಆದ ನಂತರ ಹೆಚ್ಚುವರಿ 5 ನಿಮಿಷಗಳನ್ನು ನೀಡುತ್ತಾರೆ, ಯಾವುದೇ ಆಯ್ಕೆಯನ್ನು / ಉತ್ತರವನ್ನು ಶೇಡ್ ಮಾಡಿಲ್ಲದಿದ್ದರೆ, ಪ್ರತಿ ಪ್ರಶ್ನೆಗೆ 25 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.

ಆನಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-

  • 10 ನೇ ತರಗತಿ ಅಂಕಪಟ್ಟಿ
  • 12 ನೇ ತರಗತಿ ಅಂಕಪಟ್ಟಿ
  • ಆಧಾರ ಕಾರ್ಡ
  • ವಿದ್ಯಾರ್ಹತೆಯ ಎಲ್ಲ ಸೆಮಿಸ್ಟರನ ಅಂಕಪಟ್ಟಿಗಳು  & ಪಾಸಿಂಗ್/ಘಟಿಕೋತ್ಸವ ಪ್ರಮಾಣ ಪತ್ರಗಳು
  • ಜಾತಿ ಪ್ರಮಾಣ ಪತ್ರ
  • ಮೀಸಲಾತಿ ಪ್ರಮಾಣ ಪತ್ರಗಳು (ಕನ್ನಡ/ಗ್ರಾಮೀಣ/ಮುಳುಗಡೆ/ಇತರೆ)
  • ಮೊಬೈಲ್ ಸಂಖ್ಯೆ & ಮೇಲ್ ಐಡಿ
  • ಇತ್ತೀಚಿನ  ಭಾವಚಿತ್ರ & ಕಪ್ಪು ಬಣ್ಣದ ಸಹಿ 

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ವಿಶೇಷ ಸೂಚನೆಗಳು:-

  • ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿರುವ ಬಗ್ಗೆ ಖಚಿತಪಡಿಸಿಕೊಂಡ ಬಳಿಕ ಅದರ ಒಂದು ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಂಡು ಹಾಗೂ ಶುಲ್ಕ ಪಾವತಿಯ ಚಲನ್ ಅನ್ನು ನೇಮಕಾತಿ ಪ್ರಕ್ರಿಯೆ ಮುಗಿಯುವವರೆಗೂ ಜೋಪಾನವಾಗಿ ಇಟ್ಟುಕೊಳ್ಳತಕ್ಕದ್ದು. ನಂತರ ಯಾವುದೇ ಹಂತದಲ್ಲಿ ಪ್ರಾಧಿಕಾರಕ್ಕೆ ಮನವಿಯನ್ನು ಸಲ್ಲಿಸಿದ್ದಲ್ಲಿ ಅರ್ಜಿ ಪ್ರತಿಯನ್ನು ನೀಡಲಾಗುವುದಿಲ್ಲ.
  • ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಸಲ್ಲಿಸಲಾಗುವ ಅರ್ಜಿಯಲ್ಲಿ ಯಾವುದೇ ಹಂತದಲ್ಲಿ ಅಥವಾ ಯಾವುದೇ ರೀತಿಯ ತಿದ್ದುಪಡಿಗಳನ್ನು ಮಾಡುವಂತೆ ಕೋರಿದಲ್ಲಿ, ಸದರಿ ಮನವಿಯನ್ನು ಪರಿಗಣಿಸಲಾಗುವುದಿಲ್ಲ.
  • ಈಗಾಗಲೇ ಸೇವೆಯಲ್ಲಿರುವ/ಸೇವೆ ಸಲ್ಲಿಸಿದ ಅಭ್ಯರ್ಥಿಗಳು ಆಯಾ ಇಲಾಖೆಯಲ್ಲಿ ಅವರುಗಳ ನೇಮಕಾತಿ ಪ್ರಾಧಿಕಾರಗಳಿಂದ ನಿಗದಿತ ನಮೂನೆಯಲ್ಲಿ ನಿರಾಕ್ಷೇಪಣಾ ಪ್ರಮಾಣಪತ್ರ / ಅನುಮತಿಯನ್ನು / ಸೇವಾ ಪ್ರಮಾಣಪತ್ರವನ್ನು ಪಡೆದಿಟ್ಟುಕೊಂಡು ನೇಮಕಾತಿ ಪ್ರಾಧಿಕಾರಕ್ಕೆ ಸಲ್ಲಿಸತಕ್ಕದ್ದು. ಹಾಗೂ ಸೇವಾ ವಿವರಗಳನ್ನು ಅರ್ಜಿಯಲ್ಲಿ ನಮೂದಿಸಬೇಕು. ಸುಳ್ಳು ಮಾಹಿತಿಯನ್ನು ನಮೂದಿಸಿದ್ದಲ್ಲಿ ಅನರ್ಹಗೊಳಿಸಲಾಗುವುದು.
  • ಶುಲ್ಕ ಪಾವತಿಸಲು ಕೊನೆಯ ದಿನಾಂಕವನ್ನು ಸಾಂವಿಧಿಕ ರಜಾದಿನವಾಗಿ ಘೋಷಿಸಿದರೆ ಆ ದಿನಾಂಕದ ಮಾರನೆಯ ಕೆಲಸದ ದಿನವು ಕೊನೆಯ ದಿನಾಂಕವಾಗುವುದು.
  • ಅಭ್ಯರ್ಥಿಯು ಅರ್ಜಿಯಲ್ಲಿ ನೀಡುವ ಮೊಬೈಲ್ ಸಂಖ್ಯೆ / ಇ-ಮೇಲ್ ಅಂತಿಮವಾಗಿದ್ದು, ಎಲ್ಲಾ ಮಾಹಿತಿಗಳನ್ನು ಅದೇ ಮೊಬೈಲ್ ಸಂಖ್ಯೆ / ಇ-ಮೇಲ್‌ಗೆ ಕಳುಹಿಸಿಕೊಡಲಾಗುವುದು. ನಂತರದಲ್ಲಿ ಬದಲಾವಣೆ ಬಗ್ಗೆ ಯಾವುದೇ ಪತ್ರ ವ್ಯವಹಾರವನ್ನು ಪರಿಗಣಿಸಲಾಗುವುದಿಲ್ಲ.
  • ಹುದ್ದೆಗೆ ನಿಗದಿಪಡಿಸಿರುವ ವಿದ್ಯಾರ್ಹತೆಯ ಪರೀಕ್ಷೆಗೆ ಹಾಜರಾಗಿ, ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದೊಳಗೆ ಫಲಿತಾಂಶ ಪ್ರಕಟವಾಗದ ಪಕ್ಷದಲ್ಲಿ ಅಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಂತಿಲ್ಲ.
  • ಅಭ್ಯರ್ಥಿಯು ಸಲ್ಲಿಸುವ ವಿದ್ಯಾರ್ಹತೆಯ ಪ್ರಮಾಣಪತ್ರ/ ಇನ್ನಿತರ ಮೀಸಲಾತಿ ಪ್ರಮಾಣಪತ್ರಗಳಿಗೆ ಸಂಬಂಧಿಸಿದಂತೆ ಯಾವುದೇ ಗೊಂದಲಗಳು ಇದ್ದಲ್ಲಿ ಸಂಬಂಧಪಟ್ಟ ಪ್ರಾಧಿಕಾರಸ್ಥರು ಗೊಂದಲ ನಿವಾರಣೆ ಮಾಡುವವರೆಗೆ ಅವರ ಆಯ್ಕೆಯನ್ನು ಅಂತಿಮಗೊಳಿಸಲಾಗುವುದಿಲ್ಲ.
  • ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿಯನ್ನು ಭರ್ತಿ ಮಾಡುವ ಮೊದಲು ವೆಬ್‌ಸೈಟ್‌ನಲ್ಲಿ ನೀಡಿರುವ ವಿವರವಾದ ಪ್ರಕಟಣೆಯನ್ನು / ಸೂಚನೆಗಳನ್ನು / ವಿಧಾನವನ್ನು ತಿಳಿದುಕೊಳ್ಳುವುದು ಹಾಗೂ ಅರ್ಜಿಯಲ್ಲಿ ಘೋಷಿಸಿರುವ ಮಾಹಿತಿಗಳು ಅಂತಿಮವಾಗಿದ್ದು, ಹೆಚ್ಚಿನ ಮಾಹಿತಿ / ದಾಖಲೆಗಳ ಸಲ್ಲಿಕೆಗೆ ಅವಕಾಶವಿರುವುದಿಲ್ಲ.
  • ಅಭ್ಯರ್ಥಿಯು ಯಾವುದೇ ಕಾರಣಕ್ಕೂ ಅರ್ಜಿಯನ್ನು ಸಮರ್ಪಕವಾಗಿ ತುಂಬದೇ ಅರ್ಜಿಯ ತಿರಸ್ಕೃತವಾದಲ್ಲಿ ಅಥವಾ ಯಾವುದೇ ಸೌಲಭ್ಯದಿಂದ ಅವರು ವಂಚಿತರಾದಲ್ಲಿ ಅದಕ್ಕೆ ಅಭ್ಯರ್ಥಿಗಳೇ ನೇರ ಜವಾಬ್ದಾರರು ಆಗಿರುತ್ತಾರೆ.
  • ಆಯ್ಕೆಗೆ ಸಂಬಂಧಿಸಿದಂತೆ ಅಭ್ಯರ್ಥಿಯ ಯಾವುದೇ ವಿಧವಾದ ಅಪಪ್ರಚಾರ ಮಾಡುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಲ್ಲಿ, ಯಾವುದೇ ಮುನ್ಸೂಚನೆ ನೀಡದೆ ಅವರನ್ನು ಆಯ್ಕೆ ಅನರ್ಹಗೊಳಿಸಲಾಗುವುದು.
  • ಅಭ್ಯರ್ಥಿಗಳು ಗಳಿಸಿದ ಅಂಕಗಳ ಅಂತರ್ಜಾಲವನ್ನು ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಇವರಿಗೆ ಹಸ್ತಾಂತರಿಸಲಾಗುವುದು, ಭೂಮಾಪನ ಇಲಾಖೆಯ ನಿಯಮಾನುಸಾರ ಲಿಖಿತ ಪರೀಕ್ಷೆಯ ನಂತರದ ಎಲ್ಲ ಪ್ರಕ್ರಿಯೆಗಳನ್ನು ನಡೆಸಲಾಗುವುದು.

ಭೂಮಾಪಕರ ಹುದ್ದೆಯ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ ಮಾಡಿ.https://cetonline.karnataka.gov.in/keawebentry456/landrpc2026/RPC_landenglish.pdf

ಆನಲೈನ ಮುಖಾಂತರ ಭೂಮಾಪಕರ ಹುದ್ದೆಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ ಮಾಡಿ.https://cetonline.karnataka.gov.in/login

Leave a Comment

Your email address will not be published. Required fields are marked *

Scroll to Top